ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ಮಾಸ ಭವಿಷ್ಯ: ಡಿಸೆಂಬರ್ 2023– ಈ ರಾಶಿಯವರಿಗೆ ಉದ್ಯೋಗ ಸ್ಥಳದಲ್ಲಿ ಉತ್ತಮ ಸ್ಥಾನ
Published 30 ನವೆಂಬರ್ 2023, 21:36 IST
ಅರುಣ ಪಿ.ಭಟ್ಟ
ಮೇಷ
ಉದ್ಯೋಗ ಸ್ಥಳದಲ್ಲಿ ಉತ್ತಮ ಸ್ಥಾನ ಪಡೆಯುವಿರಿ. ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ. ತಿಂಗಳ ಮಧ್ಯ ಬಾಗದಲ್ಲಿ ಸ್ವಲ್ಪ ಸಮಸ್ಯೆ, ಚಿಕ್ಕ ಆರೋಪವನ್ನು ಎದುರಿಸಬೇಕಾಗುವುದು. ಪ್ರವಾಸದಿಂದ ಮನಸಿಗೆ ಸಂತಸ. ಭೂ ವ್ಯವಹಾರಕ್ಕೆ ಉತ್ತಮ ಸಮಯ. ಶುಭ: 12,16,21 ಅಶುಭ: 15,19,23.
ವೃಷಭ
ಗೃಹ ಕಲಹಕ್ಕೆ ಮುಕ್ತಿ ದೊರೆಯುವುದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು. ಸರ್ಕಾರಿ ನೌಕರಸ್ಥರಿಗೆ ಪದೋನ್ನತಿ, ಇಚ್ಚಿತ ಸ್ಥಳಕ್ಕೆ ಬದಲಾವಣೆ. ತಿಂಗಳಾಂತ್ಯದಲ್ಲಿ ಆಪ್ತರಿಂದ ಸನ್ಮಾನ. ಬೇರೊಬ್ಬರ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ, ಆ ಜವಾಬ್ದಾರಿ ವಹಿಸಿಕೊಳ್ಳಬೇಡಿ. ಶುಭ: 14,19,24 ಅಶುಭ: 13,22,26.
ಮಿಥುನ
ಈ ತಿಂಗಳ ಮೊದಲಾರ್ಧದಲ್ಲಿ ಗ್ರಹಗತಿಗಳು ನಿಮಗೆ ಅನುಕೂಲಕರವಾಗಿವೆ. ಉದ್ಯೋಗದಲ್ಲಿ ಗೌರವ, ವರ್ಚಸ್ಸು ಹೆಚ್ಚಲಿದೆ. ಈ ಅವಧಿಯಲ್ಲಿ ಮುಖ್ಯ ಕೆಲಸಗಳನ್ನು ಮಾಡಿಕೊಳ್ಳಿ. ವಿನಯದಿಂದ ಹೆಸರು ಸಂಪಾದಿಸುವಿರಿ. ಮಕ್ಕಳ ವರ್ತನೆಗಳು ಬೇಸರ ತರಿಸಲಿವೆ. ಶುಭ: 18,21,24 ಅಶುಭ: 16,22,24.
ಕರ್ಕಾಟಕ
ಮನೆಕಟ್ಟುವ ಸಮಸ್ಯೆ ಬಗೆಹರಿಯುವುದು. ಕ್ರಯ ವಿಕ್ರಯದಲ್ಲಿ ವಂಚನೆ ನಡೆಯುವ ಸಂಭವ, ಜಾಗ್ರತೆ. ತಂದೆಯಿಂದ ಹಣಕಾಸಿನ ಸಹಾಯ ಸಾದ್ಯತೆ. ನಿರೀಕ್ಷಿತ ಸ್ಪರ್ಧೆಯಲ್ಲಿ ಯಶಸ್ಸು. ಶಾರೀರಿಕ ಮಾನಸಿಕ ಉತ್ಸಾಹ ವೃದ್ಧಿಸುವುದು. ಪರಿಚಿತ ಸ್ತ್ರೀ ವಿರೋಧ ಕಾಣಿಸುವುದು. ಶುಭ: 16,18,23 ಅಶುಭ: 15,22,27.
ಸಿಂಹ
ಬಹುಮುಖ್ಯ ಕೆಲಸವನ್ನು ನೀವು ಮರೆತುಬಿಡಬಹುದು, ಸೂಕ್ತ ಮುತುವರ್ಜಿವಹಿಸಿ. ಹೊಸ ಆದಾಯ ಮಾರ್ಗ ಕಂಡುಬರಲಿದೆ. ನವೀನ ಉದ್ಯೋಗ ಭರವಸೆಯ ಮಹಾಪೂರವನ್ನೇ ತರಲಿದೆ. ಆದಾಯ ಹೆಚ್ಚಳ, ಖರ್ಚುಗಳೂ ವಿಪರೀತವಾಗಬಹುದು. ಶುಭ: 14,22,29 ಅಶುಭ: 16,19,29.
ಕನ್ಯಾ
ವೈಯಕ್ತಿಕ ಹಾಗೂ ವೃತ್ತಿಪರ ಬದುಕಿನಲ್ಲಿ ಲಾಭ ಹಾಗೂ ಮಹತ್ತರವಾದ ಪ್ರಗತಿ ಕಾಣುವ ಯೋಗವಿದೆ. ಸಿನಿಮಾ, ವೈದ್ಯಕೀಯ, ಕಲಾ ವೃತ್ತಿಯಲ್ಲಿ ಇರುವವರಿಗೆ ಅತ್ಯುತ್ತಮವಾದ ಲಾಭವಿದೆ. ತಿಂಗಳ ಮಧ್ಯ ಭಾಗದಲ್ಲಿ ಅಧಿಕ ಪ್ರಗತಿ. ಶೈಕ್ಷಣಿಕ ಅರ್ಹತೆ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತೀರಿ. ಶುಭ: 14,18,22 ಅಶುಭ: 17,23,29.
ತುಲಾ
ಶೈಕ್ಷಣಿಕ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಯಶಸ್ಸು. ಕ್ರೀಡೆ, ಸಿನಿಮಾ, ಸಂಗೀತ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಗೌರವ, ಸ್ಥಾನಮಾನ. ಆದಾಯ ಮೂಲಗಳಿಂದ ಹೆಚ್ಚಿನ ಲಾಭ. ತಿಂಗಳ ಅಂತ್ಯದಲ್ಲಿ ಹಲವು ಅವಕಾಶಗಳು ಏಕಕಾಲಕ್ಕೆ ದೊರೆಯುತ್ತವೆ. ಶುಭ: 10,16,23 ಅಶುಭ: 11,18,27.
ವೃಶ್ಚಿಕ
ಕಾರ್ಯಗಳನ್ನು ಹೆಚ್ಚು ವೇಗವಾಗಿ ಮಾಡಲಿದ್ದೀರಿ. ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ. ಮನೆಯಲ್ಲಿ ಒಬ್ಬರು ಹೇಳುವುದನ್ನು ಮತ್ತೊಬ್ಬರು ಕೇಳಿಸಿಕೊಳ್ಳದ ಕಾರಣ ಸಮಸ್ಯೆ ದೊಡ್ಡದಾಗುತ್ತದೆ, ಪರಸ್ಪರ ನೇರವಾಗಿ ಮಾತಾಡಿ. ಶುಭ: 14,16,22 ಅಶುಭ: 07,11,26.
ಧನು
ವೃತ್ತಿಪರ ಜೀವನದಲ್ಲಿ ಮನ್ನಡೆ, ಪ್ರಯತ್ನದಲ್ಲಿ ಯಶಸ್ಸು. ಸ್ಥಿರತೆ ಹಾಗೂ ದೃಢತೆ ಕಾಪಾಡಿಕೊಂಡು ಪ್ರಗತಿಯತ್ತ ಹೆಜ್ಜೆ ಇಡುತ್ತೀರಿ. ತಂದೆ ಜತೆಗೆ ಬಾಂಧವ್ಯ ಗಟ್ಟಿಯಾಗುತ್ತದೆ. ಮನೆಯಲ್ಲಿ ಸಂತೋಷ ವೈಯಕ್ತಿಕ ಸಂಬಂಧದಲ್ಲಿ ಉತ್ತಮ ಬಾಂಧವ್ಯ ಏರ್ಪಡುತ್ತದೆ. ಶುಭ: 09,14,25 ಅಶುಭ: 17,23,28.
ಮಕರ
ಬಹಳ ಸಂತೋಷವಾಗಿರುತ್ತೀರಿ. ಆದಾಯಕ್ಕೆ ಸಂಬಂಧಿಸಿದ ಮೂಲಗಳಿಂದ ಉತ್ತಮ ಲಾಭ ಪಡೆಯುವ ಅವಕಾಶ ಇದೆ. ಇದರಿಂದ ಹೆಚ್ಚು ಉತ್ಸಾಹಭರಿತರಾಗಿ, ಉಲ್ಲಸಿತರಾಗಿ ಕಾಣಿಸಿಕೊಳ್ಳಲಿದ್ದೀರಿ. ಕ್ರೀಡಾ ಕ್ಷೇತ್ರದಲ್ಲಿರುವವರು ಅತ್ಯುತ್ತಮ ಸಾಧನೆ ಮಾಡುವರು. ಶುಭ: 11,14,25 ಅಶುಭ: 15,26,29.
ಕುಂಭ
ತಿಂಗಳ ಆರಂಭದಿಂದಲೇ ಅವಕಾಶಗಳು ಬರಲಿವೆ. ಅವುಗಳನ್ನು ನಿಮ್ಮ ಅನುಕೂಲಕ್ಕೆ ಬಳಸಿಕೊಳ್ಳಿ. ಪೋಷಕರಿಗೆ ಹೆಚ್ಚಿನ ಗೌರವ ನೀಡಿ, ಅವರ ಅಗತ್ಯಗಳನ್ನು ಪೂರೈಸಿ. ಸಾಮಾಜಿಕವಾಗಿ ಗೌರವ- ಮನ್ನಣೆಗಳನ್ನು ಪಡೆಯಲಿದ್ದೀರಿ. ಮಕ್ಕಳ ಪ್ರಗತಿಯಿಂದ ಸಮಾಧಾನ. ಶುಭ: 12,20,28 ಅಶುಭ: 10,18,27.
ಮೀನ
ಮನೆ ಹಾಗೂ ಕುಟುಂಬದ ಬಗ್ಗೆ ಹೆಚ್ಚು ಯೋಚನೆ ಮಾಡಲಿದ್ದೀರಿ. ಶ್ವಾಸಕೋಶ ಸಮಸ್ಯೆ ಎದುರಾಗಬಹುದು. ತಿಂಗಳ ಮಧ್ಯಭಾಗದಿಂದ ಒಳ್ಳೆ ಅವಕಾಶಗಳು ದೊರೆಯಲಿವೆ. ಆದಾಯದಲ್ಲಿ ಹೆಚ್ಚಳ. ವೈಯಕ್ತಿಕ ಸಂಬಂಧ ಮಧುರವಾಗಿರುವುದು. ಶುಭ: 08,16,22 ಅಶುಭ: 12,24,29.