ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಗುರಿ ಸಾಧನೆಗೆ ಸ್ನೇಹಿತರಿಂದ ನೆರವು ದೊರೆಯಲಿದೆ
Published 2 ಮಾರ್ಚ್ 2024, 22:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮೇಷ: ನಿಮಗೀಗ ಸಿಕ್ಕಿರುವ ಕೆಲಸದಲ್ಲೇ ಮುಂದುವರೆಯುವುದರಿಂದ ಮುಂದೆ ಉತ್ತಮವಾದ ಅವಕಾಶಗಳನ್ನು ಪಡೆಯುವಿರಿ. ವೃತ್ತಿ ಜೀವನಕ್ಕೆ ಸಂಬಂಧಿಸಿದ ಗುರಿಗಳನ್ನು ಈಡೇರಿಸಿಕೊಳ್ಳುವಲ್ಲಿ ಈ ದಿನ ಸಫಲರಾಗುವಿರಿ.
ವೃಷಭ
ವೃಷಭ: ನಿಮ್ಮ ವಿಚಾರಗಳನ್ನು ವಿವಾದಕ್ಕೊಳಗಾಗದಂತೆ ಅರ್ಥ ಮಾಡಿಸುವಲ್ಲಿ ಯಶಸ್ವಿಯಾಗುವಿರಿ. ಇದರಿಂದ ನಿಮ್ಮ ಮನಸ್ಸಿಗೆ ಅಪಾರ ಸಂತಸ ದೊರಕಲಿದೆ. ಜವಾಬ್ದಾರಿಗಳನ್ನು ನಿಭಾಯಿಸಲೂ ಸಿದ್ಧರಾಗಬೇಕಾಗಲಿದೆ.
ಮಿಥುನ
ಮಿಥುನ: ಆರ್ಥಿಕ ಸ್ಥಿತಿಯಲ್ಲಿ ಯಾವುದೇ ತಾಪತ್ರಯಗಳಿಲ್ಲದೆ ವ್ಯಾಪಾರ ವ್ಯವಹಾರ ಹಂತ ಹಂತವಾಗಿ ಅಭಿವೃದ್ಧಿಯಾಗಲಿದೆ. ವೈದ್ಯಕೀಯ ವೃತ್ತಿ ನಡೆಸುವವರಿಗೆ ಆಶ್ಚರ್ಯಕರವಾದಂಥ ಅನುಭವ ಸಿಗಲಿದೆ.
ಕರ್ಕಾಟಕ
ಕರ್ಕಾಟಕ: ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅವಕಾಶಗಳು ಬರುವವು. ಆಸ್ತಿಯನ್ನು ಖರೀದಿಮಾಡುವಾಗ ದಾಖಲೆಯ ಎಲ್ಲಾ ವಿವರಗಳ ಬಗ್ಗೆ ಎರಡೆರಡು ಬಾರಿ ಮಾಹಿತಿಯನ್ನು ಪಡೆದುಕೊಳ್ಳಿರಿ.
ಸಿಂಹ
ಸಿಂಹ: ಸಮಸ್ಯೆಗಳನ್ನು ನಾಜೂಕಾಗಿ ಬಗೆಹರಿಸಿಕೊಳ್ಳುವ ಬಗ್ಗೆ ಗಮನ ನೀಡಿ. ಅಂಕಣಗಾರರಿಗೆ, ಲೇಖಕರಿಗೆ ಉತ್ತೇಜನದ ಕೊರತೆ ಕಾಣಲಿದೆ. ಅನವಶ್ಯಕವಾದ ವಿವಾದಗಳಿಂದ ದೂರ ಉಳಿಯುವ ಪ್ರಯತ್ನವನ್ನು ಮಾಡಿ.
ಕನ್ಯಾ
ಕನ್ಯಾ: ಅನುಭವಿ ಜನರೊಂದಿಗೆ ವ್ಯವಹರಿಸುವುದರಿಂದ ವ್ಯವಹಾರಗಳು ವಿಸ್ತರಣೆಗೊಳ್ಳಲಿವೆ. ಹರಿತಾದ ಯಂತ್ರಗಳ ಜೊತೆ ಕೆಲಸ ಮಾಡುವವರು ಈ ದಿನ ಜಾಗ್ರತರಾಗಿರಿ. ಗುರಿ ಸಾಧನೆಗೆ ಸ್ನೇಹಿತರಿಂದ ನೆರವು ದೊರೆಯುವುದು.
ತುಲಾ
ತುಲಾ: ಹೊಸದೊಂದು ಆದಾಯದ ದಾರಿ ನಿಮ್ಮ ಮುಂದೆ ಬರಲಿದೆ. ಧೈರ್ಯಂ ಸರ್ವತ್ರ ಸಾಧನಂ ಎನ್ನುವ ವಾಕ್ಯದಂತೆ ಹೆದರದೆ ಒಪ್ಪಿಕೊಳ್ಳಿ. ಚಿನ್ನ-ಬೆಳ್ಳಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ. ಕಳೆದು ಹೋಗಿದ್ದ ವಸ್ತುಗಳು ಕೈ ಸೇರುವವು.
ವೃಶ್ಚಿಕ
ವೃಶ್ಚಿಕ: ಖರ್ಚು ವೆಚ್ಚಕ್ಕೆ ಸಂಬಂಧಿಸಿದಂತೆ ಯೋಚಿಸಿ ಹೆಜ್ಜೆ ಇಡುವುದು ಸೂಕ್ತವಾದದ್ದು. ಪುಣ್ಯಕ್ಷೇತ್ರ ದರ್ಶನದಿಂದ ಮನಸ್ಸಿಗೆ ನೆಮ್ಮದಿ. ಮನೆಯಲ್ಲಿ ಸಂತಸದ ವಾತಾವರಣದಿಂದ ಹಿರಿಯರಿಗೆ ನೆಮ್ಮದಿ ಇರುವುದು.
ಧನು
ಧನು: ಅಧ್ಯಯನ ನಿರತರಿಗೆ ಸೂಕ್ತವಾದ ಸಲಹೆ, ಮಾರ್ಗದರ್ಶನ ಮತ್ತು ಅಧ್ಯಯನಕ್ಕೆ ಬೇಕಾದ ಗ್ರಂಥಗಳು ದೊರೆಯುವವು. ಆಂಜನೇಯನ ಸೇವೆ ಮಾಡುವುದರಿಂದ ನಿಮ್ಮ ಮನಸ್ಸಿನ ಗೊಂದಲ ನಿವಾರಣೆಯಾಗುತ್ತದೆ.
ಮಕರ
ಮಕರ: ವ್ಯಕ್ತಿಯಿಂದ ಅಥವಾ ಖಾಸಗಿ ಸಂಸ್ಥೆಯಿಂದ ಹಣ ಪಡೆದುಕೊಂಡು ಸ್ವಂತ ಉದ್ಯಮವನ್ನು ಆರಂಭಿಸುವ ಆಲೋಚನೆ ಮಾಡುವುದು ಸರಿಯಲ್ಲ. ರಂಗ ಕಲಾವಿದರಿಗೆ ಉತ್ತಮವಾದ ಅವಕಾಶಗಳು ಒದಗಿಬರುವುದು.
ಕುಂಭ
ಕುಂಭ: ಸಾಂಸಾರಿಕವಾಗಿ ಸದ್ಯದ ಪರಿಸ್ಥಿತಿಗೆ ಹೊಂದಿಕೊಳ್ಳುವುದೇ ಉತ್ತಮ ಎಂಬ ನಿಮ್ಮ ಭಾವನೆ ಸರಿಯಾಗಿದೆ. ಸಣ್ಣ ಮಕ್ಕಳ ವರ್ತನೆ ನಿಮ್ಮ ಮನಸ್ಸಿಗೆ ಸಂತೋಷ ತಂದುಕೊಡಲಿದೆ. ಮಗನ ಸಹಾಯಕ್ಕೆ ನಿಲ್ಲಬೇಕಾಗುವುದು.
ಮೀನ
ಮೀನ: ಸಮಾಲೋಚಿಸಿ ಮಾಹಿತಿಗಳನ್ನು ಕಲೆಹಾಕಿ, ಅಂತಿಮವಾಗಿ ನಿರ್ಧಾರ ಕೈಗೊಳ್ಳುವುದು ಸೂಕ್ತ. ಬೆಲೆ ಬಾಳುವ ಎಲೆಕ್ಟ್ರಾನಿಕ್‌ ವಸ್ತುಗಳ ಖರೀದಿ ಮಾಡುವಿರಿ. ಸಾಮಾಜಿಕ ಜೀವನದಲ್ಲಿ ಕಾರ್ಯಪ್ರವೃತ್ತರಾಗಿರಿ.