ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಸಂತಾನದ ಶುಭ ಸುದ್ದಿಯನ್ನು ಕೇಳುವಿರಿ.
Published 4 ಏಪ್ರಿಲ್ 2024, 23:53 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ತೋಟದ ಬೆಳೆಗಳಿಂದ ಉತ್ತಮ ಆದಾಯದೊಂದಿಗೆ ಮುಂದಿನ ಬೆಳೆಯ ವಿಸ್ತರಣೆಯ ಬಗ್ಗೆ ಯೋಚನೆ ನಡೆಸುವಿರಿ. ಸೌಂದರ್ಯ ಸಾಮಗ್ರಿಗಳ ಖರೀದಿಯ ಯೋಗವಿದೆ; ಅದಕ್ಕಾಗಿ ಅತಿಯಾಗಿ ಹಣ ವ್ಯಯವಾಗಲಿದೆ.
ವೃಷಭ
ಮುಕ್ತ ಮಾತುಕತೆ ಮೂಲಕ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಇರುವ ಅವಕಾಶಗಳನ್ನು ಮುಂದುವರಿಸುವಿರಿ. ಯಶಸ್ಸಿನ ಹೊಸ ಮಾರ್ಗಗಳ ಅರಿವಾಗುವುದು. ಸಂತಸದ ವಾತಾವರಣವಿರುತ್ತದೆ.
ಮಿಥುನ
ಸ್ವ ಉದ್ಯೋಗಿಗಳಿಂದ ಧನ ಸಹಾಯ ಸಿಗಲಿದೆ. ನ್ಯಾಯಾಂಗ ವಿಷಯದ ವಿದ್ಯಾರ್ಥಿಗಳು ವ್ಯಾಸಂಕ್ಕಾಗಿ ವಿದೇಶಕ್ಕೆ ತೆರಳುವ ಅವಕಾಶ ಒದಗಲಿದೆ. ಪ್ರಯಾಣದಲ್ಲಿ ವಿಳಂಬವಾಗುತ್ತದೆ.
ಕರ್ಕಾಟಕ
ಆಡಳಿತ ಕೆಲಸಗಳಿಗಾಗಿ ಸೂಕ್ತ ವ್ಯಕ್ತಿಯನ್ನು ತಿಳಿಸುವಂತೆ ಪರಿಚಿ ತರಲ್ಲಿ ಕೇಳಿಕೊಳ್ಳುವುದರಿಂದ ಸುಲಭವಾಗಿ ಫಲ ಸಿಗುವುದು. ರಾಜಕೀಯ ವ್ಯಕ್ತಿಗಳಿಗೆ ಓಡಾಟ ಹೆಚ್ಚಲಿದೆ. ದುರ್ಗಾಪರಮೇಶ್ವರಿಯನ್ನು ಆರಾಧಿಸಿ.
ಸಿಂಹ
ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಕೊಳ್ಳಲು ಈ ದಿನವು ಶುಭವಾಗಿ ತೋರುವುದಿಲ್ಲ. ಲೇಖಕರಿಗೆ ತಮ್ಮ ಲೇಖನಗಳಿಗೆ ಉತ್ತಮ ವಿಷಯಗಳು ಸಿಗುವುದು. ಸ್ವಪ್ರಯತ್ನದೊಂದಿಗೆ ದೈವ ಬಲವೂ ಇರುತ್ತದೆ.
ಕನ್ಯಾ
ಕುಟುಂಬದ ಸದಸ್ಯರಲ್ಲಿ ಬಾಲ್ಯದ ಕ್ಷಣಗಳನ್ನು ನೆನಪಿಸಿಕೊಳ್ಳುವ ಸಿಹಿ ಘಟನೆಗಳು ನಡೆಯಲಿವೆ. ನಿತ್ಯದ ಜೀವನಕ್ರಮವನ್ನು ಬದಲಿಸದೆ ಮುಂದುವರಿಯುವಿರಿ. ಆತ್ಮಸಾಕ್ಷಿಗೆ ವಂಚನೆ ಮಾಡದಂತೆ ನಡೆದುಕೊಳ್ಳಿ.
ತುಲಾ
ತೀರ್ಮಾನ ಅಥವಾ ಮುಂದಾಲೋಚನೆ ಇಲ್ಲದೇ ಭರವಸೆಯನ್ನೂ ನೀಡಬೇಡಿ. ಸೃಜನಶೀಲತೆಗೆ ಉತ್ತಮ ವೇದಿಕೆ ಪ್ರಾಪ್ತಿಯಾಗುವುದು. ಮಕ್ಕಳ ಜೊತೆ ಸಮಾರಂಭಗಳಲ್ಲಿ ಭಾಗವಹಿಸುವಿರಿ.
ವೃಶ್ಚಿಕ
ಅವಿವಾಹಿತರಿಗೆ ಕಂಕಣ ಬಲದ ಯೋಗವಿದ್ದು ಮಾತುಕತೆಯಿಂದ ನಿಶ್ಚಯಕ್ಕೆ ದಿನ ನಿಗದಿಗೊಳಿಸುವಿರಿ. ಇಲ್ಲವಾದಲ್ಲಿ ಮುಂದೆ ತಪ್ಪುಗಳು ನಡೆದಾವು. ಉನ್ನತ ಓದಿನೆಡೆಗೆ ಹೆಚ್ಚಿನ ಗಮನ ನೀಡುವುದು ಉತ್ತಮ.
ಧನು
ವ್ಯವಹಾರದಲ್ಲಿನ ಹೊಸ ವಿಷಯಗಳನ್ನು ತಿಳಿದುಕೊಂಡು ಅದರಂತೆ ನಡೆದು ಹೆಚ್ಚು ಆದಾಯವನ್ನು ಹೊಂದಬಹುದು. ಕಳುವಾಗಿದ್ದ ವಸ್ತುಗಳು ಪುನಃ ದೊರೆತು ಸಂತಸವಾಗಲಿದೆ. ಸಂತಾನದ ಶುಭ ಸುದ್ದಿಯನ್ನು ಕೇಳುವಿರಿ.
ಮಕರ
ಕಾತರದಿಂದ ಕಾಯುತ್ತಿದ್ದ ಸುದ್ದಿ ಕೇಳಿ ಮನಸ್ಸಿಗೆ ಹರ್ಷ ಉಂಟಾ ಗುವುದು. ಕುಟುಂಬದ ಸದಸ್ಯರ ಜೊತೆಗಿನ ಪ್ರವಾಸ ಸಂತೋಷವನ್ನು ಉಂಟು ಮಾಡಲಿದೆ. ಕಣ್ಣಿಗೆ ಸಂಬಂಧಿಸಿದಂತೆ ಅನಾರೋಗ್ಯಗಳು ಎದುರಾಗಬಹುದು.
ಕುಂಭ
ಸ್ಪಷ್ಟ ನಿರ್ಧಾರವನ್ನು ಮಾಡಿದ ವಿಚಾರವನ್ನು ಪುನಃ ಮತ್ತೊಮ್ಮೆ ಯೋಚಿಸಲು ಅವಕಾಶಗಳು ಒದಗಿಬರುತ್ತದೆ. ಆದರೆ ಹಿಂದೆ ತೆಗೆದುಕೊಂಡ ನಿಲುವನ್ನು ಬದಲಾಯಿಸಬೇಡಿ. ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಗಮನವಹಿಸಿ.
ಮೀನ
ವ್ಯವಸ್ಥಿತವಾಗಿ ದಿನಚರಿ ರೂಪಿಸಿಕೊಂಡರೆ ಈಗಾಗಲೇ ಆರಂಭಿ ಸಿರುವ ಯೋಜನೆಗಳು ಪೂರ್ಣಗೊಳ್ಳಲಿವೆ. ಚಲನಚಿತ್ರ ಯಶಸ್ವಿಗೊಂಡು ನಿರೀಕ್ಷೆಗೂ ಮೀರಿದ ಲಾಭ ಗಳಿಸುವಿರಿ. ಮಹಾಗಣಪತಿಯನ್ನು ಆರಾಧಿಸಿ.