ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
21/04/2024 - 27/04/2024
ವಾರ ಭವಿಷ್ಯ: ಈ ರಾಶಿಯವರಿಗೆ ಇಚ್ಚೆ ಪಟ್ಟ ಸ್ಥಿರಾಸ್ತಿ ಒದಗಿ ಬರುವ ಸಾಧ್ಯತೆ ಇದೆ
Published 27 ಏಪ್ರಿಲ್ 2024, 23:49 IST
ಪ್ರಜಾವಾಣಿ ವಿಶೇಷ
author
ಮೇಷ
ಒಂದು ರೀತಿ ಆತ್ಮಾಭಿಮಾನ ಇರುತ್ತದೆ. ನಿಮ್ಮ ಚಟುವಟಿಕೆ ನಿಗೂಢವಾಗಿರುತ್ತದೆ. ಇಚ್ಚಪಟ್ಟಿದ್ದ ಸ್ಥಿರಾಸ್ತಿಯನ್ನು ಕೊಳ್ಳುವಸಾಧ್ಯತೆ ಇದೆ.ಧನದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ವಿದ್ಯಾರ್ಥಿಗಳಿಗೆ ಅವರ ಅಧ್ಯಯನಕ್ಕೆ ಬೇಕಾದ ಎಲ್ಲ ರೀತಿಯ ಸವಲತ್ತುಗಳು ದೊರೆಯುತ್ತವೆ. ಸೈನ್ಯದಲ್ಲಿ ಕೆಲಸ ಮಾಡುತ್ತಿರುವವ ರಿಗೆ ಹೊಸ ರೀತಿಯ ಅನುಕೂಲತೆಗಳು ಒದಗುವ ಸಾಧ್ಯತೆ ಇದೆ. ಹಣದ ನಿರ್ವಹಣೆಯನ್ನು ಸರಿಯಾಗಿ ಮಾಡದಿದ್ದಲ್ಲಿ ಸಾಲಕ್ಕೆ ಬೀಳುವ ಸಾಧ್ಯತೆ ಇದೆ. ನಿಮ್ಮ ಪ್ರೀತಿ ಪ್ರೇಮಗಳು ಹೊರಜಗತ್ತಿಗೆ ತಿಳಿಯುವ ಸಾಧ್ಯತೆ ಗಳಿವೆ. ಅದಿರುವ್ಯವಹಾರ ಮತ್ತುಲೋಹದವ್ಯವಹಾರ ಗಳನ್ನು ಮಾಡುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಧರ್ಮ ಕಾರ್ಯಗಳನ್ನು ಮಾಡುತ್ತಿರುವವರಿಗೆ ಹೆಚ್ಚಿನ ನೆರವು ಸಿಗುತ್ತದೆ. ವೃತ್ತಿಯಲ್ಲಿರುವವರಿಗೆ ಉತ್ತಮ ಹೆಸರು ಬರುವ ಸಾಧ್ಯತೆಗಳಿವೆ. ಅಶ್ವಿನಿ ಭರಣಿ ಕೃತಿಕ 1
ವೃಷಭ
ನಿಮ್ಮ ಆಲೋಚನೆಗಳಲ್ಲಿ ಸ್ಥಿರತೆ ಇರುವುದಿಲ್ಲ. ಧನಾದಾಯವು ನಿರೀಕ್ಷಿತ ಮಟ್ಟದಲ್ಲಿ ಇರುತ್ತದೆ. ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಆದಾಯ ಹೆಚ್ಚುತ್ತದೆ. ನಿಮ್ಮ ನಡವಳಿಕೆಗಳಿಂದ ತಾಯಿಯು ಕೋಪಗೊಳ್ಳ ಬಹುದು. ಸರ್ಕಾರಿ ಕಚೇರಿಯ ಕೆಲಸ ಕಾರ್ಯಗಳಲ್ಲಿ ಮಂದಗತಿ ಇರುತ್ತದೆ. ಮಹಿಳೆಯರ ಅಭಿವೃದ್ಧಿಯು ನಿಧಾನಗತಿಯಲ್ಲಿರುತ್ತದೆ. ಬೆಂಕಿಯ ಜೊತೆಯ ಕೆಲಸ ಮಾಡುವವರು ಹೆಚ್ಚು ಎಚ್ಚರದಿಂದ ಮಾಡಲೇಬೇಕು. ಕಣ್ಣಿನ ಬಗ್ಗೆ ಹೆಚ್ಚಿನಎಚ್ಚರವನ್ನು ವಹಿಸಿರಿ.ಶಿಕ್ಷಣಸಂಸ್ಥೆ ಗಳಿಗೆ ಕಾನೂನಿನ ತೊಡಕುಗಳು ಬರುವ ಸಾಧ್ಯತೆಗ ಳಿವೆ. ಕಬ್ಬಿಣದವ್ಯಾಪಾರಿಗಳಿಗೆ ಹೆಚ್ಚಿನ ವ್ಯವಹಾರ ನಡೆದು ಲಾಭ ಬರುತ್ತದೆ. ವಿದೇಶಿ ವಾಹನ ತಯಾರಿಕೆ ಸಂಸ್ಥೆಗಳಿಗೆ ಕಚ್ಚಾಮಾಲನ್ನು ಪೂರೈಸುವ ವ್ಯಕ್ತಿ ಗಳಿಗೆ ಹೆಚ್ಚಿನಲಾಭವಿರುತ್ತದೆ. ನ್ಯಾಯವಾದಿಗಳಿಗೆ ಕೈತುಂಬಾ ಕೆಲಸವಿರುತ್ತದೆ. ಕೃತಿಕಾ2 3 4 ರೋಹಿಣಿ ಮೃಗಶಿರಾ1 2
ಮಿಥುನ
ಒಮ್ಮೊಮ್ಮೆ ನಿಮ್ಮ ಬುದ್ಧಿವಂತಿಕೆ ಕೈ ಕೊಡಬಹುದು. ಧನದಾಯವು ಮಧ್ಯಮ ಗತಿಯಲ್ಲಿ ರುತ್ತದೆ. ಉಪನ್ಯಾಸಕಾರರಿಗೆ ಉತ್ತಮ ಉಪನ್ಯಾಸ ಮಾಡುವ ಅವಕಾಶಗಳು ದೊರೆಯುತ್ತವೆ. ಶಿಸ್ತು ಬದ್ಧ ನಡವಳಿಕೆ ನಿಮ್ಮಲ್ಲಿ ಇರುತ್ತದೆ. ಆಸ್ತಿ ಕೊಳ್ಳುವಿಕೆಯ ವಿಚಾರದಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗಬಹುದು. ವಿದ್ಯಾರ್ಥಿಗಳಿಗೆ ಬೇಕಾದ ಸೂಕ್ತಸೌಲಭ್ಯಗಳು ಒದಗು ತ್ತವೆ. ಮಕ್ಕಳ ಆಟ ಪಾಠಗಳ ಬಗ್ಗೆ ಉತ್ತಮ ವಾರ್ತೆಗಳನ್ನು ಕೇಳುವಿರಿ. ಹಿರಿಯ ಆಡಳಿತದಾರರಿಗೆ ಉತ್ತಮ ಸ್ಥಾನ ಅಥವಾ ಹೆಚ್ಚಿನಆದ್ಯತೆ ದೊರೆಯುತ್ತದೆ.ವಾಹನ ಗಳ ಬಿಡಿಭಾಗಗಳನ್ನು ತಯಾರು ಮಾಡುವವರಿಗೆ ಹೆಚ್ಚು ವ್ಯಾಪಾರವಿರುತ್ತದೆ. ಹಾಲಿನ ಎಲ್ಲಾ ರೀತಿಯ ಉಪ ವಸ್ತುಗಳನ್ನು ಮಾರಾಟ ಮಾಡುವವರಿಗೆ ವ್ಯಾಪಾರ ಹೆಚ್ಚಾಗಿ ಆದಾಯವು ಹೆಚ್ಚುತ್ತದೆ. ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3
ಕರ್ಕಾಟಕ
ಮನಸ್ಸಿನ ಆಲೋಚನೆಯಲ್ಲಿ ಬಹಳ ದ್ವಂದ್ವ ವಿರುತ್ತದೆ. ಆದಾಯವು ನಿಮ್ಮ ಖರ್ಚನ್ನು ತೂಗಿಸುವಷ್ಟಿರುತ್ತದೆ. ಸಂಗಾತಿಯ ನಿಧಾನಗತಿಯ ನಡವಳಿಕೆ ಬೇಸರ ಮೂಡಿಸಬಹುದು. ಇಚ್ಚೆ ಪಟ್ಟಿದ್ದ ಸ್ಥಿರಾಸ್ತಿ ಒದಗಿ ಬರುವ ಸಾಧ್ಯತೆ ಇದೆ. ಗಣಿತಜ್ಞರಿಗೆ ಹಾಗೂ ಲೆಕ್ಕಪರಿಶೋಧಕರಿಗೆ ಹೆಚ್ಚಿನ ಕೆಲಸ ದೊರೆತು ಹೆಚ್ಚು ಸಂಪಾದನೆ ಆಗುತ್ತದೆ. ಉದ್ಯೋಗದಲ್ಲಿ ಪ್ರಗತಿ ಸ್ವಲ್ಪಮಟ್ಟಿಗೆ ನಿಧಾನವಾಗಬಹುದು. ಸಂಸಾರದಲ್ಲಿ ಕಾವೇರಿದ ವಾತಾವರಣಗಳಿದ್ದರೂ ಸಹ ನಂತರದ ದಿನಗಳಲ್ಲಿ ಸರಿಯಾಗುತ್ತದೆ. ಮಹಿಳೆಯರ ಸಿದ್ಧ ಉಡುಪುಗಳನ್ನು ತಯಾರಿಸಿ ಮಾರಾಟ ಮಾಡುವವ ರಿಗೆ ವ್ಯವಹಾರ ಉತ್ತಮವಾಗುತ್ತದೆ.ಕೆಲವೊಮ್ಮೆ ಆಲೋಚನೆಮಾಡದೆ ಮಾಡುವ ವ್ಯವಹಾರಗಳು ಕೈ ಸುಡಬಹುದು. ಕಬ್ಬಿಣದ ವ್ಯಾಪಾರಿಗಳಿಗೆ ಹೆಚ್ಚಿನ ವ್ಯಾಪಾರ ನಡೆದು ಆದಾಯ ಹೆಚ್ಚುತ್ತದೆ. ಪುನರ್ವಸು 4 ಪುಷ್ಯ ಆಶ್ಲೇಷ
ಸಿಂಹ
ನಡವಳಿಕೆಯಲ್ಲಿ ಒಂದು ರೀತಿಯ ಗತ್ತು ಇರುತ್ತದೆ. ಧನದಾಯವು ಇದ್ದರೂ ಸಹ ನಿರ್ವಹಣೆ ಮಾಡುವ ಸಾಧ್ಯತೆ ಇರುತ್ತದೆ. ಹಿರಿಯರಿಂದ ಮತ್ತು ಬಂಧುಗಳಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಸಹಕಾರ ದೊರೆಯುತ್ತದೆ. ಭೂಮಿ ವ್ಯಾಪಾರ ಮಾಡುವವರಿಗೆ ಆದಾಯ ಹೆಚ್ಚುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಅಧ್ಯಯನದ ಜೊತೆ ದುಡಿಯುವ ಅವಕಾಶ ಕೂಡ ದೊರೆಯುತ್ತದೆ. ಮೂಳೆ ತೊಂದರೆ ಇರುವವರು ಹೆಚ್ಚುಎಚ್ಚರ ವಹಿಸಿರಿ. ರಾಜಕೀಯ ನಾಯಕರುಗಳಿಗೆ ನಿರೀಕ್ಷಿಸಿದ್ದ ಸ್ಥಾನಮಾನಗಳು ದೊರೆಯುವ ಸಾಧ್ಯತೆ ಗಳಿವೆ. ಕೆಲವರು ಪ್ರಭಾವಿ ಹುದ್ದೆ ಪಡೆದು ಜನಾಕರ್ಷ ಣೆಯ ಕೇಂದ್ರ ಬಿಂದುವಾಗುವರು. ಕೆಲವರಿಗೆ ಅನಿರೀಕ್ಷಿತ ವಿದೇಶ ಪ್ರಯಾಣ ಅಥವಾ ವಿದೇಶಿ ಕಂಪನಿಗಳಲ್ಲಿ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಆಗ ಬೇಕಾಗಿದ್ದ ವೇತನಏರಿಕೆ ಸ್ವಲ್ಪ ನಿಧಾನವಾಗಬಹುದು. ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1
ಕನ್ಯಾ
ಅಲಂಕಾರಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುವಿರಿ. ಅತಿಯಾದ ಹರಿತದ ಮಾತು ನಿಮಗೆ ಮುಜುಗರ ತರ ಬಹುದು. ಹಣದ ಒಳಹರಿವು ಸ್ವಲ್ಪಏರಿಕೆಯಾಗುತ್ತದೆ. ವ್ಯಾಪಾರವ್ಯವಹಾರಗಳಲ್ಲಿ ಜಾಣತನದಿಂದ ನಿಮ್ಮ ಪಾಲನ್ನು ಪಡೆಯುವಿರಿ. ಶಾಲಾಕಾಲೇಜುಗಳನ್ನು ನಡೆಸುತ್ತಿರುವವರಿಗೆ ಸ್ವಲ್ಪ ಕಾನೂನಿನ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ. ಹಿರಿಯರ ಕಡೆಯಿಂದ ಧನ ಸಹಾಯ ಬರುವ ಸಾಧ್ಯತೆ ಇದೆ. ವೃತ್ತಿಯಲ್ಲಿ ವೇತನ ಏರಿಕೆಯ ಸಂದರ್ಭವಿದೆ. ವ್ಯವಹಾರಗಳಲ್ಲಿ ಜಾಣ್ಮೆಯಿಂದ ಮಾತನಾಡಿ ನಿಮ್ಮ ಕೆಲಸಸಾಧಿಸುವಿರಿ. ತಾಯಿಯಿಂದ ಅತಿಹೆಚ್ಚಿನ ಸಹಾಯ ದೊರೆಯುತ್ತದೆ. ಆಗದೇ ನಿಂತಿದ್ದ ಸರ್ಕಾರಿ ದಾಖಲೆಗಳು ಈಗ ಆಗುವ ಸಾಧ್ಯತೆಗಳಿವೆ. ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2
ತುಲಾ
ಅತಿಯಾದ ಗೌರವವನ್ನು ಸಮಾಜದಿಂದ ಬಯಸುವಿರಿ. ನಿಮ್ಮ ವ್ಯಂಗ್ಯ ಮಾತುಗಳು ನಿಮಗೆ ವಾಪಸ್ ಬರಬಹುದು. ಧನದಾಯವು ಮಧ್ಯಮ ಗತಿಯಲ್ಲಿರುತ್ತದೆ. ತಂದೆಯ ವ್ಯವಹಾರಗಳಲ್ಲಿ ನಿಮಗೆ ಪಾಲುದೊರೆಯುತ್ತದೆ. ಹಿರಿಯ ಸರ್ಕಾರಿ ಅಧಿಕಾರಿ ಗಳಿಗೆ ಹೆಚ್ಚಿನ ಸ್ಥಾನಮಾನ ಸಿಗುವ ಸಾಧ್ಯತೆ ಗಳಿವೆ. ದಿನಸಿವ್ಯಾಪಾರಿಗಳಿಗೆ ಹೆಚ್ಚಿನ ವ್ಯಾಪಾರವಿರುತ್ತದೆ. ಮಹಿಳೆಯರು ಮಾಡುವ ವ್ಯವಹಾರಗಳಲ್ಲಿ ಲಾಭ ಕಡಿಮೆಯಾಗುವ ಸಾಧ್ಯತೆಗಳಿವೆ.ನಿಮ್ಮ ಬಂಧುಗಳು ನಿಮಗೆ ಎಲ್ಲಾ ರೀತಿಯ ಸಹಕಾರವನ್ನು ಕೊಡುತ್ತಾರೆ. ಕೃಷಿ ಭೂಮಿ ವಿಸ್ತರಣೆ ಯೋಗವಿದೆ. ವಿದ್ಯಾರ್ಥಿಗಳಿಗೆ ಅಂತಹ ಯಶಸ್ಸು ಇರುವುದಿಲ್ಲ. ವಿದೇಶಿಕಂಪನಿಗಳಲ್ಲಿ ಸಾಲಮಾಡುವುದು ಅಷ್ಟುಒಳಿತಲ್ಲ. ಅರ್ಕವ್ಯಕ್ತಿಗಳಿಗೆ ವಿವಾಹ ಸಂಬಂಧಗಳು ಒದಗಬಹುದು. ಆಭರಣ ವ್ಯಾಪಾರಗಾರರಿಗೆ ಅನಿರೀಕ್ಷಿತ ಲಾಭ ಇರುತ್ತದೆ. ದೇವರ ಮೂರ್ತಿಗಳನ್ನು ಎರಕ ಹೊಯ್ಯುವವರಿಗೆ ಬೇಡಿಕೆ ಹೆಚ್ಚಾಗುತ್ತದೆ. ತಂದೆಯಿಂದ ವ್ಯಾಪಾರದ ಒಳ ಸುಳಿಗಳನ್ನು ತಿಳಿಯಬಹುದು. ಉದ್ಯೋಗದಲ್ಲಿನ ಸ್ಥಾನಮಾನದಲ್ಲಿ ಗೊಂದಲಗಳ ಏರ್ ಪಡಬಹುದು. ಸರ್ಕಾರಿ ಕೆಲಸ ಕಾರ್ಯಗಳು ಸಾಕಷ್ಟು ಮುನ್ನಡೆ ಇರುತ್ತದೆ. ಸಂಗಾತಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಚಿತ್ತಾ 3 4 ಸ್ವಾತಿ ವಿಶಾಖ 1 2 3
ವೃಶ್ಚಿಕ
ಬುದ್ದಿವಂತಿಕೆಯಿಂದ ಕೆಲಸಗಳನ್ನು ಸಾಧಿಸುವಿರಿ. ಧನಾದಾಯವು ಮಂದಗತಿಯಲ್ಲಿರುತ್ತದೆ. ಗುರು ಹಿರಿ ಯರಿಂದ ಸಿಗುತ್ತಿದ್ದ ಸಹಕಾರಗಳು ಧನಸಹಾಯಗಳು ಕಡಿಮೆಯಾಗುತ್ತವೆ. ಶತ್ರುಗಳನ್ನು ಮಟ್ಟಹಾಕಲು ಚಾಣಾಕ್ಷನಡೆಯನ್ನು ಪ್ರದರ್ಶಿಸುವಿರಿ. ಸಂಗಾತಿಯ ಆದಾಯದಲ್ಲಿ ಸ್ವಲ್ಪಧಾರ್ಮಿಕ ಕಾರ್ಯಗಳಿಗೆ ಖರ್ಚಾ ಗುವುದು. ಸರ್ಕಾರಿ ಕಂಪನಿಗಳ ಜೊತೆ ವ್ಯವಹಾರ ಮಾಡುವವರಿಗೆ ಈಗ ಲಾಭಕಡಿಮೆಯಾಗುವಸಾಧ್ಯತೆ ಗಳಿವೆ. ಹಿರಿಯರ ಸ್ಥಿರಾಸ್ತಿಯು ನಿಮಗೂ ಸಹ ದೊರೆ ಯುವ ಲಕ್ಷಣಗಳಿವೆ. ಹಾಲನ್ನು ಮಾರಾಟ ಮಾಡು ವವರ ವ್ಯವಹಾರ ವಿಸ್ತರಿಸುತ್ತದೆ. ಉದ್ಯೋಗದಲ್ಲಿ ಏರಿಳಿತವಿರುವುದಿಲ್ಲ. ವಿದೇಶಕ್ಕೆ ಓದಲು ಹೋಗಬೇಕೆ ನ್ನುವವರಿಗೆ ಸೂಕ್ತ ಅನುಕೂಲಗಳು ದೊರೆಯುತ್ತವೆ. ಧನಾದಾಯವು ಮಧ್ಯಮ ಗತಿಯಲ್ಲಿರುತ್ತದೆ. ವಿಶಾಖಾ 4 ಅನುರಾಧ ಜೇಷ್ಠ
ಧನು
ಬಹಳ ಗೌರವಯುತವಾಗಿ ನಡೆದುಕೊಳ್ಳುವಿರಿ. ಮಾತನಾಡುವಾಗ ಹೆಚ್ಚಿನ ತಾಳ್ಮೆ ಇರಲಿ. ಕೃಷಿಯಿಂದ ಆದಾಯ ಹೆಚ್ಚಾಗುತ್ತದೆ. ವಿದೇಶದಲ್ಲಿ ಇರುವವರಿಗೆ ಸ್ಥಿರಾಸ್ತಿ ಮಾಡುವಯೋಗವಿದೆ. ಮೂಳೆತಜ್ಞರಿಗೆಹೆಚ್ಚು ಬೇಡಿಕೆ ಬರುತ್ತದೆ. ಆಟೋಮೊಬೈಲ್ ಕ್ಷೇತ್ರದಲ್ಲಿ ವ್ಯವ ಹಾರ ಮಾಡುತ್ತಿರುವವರಿಗೆ ವ್ಯವಹಾರ ಸಲೀಸಾಗು ತ್ತದೆ. ಶತ್ರುಗಳನ್ನು ಪತ್ತೆಹಚ್ಚಿ ಅವರು ನಿಮ್ಮಬಗ್ಗೆಮಾತ ನಾಡದಂತೆ ಎಚ್ಚರಿಕೆ ರವಾನೆ ಮಾಡುವಿರಿ. ವಿದ್ಯಾರ್ಥಿ ಗಳಿಗೆ ಅಧ್ಯಯನದಲ್ಲಿ ಸಾಕಷ್ಟು ಯಶಸ್ಸು ಇರುತ್ತದೆ. ನಿಮ್ಮ ಸಂಗಾತಿಯ ಆದಾಯದಲ್ಲಿ ಸ್ವಲ್ಪ ಕಡಿಮೆಯಾ ಗುವ ಸಂದರ್ಭವಿದೆ. ಪಾಲುದಾರಿಕೆಯ ವ್ಯವಹಾರ ಗಳಲ್ಲಿ ನಿಮ್ಮ ಲಾಭದ ಪಾಲು ಕಡಿಮೆಯಾಗಬಹುದು. ಲೆವಾದೇವಿ ವ್ಯವಹಾರಗಳು ಕೈಕೊಡುವ ಲಕ್ಷಣಗಳಿವೆ. ತಂದೆಯ ಜೊತೆ ಸೇರಿ ಮಾಡಿದ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಇರುತ್ತದೆ. ಮೂಲ ಪೂರ್ವಾಷಾಢ ಉತ್ತರಾಷಾಢ 1
ಮಕರ
ಬಹಳ ಶ್ರಮ ಪಟ್ಟ ಕೆಲಸ ಮಾಡಿ ಹೆಸರು ಪಡೆಯುವಿರಿ. ನಿಮ್ಮ ನಡವಳಿಕೆಯಲ್ಲಿ ಉದಾಸೀನತೆ ಯನ್ನು ಕಾಣಬಹುದು. ಧನಾದಾಯವು ಮಂದಗತಿ ಯಲ್ಲಿರುತ್ತದೆ. ಸಿರಾಸ್ತಿಯನ್ನು ಕೊಳ್ಳಲು ಹಣ ಕ್ರೂಢೀ ಕರಣಕ್ಕೆ ಚಾಲನೆ ದೊರೆಯುತ್ತದೆ. ಕ್ರೀಡಾಪಟುಗಳಿಗೆ ಸರಕಾರದಿಂದ ಸೂಕ್ತ ಸೌಲಭ್ಯಗಳು ಒದಗಿ ಬರುತ್ತವೆ. ವಂಶ ಪಾರಂಪರಿಕ ಧರ್ಮವಿದ್ಯೆಯನ್ನು ಮುಂದುವರಿ ಸಬಹುದು. ರಕ್ತ ಪರಿಚಲನೆಯಲ್ಲಿ ವ್ಯತ್ಯಾಸ ಕಂಡರೂ ಸಹ ನಂತರಸರಿಯಾಗುತ್ತದೆ. ಸರ್ಕಾರಿಗುತ್ತಿಗೆ ಮಾಡು ವವರಿಗೆ ಹೊಸ ಗುತ್ತಿಗೆಗಳು ದೊರೆಯಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಉತ್ತಮ ಯಶಸ್ಸು ಇರುತ್ತದೆ. ಧರ್ಮ ವಿದ್ಯೆಯಲ್ಲಿ ಹಣ ಸಂಪಾದನೆಯ ಯೋಗವಿದೆ. ವೃತ್ತಿಯಲ್ಲಿ ನಿರೀಕ್ಷಿತ ಸ್ಥಾನಗಳು ದೊರೆ ಯದಿರಬಹುದು. ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2
ಕುಂಭ
ಹಠ ಹಿಡಿದು ಕೆಲಸ ಮಾಡುವ ಛಲ ನಿಮ್ಮಲ್ಲಿ ಇರುತ್ತದೆ. ಮಾತನಾಡುವಾಗ ಉಪಯೋಗಿ ಸುವ ಶಬ್ದಗಳಬಗ್ಗೆ ಎಚ್ಚರಇರಲಿ. ನಿಮ್ಮಕೆಲಸಕಾರ್ಯ ಗಳಿಗೆ ಹಿರಿಯರ ಸಹಕಾರ ಸಿಗುತ್ತದೆ. ಕೃಷಿಯಿಂದ ಹೆಚ್ಚು ಅಭಿವೃದ್ಧಿ ಇರುತ್ತದೆ. ಕೃಷಿ ಉತ್ಪನ್ನಗಳಿಂದ ಈಗ ಆದಾಯ ಸಿಗುತ್ತದೆ. ಆಸ್ತಿವಿವಾದಗಳಲ್ಲಿ ಹೊಂದಾಣಿ ಕೆಯನ್ನು ಕಾಣಬಹುದು. ಇಲಾಖ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಯಶಸ್ಸು ಇರುತ್ತದೆ. ತಂದೆಯ ಆರೋಗ್ಯದ ಬಗ್ಗೆ ಹೆಚ್ಚು ಎಚ್ಚರ ವಹಿಸಿರಿ. ಸಂಗಾತಿ ಕಡೆಯವರಿಂದ ಕೆಲವು ಸರ್ಕಾರಿ ಕಚೇರಿಯ ಕೆಲಸ ಗಳು ಸರಾಗವಾಗಿ ಆಗುತ್ತದೆ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿರುತ್ತದೆ. ವಿದೇಶಿ ವ್ಯವಹಾರ ಮಾಡುವವರಿಗೆ ಧನ ಅಭಿವೃದ್ಧಿ ಇರುತ್ತದೆ. ಉಪಾ ಧ್ಯಾಯರುಗಳಿಗೆ ಅವರ ವೃತ್ತಿಯಲ್ಲಿದ್ದ ತೊಡಕುಗಳು ನಿವಾರಣೆಯಾಗುತ್ತವೆ. ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3
ಮೀನ
ಸ್ವಲ್ಪ ಒರಟುತನ ಮನೆ ಮಾಡುತ್ತದೆ. ಮಾತಿನಲ್ಲಿ ಎಲ್ಲರನ್ನೂಗೆಲ್ಲುವ ಶಕ್ತಿಇರುತ್ತದೆ. ನಿಮ್ಮನಡವಳಿಕೆಯ ಮೇಲೆ ಸಂಗಾತಿಯ ಪ್ರಭಾವ ಇರುತ್ತದೆ ಹಾಗೂ ನಿಮ್ಮ ಎಲ್ಲಾ ಕೆಲಸಕಾರ್ಯಗಳಿಗೆ ಅವರ ಸಹಕಾರಸಿಗುತ್ತದೆ. ಹಿರಿಯರ ಸಹಾಯದಿಂದ ಆಸ್ತಿ ಅಭಿವೃದ್ಧಿಯನ್ನು ಮಾಡಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚುಯಶಸ್ಸು ಇರುವುದಿಲ್ಲ. ಸತತವಾಗಿ ತಲೆನೋವಿ ನಿಂದ ಬಳಲುತ್ತಿರುವವರು ವೈದ್ಯರನ್ನು ಕಾಣುವುದು ಉತ್ತಮ. ಹಣದ ಒಳಹರಿವು ನಿರೀಕ್ಷೆಯ ಮಟ್ಟಕ್ಕೆ ಬರುತ್ತದೆ. ಉದ್ಯೋಗದಲ್ಲಿ ಆದಾಯಏರಿಕೆಯಾಗುವ ಸಂದರ್ಭವಿದೆ. ಸರ್ಕಾರಿಕೆಲಸಕಾರ್ಯಗಳಲ್ಲಿಸಾಕಷ್ಟು ಹಿನ್ನಡೆಯಾಗುವ ಲಕ್ಷಣಗಳಿವೆ. ಕ್ರೀಡಾ ಪಟುಗಳಿಗೆ ನಿರೀಕ್ಷಿತ ಸೌಲಭ್ಯ ಅಥವಾ ಅವಕಾಶ ದೊರೆಯದಿರ ಬಹುದು. ಹೊಸ ವ್ಯಾಪಾರ ವ್ಯವಹಾರಗಳಲ್ಲಿ ನಿಮಗೆ ಅವಕಾಶಗಳು ದೊರೆಯುತ್ತವೆ. ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ