ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಹೂಡಿಕೆ ವಿಚಾರದಲ್ಲಿ ದೀರ್ಘಾಲೋಚನೆ ನಡೆಸುವುದು ಉತ್ತಮ
Published 27 ಜನವರಿ 2024, 22:13 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹೂಡಿಕೆ ವಿಚಾರದಲ್ಲಿ ಆಳವಾಗಿ ಯೋಚಿಸಿ ತೀರ್ಮಾನಿಸುವುದು ಅಥವಾ ಮಿತ್ರರ ಸಲಹೆ ಪಡೆಯುವುದು ಅನುಕೂಲಕರ. ಅನಾರೋಗ್ಯಕರ ಹೆಂಡತಿಯ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಯಾಗಬಹುದು.
ವೃಷಭ
ಕುಲ ದೇವರ ದರ್ಶನ ಅಥವಾ ಕ್ಷೇತ್ರಕ್ಕೆ ಕಾಣಿಕೆ ಕಳುಹಿಸಿದ ನಂತರ ಈ ದಿನವನ್ನು ಪ್ರಾರಂಭಿಸಿ. ನಿಮ್ಮ ದಿನ ನಿತ್ಯದ ದಿನಚರಿಯಲ್ಲಿ ಬದಲಾವಣೆ ಇಲ್ಲ. ಕಬ್ಬಿಣ ಮತ್ತು ತಾಮ್ರದ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಸಿಗಲಿದೆ.
ಮಿಥುನ
ಒಮ್ಮೆ ನಿಮ್ಮ ಜೀವನವನ್ನು ಹಿಂದಿರುಗಿ ನೋಡಿದರೆ ನಿಮ್ಮ ಸಾಧನೆಗಳ ಬಗ್ಗೆ ನಿಮಗೆ ಹೆಮ್ಮೆ ಎನಿಸುವುದು. ಮನುಷ್ಯ ಪ್ರಯತ್ನದ ಜೊತೆ ಮಹಾ ಗಣಪತಿಯ ಮೊರೆ ಹೋಗುವುದರಿಂದ ಕಾರ್ಯ ಸಿದ್ಧಿಯಾಗಲಿದೆ.
ಕರ್ಕಾಟಕ
ವೈಯಕ್ತಿಕವಾಗಿ ನಿಯಮ, ನಿಷ್ಠೆಯಿಂದಿರುವುದು ಉತ್ತಮ. ಯಾವುದೇ ವಿಚಾರದಲ್ಲಿಯಾದರೂ ಸಮಾಲೋಚನೆ ಒಳ್ಳೆಯದು. ಹಿಂದಿನಿಂದ ಬಾಕಿ ಇದ್ದ ಆಫೀಸಿನ ಕೆಲಸಗಳನ್ನು ಪೂರ್ತಿಗೊಳಿಸಲು ಪ್ರಯತ್ನಿಸಿ.
ಸಿಂಹ
ಕಾರ್ಖಾನೆಯೊಂದನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಲು ನಿಮ್ಮ ಸ್ನೇಹಿತನ ಸಹಾಯ ಪಡೆಯಬಹುದು. ನಿಮ್ಮ ಅಭಿವೃದ್ಧಿಯನ್ನು ನೋಡಿ ಬಂಧುಗಳು ಶತ್ರುಗಳಂತೆ ಮನೋಭಾವನೆ ತೋರುವರು.
ಕನ್ಯಾ
ಭಾರಿ ಕೆಲಸಕ್ಕೆ ಕೈಹಾಕಿದ ಪರಿಣಾಮದಿಂದ ಈ ದಿನ ನಿಮ್ಮ ಪ್ರತಿಭೆ ಬೆಳಕಿಗೆ ಬರಲಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಪ್ರಯತ್ನ ಬಲವನ್ನು ಹೆಚ್ಚಿಸಿದರೆ ಉತ್ತಮ. ಆತಂಕದ ಸ್ಥಿತಿಯಾದರೂ ಧೃತಿಗೆಡದಿರಿ.
ತುಲಾ
ಕಾರ್ಯ ಕ್ಷೇತ್ರದಲ್ಲಿ ಶಾಂತ ಚಿತ್ತದಿಂದ ಕಾರ್ಮಿಕರ ಮಾತುಗಳನ್ನು ಆಲಿಸಿ ಸೂಕ್ತ ಕ್ರಮ ಕೈಗೊಳ್ಳಿ. ಸಂಘ ಸಂಸ್ಥೆಗಳಿಂದ ಮನ್ನಣೆ, ಸನ್ಮಾನ ಸಿಗಲಿದೆ. ಕೆಲಸದಲ್ಲಿ ಧನಾತ್ಮಕ ಬದಲಾವಣೆಯಿಂದಾಗಿ ಸಂತಸವಾಗಲಿದೆ.
ವೃಶ್ಚಿಕ
ಹತ್ತಾರು ವರ್ಷಗಳ ಸತತ ಪ್ರಯತ್ನದ ಫಲವಾಗಿ ಕುಟುಂಬದಲ್ಲಿನ ಸ್ಥಾನ ಭದ್ರವಾಗುವುದು. ಹಣಕಾಸು ಸಂಸ್ಥೆಗೆ ಪಾಲುದಾರರಾಗುವುದು ದಾರಿಯಲ್ಲಿ ಹೋಗುವ ಸಮಸ್ಯೆಯನ್ನು ಮನೆಗೆ ಕರೆತಂದಂತೆ ಆಗುವ ಸಾಧ್ಯತೆಯಿದೆ.
ಧನು
ಕೈ ತಪ್ಪಿ ಹೋದ ಕಾರ್ಯಗಳಿಂದ ಆಗುವ ಲಾಭ ನಷ್ಟದ ಮೌಲ್ಯಮಾಪನ ಮಾಡುತ್ತ ಸುಮ್ಮನೆ ಕೂರುವುದರಿಂದ ಯಾವುದೇ ಪ್ರಯೋಜನವಿಲ್ಲ. ಹೂಡಿಕೆ ವಿಚಾರದಲ್ಲಿ ದೀರ್ಘಾಲೋಚನೆ ನಡೆಸುವುದು ಉತ್ತಮ.
ಮಕರ
ಸಂಘ ಸಂಸ್ಥೆಗಳ ಅಧಿಕಾರ ಪಡೆದುಕೊಳ್ಳುವ ವಿಚಾರದಲ್ಲಿ ಯಾವುದೇ ವಾಮಮಾರ್ಗ ಅನುಸರಿಸಬೇಡಿ. ರಾಸಾಯನಿಕ ವಸ್ತುಗಳ ವ್ಯಾಪಾರ ವ್ಯವಹಾರಗಳಲ್ಲಿ ಲಾಭ ಕಾಣಲಿದ್ದೀರಿ. ಆಭರಣ ವ್ಯಾಪಾರಿಗಳಿಗೆ ಧನಲಾಭ ಪ್ರಾಪ್ತಿ.
ಕುಂಭ
ನಿಮ್ಮನ್ನು ಹೀಯಾಳಿಸುವವರೇ, ಅನುಮಾನಿಸುತ್ತಿರುವವರೇ ಇಂದು ನಿಮ್ಮ ಸಹಾಯ ಕೋರಿ ಬರಲಿದ್ದಾರೆ. ಶಿಕ್ಷಣ ಮುಂದುವರೆಸಲು ಬಂಧುಗಳಿಂದ ಸಹಾಯ ದೊರಕಲಿದೆ. ಪತ್ರಕರ್ತರಿಗೆ ಭಯ ಮೂಡುವ ಪ್ರಸಂಗವಿದೆ.
ಮೀನ
ಸಹೋದರರಲ್ಲಿನ ಸಂಬಂಧಗಳು ಗಟ್ಟಿಗೊಂಡು ಸುರಕ್ಷತೆಯ ಭಾವ ಉಂಟಾಗಲಿದೆ. ಊರಿನ ಅಥವಾ ಸುತ್ತಮುತ್ತಲಿನ ಕುತೂಹಲಕಾರಿ ವಿಷಯ ತಿಳಿದು ಅಚ್ಚರಿಗೊಳ್ಳುವಿರಿ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ ಅನಿಸಲಿದೆ.