ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಡಿಸೆಂಬರ್ 11 ಸೋಮವಾರ 2023- ಸಹವರ್ತಿಗಳು ನಿಮ್ಮ ಬೆಂಬಲಕ್ಕೆ
Published 10 ಡಿಸೆಂಬರ್ 2023, 18:31 IST
ಪ್ರಜಾವಾಣಿ ವಿಶೇಷ
author
ಮೇಷ
ನಿಮ್ಮೊಳಗಿನ ವಿಶೇಷವಾದ ಶಕ್ತಿ ಪ್ರಕಾಶಿಸಲಿದೆ. ಅದು ನಿಮಗೆ ಅಚ್ಚರಿಯನ್ನುಂಟು ಮಾಡಬಹುದು. ಸಂಸಾರದ ವಿಷಯಗಳತ್ತ ಹೆಚ್ಚು ಗಮನ ಹರಿಸಬೇಕು. ಸಹವರ್ತಿಗಳು ನಿಮ್ಮ ಬೆಂಬಲಕ್ಕೆ ಬರಲಿದ್ದಾರೆ.
ವೃಷಭ
ಕಚೇರಿಯಲ್ಲಿ ಮಹತ್ವದ ಯೋಜನೆಯೊಂದಕ್ಕೆ ನಿಮ್ಮ ಸೃಜನಾತ್ಮಕ ಕಲೆಯನ್ನು ಬಳಸಿಕೊಳ್ಳಲಿದ್ದೀರಿ. ಈ ಮೂಲಕ ಅಧಿಕಾರಿಗಳ ಗಮನ ಸೆಳೆಯಲಿದ್ದೀರಿ. ಕಾಗದ ಪತ್ರಗಳ ನಿರ್ವಹಣೆಯಲ್ಲಿ ಎಚ್ಚರವಿರುವುದು ಒಳಿತು.
ಮಿಥುನ
ಧನಾಗಮನ ಉತ್ತಮವಾಗಿರುವ ಕಾರಣ ಬಹುದಿನಗಳ ಸಾಲದಿಂದ ಮುಕ್ತರಾಗಲಿದ್ದೀರಿ. ವೈಯಕ್ತಿಕ ಸಮಸ್ಯೆಗಳು ಬಗೆಹರಿಯಲಿವೆ. ಕಷ್ಟದ ದಿನಗಳು ದೂರವಾಗಿ ಸುಖ ನೆಮ್ಮದಿಯ ಭಾವ ನಿಮ್ಮಲ್ಲಿ ಮೂಡಲಿದೆ.
ಕರ್ಕಾಟಕ
ವಂಶ ಪಾರಂಪರ್ಯವಾಗಿ ಬಂದ ನಿಮ್ಮ ಉದ್ಯೋಗದಲ್ಲಿ ಈಗ ಹೆಚ್ಚಿನ ಏಳಿಗೆ ಕಾಣುವಿರಿ. ಹೊಸದಾಗಿ ಹಣ ಹೂಡಿಕೆ ಮಾಡಬೇಕಾದರೆ ಪರಿಶೀಲನೆ ಅಗತ್ಯ. ದಂತವೈದ್ಯ ವೃತ್ತಿಯವರಿಗೆ ಅನುಕೂಲದ ದಿನವಿದು.
ಸಿಂಹ
ಕಾರ್ಮಿಕರಲ್ಲಿ ಉಂಟಾಗಿದ್ದ ಅನುಮಾನಗಳನ್ನು ನಿವಾರಿಸಿ ಕೆಲಸಗಳು ಸುಗಮವಾಗಿ ಸಾಗಲು ಶ್ರಮ ವಹಿಸಬೇಕಾಗಲಿದೆ. ಬುದ್ಧಿವಂತಿಕೆಯಿಂದ ಕೆಲಸಗಳಲ್ಲಿ ಯಶಸ್ಸುಗಳಿಸಿಕೊಳ್ಳುವಿರಿ. ಯಾವುದಕ್ಕೂ ಹೆದರುವ ಅಗತ್ಯವಿಲ್ಲ.
ಕನ್ಯಾ
ಹಣಕಾಸು ವ್ಯವಹಾರದಲ್ಲಿ ಸೂಕ್ತ ರೀತಿಯ ದಾಖಲೆ ಕಾಪಾಡಿಕೊಳ್ಳುವುದರಿಂದ ಅನುಕೂಲವಾಗಲಿದೆ. ಆಸ್ತಿಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳು ಬಹಿರಂಗಗೊಂಡು ಸಹೋದರರಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ.
ತುಲಾ
ಇಂದಿನ ನಿಮ್ಮ ಮೃದು ಧೋರಣೆ, ಹಾಸ್ಯ ಮನೋಭಾವ ಸಿಬ್ಬಂದಿ ವರ್ಗಕ್ಕೆ ಆಶ್ಚರ್ಯವೆನಿಸಲಿದೆ. ಸ್ನೇಹದಿಂದ ಇದ್ದರೆ, ನಿಮ್ಮ ಕೆಲಸಕ್ಕೆ ಕುಟುಂಬದ ಸಹಕಾರ ಸಿಗಲಿದೆ. ಇಲ್ಲವಾದಲ್ಲಿ ತೊಂದರೆಯಾಗುವ ಸಾಧ್ಯತೆ ಇದೆ.
ವೃಶ್ಚಿಕ
ನಿಮ್ಮ ಮನಸ್ಥಿತಿ, ಭಾವನೆಗಳನ್ನು ಆತ್ಮೀಯರಲ್ಲಿ ಹಂಚಿಕೊಳ್ಳಿರಿ ಸೂಕ್ತವಾದ ಮಾರ್ಗದರ್ಶನ ಸಿಗುವುದು. ನಿಮ್ಮ ಕೆಲಸಕ್ಕೆ ಸಮಯದ ಅಭಾವ ತೋರಲಿದೆ. ನಿರ್ಧಾರ ತೆಗೆದುಕೊಳ್ಳಲು ಗೊಂದಲ ಉಂಟಾಗಲಿದೆ.
ಧನು
ಜಾಹೀರಾತುಗಳಂತಹ ವಿಚಾರದಿಂದ ಪ್ರಚಾರ ಕಾರ್ಯಗಳು ಸಮರ್ಪಕವಾಗಿ ನಡೆಯಲಿದೆ. ಮಗನಿಗೆ ಶ್ರೀಮಂತ ಮನೆತನದ ಸಂಬಂಧ ಕೂಡಿಬರಲಿದೆ. ಮಕ್ಕಳ ವಿಷಯದಲ್ಲಿ ಸಂಯಮದೊಂದಿಗೆ ವರ್ತಿಸಲಿದ್ದೀರಿ.
ಮಕರ
ಯಾವುದೇ ಕಾರಣಗಳಿಲ್ಲದೆ ಅಥವಾ ಕ್ಷುಲ್ಲಕ ಕಾರಣಕ್ಕಾಗಿ ಸಹೋದರರಲ್ಲಿ ಭಿನ್ನಾಭಿಪ್ರಾಯ ತಲೆದೋರಲಿದೆ. ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಲಿದೆ. ವೈದ್ಯರಿಗೆ ಅನುಕೂಲಕರ ದಿನ.
ಕುಂಭ
ನಿಮ್ಮ ಎಣಿಕೆಯಂತೆ ಎಲ್ಲ ಕೆಲಸಗಳು ಸಾಫಲ್ಯವನ್ನು ಕಂಡು ಮನಸ್ಸು ಸಂತಸದ ಸಾಗರವೆನಿಸಬಹುದು. ನಿಮ್ಮ ಕೆಲವು ನೀತಿ ನಿರ್ಬಂಧಗಳಿಂದ ಒಂಟಿಯಾಗಿರಬೇಕಾಗಲಿದೆ. ಪಶು ಸಂಗೋಪನೆಯಿಂದ ಲಾಭ ಇದೆ.
ಮೀನ
ಮಕ್ಕಳು ಮಾಡಿದ ತಪ್ಪುಗಳಿಗೆ ಅವರಿಗೆ ಅತಿಯಾಗಿ ಶಿಕ್ಷಿಸುವ ಬದಲು ತಿಳಿವಳಿಕೆ ಹೇಳಬೇಕು. ಲಾಭ ಎನಿಸುವ ಕೆಲಸ ಅಥವಾ ವ್ಯಕ್ತಿಗಳೊಂದಿಗೆ ಮಾತ್ರ ವ್ಯವಹರಿಸುವಿರಿ. ನಿಮ್ಮ ಭಾವನೆಗಳ ಬಗ್ಗೆ ಪ್ರಾಮಾಣಿಕರಾಗಿರಿ.