ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರುವುದು
Published 23 ಮಾರ್ಚ್ 2024, 0:16 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮೇಷ: ಇಂದು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಹೆಣಗಾಡಬೇಕಾಗಬಹುದು. ಕಾರ್ಯವು ನಿರ್ವಿಘ್ನವಾಗಿ ನೆರವೇರಲು ವಿಘ್ನೇಶ್ವರನ ಸ್ತೋತ್ರ ಪಠಿಸಿ. ಪಾದರಕ್ಷೆಯ ಮಾರಟಗಾರರಿಗೆ ಲಾಭ.
ವೃಷಭ
ವೃಷಭ: ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯಕವಾಗುತ್ತದೆ. ಹೂವು ಮತ್ತು ಹಣ್ಣಿನ ಬೆಳೆಗಾರರಿಗೆ, ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ದೊರೆಯುತ್ತದೆ. ಹಣ್ಣು –ತರಕಾರಿ ವ್ಯಾಪಾರದಿಂದ ಬಹಳಷ್ಟು ಲಾಭ ಇರಲಿದೆ.
ಮಿಥುನ
ಮಿಥುನ: ಇತರರಿಗಿಂತ ಭಿನ್ನವಾದ ಹಾಗೂ ಧನಾತ್ಮಕವಾದ ನಿರ್ಧಾರವನ್ನು ತಗೆದುಕೊಳ್ಳುವಿರಿ. ಉದ್ಯೋಗದಲ್ಲಿ ಅನಿರೀಕ್ಷಿತ ಲಾಭ ಅಥವಾ ಬಡ್ತಿ ಇರುವುದು. ಅವಿವಾಹಿತರಿಗೆ ವಿವಾಹ ಯೋಗವು ಕೂಡಿ ಬರುವುದು.
ಕರ್ಕಾಟಕ
ಕರ್ಕಾಟಕ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಆಸಕ್ತಿಯಿಂದ ಯಶಸ್ಸು ಪಡೆಯುವಿರಿ. ವೃತ್ತಿ ಜೀವನ ಹಾಗೂ ದಿನಚರಿಯು ಎಂದಿನಂತೆ ವ್ಯವಸ್ಥಿತವಾಗಿರುವುದು. ಸಾಮಾಜಿಕ ಬದುಕಿನಲ್ಲಿ ಹೊಸ ಹುರುಪು ಕಾಣಲಿದ್ದೀರಿ.
ಸಿಂಹ
ಸಿಂಹ: ದುರಹಂಕಾರ ವ್ಯಕ್ತಪಡಿಸಿದಲ್ಲಿ ತೊಂದರೆಗೆ ಸಿಲುಕುವ ಸಂಭವವಿದೆ. ಮನೆಯವರೊಂದಿಗೆ ಸಣ್ಣ ವಿಹಾರವು ಸಂತಸ ತರುವುದು. ಗುಂಪು ಚಟುವಟಿಕೆಗಳಿಗೆ ಮುಂದಾಳತ್ವ ಅಗತ್ಯವಾಗಿರುವುದು.
ಕನ್ಯಾ
ಕನ್ಯಾ: ಸಾಲದ ರೂಪದಲ್ಲಿ ಸ್ನೇಹಿತರಿಗೆ ನೀಡಿದ ಹಣವು ಇನ್ನೊಬ್ಬ ಸ್ನೇಹಿತನ ನೆರವಿನಿಂದ ಹಿಂದಿರುಗಲಿದೆ. ವೃತ್ತಿರಂಗದಲ್ಲಿ ನೂತನ ಸ್ಥಾನಮಾನ ದೊರೆತು ಸಂತಸವಾಗುತ್ತದೆ. ಆನಂದವನ್ನು ಹೆಚ್ಚಿಸುತ್ತದೆ.
ತುಲಾ
ತುಲಾ : ಉದ್ಯಮಿ ಹಾಗೂ ಅಧಿಕಾರಿಗಳಿಗೆ ಎಲ್ಲವೂ ಅವರ ನಿಯಂತ್ರಣಕ್ಕೆ ಸಿಗುವುದರಿಂದ ನೆಮ್ಮದಿ ಉಂಟಾಗುತ್ತದೆ. ಗಂಡನ ಹಣಕಾಸಿನ ಪರಿಸ್ಥಿತಿಗೆ ಹೆಂಡತಿಯು ಸಹಕರಿಸಿದರೆ ಕುಟುಂಬದ ಗೌರವವನ್ನು ಕಾಪಾಡಬಹುದು.
ವೃಶ್ಚಿಕ
ವೃಶ್ಚಿಕ: ಧನಾಗಮನಕ್ಕೆ ಹಲವು ರೀತಿಯ ಅವಕಾಶಗಳಿದ್ದರೂ ಕಠಿಣ ಪರಿಶ್ರಮ ಮತ್ತು ಬುದ್ಧಿವಂತಿಕೆ, ಆತ್ಮವಿಶ್ವಾಸದ ಅಗತ್ಯವಿರುತ್ತದೆ. ವಿಶೇಷವಾಗಿ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ.
ಧನು
ಧನು: ಆಸ್ತಿಯ ಬಗ್ಗೆ ಯೋಚಿಸದೇ, ಶ್ರಮದಿಂದ ದುಡಿಯುವ ಬಗ್ಗೆ ಗಮನಹರಿಸಿ. ವ್ಯಾಪಾರ ಹಾಗೂ ವಾಣಿಜ್ಯೋದ್ಯಮ ವ್ಯವಹಾರಗಳಿಗೆ ಇದು ಒಳ್ಳೆಯ ದಿನ. ಬರಹಗಾರರಿಗೆ ಉತ್ತೇಜನದ ಕೊರತೆ ಕಾಡಲಿದೆ.
ಮಕರ
ಮಕರ: ಕೆಲಸ ಕಾರ್ಯಗಳಲ್ಲಿ ಕಷ್ಟ-ನಷ್ಟಗಳು ಎದುರಾಗಬಹುದು, ಹಾಗೆಂದು ಕರ್ತವ್ಯವನ್ನು ನಿರ್ಲಕ್ಷಿಸಬೇಡಿ. ಹಿಮ್ಮುಖ ಚಲನೆಯೂ ಸರಿಯಲ್ಲ. ಬದುಕನ್ನು ವ್ಯವಸ್ಥೆಗೆ ತರಲು ಮಾರ್ಗದರ್ಶಕರ ಸಲಹೆಯನ್ನು ಪಡೆಯಿರಿ.
ಕುಂಭ
ಕುಂಭ: ಮನಸ್ಸಿನ ಚಂಚಲ ಸ್ವಭಾವದಿಂದ ಇಂದಿನ ಕಾರ್ಯದಲ್ಲಿ ವಿಫಲರಾಗುವ ಸನ್ನಿವೇಶಗಳಿರುವುದು. ಮದುವೆಯಂಥ ಶುಭ ಸಮಾರಂಭ ನಡೆಯುವ ಸಾಧ್ಯತೆಗಳಿವೆ. ಸಂಸಾರದಲ್ಲಿ ನೆಮ್ಮದಿಯ ಜೀವನವಿರುವುದು.
ಮೀನ
ಮೀನ: ವೈದ್ಯರ ಸಲಹೆಯಂತೆ ದೇಹಾರೋಗ್ಯಕ್ಕಾಗಿ ಆಹಾರ ಸೇವನೆಯಲ್ಲಿ ಕೆಲವು ನಿರ್ಬಂಧಗಳನ್ನು, ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಬಹುದು. ನಿರೀಕ್ಷೆಗೆ ತಕ್ಕ ಪ್ರತಿಕ್ರಿಯೆಯಿಂದ ಮಾನಸಿಕ ನೆಮ್ಮದಿ ಉಂಟಾಗುತ್ತದೆ.