ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಬಹು ನಿರೀಕ್ಷಿತ ಫಲಿತಾಂಶ, ಯಶಸ್ಸು ಒಲಿದು ಬರಲಿದೆ
Published 29 ಜನವರಿ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಪರಿಶ್ರಮಕ್ಕೆ ತಕ್ಕ ಆದಾಯವಿಲ್ಲದೆ ಸೊರಗಿದ್ದ ನಿಮಗೆ, ಅತಿ ಹೆಚ್ಚಿನ ವರಮಾನದ ಮಾರ್ಗವನ್ನು ಸ್ನೇಹಿತರೊಬ್ಬರು ತೋರಿಸುವರು. ದೃಷ್ಟಿದೋಷ ಸರಿಪಡಿಸಿಕೊಳ್ಳಲು ವೈದ್ಯರನ್ನು ಭೇಟಿ ಮಾಡಿ.
ವೃಷಭ
ಬೆನ್ನು ಮತ್ತು ಕಾಲಿನ ನೋವು ನಿವಾರಿಸಿಕೊಳ್ಳಲು ಸೂಕ್ತ ವ್ಯಾಯಾಮ ತಿಳಿದುಕೊಳ್ಳುವುದು ಉತ್ತಮ. ಸೋಮಾರಿತನವು ದೂರವಾಗಿ ಕೈಹಿಡಿದ ಕಾರ್ಯ ಸಾಧನೆ ಅಂತಿಮ ಹಂತ ತಲುಪಲಿದೆ.
ಮಿಥುನ
ಕಂಪನಿಯಲ್ಲಿ ಸಿಗುವ ಗೌರವವನ್ನು ಉಳಿಸಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸುವುದು ಉತ್ತಮ. ಸಕಾರಾತ್ಮಕ ನಡವಳಿಕೆಗಳಿಂದ ಲಾಭ ಕಂಡುಕೊಳ್ಳಲಿದ್ದೀರಿ. ಆಧ್ಯಾತ್ಮಿಕ ವಿಚಾರಗಳತ್ತ ಮನಸ್ಸು ಹೊರಳುವುದು.
ಕರ್ಕಾಟಕ
ವಸ್ತ್ರ ವಿನ್ಯಾಸ ಸಲಹೆಗಾರರಿಗೆ ಪ್ರತಿಷ್ಠಿತ ಗಾರ್ಮೆಂಟ್ ಸಂಸ್ಥೆಯೊಂದರಲ್ಲಿ ಉದ್ಯೋಗ ಸಿಗುವುದು. ಆಫೀಸಿನಲ್ಲಿ ಕೆಲಸದ ವೇಗವನ್ನು ಹೆಚ್ಚಿಸಿಕೊಳ್ಳುವಿರಿ.ಠೇವಣಿಯಲ್ಲಿ ಅಥವಾ ಆಸ್ತಿ ರೂಪದಲ್ಲಿ ಹಣ ಬೆಳೆಯಲಿದೆ.
ಸಿಂಹ
ನಾಳೆಯ ಕೆಲಸಗಳ ಬಗ್ಗೆ ಇಂದಿನ ದಿನವೇ ತಯಾರಿಯನ್ನು ನಡೆಸಿಕೊಳ್ಳುವುದು ಯಶಸ್ಸಿಗೆ ಸಹಾಯವಾಗುವುದು. ಮಾನಸಿಕವಾಗಿ ಆದ ನೋವನ್ನು ಮರೆಯಲು ಪ್ರೀತಿಪಾತ್ರರೊಂದಿಗೆ ಮಾತನಾಡುವಿರಿ.
ಕನ್ಯಾ
ಮನೆಯ ವಿಸ್ತರಣೆ ವಿಷಯವಾಗಿ ಆಲೋಚನೆಗಳು ಗರಿಗೆದರಲಿವೆ. ಯಾವುದೇ ವಿಚಾರದಲ್ಲೂ ಕಳವಳ ಬೇಡ, ಎಲ್ಲವೂ ಇಚ್ಛೆಯಂತೆ ನಡೆಯಲಿದೆ. ಯೋಜನೆಗಳು ಕಾರ್ಯಗತಗೊಳ್ಳಲು ಪ್ರಯತ್ನ ನಡೆಸಬೇಕಾಗುವುದು.
ತುಲಾ
ಆಸ್ತಿಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳು ಬಹಿರಂಗಗೊಂಡು ಸಹೋದರರಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ. ಕೆಲಸದ ಒತ್ತಡ ಸಂಜೆಯ ವೇಳೆಗೆ ಕಡಿಮೆಯಾಗುವುದಲ್ಲದೆ ಲಾಭಕರವಾಗಿ ಮುಗಿಯುವುದು.
ವೃಶ್ಚಿಕ
ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಥವಾ ಅವರ ಆಸೆ ಆಕಾಂಕ್ಷೆಯನ್ನು ಈಡೇರಿಸಲು ಹಣ ವ್ಯಯವಾಗಲಿದೆ. ಕೌಟುಂಬಿಕ ಸಮಸ್ಯೆಗಳಿಗೆ ನ್ಯಾಯಾಲಯದ ಮೆಟ್ಟಿಲು ಏರುವ ವಿಚಾರಗಳು ನಡೆಯದಂತೆ ಎಚ್ಚರವಹಿಸಿ.
ಧನು
ರಾಜಕೀಯ ಭವಿಷ್ಯದಲ್ಲಿ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಪ್ರಯತ್ನ ನಡೆಸಬೇಕಾಗುತ್ತದೆ. ಎಲ್ಲಾ ವಿಷಯ ಗಳಲ್ಲೂ ಸ್ವಾಭಾವಿಕ ಗುಣಕ್ಕಿಂತ ಹೆಚ್ಚಿನ ಸಮಾಧಾನದಿಂದಿರುವುದು ಉತ್ತಮ. ಧನ ಸಹಾಯ ಅಪೇಕ್ಷಿಸಬೇಡಿ.
ಮಕರ
ಯಾವುದಕ್ಕೂ ಆತುರ ಪಡಬೇಡಿ. ಭಾವನೆಗಳ ಜತೆಗೆ ಅಭಿಪ್ರಾಯವೂ ಬದಲಾಗುವ ಕಾಲ.ಹಾಗಾಗಿ ಯಾವುದೇ ವಿಷಯದಲ್ಲಿ ಆತುರದ ನಿರ್ಧಾರ ಸರಿಯಲ್ಲ. ಮನೆ ಅಲಂಕೃತಗೊಳ್ಳುವುದು.
ಕುಂಭ
ಒಡಹುಟ್ಟಿದವರ ಸಹಾಯ ಸಹಕಾರದಿಂದ ಮಾನಸಿಕ ನೆಮ್ಮದಿ, ಹಾಗೂ ಸಂಸಾರದಲ್ಲಿ ಸಮತೋಲನ ಪಡೆಯುವಿರಿ. ಗೃಹ ಖರೀದಿ ಇಲ್ಲವೇ ಗೃಹ ನಿರ್ಮಾಣದಂತಹ ಕಾರ್ಯಗಳನ್ನು ಮುಂದೂಡುವುದು ಉತ್ತಮ.
ಮೀನ
ಬಹು ನಿರೀಕ್ಷಿತ ಫಲಿತಾಂಶ, ಯಶಸ್ಸು ಹಾಗೂ ಹೆಸರು ಈ ದಿನ ಒಲಿದು ಬರುತ್ತದೆ. ವೃತ್ತಿಯಲ್ಲಿ ನಿರಂತರದ ಆದಾಯವಿದ್ದರೂ ಋಣಬಾಧೆ ತಪ್ಪದು. ಗಣ್ಯ ವ್ಯಕ್ತಿಯೊಬ್ಬರನ್ನು ಭೇಟಿಯಾಗುವ ಸಂದರ್ಭ ಬರುವುದು.