ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಸಜ್ಜನರ ಸಹವಾಸ ಮಾಡುವುದರಿಂದ ಜ್ಞಾನ ವೃದ್ಧಿಯಾಗಲಿದೆ
Published 12 ಏಪ್ರಿಲ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಜ್ಜನರ ಸಹವಾಸ ಮಾಡುವುದರಿಂದ ಪ್ರಾಪಂಚಿಕ ಜ್ಞಾನ ವೃದ್ಧಿಯಾಗುತ್ತದೆ. ಕೃಷಿಗೆ ಸಂಬಂಧಿಸಿದಂತೆ ಪಡೆದ ಸಾಲವನ್ನು ಹಿಂದಿರುಗಿಸುವ ಶಕ್ತಿ ದೊರಕಲಿದೆ. ಇಂದು ಉತ್ಸಾಹದ ಕೊರತೆ ಕಾಣಿಸುವುದು.
ವೃಷಭ
ಅಕ್ಕ-ಪಕ್ಕದವರು ಭೂ ಸಂಬಂಧದ ಕಲಹಗಳನ್ನು ಬಿಟ್ಟು ರಾಜಿ ಮಾಡಿಕೊಳ್ಳುವ ಮನೋಭಾವಕ್ಕೆ ಬರುವರು. ಅದರಂತೆ ನಡೆಯುವುದು ಉತ್ತಮ. ಚಿಂತೆಯಿಂದ ಅನಾರೋಗ್ಯ ಕಂಡುಬರಲಿದೆ.
ಮಿಥುನ
ಆರೋಗ್ಯದಲ್ಲಿ ರಕ್ತದೊತ್ತಡಕ್ಕೆ ಸಂಬಂಧಿಸಿದಂತೆ ಏರುಪೇರಾಗುವ ಲಕ್ಷಣ ಇರುವುದು. ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬೇಡಿ. ಅಸಹಾಯಕರಿಗೆ ಸಹಾಯ ಮಾಡುವುದರಿಂದ ಪುಣ್ಯ ಸಂಪಾದಿಸಬಹುದು.
ಕರ್ಕಾಟಕ
ಲಾಭ ತರುವಂಥ ಮತ್ತು ಅನಿವಾರ್ಯದ ನಿರ್ದಿಷ್ಟ ಕೆಲಸಗಳಿಗೆ ಮಾತ್ರ ಗಮನ ಕೊಡುವುದು ಒಳ್ಳೆಯದು. ಅವಿವಾಹಿತ ಯೋಗ್ಯ ವಯಸ್ಕರಿಗೆ ಹೊಸ ಸಂಬಂಧಗಳು ಹುಡುಕಿಕೊಂಡು ಬರುವ ಸಾಧ್ಯತೆಗಳಿವೆ.
ಸಿಂಹ
ಉತ್ತಮ ವ್ಯವಹಾರಗಳ ಫಲದಿಂದ ನಿಮ್ಮ ಕೈಬಿಟ್ಟ ಹಳೆಯ ಆಸ್ತಿಯು ಕೈಸೇರುವ ಯೋಗವಿದೆ. ಖರ್ಚು ವೆಚ್ಚಗಳ ಮೇಲೆ ಗಮನವಿದ್ದರೆ ಒಳ್ಳೆಯದು. ಸರಕು ಸಾಗಾಟದಿಂದ ಉತ್ತಮ ಲಾಭ ಪಡೆಯುವಿರಿ.
ಕನ್ಯಾ
ಮುಖ್ಯವಾದ ವ್ಯಕ್ತಿಯೊಬ್ಬರ ಪರಿಚಯದಿಂದ ವ್ಯಾಪಾರ ಅಭಿವೃದ್ಧಿಯ ದಾರಿ ಹಿಡಿಯಲು ಕಾರಣವಾಗುವುದು. ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವಂಥವರಿಗೆ ಸಮಾಧಾನ ದೊರೆಯಲಿದೆ.
ತುಲಾ
ಸರ್ಕಾರಿ ಮೂರನೇ ದರ್ಜೆಯ ನೌಕರರಿಗೆ ಆರ್ಥಿಕವಾಗಿ ಅನುಕೂಲವಾಗುವುದು. ವ್ಯಾಪಾರದ ಬಂಡವಾಳ ಹೆಚ್ಚಿಸಿಕೊಳ್ಳುವ ಬಗ್ಗೆ ಯೋಚಿಸಬಹುದು. ಹಿರಿಯರ ಆರೋಗ್ಯದಲ್ಲಿ ಏರಿಳಿತ ಕಾಣುವಂತಾಗಲಿದೆ.
ವೃಶ್ಚಿಕ
ಬದುಕಿಗೊಂದು ಹೊಸ ಆಯಾಮ ಸಿಗಲಿದೆ. ಈ ತಿರುವಿನಲ್ಲಿ ಸ್ನೇಹಿತನ ಪಾತ್ರ ತುಂಬ ಪ್ರಮುಖವಾಗಿರುತ್ತದೆ. ಉದ್ಯೋಗದಲ್ಲಿ , ವ್ಯಾಪಾರ ವ್ಯವಹಾರದ ಅಭಿವೃದ್ಧಿಯಲ್ಲಿ ಹಿನ್ನಡೆ ಕಾಡಬಹುದು.
ಧನು
ಅವಿವೇಕಿಗಳ ನಡುವೆ ವಾದಿಸಲು ಹೋಗಬೇಡಿ. ವಿವೇಕಯುತ ನಡವಳಿಕೆಯು ಪ್ರಯೋಜನಗಳನ್ನು ನೀಡುತ್ತದೆ. ಹೊಸದನ್ನು ಕಲಿಯುವುದಕ್ಕೆ ಬಹಳ ಉತ್ಸುಕರಾಗಿದ್ದೀರಿ. ವಕೀಲರು ಯಶಸ್ಸು ಕಾಣುವಿರಿ.
ಮಕರ
ತಲೆಶೂನೆ, ಮಾನಸಿಕ ಅಸ್ವಸ್ಥತೆಯಂಥ ತೊಂದರೆಗಳು ಕಾಡುವ ಸಂಭವವಿದೆ. ಅನಗತ್ಯ ವಿಚಾರಗಳ ಬಗ್ಗೆ ಚಿಂತಿಸುವುದನ್ನು ಬಿಡಿ. ಹಣಕಾಸಿಗೆ ಸಂಬಂಧಿಸಿದಂತೆ ಹೊಸದಾದ ತೀರ್ಮಾನವನ್ನು ಕೈಗೊಳ್ಳುವುದು ಸರಿಯಲ್ಲ.
ಕುಂಭ
ಬಹುಕಾಲದಿಂದ ಅನುಭವಿಸುತ್ತಿರುವ ರೋಗವು ಚೇತರಿಕೆಯ ಮೆಟ್ಟಿಲನ್ನು ನೋಡಲಿದೆ. ಕೆಲಸದಲ್ಲಿ ಈ ದಿನ ವಿಘ್ನಗಳು ಎದುರಾದರೂ, ಅಪೇಕ್ಷಿತ ಫಲ ದೊರಕುವುದು.
ಮೀನ
ಪ್ರಾರಂಭಿಸಿದ ಕಾರ್ಯಗಳು ಸೂಕ್ತ ಸಮಯದಲ್ಲಿ ಪೂರ್ಣಗೊಳ್ಳುವುದು. ವ್ಯವಹಾರಗಳ ಮೇಲೆ ಹೆಚ್ಚಿನ ನಿಗಾ ಇರಲಿ, ಹಿತಶತ್ರುಗಳ ಕಾಟ ಇರಬಹುದು. ಮಹಾಗಣಪತಿಯನ್ನು ಆರಾಧಿಸಿ.