ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರ ರಾಜಕಾರಣದ ರಹಸ್ಯ ಬಯಲಾಗಬಹುದು
Published 22 ಜನವರಿ 2024, 19:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಇನ್ನೊಬ್ಬರಿಗೆ ಮಾರ್ಗದರ್ಶನ ಮಾಡುವ ಸಮಯದಲ್ಲಿ ಸ್ವಾರ್ಥವನ್ನು ಯೋಚಿಸಬೇಡಿ. ವೈವಾಹಿಕ ಜೀವನವು ಸಿಹಿಯ ಅನುಭವ ನೀಡುತ್ತದೆ. ಇನ್ನೊಬ್ಬರನ್ನು ನಿಂದಿಸುವುದು ಸರಿಯಲ್ಲ.
ವೃಷಭ
ವೃತ್ತಿ ಪರವಾಗಿ ನಡೆಯುವ ಎಲ್ಲ ವಿಷಯಗಳನ್ನೂ ಗಂಭೀರವಾಗಿಯೇ ಪರಿಗಣಿಸ ಬೇಕಾದ ಅಗತ್ಯವಿಲ್ಲ. ಮಾತಿನ ಚತುರತೆಯು ಸಂಘಟನೆ ಮಾಡಲು ಉಪಯೋಗವಾಗುವುದು.
ಮಿಥುನ
ಸಂಸಾರದ ವಿಚಾರದಲ್ಲಿ, ಮಕ್ಕಳ ಭವಿಷ್ಯದ ವಿಚಾರದಲ್ಲಿ ಕಾಡುತ್ತಿದ್ದ ತಲೆನೋವು ಶಮನಹೊಂದುವುದು. ನೂತನ ವಾಹನ ಖರೀದಿಯ ಯೋಚನೆ ಅಗತ್ಯಕ್ಕೆ ಅನುಗುಣವಾಗಿ ತೀರ್ಮಾನಿಸಿ.
ಕರ್ಕಾಟಕ
ಖಾಸಗಿ ಉದ್ಯೋಗಿಗಳು ಆದಾಯ ಏರಿಕೆಯ ವಿಚಾರವನ್ನು ಮೇಲಧಿಕಾರಿಗಳಲ್ಲಿ ಪ್ರಸ್ತಾಪಿಸಬಹುದು. ಜಾಹೀರಾತು ಕ್ಷೇತ್ರದ ಕೆಲಸಗಳಿಂದ ಉತ್ತಮ ಅವಕಾಶಗಳು ಸಿಗಲಿವೆ. ಈಶ್ವರ ಆರಾಧನೆ ನಡೆಸಿ ಶುಭವಾಗುತ್ತದೆ.
ಸಿಂಹ
ಗಣಿತದಲ್ಲಿ ಅಥವಾ ಸಂಗೀತದಲ್ಲಿ ಪರಿಣತಿ ಹೊಂದಿರುವವರಿಗೆ ಉತ್ತಮ ಅವಕಾಶಗಳು ಅರಸಿ ಬರಲಿದೆ. ಧ್ಯಾನ, ಯೋಗದಿಂದ ಮಾನಸಿಕ ಒತ್ತಡ ಸ್ವಲ್ಪ ಕಡಿಮೆಯಾಗುವುದು. ಆಕಸ್ಮಿಕ ಧನಲಾಭ ಉಂಟಾಗಲಿದೆ.
ಕನ್ಯಾ
ಮದುವೆಯ ವಿಷಯಕ್ಕೆ ಸಂಬಂಧಪಟ್ಟಂತೆ ತಾಯಿಯ ಮತ್ತು ಅಣ್ಣಂದಿರ ಮನಸೆಳೆಯುವಲ್ಲಿ ಯಶಸ್ವಿಯಾಗುವಿರಿ. ಒಪ್ಪಂದಗಳಿಗೆ ಒಪ್ಪಿಕೊಳ್ಳುವ ಮೊದಲು ಕೂಲಂಕಷವಾಗಿ ಯೋಚಿಸಿ ತೀರ್ಮಾನಿಸಿ.
ತುಲಾ
ಸಹೋದ್ಯೋಗಿಯೊಬ್ಬರ ಸಲಹೆ ಅತಿ ಸೂಕ್ತವಾದುದು ಎನಿಸಿ ಅದರಂತೆ ನಡೆದು ವ್ಯವಹಾರದಲ್ಲಿ ಲಾಭ ಹೊಂದುವಿರಿ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗಲಿದೆ. ಆರೋಗ್ಯದ ಬಗ್ಗೆ ಅನಗತ್ಯ ಭೀತಿ ಬೇಡ.
ವೃಶ್ಚಿಕ
ಸಹಜ ಜೀವನ ಶೈಲಿಯಲ್ಲಿ ಸಣ್ಣ ಪುಟ್ಟ ಸಂತಸದ ಕ್ಷಣಗಳನ್ನು ಕಾಣುವಿರಿ. ಅತೀವ ಪ್ರಯತ್ನದಿಂದ ಕೆಲಸ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುವಿರಿ. ಮನೆಯಲ್ಲಿ ಶುಭ ಕಾರ್ಯಗಳು ಜರುಗುವುದು.
ಧನು
ಒಣಪ್ರತಿಷ್ಠೆಯಿಂದಾಗಿ ಸಂಬಂಧಗಳು ನುಚ್ಚುನೂರಾಗುವ ಪರಿಸ್ಥಿತಿ ತಂದುಕೊಳ್ಳಬೇಡಿ. ಗೃಹಿಣಿಯರಿಗೆ ವಿಶೇಷ ದಿನವಾಗಿದ್ದು ಆಕಸ್ಮಿಕ ಧನಲಾಭ ಅಥವಾ ತವರು ಮನೆಯವರಿಂದ ಉಡುಗೊರೆ ಸಿಗಲಿದೆ.
ಮಕರ
ಮನೆಯ ಹಿರಿಯರ ಮಧ್ಯಸ್ತಿಕೆಯಿಂದ ವಿವಾದಗಳು ಬಗೆಹರಿ ಯುವುದು, ಪುನಃ ಮೊದಲಿನಂತೆ ಸಂಬಂಧ ಗಟ್ಟಿಯಾಗಲಿದೆ. ಅಗತ್ಯದ ಹಣ ಕೈಸೇರುವುದರಿಂದ ಮಾಡಿದ ಸಾಲವನ್ನು ತೀರಿಸಲು ಸಾಧ್ಯವಾಗಲಿದೆ.
ಕುಂಭ
ಬೆನ್ನು ನೋವು ಹೋಗಲಾಡಿಸಿಕೊಳ್ಳುವ ಸಲುವಾಗಿ ಚಿಕಿತ್ಸೆ ತೆಗೆದುಕೊಳ್ಳುವುದು ಅನಿವಾರ್ಯ. ವಿದ್ಯುತ್ ಉಪಕರಣ, ಯಂತ್ರೋಪಕರಣಗಳ ಮಾರಾಟದಿಂದ ಅಧಿಕ ಲಾಭ. ಖರ್ಚಿನ ಮೇಲೆ ಬಿಗಿಹಿಡಿತವಿರಲಿ.
ಮೀನ
ಕೋರ್ಟು ವ್ಯವಹಾರದಲ್ಲಿ ಬಹುನಿರೀಕ್ಷಿತ ಜಯದ ಸಿಹಿಯನ್ನು ಅನಿರೀಕ್ಷಿತವಾದ ಸೋಲಿನ ಕಹಿ ಕಸಿಯುವ ಸಾಧ್ಯತೆಗಳಿವೆ. ರಾಜಕಾರಣದ ರಹಸ್ಯ ಬಯಲಾಗಬಹುದು. ಮತ್ತು ಅಧಿಕ ಮಟ್ಟಿಗೆ ಪರಿಣಾಮ ಬೀರಲಿದೆ.