ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
03/12/2023 - 09/12/2023
ವಾರ ಭವಿಷ್ಯ: ಡಿ.10ರಿಂದ ಡಿ.16ರವರೆಗೆ– ಕೆಲವು ರಾಜಕಾರಣಿಗಳಿಗೆ ಈಗ ಸ್ಥಾನ!
Published 9 ಡಿಸೆಂಬರ್ 2023, 18:35 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
( ಅಶ್ವಿನಿ ಭರಣಿ ಕೃತಿಕ 1) ಪ್ರಶಾಂತವಾಗಿರಲಿತ್ನಿಸಿದರು ಸಹ ನಿಮ್ಮ ಸಂಗಾತಿಯು ಅದಕ್ಕೆ ಆಸ್ಪದ ಕೊಡುವುದಿಲ್ಲ. ಹಣದ ಒಳಹರಿವು ಉತ್ತಮವಾಗಿರುತ್ತದೆ. ಲಲಿತ ಕಲೆಗಳನ್ನು ಅಭ್ಯಾಸ ಮಾಡುತ್ತಿರುವವರಿಗೆ ಉತ್ತಮ ಮಾರ್ಗ ದರ್ಶನ ಸಿಗುತ್ತದೆ. ನಿಮ್ಮ ವ್ಯವಹಾರಗಳಿಗೆ ಹಿರಿಯರ ಸಹಕಾರ ದೊರೆಯುತ್ತದೆ. ಹೊಸ ವಾಹನ ಖರೀದಿಯ ಯೋಗವಿದೆ. ವಿದ್ಯಾರ್ಥಿಗಳಿಗೆ ಅಷ್ಟೇನೂ ಯಶಸ್ಸು ಇರುವುದಿಲ್ಲ.ಕುಲುಮೆಯ ಕೆಲಸ ಮಾಡುವವರು ಹೆಚ್ಚಿನ ಎಚ್ಚರಿಕೆಯನ್ನು ವಹಿಸುವುದು ಒಳ್ಳೆಯದು. ಪಿತ್ರಾರ್ಜಿತ ವೃತ್ತಿಗಳು ಬರುವ ಸಾಧ್ಯತೆ ಇದೆ. ಶಿಕ್ಷಣ ಸಂಸ್ಥೆಗಳನ್ನು ನಡಸುತ್ತಿರುವವರಿಗೆ ಬಹಳ ಅಭಿವೃದ್ಧಿ ಇರುತ್ತದೆ. ವೃತ್ತಿಯಲ್ಲಿ ಮಹಿಳೆಯರಿಗೆ ಸಾಕಷ್ಟು ಪ್ರೋತ್ಸಾಹ ದೊರೆಯುತ್ತದೆ. ಬಹಳ ದಿನದಿಂದ ಸ್ಥಾನ ಮಾನಕ್ಕಾಗಿ ಹೋರಾಡುತ್ತಿದ್ದ ಕೆಲವು ರಾಜಕಾರಣಿಗಳಿಗೆ ಈಗ ಸ್ಥಾನ ದೊರೆಯುತ್ತದೆ.
ವೃಷಭ
(ಕೃತಿಕಾ2 3 4 ರೋಹಿಣಿ ಮೃಗಶಿರಾ1 2) ವಾರದ ಆರಂಭದಲ್ಲಿ ಸಂಗೀತಗಾರರಿಗೆ ಸ್ವಲ್ಪ ಹಿನ್ನಡೆ ಇರುತ್ತದೆ. ಹಣದ ಒಳಹರಿವು ಮಂದಗತಿ ಯಲ್ಲಿರುತ್ತದೆ. ಸರಿಯಾದ ನಿರ್ಧಾರಗಳಿಲ್ಲದೇ ಸ್ವಲ್ಪ ದ್ವಂದ್ವಕ್ಕೆ ಸಿಲುಕುವಿರಿ.ಹಿರಿಯರಿಂದ ನಿಮ್ಮಸಂಸಾರಕ್ಕೆ ಸಾಕಷ್ಟು ಸಹಕಾರಗಳು ದೊರೆಯುತ್ತವೆ. ನಿಮಗೆ ಬರ ಬೇಕಿದ್ದ ಭೂಮಿಯನ್ನು ಕೊಡಿಸಲು ಸತತ ಪ್ರಯತ್ನ ಮಾಡುವರು. ದಿನಸಿ ವ್ಯಾಪಾರಿಗಳಿಗೆ ಹೆಚ್ಚು ಲಾಭವಿ ರುತ್ತದೆ. ಭೂಮಿ ವ್ಯಾಪಾರ ಮಾಡುವವರಿಗೆ ಹೆಚ್ಚು ಕೆಲಸಗಳು ದೊರೆಯುತ್ತವೆ. ಲೆಕ್ಕತಜ್ಞರಿಗೆ ಸ್ವಲ್ಪಮುಜು ಗರ ಏರ್ಪಡುವ ಸಂದರ್ಭ ಇದೆ. ರಾಜಕೀಯ ನಾಯ ಕರುಗಳಿಗೆ ಪ್ರಜೆಗಳ ಸಹಕಾರ ಸಿಗಬಹುದು. ಅನಿರೀ ಕ್ಷಿತವಾಗಿ ಮಾಡಿದ ಕೆಲಸಕ್ಕೆ ಉತ್ತಮ ಹೆಸರು ಬರು ತ್ತದೆ. ಕೃಷಿ ಸಂಶೋಧಕರಿಗೆ ಅವರ ಸಂಶೋಧನೆಯ ಫಲ ದೊರೆಯುತ್ತದೆ. ಸಾಂಪ್ರದಾಯಿಕ ಬೀಜೋತ್ಪಾದ ನೆಯನ್ನು ಮಾಡುವವರಿಗೆ ಮಾರುಕಟ್ಟೆ ಹೆಚ್ಚುತ್ತದೆ.
ಮಿಥುನ
(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3) ನಿಮ್ಮಲ್ಲಿ ದೃಢತೆ ಇದ್ದು ವೃತ್ತಿಯಲ್ಲಿ ಬದ್ಧತೆಯನ್ನು ತೋರುವಿರಿ. ಸಂಗೀತಗಾರರಿಗೆ ನಾಟ್ಯ ಕಲಾವಿದರುಗಳಿಗೆ ಹೆಚ್ಚಿನ ಅವಕಾಶಗಳು ದೊರೆತು ಹೆಚ್ಚು ಸಂಪಾದನೆಯಾಗುತ್ತದೆ. ದೇಹದಲ್ಲಿ ತೊಂದರೆ ಇದ್ದು ಶಸ್ತ್ರಚಿಕಿತ್ಸೆ ಮಾಡಬೇಕಾದ ಸಂದರ್ಭಗಳು ಬರಬಹುದು. ಕೃಷಿ ಭೂಮಿಯನ್ನು ಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಬಹಳ ಯಶಸ್ಸು ಇರುತ್ತದೆ. ತೆರಿಗೆ ತಜ್ಞರಿಗೆ ಹೆಚ್ಚುಬೇಡಿಕೆ ಬರುತ್ತದೆ. ಸರ್ಕಾರಿಜಮೀನನ್ನು ವಶಪಡಿಸಿಕೊಂಡಿರುವವರಿಗೆ ಕಾನೂನಿನ ತೊಂದರೆ ಗಳು ಬರಬಹುದು. ಸರ್ಕಾರಿ ಸಾಲ ಪಡೆದು ಉಳಿದ ಬಂಧುಗಳ ಕೈಸಾಲಗಳನ್ನು ತೀರಿಸಿಕೊಳ್ಳಬಹುದು. ಸಂಗಾತಿಯ ನಡೆಸುವ ವ್ಯವಹಾರಗಳಲ್ಲಿ ಹೆಚ್ಚು ಲಾಭ ಇರುತ್ತದೆ.ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವವ ರಿಗೆ ವೃತ್ತಿ ಯಲ್ಲಿ ಬಡ್ತಿ ದೊರೆಯುವ ಸಂಭವವಿದೆ. ಅನಿರೀಕ್ಷಿತ ಧನ ಲಾಭಗಳು ಆಗುವ ಸಾಧ್ಯತೆಗಳಿವೆ.
ಕರ್ಕಾಟಕ
( ಪುನರ್ವಸು 4 ಪುಷ್ಯ ಆಶ್ಲೇಷ) ಸಂಸಾರದಲ್ಲಿ ಬಹಳ ಪ್ರಶಾಂತತೆ ಹಾಗೂ ಸುಖವಿರುತ್ತದೆ. ನೀವು ನಗುನಗುತ್ತಾಮಾತನಾಡಿದರು ಅದರಲ್ಲಿ ನೀವು ಹೇಳಬೇಕಾದ್ದನ್ನು ಹೇಳಿರುತ್ತೀರಿ. ನಡ ವಳಿಕೆಗಳಲ್ಲಿ ಆಲಸೀತನವನ್ನು ಕಾಣಬಹುದು. ಆಸ್ತಿ ಕೊಳ್ಳಲು ಬೇಕಾದ ಹಣಕ್ಕೆ ಸೂಕ್ತಮಾರ್ಗಗಳು ದೊರೆ ಯುತ್ತವೆ. ವಿದ್ಯಾರ್ಥಿಗಳಿಗೆ ಮಧ್ಯಮ ಯಶಸ್ವಿರುತ್ತದೆ. ಕೆಲವು ರಕ್ತದ ದೋಷಗಳು ಕೆಲವರಿಗೆ ಕಾಡಬಹುದು. ಸಂಸಾರದಲ್ಲಿ ಸಾಕಷ್ಟು ಕಾವಿದ್ದರೂ ಸಹ ಸಂಬಂಧ ಗಳು ಕೆಡುವುದಿಲ್ಲ.ಸ್ತ್ರೀಯರು ನಡೆಸುವ ವ್ಯವಹಾರ ಗಳಲ್ಲಿ ಆದಾಯ ಕಡಿಮೆ ಇರುತ್ತದೆ. ಸಂಗಾತಿಯ ಕಠಿಣಮಾತುಗಳು ಮುಜುಗರತರುತ್ತವೆ. ವಿದೇಶಗಳಿಗೆ ಹೋಗಬೇಕೆನ್ನುವವರಿಗೆ ಈಗ ಹೊಸ ಅವಕಾಶಗಳು ತೆರೆದುಕೊಳ್ಳುವ ಸಾಧ್ಯತೆಗಳಿವೆ. ಉದ್ಯೋಗದಲ್ಲಿ ಸ್ವಲ್ಪ ಪ್ರಗತಿ ಇರುತ್ತದೆ. ಮಹಿಳಾಮೇಲಧಿಕಾರಿಗಳಿಂದ ಹೆಚ್ಚಿನ ಸಹಕಾರ ಸಹಾಯ ದೊರೆಯುತ್ತದೆ.
ಸಿಂಹ
( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1) ಕೃಷಿ ಪಂಡಿತರಿಗೆ ಹೆಚ್ಚಿನ ಗೌರವ ದೊರೆಯುತ್ತದೆ. ಅವರ ಸಂಶೋಧನೆಗಳಿಗೆ ಬಹುದೊಡ್ಡ ಪ್ರಚಾರ ಸಿಗು ತ್ತದೆ. ಮಾತನಾಡುವಾಗ ಸ್ವಲ್ಪ ಎಚ್ಚರವಿರಲಿ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ಬಹಳ ಚುರು ಕಾಗಿ ಕೆಲಸ ಕಾರ್ಯವನ್ನು ಎಲ್ಲರ ಗಮನ ಸೆಳೆಯು ವಿರಿ. ಕ್ರೀಡಾಪಟುಗಳಿಗೆ ಹೆಚ್ಚಿನ ಸಾಧನೆ ಮಾಡುವ ಯೋಗವಿದೆ ಹಾಗೂ ಅವರಿಗೆ ಬೇಕಾದ ಸೂಕ್ತ ಅನು ಕೂಲಗಳು ಈಗ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಫಲಿತಾಂಶ ದೊರೆಯುವ ಸಾಧ್ಯತೆ ಇದೆ. ಸ್ವಲ್ಪ ಅಜೀರ್ಣ ನಿಮ್ಮನ್ನು ಕಾಡಬಹುದು. ಪಾಲಗಾರಿಕೆ ವ್ಯವಹಾರಗಳಲ್ಲಿ ಸಾಕಷ್ಟು ಜಿಜ್ಞಾಸೆಗಳಿದ್ದರೂ ಸಹ ವ್ಯವಹಾರಗಳು ಮುಂದುವರೆಯುತ್ತವೆ.ವೃತ್ತಿಯಲ್ಲಿ ನಿರೀಕ್ಷಿತ ಮಟ್ಟದ ಧನ ಏರಿಕೆ ಇಲ್ಲದೆ ಹೋದರು ಸ್ವಲ್ಪ ಮಟ್ಟಿನಏರಿಕೆ ಇರುತ್ತದೆ. ಅದಿರುತೆಗೆಯುವ ಉದ್ಯಮ ವನ್ನು ನಡೆಸುತ್ತಿರುವವರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ.
ಕನ್ಯಾ
( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2) ಯಾಕೋ ಆಲಸೀತನ ಆವರಿಸಿಕೊಳ್ಳಬಹುದು. ಹಣದ ಒಳಹರಿವು ಉತ್ತಮವಾಗಿದ್ದರೂ ಸಹ ಖರ್ಚು ಹೆಚ್ಚಾಗುವ ಸಂದರ್ಭವಿದೆ.ಸೌಂದರ್ಯ ಹಾಗೂ ಅಲಂಕಾರಿಕ ವಸ್ತುಗಳನ್ನು ಕೊಳ್ಳಲು ಹೆಚ್ಚು ಖರ್ಚು ಮಾಡುವಿರಿ. ಹಿರಿಯರ ನಡುವೆ ಹೊಂದಾಣಿಕೆ ಮಾಡಿಕೊಳ್ಳುವುದು ಬಹಳ ಮುಖ್ಯ. ವ್ಯಾಪಾರಿಗಳಿಗೆ ಅವರ ವ್ಯಾಪಾರವನ್ನು ಅಭಿವೃದ್ಧಿ ಮಾಡಲು ಹೊಸ ಅವಕಾಶಗಳು ದೊರೆಯುತ್ತವೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಸೂಕ್ತ ಯಶಸ್ಸು ದೊರೆಯುವುದಿಲ್ಲ. ತವರು ಮನೆಯಿಂದ ಸ್ವಲ್ಪ ಸಹಾಯಗಳು ದೊರೆಯ ಬಹುದು. ವೃತ್ತಿಯಲ್ಲಿ ಜಾಣ್ಮೆಯನ್ನು ಮೆರೆದು ಕೆಲಸ ಸಾಧಿಸುವಿರಿ. ಹೈನುಗಾರಿಕೆ ಮಾಡುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಸ್ತ್ರೀಯರ ಮುಖಾಲಂಕಾರ ಹಾಗೂ ಕೇಶಾಲಂಕಾರ ಮಾಡುವ ವರಿಗೆ ಹೆಚ್ಚಿನ ಲಾಭವಿರುತ್ತದೆ. ಕಣ್ಣಿನ ಬಗ್ಗೆ ಹೆಚ್ಚು ಎಚ್ಚರಿಕೆ ಇರಲಿ.
ತುಲಾ
( ಚಿತ್ತಾ 3 4 ಸ್ವಾತಿ ವಿಶಾಖ 1 2 3) ತುಂಬಾ ಕಲಾತ್ಮಕವಾಗಿ ಕಾಣಲು ಇಚ್ಛೆ ಪಡುವಿರಿ. ಹಣದ ಒಳಹರಿವು ಮಧ್ಯಮ ಗತಿಯಲ್ಲಿರುತ್ತದೆ. ಅತಿ ಯಾದ ಬುದ್ಧಿವಂತಿಕೆಯಿಂದ ವ್ಯವಹರಿಸುವಿರಿ. ನಿಮ್ಮ ಬಂಧುಗಳ ಜೊತೆ ಸ್ವಲ್ಪ ಕಾವೇರಿದ ವಾತಾವರಣವಿರು ತ್ತದೆ. ಕೃಷಿಯಲ್ಲಿ ಹೆಚ್ಚು ಆಸಕ್ತಿ ತಾಳುವಿರಿ.ಕೃಷಿಭೂಮಿ ಯನ್ನು ಅಭಿವೃದ್ಧಿಪಡಿಸಲು ಮುಂದಾಗುವಿರಿ. ರಾಜ ಕೀಯವನ್ನು ಸೇರಬೇಕೆನ್ನುವವರಿಗೆ ನಾಯಕರುಗಳ ಒಲವು ದೊರೆತು ದಾರಿ ಒದಗುತ್ತದೆ. ವಿದೇಶಿ ತಯಾ ರಿಕಾ ಕಂಪನಿಗಳ ಜೊತೆ ವ್ಯವಹಾರ ಮಾಡುವವರಿಗೆ ಅಭಿವೃದ್ಧಿ ಇದೆ. ವಾಯುಯಾನ ಸಂಸ್ಥೆಗಳನ್ನು ನಡೆಸು ವವರಿಗೆ ಅಭಿವೃದ್ಧಿಇದೆ. ಬಯಸುತ್ತಿದ್ದ ಸಂಬಂಧಗಳು ಒದಗಿ ವಿವಾಹವಾಗಬಹುದು, ಹಣದ ವಿಷಯದಲ್ಲಿ ಸಂಗಾತಿಯು ಆಡುವ ಮಾತುಗಳಿಗೆ ಬೇಸರ ಮೂಡು ತ್ತದೆ.ಸದ್ಯದಲ್ಲಿ ಸಂಗಾತಿಯ ಆದಾಯದಲ್ಲಿ ಏರಿಕೆ ಯಾಗುವ ಲಕ್ಷಣ ಗಳಿವೆ.
ವೃಶ್ಚಿಕ
( ವಿಶಾಖಾ 4 ಅನುರಾಧ ಜೇಷ್ಠ) ಸ್ವಾಭಿಮಾನ ಬಹಳ ಇರುತ್ತದೆ. ಕುಸ್ತಿಪಟು ಗಳಿಗೆ ಹೆಚ್ಚಿನ ಅವಕಾಶ ದೊರೆಯುವ ಸಾಧ್ಯತೆ ಇದೆ. ಹಣದ ಒಳಹರಿವು ಅಗತ್ಯವನ್ನು ಪೂರೈಸುತ್ತದೆ. ಸೈನ್ಯದಲ್ಲಿರುವವರಿಗೆ ಸೂಕ್ಷ್ಮವಾಗಿ ಎದುರಾಳಿಯನ್ನು ಗಮನಿಸಿ ದಮನ ಮಾಡುವ ತಂತ್ರ ಲಭಿಸುತ್ತದೆ. ಸಮಾಜಕ್ಕೆ ಕಾಟ ಕೊಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸುವ ಅವಕಾಶ ಪೊಲೀಸರಿಗೆ ದೊರೆಯುತ್ತದೆ. ವಾಯುಯಾನ ತಂತ್ರಜ್ಞಾನವನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಇರುತ್ತದೆ. ಲೇವಾದೇವಿ ವ್ಯವಹಾರದಲ್ಲಿ ಅಂತಹ ಯಶಸ್ಸು ಇರುವುದಿಲ್ಲ. ಸಂಗಾತಿಯ ಒಡವೆ ವಸ್ತುಗಳಿಗಾಗಿ ಹಣ ಖರ್ಚಾಗು ತ್ತದೆ. ಮಹಿಳೆಯರು ನಡೆಸುವ ವ್ಯಾಪಾರ ವ್ಯವಹಾರ ಗಳಲ್ಲಿ ಅಭಿವೃದ್ಧಿ ಇರುತ್ತದೆ. ಕೆಲವರಿಗೆ ಅನಿರೀಕ್ಷಿತ ಗೌರವಗಳು ದೊರೆಯಬಹುದು. ಪಿತ್ರಾರ್ಜಿತ ಆಸ್ತಿ ಗಾಗಿ ಕಾಯುತ್ತಿರುವವರಿಗೆ ಶುಭ ಸಮಾಚಾರಗಳು ಕೇಳಿ ಬರುವ ಸಾಧ್ಯತೆಗಳಿವೆ.
ಧನು
( ಮೂಲ ಪೂರ್ವಾಷಾಢ ಉತ್ತರಾಷಾಢ 1 ) ಬುದ್ಧಿವಂತಿಕೆ ನಿಮ್ಮಲ್ಲಿ ಮನೆ ಮಾಡಿರುತ್ತದೆ. ಮಾತುಗಳು ನಯವಾಗಿದ್ದರು ಅದರಲ್ಲಿನ ಆಜ್ಞೆಗಳು ತಲುಪಬೇಕಾದವರನ್ನು ತಲುಪುತ್ತವೆ. ನಿಮ್ಮ ಚಾಣಾಕ್ಷ ನಡಗಳಿಗೆ ವೈರಿಗಳು ಕಕ್ಕಾಬಿಕ್ಕಿಯಾಗುವರು.ಉದ್ದಿಮೆ ದಾರರಿಗೆ ಹೊಸ ಸಂಕಷ್ಟಗಳೆದುರಾದರೂ ಪರಿಹಾರ ವಾಗುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಅತಿ ಯಶಸ್ಸು ದೊರೆಯುತ್ತದೆ. ಮನೆಯ ಪಾಠ ಮಾಡುವ ಉಪಾಧ್ಯಾಯರುಗಳಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಪ್ರಸೂತಿ ತಜ್ಞರಿಗೆ ಬಿಡುವಿಲ್ಲದ ಕೆಲಸವಿರುತ್ತದೆ. ಉದ್ಯೋಗದಲ್ಲಿ ಹಿರಿಯರ ಅಥವಾ ಗುರುತಿನವರ ಶಿಫಾರಸ್ಸು ಬಹಳ ಅನುಕೂಲವನ್ನು ಮಾಡುತ್ತದೆ. ಬಟ್ಟೆಯ ಮೇಲೆ ಕಸೂತಿ ಕೆಲಸ ಮಾಡುವವರಿಗೆ ಅಭಿ ವೃದ್ಧಿ ಇರುತ್ತದೆ.ವೃತ್ತಿಯಲ್ಲಿ ಮಹಿಳಾ ಮೇಲಧಿಕಾರಿ ಗಳಿಂದ ಸ್ವಲ್ಪ ತೊಂದರೆಯಾಗುವ ಸಂದರ್ಭವಿದೆ.
ಮಕರ
( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2) ನ್ಯಾಯಮಾರ್ಗದಲ್ಲಿ ಕೆಲಸ ಮಾಡುವಿರಿ. ಹಣದ ಒಳಹರಿವು ಕಡಿಮೆ ಇದ್ದರೂ ಸಹ ಖರ್ಚನ್ನು ಸರಿಯಾಗಿನಿರ್ವಹಿಸುವಿರಿ. ತೆರೆಯಹಿಂದೆ ಕೆಲಸವನ್ನು ಕೆಲಸಮಾಡುವ ಕಲಾವಿದರುಗಳಿಗೆ ಸೂಕ್ತ ಸಂಭಾವನೆ ದೊರೆಯುತ್ತದೆ. ಸರಕು ಸಾಗಣೆ ಮಾಡುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಆಸಪಟ್ಟಿದ್ದ ಆಸ್ತಿಯನ್ನು ಕೊಳ್ಳಲು ಕಾಲಾವಕಾಶ ದೊರೆಯುತ್ತದೆ. ವೃತ್ತಿಯಲ್ಲಿ ಎಲ್ಲರ ಸಹಕಾರ ದೊರೆತು ಆನಂದ ಪಡುವಿರಿ. ಕೃಷಿ ವಿಜ್ಞಾನಿಗಳು ಹೊಸ ತಳಿಯೊಂದನ್ನು ಕಂಡು ಹಿಡಿಯ ಬಹುದು. ಲೆಕ್ಕ ಪರಿಶೋಧಕರಿಗೆ ಕೈತುಂಬ ಕೆಲಸವಿದ್ದು ಹೆಚ್ಚಿನ ಸಂಪಾದನೆಯಾಗುತ್ತದೆ. ಕೆಲವರಿಗೆ ತವರು ಮನೆಯಿಂದ ಆಸ್ತಿ ಅಥವಾ ಒಡವೆಗಳು ದೊರೆಯ ಬಹುದು.ದಂಪತಿಗಳ ನಡುವೆ ಅನ್ಯೋನ್ಯತೆಯು ಹೆಚ್ಚಾಗುತ್ತದೆ. ಸರ್ಕಾರಿ ಕೆಲಸಗಳು ನಿಧಾನವಾಗುವಂತೆ ಕಂಡರೂ ನಿಧಾನ ಆಗುವುದಿಲ್ಲ. ಪೂರ್ವಜರ ವಸ್ತು ಗಳು ನಿಮಗೆ ಉಡುಗೊರೆಯಾಗಿ ಬರಬಹುದು.
ಕುಂಭ
( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3) ಅನ್ಯಾಯಮಾರ್ಗದಲ್ಲಿ ಹಣ ಸಂಪಾದನೆ ಮಾಡುತ್ತಿರುವವರಿಗೆ ಧನಮೂಲ ನಿಲ್ಲುತ್ತದೆ ಹಾಗೂ ವಿದೇಶಕ್ಕೆ ಹೋಗಬೇಕೆನ್ನುವವರಿಗೆ ದಾಖಲೆಗಳ ಬಗ್ಗೆ ತೊಂದರೆಗಳು ಎದುರಾಗಬಹುದು ಈಗಲೇ ಸರಿಪಡಿ ಸಿಕೊಳ್ಳಿರಿ. ವಿದ್ಯಾರ್ಥಿಗಳಿಗೆ ಆಯ್ಕೆ ಮಾಡಿಕೊಂಡ ವಿಷಯಗಳಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ. ಕಟ್ಟಡ ನಿರ್ಮಾಣ ಮಾಡುವವರಿಗೆ ಹೆಚ್ಚು ಕೆಲಸಗಳು ದೊರೆತು ಹೆಚ್ಚು ಸಂಪಾದನೆ ಆಗುತ್ತದೆ.ನಿಮ್ಮ ಸಾಲ ಗಳನ್ನು ತೀರಿಸಲು ಹೊಸ ಮಾರ್ಗೋಪಾಯಗಳು ಒದಗುತ್ತವೆ. ಸಂಗಾತಿಗೆ ಉತ್ತಮ ಉದ್ಯೋಗ ದೊರೆ ಯುವ ಸಾಧ್ಯತೆ ಇದೆ. ಕಡಿಮೆ ಬೆಲೆಗೆ ಆಭರಣಗಳು ಸಿಗುವುದೆಂದು ಅಪರಿಚಿತವ್ಯಕ್ತಿಗಳ ಬಳಿ ತೆಗೆದು ಕೊಳ್ಳಲು ಹೋಗಬೇಡಿರಿ, ಧನ ನಷ್ಟ ಆಗಬಹುದು . ಉದ್ಯೋಗದಲ್ಲಿರುವ ಯುವಕರು ಹಿರಿಯ ಮಹಿಳಾ ಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಗಳಿವೆ, ಎಚ್ಚರವಹಿಸಿರಿ.
ಮೀನ
( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ) ಅತಿಯಾದ ಉಗ್ರತೆ ನಿಮ್ಮಲ್ಲಿ ಇರುತ್ತದೆ. ಇದರಿಂದ ನಿಮ್ಮ ಬಂಧುಗಳು ಅಥವಾ ಸ್ನೇಹಿತರು ದೂರವಾಗುವರು. ಧನಾದಾಯವು ಉತ್ತಮ ರೀತಿ ಯಲ್ಲಿ ಇರುತ್ತದೆ. ಅತಿ ಬುದ್ಧಿವಂತಿಕೆಯಿಂದ ಕೆಲಸ ದಲ್ಲಿ ಸಿಕ್ಕಿ ಬೀಳುವ ಸಾಧ್ಯತೆಗಳಿವೆ. ತಾಯಿಯೊಂದಿಗೆ ಸಂಬಂಧಗಳು ಕಡಿಮೆಯಾಗುತ್ತವೆ. ನಿಂತಿದ್ದ ವಿದ್ಯೆಗ ಳನ್ನು ಈಗ ಮುಂದುವರೆಸಬಹುದು. ದೇಹದಲ್ಲಿ ಶಕ್ತಿ ಉಡುಗಿದಂತೆ ಅನಿಸಿದಲ್ಲಿ ಚಿಕಿತ್ಸೆಗೆ ಹೋಗುವುದು ಒಳ್ಳೆಯದು. ಸಂಗಾತಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಹಿರಿಯರ ವ್ಯವಹಾರಗಳಲ್ಲಿ ಪಾಲು ದೊರೆಯುತ್ತದೆ. ಪಶು ಆಹಾರಗಳನ್ನು ತಯಾರಿಸುವ ವರಿಗೆ ಲಾಭವಿರುತ್ತದೆ. ದ್ರವರೂಪದ ಆಹಾರ ವಸ್ತು ಗಳನ್ನು ಮಾರಾಟ ಮಾಡುವವರ ವ್ಯವಹಾರ ಮತ್ತು ಆದಾಯ ಹೆಚ್ಚುತ್ತದೆ.