ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಮನೆಯ ಹೊರಗಿನ ಆಹಾರ ಸೇವನೆ ಬೇಡ
Published 27 ಏಪ್ರಿಲ್ 2024, 19:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಣ್ಣ ವಿಷಯಗಳಿಗೆ ಕೋಪಿಸಿಕೊಳ್ಳುವ ನಿಮ್ಮ ಪ್ರವೃತ್ತಿಯಿಂದಾಗಿ ನೀವು ಹಿರಿಯರ ಕೋಪಕ್ಕೆ ಗುರಿಯಾಗುವ ಸಾಧ್ಯತೆಗಳಿವೆ. ಅರ್ಥಶಾಸ್ತ್ರಜ್ಞರಿಗೆ ನಿಮ್ಮ ಹಿಂದಿನ ಸಾಧನೆಗಳನ್ನು ಗುರುತಿಸಿ ಸರ್ಕಾರದಿಂದ ಕರೆ ಬರಲಿದೆ.
ವೃಷಭ
ಮಾರ್ಗಮಧ್ಯದಲ್ಲಿ ಎದುರಾದ ಸಮಸ್ಯೆಯನ್ನು ಪರಿಹರಿಸಲು ಬಾಲ್ಯದ ಸ್ನೇಹಿತನ ಸಹಾಯ ಕೇಳಿದರೆ ಪರಿಹಾರವಾಗುವುದು. ಯಾವ ಯೋಚನೆ ಮಾಡದೆ ಶ್ರೀ ವಿಷ್ಣು ಸಹಸ್ರನಾಮ ಪಠಣ ಮಾಡಿ, ಶುಭವಾಗುವುದು.
ಮಿಥುನ
ತಂತ್ರಜ್ಞಾನದ ಈ ಕಾಲದಲ್ಲಿ ನಿಮ್ಮ ಅಳಿವಿನಂಚಿನಲ್ಲಿರುವ ವಿದ್ಯೆಗೆ ಬೆಲೆ ಇಲ್ಲವೆಂದು ನೀವು ತಿಳಿದಿದ್ದಲ್ಲಿ ನಿಮ್ಮ ನಂಬಿಕೆ ಹುಸಿಯಾಗುವ ಹಾಗೆ ನಿಮ್ಮನ್ನರಸಿ ಅವಕಾಶಗಳು ಬರಲಿವೆ. ನಿಮ್ಮ ಗಮನವನ್ನು ಒಂದೇ ಕಡೆಗೆ ಕೇಂದ್ರೀಕರಿಸಿ.
ಕರ್ಕಾಟಕ
ಕೋಟಿಗಟ್ಟಲೆ ವ್ಯವಹಾರ ನಡೆಸುವವರು ಮನೆಯ ಕಾರ್ಯಕ್ರಮದಲ್ಲಿ ಕೃಪಣತೆ ತೋರಿಸುವುದು ಬೇಡ. ದೃಷ್ಟಿ ದೋಷಕ್ಕೆ ಸೂಕ್ತ ವೈದ್ಯರನ್ನು ಭೇಟಿ ಮಾಡಿ ಪರಿಹರಿಸಿಕೊಳ್ಳಿ. ಮೊಮ್ಮಕ್ಕಳು ಸಂತೋಷಕ್ಕೆ ಕಾರಣವಾಗಲಿದ್ದಾರೆ.
ಸಿಂಹ
ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಇತರರಿಗೆ ಅಸೂಯೆ ಉಂಟಾಗದಂತೆ ಕಾರ್ಯ ಸಾಧಿಸಿ ಕೊಳ್ಳುವುದು ಉತ್ತಮ. ಮನೆಯ ಹೊರಗಿನ ಆಹಾರ ಸೇವನೆ ಬೇಡ.
ಕನ್ಯಾ
ಅಣ್ಣ ತಂಗಿಯರ ನಡುವೆ ಸಂಬಂಧಗಳು ಗಟ್ಟಿಯಾಗುವಂಥ ವಿಶೇಷ ವಿಚಾರಗಳು ನಡೆಯುವ ಸಾಧ್ಯತೆಗಳಿವೆ. ಚಲನ ಚಿತ್ರರಂಗದವರಿಗೆ ಅಥವಾ ಅಭಿನಯಿಸುವ ಕಲಾವಿದರುಗಳಿಗೆ ಒಳ್ಳೆಯ ಖ್ಯಾತಿ ದೊರೆಯುವುದು.
ತುಲಾ
ಅತೀಂದ್ರಿಯ ಶಕ್ತಿಯೋ ಎಂಬಂತೆ ಇಂದು ನಿಮಗೆ ಅಪಾಯಗಳಾಗುವ ಸಂಭವವಿದ್ದಲ್ಲಿ ಅವುಗಳ ಮುನ್ಸೂಚನೆ ದೊರೆಯುತ್ತವೆ. ನಿಮ್ಮ ದೀರ್ಘಕಾಲಿಕ ಅನಾರೋಗ್ಯದ ಸಮಸ್ಯೆಗಳಿಗೆ ಮಗಳಿಂದ ಪರಿಹಾರದ ದಾರಿಗಳು ಕಾಣುತ್ತವೆ.
ವೃಶ್ಚಿಕ
ಅತಿಯಾದ ಔದರ್ಯತನ ತೋರಬೇಕೆನಿಸಿದಲ್ಲಿ ನಿಮ್ಮ ಹಣಕಾಸಿನ ಸ್ಥಿತಿಯನ್ನು ಒಮ್ಮೆ ಗಮನಿಸಿಕೊಳ್ಳುವುದು ಉತ್ತಮ. ಚಲಾವಣೆಯಲ್ಲಿಲ್ಲದ ರೀತಿ ನೀತಿಗಳನ್ನು ಪಾಲಿಸುತ್ತಿರುವವರನ್ನು ನೋಡಿ ಬೆರಗಾಗುವಿರಿ.
ಧನು
ನೀವು ಮೇಲಧಿಕಾರಿಗಳಿಗೆ ಸಲ್ಲಿಸಿದ ಅರ್ಜಿ ಇನ್ನೂ ಮುಂದುವರಿಯದೆ ಇರುವುದು ನಿಮ್ಮ ಮನಸ್ಸನ್ನು ಘಾಸಿಗೊಳಿಸಬಹುದು. ಬೆಂಕಿಯಿಂದ ಸಂಭವಿಸುವಂಥ ತೊಂದರೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ.
ಮಕರ
ಕಚೇರಿಯಲ್ಲಿ ತಪ್ಪು ತಿಳುವಳಿಕೆ ಅಥವಾ ಮಾತಿನ ಚಕಮಕಿಯಿಂದ ತಪ್ಪಿಸಿಕೊಳ್ಳಲು ನಿಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸಿ. ಷೇರು ಹೂಡಿಕೆದಾರರು ಉತ್ತಮವಾಗಿ ಪರಿಶೀಲಿಸಿದ ನಂತರವಷ್ಟೇ ಹೂಡಿಕೆಯನ್ನು ಮಾಡಿ.
ಕುಂಭ
ಕದಡಿದ ನಿಮ್ಮ ಮನಸ್ಸು ದೇವಸ್ಥಾನಗಳನ್ನು ಭೇಟಿ ಮಾಡುವ ನೆಪದಲ್ಲಿ ತಿಳಿಯಾಗುವುದು. ಸಹೋದರರ ಜೊತೆಗೆ ಮಾಡಿಕೊಂಡ ವ್ಯಾಜ್ಯವನ್ನು ಮೂರನೆ ವ್ಯಕ್ತಿಗಳು ಆಡಿಕೊಳ್ಳುವುದಕ್ಕಿಂತ ಮುಂಚೆ ಪರಿಹರಿಸಿಕೊಳ್ಳಿ.
ಮೀನ
ಆಯ್ಕೆ, ತೀರ್ಮಾನ ಮಾಡುವ ವಿಚಾರದಲ್ಲಿ ಮನಸ್ಸಿನ ಚಂಚಲ ಸ್ವಭಾವದಿಂದ ವಿಫಲರಾಗುವ ಸನ್ನಿವೇಶಗಳಿರುವುದು. ನೀವಾಡುವ ನಾಲ್ಕು ಒಳ್ಳೆಯ ಮಾತುಗಳು ಇಂದು ಒಬ್ಬರಿಗೆ ಸ್ಫೂರ್ತಿದಾಯಕವಾಗುವವು.