ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
12/05/2024 - 18/05/2024
ವಾರ ಭವಿಷ್ಯ | ಉದ್ಯೋಗದಲ್ಲಿ ಶತ್ರುಗಳು ಮಿತ್ರರಾಗುವರು
Published 18 ಮೇ 2024, 18:30 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಆದಾಯವು ಉತ್ತಮವಾಗಿರುತ್ತದೆ. ವಾಗ್ಮಿಗಳಿಗೆ ಉತ್ತಮ ವೇದಿಕೆ ದೊರೆಯುತ್ತದೆ. ಕೆಲಸಕಾರ್ಯಗಳಲ್ಲಿ ಬಹಳ ಚುರುಕುತನ ತೋರುವಿರಿ. ಭೂಮಿಯನ್ನು ಹೊಂದುವ ಯೋಗವಿದೆ. ಆಡಳಿತಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಅನುಕೂಲವಿರುತ್ತದೆ. ಶೀತ ಸಂಬಂಧಿ ವ್ಯತ್ಯಾಸಗಳು ಕೆಲವರನ್ನು ಕಾಡಬಹುದು. ಸಂಗಾತಿ ಆದಾಯದಲ್ಲಿ ಏರಿಕೆ ಯನ್ನು ಕಾಣಬಹುದು. ವಿದೇಶಿ ವ್ಯವಹಾರ ಮಾಡುವವರಿಗೆ ಸರ್ಕಾರದಿಂದ ಸಮಸ್ಯೆಗಳು ಬರಬಹುದು. ಕ್ರೀಡಾಪಟುಗಳಿಗೆ ಹೆಚ್ಚಿನ ಸವಲತ್ತು ಸಿಗುವ ಸಾಧ್ಯತೆ ಇದೆ. ಕೃಷಿಕರಿಗೆ ಸರ್ಕಾರಿ ಸಹಾಯಧನಗಳು ಹರಿದು ಬರುತ್ತವೆ. ನಿರೀಕ್ಷಿಸುತ್ತಿದ್ದ ಪಿತ್ರಾರ್ಜಿತ ಆಸ್ತಿಸಿಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಹೆಚ್ಚಿನ ಶ್ರಮವನ್ನು ಹಾಕಲೇಬೇಕಾಗುತ್ತದೆ.ಕಬ್ಬಿಣದವ್ಯಾಪಾರಿಗಳಿಗೆ ಹೆಚ್ಚು ಅಭಿವೃದ್ಧಿ ಇರುತ್ತದೆ.
ವೃಷಭ
ಆದಾಯ ಉತ್ತಮವಾಗಿರುತ್ತದೆ. ವ್ಯಕ್ತಿ ಗೌರವ ಹೆಚ್ಚಾಗಿರುತ್ತದೆ. ಜಾಣ್ಮೆ ಇಂದ ಮಾತನಾಡುವುದನ್ನು ಅಳವಡಿಸಿಕೊಳ್ಳಿರಿ. ಕೆಲಸ ಕಾರ್ಯಗಳಲ್ಲಿ ಕೆಲಸ ಕಾರ್ಯಗಳನ್ನು ಶಿಸ್ತು ಬದ್ಧವಾಗಿ ಮಾಡಿ ಮುಗಿಸುವಿರಿ. ಭೂಮಿ ವ್ಯವಹಾರವನ್ನು ಮಾಡುವವರಿಗೆ ಆದಾಯವಿ ರುತ್ತದೆ. ಮಕ್ಕಳಿಂದ ನಿಮಗೆ ಸಹಕಾರಗಳು ದೊರೆಯುತ್ತವೆ. ಆಭರಣ ತಯಾರಕರಿಗೆ ಹಿನ್ನಡೆಯಾಗಬಹುದು. ಸಂಗಾತಿಯ ಖರ್ಚು ವೆಚ್ಚಗಳು ಏರಿಕೆಯಾಗುತ್ತವೆ.ಕೃಷಿ ಸಂಬಂಧಿತ ಬೀಜೋತ್ಪಾದನೆ ಮಾಡುವವರಿಗೆ ಹೆಚ್ಚುಬೇಡಿಕೆ ಬರುತ್ತದೆ.ತಂದೆಗಾಗಿ ಹೆಚ್ಚುಹಣಖರ್ಚುಮಾಡು ವಿರಿ. ಕರಿದ ತಿಂಡಿಗಳನ್ನು ಮಾರುವವರಿಗೆ ಹೆಚ್ಚಿನ ಲಾಭ ಇರುತ್ತದೆ. ವಿದೇಶಿ ವ್ಯವಹಾರಗ ಳನ್ನು ಮಾಡುವವರಿಗೆ ಹೆಚ್ಚು ಲಾಭವಿರುತ್ತದೆ. ವ್ಯಾಪಾರದಲ್ಲಿ ಏರುಪೇರಾಗಿ ಹಣ ನಷ್ಟ ಆಗುವ ಸಾಧ್ಯತೆಗಳಿವೆ.
ಮಿಥುನ
ಬಹಳ ಬುದ್ಧಿವಂತಿಕೆ ನಿಮ್ಮಲ್ಲಿ ಇರುತ್ತದೆ. ಆದಾಯವು ನಿರೀಕ್ಷೆಯ ಮಟ್ಟಕ್ಕಿರುತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ಹಿರಿಯರು ತಿದ್ದುಪಡಿ ಹೇಳಬಹುದು.ಆಸ್ತಿಕೊಳ್ಳುವ ವಿಚಾರದಲ್ಲಿಸ್ವಲ್ಪ ಮುನ್ನಡೆ ಸಾಧಿಸಬಹುದು. ಮಕ್ಕಳಿಗಾಗಿ ಹಣ ಖರ್ಚಾಗುವ ಸಾಧ್ಯತೆಗಳಿವೆ. ಕೆಲವರಿಗೆ ಮೂಳೆ ತೊಂದರೆಗಳಿಂದ ಶಸ್ತ್ರಚಿಕಿತ್ಸೆಗಳಾಗುವ ಸಾಧ್ಯತೆ ಗಳಿವೆ. ಸಂಗಾತಿ ಕಡೆಯ ಹಿರಿಯರಿಗಾಗಿ ಹಣ ಖರ್ಚು ಮಾಡಬೇಕಾದ ಸಾಧ್ಯತೆಗಳಿವೆ. ಹಣಕಾಸಿನ ವ್ಯವಹಾರ ಮಾಡುವವರಿಗೆ ಮತ್ತು ಉದ್ದಿಮೆದಾರರಿಗೆ ಸಾಲ ಕೊಡುವವರಿಗೆ ಈಗ ಆದಾಯ ಹೆಚ್ಚುತ್ತದೆ. ತಂದೆಮಕ್ಕಳ ನಡುವೆ ಹಣದ ವಿಚಾರವಾಗಿ ಸ್ವಲ್ಪ ಕಾವೇರಿದ ಮಾತುಗ ಳಾಗಬಹುದು. ಉದ್ಯೋಗದಲ್ಲಿ ಶತ್ರುಗಳುಮಿತ್ರ ರಾಗುವರು.ಗ್ರಂಥರಚನೆ ಮಾಡುವವರಿಗೆಹೆಚ್ಚು ಪ್ರೋತ್ಸಾಹ ಮತ್ತು ಸಹಾಯ ಸಿಗುತ್ತದೆ. ತಂದೆ ಯಿಂದ ಕೃಷಿ ಬಗ್ಗೆ ತಿಳುವಳಿಕೆ ದೊರೆಯುತ್ತದೆ.
ಕರ್ಕಾಟಕ
ಕೆಲಸ ಕಾರ್ಯಗಳಲ್ಲಿ ಚುರುಕುತನ ತೋರುವಿರಿ. ಆದಾಯವು ನಿಮ್ಮ ಅಗತ್ಯವನ್ನು ಪೂರೈಸುವಷ್ಟಿರುತ್ತದೆ. ತಾಯಿಯಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಸಾಕಷ್ಟು ಸಹಕಾರ ದೊರೆಯುತ್ತದೆ. ಆಸ್ತಿ ವ್ಯವಹಾರ ಮಾಡುವವ ರಿಗೆ ಆದಾಯ ಹೆಚ್ಚುತ್ತದೆ. ಸಂಬಂಧಿಕರ ನೆರ ವಿನಿಂದ ವಿದೇಶಕ್ಕೆ ಹೋಗುವ ಸಾಧ್ಯತೆಗಳಿವೆ. ಹಿರಿಯ ಅಧಿಕಾರಿಗಳ ಮರ್ಜಿಯಿಂದ ವೃತ್ತಿಯಲ್ಲಿ ಸ್ಥಾನ ಬದಲಾವಣೆ ಆಗಬಹುದು. ಸಂಗಾತಿಯೊಡನೆ ಕಾವೇರಿದ ಮಾತುಗಳಾಗ ಬಹುದು.ವೇತನಗಳಿಕೆಯಲ್ಲಿಏರಿಕೆಯನ್ನುಕಾಣಬಹುದು. ಆಭರಣತಯಾರಕರಿಗೆ ಹೆಚ್ಚಿನ ಬೇಡಿಕೆ ಬಂದು ಆದಾಯ ಹೆಚ್ಚುತ್ತದೆ. ಗಣಿ ಗಾರಿಕೆ ಮಾಡುವವರಿಗೆ ಕಾನೂನಿನ ತೊಡಕು ಗಳು ಎದುರಾಗುವ ಸಾಧ್ಯತೆಗಳಿವೆ. ಕಬ್ಬಿಣದವ್ಯಾಪಾರಿಗಳಿಗೆ ನಿರೀಕ್ಷಿತ ವ್ಯವಹಾರ ಗಳಿರುವುದಿಲ್ಲ.
ಸಿಂಹ
ಆತ್ಮಭಿಮಾನ ಜಾಸ್ತಿ ಇರುತ್ತದೆ. ಆದಾಯದಷ್ಟೇ ಖರ್ಚು ಇರುತ್ತದೆ. ನಿಮ್ಮ ಹಿರಿಯರ ಶಿಫಾರಸ್ಸಿನಿಂದ ವೃತ್ತಿಯಲ್ಲಿ ಸ್ಥಾನ ಭದ್ರತೆ ಇರುತ್ತದೆ. ಆಸ್ತಿ ವ್ಯವಹಾರ ಮಾಡುವವ ರಿಗೆ ದಾಖಲೆಗಳ ಸಮಸ್ಯೆಗಳಾಗಬಹುದು. ಆಡಳಿತಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ವರಿಗೆ ಬಹಳ ಅಭಿವೃದ್ಧಿ ಇರುತ್ತದೆ. ಪಾದದಲ್ಲಿ ನೋವು ಕೆಲವರನ್ನುಕಾಡಬಹುದು.ಸಂಗಾತಿಯ ಕೃಷಿ ವ್ಯವಹಾರಗಳಿಗೆ ನೀವು ಸಹಕಾರ ನೀಡು ವಿರಿ.ರಾಜಕೀಯ ನಾಯಕರ ಬಿಗಿಪಟ್ಟುಗಳು ಸಡಿಲವಾಗಬಹುದು, ಈಗ ಜನರನ್ನು ಓಲೈಕೆ ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ವಿದೇಶಿ ವ್ಯವಹಾರಗಳನ್ನು ಮಾಡುವವರಿಗೆ ಸ್ವಲ್ಪ ಹಿನ್ನಡೆಯಾಗಬಹುದು. ಹಿರಿಯರಿಂದ ನಿಮಗೆ ಧನ ಸಹಾಯವಾಗುತ್ತದೆ. ಕೆಲವು ಸರ್ಕಾರಿ ಅಧಿಕಾರಿಗಳಿಗೆ ವಿದೇಶ ಯಾನದ ಅವಕಾಶ ದೊರೆಯುತ್ತದೆ.
ಕನ್ಯಾ
ಮನಸ್ಸಿನಲ್ಲಿ ಸಂತೋಷವಿದ್ದರೂ ಒಳಗಡೆ ದುಗುಡವಿರುತ್ತದೆ. ಆದಾಯವು ನಿಮ್ಮ ಖರ್ಚನ್ನು ತೂಗುವಷ್ಟು ಇರುತ್ತದೆ. ಕೃಷಿ ಭೂಮಿಯನ್ನು ಪಡೆಯುವ ಯತ್ನದಲ್ಲಿ ಸ್ವಲ್ಪ ಗೊಂದಲಗಳಾಗಬಹುದು. ಸಂಗಾತಿಗೆ ಹಿರಿಯರ ಆಸ್ತಿಯಲ್ಲಿ ಪಾಲು ದೊರೆಯುತ್ತದೆ. ಮಕ್ಕಳಿಗಾಗಿ ಖರ್ಚು ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ವಾತ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ಸಂಗಾತಿಯ ವೈರುಧ್ಯ ನಡವಳಿಕೆಗಳು ನಿಮಗೆ ಬೇಸರ ತರಿಸಬಹುದು.ಕೃಷಿಯಿಂದ ಈಗ ಆದಾಯ ಕಡಿಮೆಯಾಗಬಹುದು.ತಂದೆಯಿಂದ ಧನ ಸಹಾಯಗಳು ದೊರೆಯಬಹುದು. ಅಪೇಕ್ಷಿತ ಲಾಭಗಳು ವ್ಯಾಪಾರ ವ್ಯವಹಾರ ಗಳಲ್ಲಿ ಬರಬಹುದು. ತಾಯಿಗಾಗಿ ಸ್ವಲ್ಪಹೆಚ್ಚು ಗಮನ ಕೊಡಬೇಕಾಗಬಹುದು.
ತುಲಾ
ನಿಮ್ಮ ನಡವಳಿಕೆಯಲ್ಲಿ ಬಹಳ ಜಾಣತನ ವಿರುತ್ತದೆ. ಮಾತಿನಲ್ಲಿ ಮೇಧಾವಿ ಯಂತೆ ಮಾತನಾಡಿ ಜನರನ್ನು ಮರುಳು ಮಾಡುವಿರಿ. ಆದಾಯವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ನಿಮ್ಮ ಸ್ಥಿರಾಸ್ತಿಯನ್ನು ಉಳಿಸಿ ಕೊಳ್ಳಲು ಹೋರಾಟ ಮಾಡಬೇಕಾಗಬಹುದು. ಮಕ್ಕಳಿಂದ ಪ್ರತಿರೋಧದ ನುಡಿಗಳು ಬರುವ ಸಾಧ್ಯತೆ ಇದೆ. ಹರಿತವಾದ ಆಯುಧಗಳನ್ನು ಉಪಯೋಗಿಸುವಾಗ ಸಾಕಷ್ಟು ಎಚ್ಚರವಿರಲಿ. ವ್ಯಾಪಾರ ವ್ಯವಹಾರಗಳಲ್ಲಿ ನಿಧಾನ ಗತಿ ಇರುತ್ತದೆ. ನಿಮ್ಮತಂದೆಯ ಆಸ್ತಿಯಲ್ಲಿನಿಮಗೂ ಪಾಲುದೊರೆಯುತ್ತದೆ. ಸರ್ಕಾರಿ ಅಧಿಕಾರಿಗಳಿಗೆ ಆದಾಯ ಹೆಚ್ಚುವ ಸಂದರ್ಭವಿದೆ. ಧಾರ್ಮಿಕ ಕೆಲಸಗ ಳನ್ನು ಮಾಡುವವರ ಆದಾಯ ಹೆಚ್ಚಾಗುತ್ತದೆ.ಹಾಗೂ ಸಮಾಜದಿಂದ ಸಹಕಾರ ದೊರೆಯುತ್ತದೆ.
ವೃಶ್ಚಿಕ
ದೃಢವಾದ ನಿರ್ಧಾರಗಳಿಂದ ಮುಂದು ವರೆಯುವುದು ಒಳ್ಳೆಯದು. ಆದಾಯವು ನಿಮ್ಮ ನಿರೀಕ್ಷೆಯಷ್ಟು ಬರುತ್ತದೆ. ಬಹಳ ಶ್ರಮ ಪಟ್ಟು ಕೆಲಸ ಮಾಡುವಿರಿ. ಕೃಷಿ ಕೆಲಸಗಳಲ್ಲಿ ಬಹಳ ಉತ್ಸಾಹ ತೋರುವಿರಿ. ಕೃಷಿ ಭೂಮಿ ಯನ್ನು ಖರೀದಿ ಮಾಡಲು ಉತ್ಸುಕತೆ ಇರುತ್ತದೆ. ಭೂಮಿವ್ಯಾಪಾರ ಮಾಡುವವರಿಗೆ ಆದಾಯ ಕಡಿಮೆಯಾಗಬಹುದು. ಮಕ್ಕಳಿಂದ ವಿರೋಧಬಾಸನಡವಳಿಕೆಗಳು ಕಾಣಿಸಬಹುದುವಿದೇಶಕ್ಕೆ ಹೋಗುವವರಿಗೆ ಸ್ವಲ್ಪ ತೊಡಕುಗಳು ಎದುರಾಗುತ್ತವೆ. ಚರ್ಮ ವ್ಯಾಧಿಗಳು ಕೆಲವರಿಗೆ ಕಾಣಿಸಬಹುದು. ಸಂಗಾತಿಯಿಂದ ಆರ್ಥಿಕವಾಗಿ ಮಾನಸಿಕವಾಗಿ ಸಾಕಷ್ಟುಸಹಾಯ ದೊರೆಯು ತ್ತದೆ.ತಾಯಿಯಿಂದ ಸಹಾಯಗಳುಸ್ವಲ್ಪಮಟ್ಟಿಗೆ ದೊರಕಬಹುದು.ವೃತ್ತಿಯಲ್ಲಿ ಸ್ವಲ್ಪ ಕಸಿವಿಸಿ ಗಳಿ ರುತ್ತವೆ. ಶತ್ರುಗಳ ಮೇಲೆ ನಿಮಗೆ ಜಯ ಸಿಗು ತ್ತದೆ. ಹೈನುಗಾರಿಕೆ ಮಾಡುವವರಿಗೆ ಲಾಭವಿರುತ್ತದೆ.
ಧನು
ಬಹಳ ಗೌರವಹಿತವಾಗಿ ನಡೆದುಕೊಂಡು ಸಮಾಜದಿಂದಲೂ ಗೌರವ ಪಡೆಯುವಿರಿ. ಮಾತನಾಡುವಾಗ ಬಹಳ ಎಚ್ಚರಿಕೆ ಇರಲಿ. ಯಾವುದೇ ಕೆಲಸ ಮಾಡುವಾಗ ಯೋಜನಾ ಬದ್ಧವಾಗಿ ಮಾಡಿರಿ. ವಿದೇಶದಲ್ಲಿ ನೆಲೆಸಿರುವ ವರು ಸ್ಥಿರಾಸ್ತಿಗಳನ್ನು ಮಾಡಿಕೊಳ್ಳಬಹುದು. ಅಧ್ಯಯನ ಶೀಲರಿಗೆ ಬಹಳ ಪ್ರಾಮುಖ್ಯತೆ ದೊರೆಯುತ್ತದೆ. ಕಣ್ಣಿನ ತೊಂದರೆ ಅಥವಾ ವಾಯು ಪ್ರಕೋಪ ಕಾಣಿಸಬಹುದು. ಸಂಗಾತಿ ಯಿಂದ ನಿಮಗೆ ಸಹಕಾರಗಳು ದೊರೆಯುತ್ತವೆ. ಏರಿಕೆಯ ನಿರೀಕ್ಷೆಯಲ್ಲಿದ್ದ ಸಂಗಾತಿಯ ಆದಾಯವು ಅಲ್ಲೇ ನಿಲ್ಲುತ್ತದೆ. ಹಿರಿಯರ ವ್ಯಾಪಾರ ವ್ಯವಹಾರಗಳಲ್ಲಿ ನಿಮಗೆ ಸ್ವಲ್ಪ ಅವಕಾಶ ದೊರೆಯುತ್ತದೆ. ತಾಯಿಯಿಂದ ಹೆಚ್ಚಿನ ಸಹಕಾರಗಳು ದೊರೆಯುತ್ತದೆ. ವೃತ್ತಿ ಯಲ್ಲಿ ನಿಮಗೆ ಸ್ಥಾನಮಾನ ದೊರೆಯಬಹುದು. ಧಾರ್ಮಿಕಕಾರ್ಯಗಳಿಗೆ ಹೆಚ್ಚು ಒತ್ತು ಕೊಡು ವಿರಿ.
ಮಕರ
ಯಾಕೋ ಒಂದು ರೀತಿ ಆಲಸೀತನ ಇರುತ್ತದೆ.ಆದಾಯವುಮಂದಗತಿಯಲ್ಲಿರುತ್ತದೆ. ಕೆಲಸಕಾರ್ಯ ಮಾಡುವಾಗ ಬಹಳಶ್ರದ್ಧೆಯಿಂದ ಮಾಡುವಿರಿ. ಭೂಮಿ ವ್ಯವಹಾರ ಮಾಡುವ ಮಧ್ಯವರ್ತಿಗಳಿಗೆ ಹೆಚ್ಚು ಆದಾಯವಿರುತ್ತದೆ. ಮಕ್ಕಳ ಏಳಿಗೆಯ ಬಗ್ಗೆ ಶುಭ ವಾರ್ತೆಗಳು ಕೇಳಿ ಬರುತ್ತವೆ. ಮಕ್ಕಳಿಂದ ನಿಮಗೆ ಧನ ಸಹಾಯ ಸಹ ಇರುತ್ತದೆ. ಇದ್ದ ಚರ್ಮರೋಗಗಳು ಕಡಿಮೆ ಯಾಗುವ ಹಂತಕ್ಕೆ ಬರುತ್ತವೆ. ಸಂಗಾತಿಯ ಕಡೆಯವರಿಂದ ನಿಮಗೆ ಸಾಕಷ್ಟು ಸಹಾಯ ಸಿಗುತ್ತದೆ. ವಿದೇಶಕ್ಕೆ ಹೋಗಬೇಕೆನ್ನುವವರ ದಾಖಲೆಗಳ ಪರಿಶೀಲನೆ ನಿಧಾನವಾಗಬಹುದು. ಕೆಲವರಿಗೆ ಧರ್ಮಗುರುಗಳ ಭೇಟಿಯಾಗುವ ಯೋಗವಿದೆ. ವೃತ್ತಿಯಲ್ಲಿಒತ್ತಡಗಳುಹೆಚ್ಚಾಗುವ ಸಾಧ್ಯತೆಗಳಿವೆ. ಹೈನುಗಾರಿಕೆಯಿಂದ ಹೆಚ್ಚು ಲಾಭವಾಗುವ ಸಾಧ್ಯತೆಗಳಿವೆ. ಸರ್ಕಾರಿ ಮಟ್ಟದಲ್ಲಿರುವವರಿಗೆ ಅನಿರೀಕ್ಷಿತ ಧನ ಲಾಭ ಇರುತ್ತದೆ.
ಕುಂಭ
ಹಿರಿಯರಿಗೆ ಸಮಾಜ ತಿದ್ದುವ ಅವಕಾಶ ಒದಗಿ ಅದರಿಂದ ಗೌರವ ದೊರೆಯುತ್ತದೆ. ಆದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ಬುದ್ಧಿವಂತಿಕೆಯಿಂದ ಕೆಲಸ ಕಾರ್ಯ ಮಾಡು ವುದು ಒಳ್ಳೆಯದು. ಸರ್ಕಾರಿ ಸಂಸ್ಥೆಗಳಿಗಾಗಿ ಭೂಮಿ ಕೊಡಿಸುವವರಿಗೆ ಆದಾಯಹೆಚ್ಚುತ್ತದೆ. ಮಕ್ಕಳಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಸಹ ಕಾರ ದೊರೆಯುತ್ತದೆ. ಶ್ವಾಸಕೋಶದ ತೊಂದರೆ ಇರುವವರು ಎಚ್ಚರ ವಹಿಸಿರಿ. ಸಂಗಾತಿಯ ಸಹಕಾರದಿಂದ ಸರ್ಕಾರಿ ಗುತ್ತಿಗೆಗಳು ಅಥವಾ ಆದಾಯಗಳು ಬರುತ್ತವೆ. ಸಂಗಾತಿಗೆ ವಿದೇಶ ಯಾನ ಯೋಗ ದೊರೆಯ ಬಹುದು.ಧರ್ಮ ಕಾರ್ಯಗಳಲ್ಲಿ ಸಾಕಷ್ಟುಆಸಕ್ತಿ ಹೆಚ್ಚುತ್ತದೆ. ತಂದೆಯಿಂದ ಧನಸಹಾಯವನ್ನು ಪಡೆಯು ವಿರಿ. ವೃತ್ತಿಯಲ್ಲಿ ಸ್ವಲ್ಪ ಗೊಂದಲಗಳಿರುತ್ತವೆ. ಯುವಕರು ಬದಲಿ ಮಾರ್ಗಗಳಿಂದ ಹಣ ಗಳಿಸುವ ಪ್ರಯತ್ನ ಮಾಡುವರು.
ಮೀನ
ನಿಮ್ಮ ಮನಸ್ಸೇ ನಿಮ್ಮ ಸ್ತಿಮಿತದಲ್ಲಿ ಇರುವುದಿಲ್ಲ. ನಿಮ್ಮ ಯೋಚನಾ ಲಹರಿ ಬಹಳ ದ್ವಂದ್ವದಿಂದ ಕೂಡಿರುತ್ತದೆ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ಹಿರಿಯರ ಸಹೋದ್ಯೋಗಿಗಳ ಸಹಕಾರ ಸಿಗುತ್ತದೆ. ಮಧ್ಯವರ್ತಿ ವ್ಯವಹಾರ ಮಾಡುವವರಿಗೆ ಆದಾಯ ಹೆಚ್ಚು ಬರುತ್ತದೆ. ಸಂಗಾತಿಯಿಂದ ಧನಸಹಕಾರ ಸಿಗುತ್ತದೆ. ನಿಮ್ಮ ನಡವಳಿಕೆ ನಿಮ್ಮ ಹಿರಿಯರಿಗೆ ಕೋಪತರಿಸ ಬಹುದು. ತಾಯಿಯ ಜೊತೆ ಕಾವೇರಿದ ಮಾತು ಗಳಾಗುವ ಸಾಧ್ಯತೆಗಳಿವೆ.ಸಂಗಾತಿಗಾಗಿ ಹೆಚ್ಚು ಖರ್ಚುಮಾಡಬೇಕಾದ ಸಂದರ್ಭ ಬರಬಹುದು. ಸೈನ್ಯದಲ್ಲಿ ಕೆಲಸಮಾಡುತ್ತಿರುವವರಿಗೆ ಹೆಚ್ಚಿನ ಸ್ಥಾನ ಸಿಗುವ ಸಾಧ್ಯತೆ ಇದೆ. ಧಾರ್ಮಿಕಕಾರ್ಯ ಗಳನ್ನು ಮಾಡುವವರಿಗೆ ಆದಾಯಹೆಚ್ಚುವುದು. ಸಂಗಾತಿಯಿಂದ ಅನಿರೀಕ್ಷಿತ ಖರ್ಚುಗಳು ಎದುರಾಗುವ ಸಾಧ್ಯತೆ ಇದೆ.