ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ವಾರ ಭವಿಷ್ಯ: ಅನಿರೀಕ್ಷಿತವಾಗಿ ಪ್ರೀತಿ ಪ್ರೇಮಕ್ಕೆ ಸಿಲುಕುವಿರಿ..!
Published 2 ಮಾರ್ಚ್ 2024, 23:39 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ವೇದಾಂತದ ಬಗ್ಗೆ ಹೆಚ್ಚು ಆಸಕ್ತಿ ಮೂಡುತ್ತದೆ, ಇದಕ್ಕಾಗಿ ಹಿರಿಯ ವಿದ್ವಾಂಸರುಗಳನ್ನು ಭೇಟಿ ಮಾಡು ವುದಕ್ಕಾಗಿ ಪ್ರಯತ್ನ ಪಡುವಿರಿ. ಧನದಾಯವು ಸರಿ ಇದ್ದರೂ ಅದು ತಲುಪುವುದು ನಿಧಾನವಾಗಬಹುದು. ನಿಮ್ಮ ನಡವಳಿಕೆಗಳಿಂದ ಬಂಧುಗಳ ವಿರೋಧಗಳು ಬಂದರೂಸಹ ಹಾಗೆ ಮುಂದುವರೆಯುವಿರಿ. ತಾಯಿ ಯಿಂದ ಸಿಗುವಸೌಲಭ್ಯ ಕಡಿಮೆಯಾಗುವುದು. ನಿಮ್ಮ ಮಕ್ಕಳಿಗಾಗಿ ಹೆಚ್ಚುಹಣ ಖರ್ಚಾಗುವುದು. ವಿದ್ಯಾರ್ಥಿ ಗಳಿಗೆ ಅವರ ನಿರೀಕ್ಷೆಯ ಪಲಿತಾಂಶದೊರೆಯುವುದು ಕಡಿಮೆ. ಅನುವಂಶಿಯ ಕಾಯಿಲೆಗಳಿಂದ ಬಳಲುತ್ತಿರು ವವರು ಚಿಕಿತ್ಸೆ ತೆಗೆದುಕೊಳ್ಳುವುದು ಒಳ್ಳೆಯದು. ಸಂಗಾತಿಯ ಕಠಿಣ ನಡೆಗಳು ಮುಜುಗರ ತರುತ್ತದೆ. ವೃತ್ತಿಯಲ್ಲಿ ಹಿತ ಶತ್ರುಗಳು ಹೆಚ್ಚಾಗುವ ಸಾಧ್ಯತೆ ಇದೆ. ಜನಸಂಘಟನೆ ಮಾಡುವವರಿಗೆ ಹೆಚ್ಚು ಬೇಡಿಕೆ ಬರು ತ್ತದೆ. ವಿದೇಶಿ ಸಂಸ್ಥೆಗಳಲ್ಲಿ ಹೂಡಿದ್ದ ಹೂಡಿಕೆಗಳ ಮೌಲ್ಯ ಕಡಿಮೆಯಾಗಬಹುದು.
ವೃಷಭ
ದೃಢ ನಿರ್ಧಾರಗಳಿಂದ ನಿಮ್ಮ ಕೆಲಸಗಳನ್ನು ಆಯೋಜಿಸುವಿರಿ. ಧನದಾಯವು ನಿಮ್ಮ ನಿರೀಕ್ಷೆಯ ಹತ್ತಿರಬರುತ್ತದೆ. ನಿಮ್ಮ ಕೆಲವು ಕೆಲಸಗಳಿಗೆ ಸೋದರಿ ಯರಿಂದ ಅಡ್ಡಿ ಬರಬಹುದು. ಕೃಷಿ ಮಾಡುವುದರಲ್ಲಿ ಹೆಚ್ಚು ಆಸಕ್ತಿ ತಡೆಯುವಿರಿ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲವಿರುತ್ತದೆ. ಗರ್ಭಿಣಿ ಸ್ತ್ರೀಯರು ಹೆಚ್ಚು ಎಚ್ಚರ ವಾಗಿರುವುದು ಒಳ್ಳೆಯದು. ಹಣಕಾಸಿನ ವಿಚಾರದಲ್ಲಿ ಕೋರ್ಟ್ ಕಟಕಟೆ ಏರುವ ಸಂದರ್ಭವಿದೆ. ಅನಿರೀಕ್ಷಿತವಾಗಿ ಪ್ರೀತಿ ಪ್ರೇಮಕ್ಕೆ ಸಿಲುಕುವಿರಿ, ಇದಕ್ಕೆ ಹಿರಿಯರ ಒಪ್ಪಿಗೆ ದೊರೆಯು ವುದು ಕಷ್ಟ. ಆಕಸ್ಮಿಕ ಧನಸಹಾಯ ಬಂದರೂ ಬರಬ ಹುದು. ಕೆಲಸದ ಒತ್ತಡಗಳು ಅಧಿಕವಾಗುವ ಸಾಧ್ಯತೆ ಗಳಿವೆ. ವಿದೇಶಿ ವ್ಯವಹಾರಗಳನ್ನು ಮಾಡುವವರಿಗೆ ಹೆಚ್ಚು ಆದಾಯವಿರುತ್ತದೆ. ಆಟೋಮೊಬೈಲ್ ಕ್ಷೇತ್ರ ದಲ್ಲಿ ಸಂಶೋಧನೆ ಮಾಡುತ್ತಿರುವವರಿಗೆ ಹೆಚ್ಚಿನ ಸಹಕಾರ ದೊರೆಯುತ್ತದೆ.
ಮಿಥುನ
ಬಹಳ ವರ್ಣ ರಂಜಿತವಾಗಿ ಮಾತನಾಡುವಿರಿ. ಹೀಗಾಗಿ ಹೆಚ್ಚುಜನರು ನಿಮ್ಮತ್ತ ಆಕರ್ಷಿಸಲ್ಪಡುವರು. ದನಾದಾಯವು ಮುಂದಗತಿಯಲ್ಲಿರುತ್ತದೆ. ನಿಮ್ಮೆಲ್ಲಾ ಕೆಲಸಕಾರ್ಯಗಳ ಮೇಲೆ ಹಿರಿಯರಿಂದ ಸ್ವಲ್ಪ ಒತ್ತಡ ಬರಬಹುದು. ಆಸ್ತಿ ವಿಚಾರದಲ್ಲಿ ಮುಂದುವರೆಯು ವುದು ಬೇಡ. ಮಕ್ಕಳು ನಿಮ್ಮ ಮಾತಿಗೆ ಗೌರವ ನೀಡ ದಿರಬಹುದು. ಶೀತ ಬಾದೆ ಇರುವವರು ಹೆಚ್ಚು ಎಚ್ಚರ ವಹಿಸಿರಿ. ಸಂಗಾತಿಯಿಂದ ನಿಮಗೆ ಆರ್ಥಿಕ ಸಹಾಯ ದೊರೆಯುತ್ತದೆ. ಸಂಗಾತಿಯ ತಡೆಯ ಬಂಧುಗಳಿಗೆ ಧನಸಹಾಯ ಮಾಡಬೇಕಾದ ಅನಿವಾರ್ಯತೆ ಇರು ತ್ತದೆ. ಹಿರಿಯರ ವ್ಯಾಪಾರಗಳಲ್ಲಿ ನಿಮಗೆ ಸ್ಥಾನಸಿಗು ತ್ತದೆ. ವಿದೇಶಿ ವ್ಯವಹಾರವನ್ನೇ ವೃತ್ತಿಯಾಗಿಸಿಕೊಂಡ ವರಿಗೆ ಕೈ ತುಂಬಾ ಕೆಲಸವಿರುತ್ತದೆ. ಹಣಕಾಸು ಸಂಸ್ಥೆ ಗಳ ಮುಖ್ಯಸ್ಥರಿಗೆ ಇನ್ನೂ ಹೆಚ್ಚಿನ ಸ್ಥಾನ ಸಿಗಬಹುದು. ಸಂಗಾತಿಯ ಸಂತೋಷಕ್ಕಾಗಿ ವಿಹಾರಕ್ಕಾಗಿ ಹೋಗಿ ಬರುವಿರಿ.
ಕರ್ಕಾಟಕ
ಆಲಸೀತನವನ್ನು ಬದಿಗೊತ್ತಿ ಕೆಲಸ ಕಾರ್ಯ ಆರಂಭಿಸುವಿರಿ. ಧಮದಾಯವು ಮಧ್ಯಮ ಗತಿಯಲ್ಲಿರುತ್ತದೆ. ಸರ್ಕಾರದಿಂದ ಬರಬೇಕಾಗಿದ್ದ ಸಹಾಯಧನಗಳು ಈಗ ಬರುತ್ತದೆ. ನಿಮ್ಮಮೌನವನ್ನು ಜನರು ದುರುಪಯೋಗ ಮಾಡಿಕೊಳ್ಳಬಹುದು. ಸಂಸಾರದಲ್ಲಿ ಸುಖವಿದ್ದರೂ ಸಂಗಾತಿಯಿಂದ ಕೆಲವು ಕಿರಿಕಿರಿಗಳು ಆಗಬಹುದು. ಆಸ್ತಿ ಕೊಳ್ಳಲು ಹಣವನ್ನು ಈಗ ಒಟ್ಟು ಮಾಡಬಹುದು. ಕೃಷಿಯನ್ನು ಓದುತ್ತಿರು ವವರಿಗೆ ಹೆಚ್ಚು ಅಭಿವೃದ್ಧಿ ಇರುತ್ತದೆ. ಅನಾರೋಗ್ಯ ದಿಂದ ದೇಹಾಲಸ್ಯ ಉಂಟಾಗಿ ವೃತ್ತಿಗೆ ಸ್ವಲ್ಪ ವಿಶ್ರಾಂತಿ ಕೊಡುವಿರಿ. ಕೃಷಿಯಿಂದ ಹೆಚ್ಚು ಆದಾಯವನ್ನು ಕಾಣಬಹುದು. ಅನಿರೀಕ್ಷಿತ ಚಿಂತೆಗಳಿಂದ ಮನಸ್ಸು ಗೊಂದಲದ ಗೂಡಾಗುತ್ತದೆ. ರಾಜಕಾರಣಿಗಳಿಗೆ ಅವರ ಹಿಂಬಾಲಕರ ಮೇಲೆ ಅನುಮಾನ ಬರುವ ಸಾಧ್ಯತೆ ಇದೆ. ತಂದೆ ಮಾಡುತ್ತಿದ್ದ ವಿದೇಶಿ ವ್ಯವಹಾರ ಗಳು ನಿಮಗೆ ವರ್ಗಾ ವಣೆಯಾಗಬಹುದು.
ಸಿಂಹ
ಕೆಲಸ ಕಾರ್ಯಗಳನ್ನು ದ್ವಂದ್ವ ಮನಸ್ಸಿನಿಂದ ಆರಂಭಿಸಬೇಡಿರಿ. ಇದರಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿಯಾಗುವುದಿಲ್ಲ. ಧನದಾಯವು ನಿರೀಕ್ಷಿತ ಮಟ್ಟ ದಲ್ಲಿ ಇರುವುದಿಲ್ಲ. ನಿಮ್ಮ ನಡವಳಿಕೆಯಿಂದ ಧನನಷ್ಟ ಆಗುವ ಸಂದರ್ಭವಿದೆ. ಸ್ಥಿರಾಸ್ತಿಯನ್ನು ಕೊಳ್ಳುವ ವಿಚಾರದಲ್ಲಿ ಮುಂದುವರೆಯಬಹುದು. ವಿದ್ಯಾರ್ಥಿಗ ಳಿಗೆ ಅಧ್ಯಯನದಲ್ಲಿ ಹೆಚ್ಚಿನಯಶಸ್ಸು ದೊರೆಯುತ್ತದೆ. ಸಂಸಾರದಲ್ಲಿ ಸಂತೋಷದಷ್ಟೇ ಕಿರಿಕಿರಿಗಳುಇರುತ್ತವೆ. ವೃತ್ತಿಯ ಜಾಗದಲ್ಲಿ ಕೆಲಸಗಳಾದರೂ ಮುಸುಕಿನ ಗುದ್ದಾಟಗಳಿರುತ್ತವೆ. ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತಲಾಭ ಬರದಿರಬಹುದು.ತಾಯಿಯಆರೋಗ್ಯ ಕ್ಕಾಗಿ ಹಣ ಖರ್ಚಾಗುತ್ತದೆ. ವಿದೇಶಿ ವ್ಯವಹಾರವನ್ನು ಮಾಡುವ ಕಂಪನಿಗಳಿಗೆ ತೊಡಕುಗಳು ಎದುರಾಗುವ ಸಾಧ್ಯತೆಯಿದೆ. ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ವರಿಗೆ ಹೆಚ್ಚಿನ ಅಭಿವೃದ್ಧಿ ಇದ್ದು ಹೊಸ ಶಾಖೆಗಳನ್ನು ತೆರೆಯುವಸಾಧ್ಯತೆಗಳಿವೆ.
ಕನ್ಯಾ
ಅತಿಯಾಗಿ ದೇವರ ಮೊರೆ ಹೋಗುವಿರಿ. ಧನದಾಯವು ಮಧ್ಯಮಗತಿಯಲ್ಲಿರುತ್ತದೆ. ನಿಮ್ಮ ನಡವಳಿಕೆಯಲ್ಲಿ ಹೆಚ್ಚು ನಾಟಕವಿರುವುದು ಜನರಿಗೆ ತಿಳಿಯುತ್ತದೆ. ನಿಮ್ಮ ಕೆಲಸಗಳಿಗೆ ಸ್ತ್ರೀಯರು ಅಡ್ಡಿ ಪಡಿಸಬಹುದು. ಆಸ್ತಿಕೊಳ್ಳಲು ಇಟ್ಟ ದುಡ್ಡು ಬೇರೆ ಕಾರಣಗಳಿಗಾಗಿ ಖರ್ಚಾಗಬಹುದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯತ್ನದಲ್ಲಿ ಅರ್ಧ ಪಲಿತಾಂಶ ದೊರೆಯು ತ್ತದೆ. ಮೂಳೆಗಳಲ್ಲಿ ತೊಂದರೆ ಅಥವಾ ಹೊಟ್ಟೆಯಲ್ಲಿ ತೊಂದರೆ ಇರುವವರು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿರಿ. ಸಂಗಾತಿಯ ಅಧಿಕಾರಯುತ ನಡವಳಿಕೆ ನಿಮಗೆ ಸ್ವಲ್ಪ ಬೇಸರತರಿಸಬಹುದು. ವಿದ್ಯಾ ಸಂಸ್ಥೆಗಳಿಗೆ ನಿರೀಕ್ಷಿತ ಸಹಾಯಧನಗಳು ಬಾರದಿರಬಹುದು. ಹಿರಿಯರಿಂದ ಸಂಸಾರಕ್ಕೆ ಬೇಕಾಗುವ ಸೌಲಭ್ಯಗಳು ಈಗ ದೊರೆಯ ಬಹುದು. ವೃತ್ತಿಯಲ್ಲಿ ನಿರೀಕ್ಷಿತ ಯಶಸ್ಸು ಇಲ್ಲದಿದ್ದರೂ ತೊಂದರೆ ಇರುವುದಿಲ್ಲ.
ತುಲಾ
ನಿಮ್ಮದೇ ಆದ ಕಾರಣಗಳಿಗಾಗಿ ದೇವರ ಮೊರೆ ಹೋಗುವಿರಿ. ಹಣದ ಒಳಹರಿವು ನಿಮ್ಮ ನಿರೀ ಕ್ಷೆಯ ಹತ್ತಿರ ಬರುತ್ತದೆ. ನಿಮ್ಮ ನಡವಳಿಕೆಯನ್ನು ಬದ ಲಾಯಿಸಿಕೊಂಡು ಜನರ ಬೆಂಬಲ ಪಡೆಯಲು ಯತ್ನಿ ಸುವಿರಿ. ಆಸ್ತಿಯನ್ನುಕೊಳ್ಳಲು ಹಣ ಒಟ್ಟು ಮಾಡಬ ಹುದು. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲದೊರೆಯು ತ್ತದೆ. ನಿಮ್ಮ ಮಕ್ಕಳಿಗಾಗಿ ಹಣವನ್ನು ಖರ್ಚು ಮಾಡ ಬೇಕಾದ ಪರಿಸ್ಥಿತಿ ಇರುತ್ತದೆ.ಕೀಲುಗಳಲ್ಲಿನ ತೊಂದರೆ ಅಥವಾ ಚರ್ಮರೋಗಗಳು ಕೆಲವರನ್ನು ಸ್ವಲ್ಪ ಕಾಡಬ ಹುದು. ಸಂಗಾತಿಯ ಕಡೆಯವರಿಂದ ನಿಮಗೆ ಧನ ಸಹಾಯ ಆಗಬಹುದು. ಸರ್ಕಾರಿ ಕೆಲಸಗಳಿಂದ ಬರ ಬೇಕಾಗಿದ್ದ ಕಮಿಷನ್ ಹಣ ಈಗ ಬರುತ್ತದೆ.ಹೆಂಗಸ ರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿ ಬರುವ ಸಾಧ್ಯತೆಯ ಜೊತೆಗೆ ಅಗೌರವ ಸಹ ಆಗಬಹುದು. ತಂದೆಯ ವ್ಯಾಪಾರದಲ್ಲಿ ನಿಮಗೆ ಅವಕಾಶ ದೊರೆ ಯುವ ಸಾಧ್ಯತೆ ಇದೆ
ವೃಶ್ಚಿಕ
ವಾರದ ಆರಂಭ ಆನಂದದಾಯಕವಾಗಿರುತ್ತದೆ. ಧನಾದಾಯವು ನಿರೀಕ್ಷಿತಪ್ರಮಾಣದಲ್ಲಿ ಇರುವುದಿಲ್ಲ. ನಿಮ್ಮ ಚಟುವಟಿಕೆಗಳಿಗೆ ಬಂಧುಗಳಲ್ಲಿನ ಸ್ತ್ರೀಯರು ಅಡ್ಡಿಮಾಡುವ ಸಾಧ್ಯತೆಇದೆ.ಸ್ತಿರಾಸ್ತಿಯನ್ನುಮಾಡುವ ವಿಚಾರದಲ್ಲಿ ಹೆಚ್ಚು ಮುಂದುವರೆಯುವುದು ಬೇಡ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲವಿರುತ್ತದೆ. ಆಟೋ ಮೊಬೈಲ್ ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚಿನ ಯಶಸ್ಸು ಇರುತ್ತದೆ. ಉದರ ಸಂಬಂಧಿ ಕಾಯಿಲೆಗಳು ನಿಮ್ಮನ್ನು ಕಾಡಬಹುದು. ನಿಮ್ಮಚಟುವಟಿಕೆಗಳಿಗೆ ಸಂಗಾತಿಯು ಸಂಪೂರ್ಣ ಬೆಂಬಲ ಕೊಡುವರು. ಧರ್ಮ ಪ್ರಚಾರ ಮಾಡುವವರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ. ಸಂಗಾತಿಗೆ ಕೃಷಿಜಮೀನು ಈಗದೊರೆ ಯುವ ಸಾಧ್ಯತೆ ಇದೆ.ಸಂಗಾತಿಯ ಆದಾಯದಲ್ಲಿಸ್ವಲ್ಪ ಮಟ್ಟಿನ ಹೆಚ್ಚಳವನ್ನು ಕಾಣಬಹುದು. ಗಣಿಗಾರಿಕೆ ಮಾಡುವವರಿಗೆ ಪ್ರೋತ್ಸಾಹ ದೊರೆಯುವ ಸಾಧ್ಯತೆ ಇದೆ.
ಧನು
ನಿಮ್ಮ ವ್ಯಕ್ತಿತ್ವದಲ್ಲಿ ಒಂದು ರೀತಿಯ ಗಾಂಭೀರ್ಯತೆ ಇರುತ್ತದೆ. ಧನಾದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ಮೃದುವಾಗಿ ಮಾತನಾಡಿದರು ಸಹ ನೀವು ತಿಳಿಸಬೇಕಾದ ಅಂಶವನ್ನು ಸರಿಯಾಗಿ ತಿಳಿಸು ವಿರಿ. ಬಂಧುಗಳು ನಿಮ್ಮ ಬಗ್ಗೆ ಅಸೂಯೆಯಿಂದ ಮಾತನಾಡುವರು. ವಿದೇಶದಲ್ಲಿ ವಾಸಿಸುತ್ತಿರುವವರು ಈಗ ರಾಸ್ತಿಯನ್ನುಮಾಡಿಕೊಳ್ಳಬಹುದು.ವಿದ್ಯಾರ್ಥಿ ಗಳಿಗೆ ಬಹಳ ಹೆಚ್ಚಿನಯಶಸ್ಸು ಇರುತ್ತದೆ. ಬಾಯಿಯ ಹುಣ್ಣು ಅಥವಾ ಹಲ್ಲಿನಲ್ಲಿ ತೊಂದರೆಗಳು ಕಾಣಿಸಬ ಹುದು. ಸಂಗಾತಿಯ ಸಹಾಯದಿಂದ ಸರ್ಕಾರಿಮಟ್ಟದ ಕೆಲಸಗಳಲ್ಲಿಅನುಕೂಲವಾಗುತ್ತದೆ.ರಾಜಕಾರಣಿಗಳಿಗೆ ಸರ್ಕಾರದ ಮಟ್ಟದಲ್ಲಿ ಒಂದು ಸ್ಥಾನ ಸಿಗುವ ಸಾಧ್ಯತೆ ಗಳಿವೆ. ಸಂಗಾತಿಯು ನಿಮ್ಮ ವ್ಯವಹಾರಗಳಿಗೆ ಬಂಡ ವಾಳ ಹೂಡುವರು. ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭ ಕ್ಕಿಂತ ಸ್ವಲ್ಪಕಡಿಮೆ ಲಾಭ ಬರಬಹುದು.
ಮಕರ
ದೇಹ ಸೌಷ್ಠವವನ್ನು ಸಾಕಷ್ಟು ಕಾಪಾಡಿ ಕೊಳ್ಳುವಿರಿ. ಆದಾಯವು ಚೇತರಿಕೆಯಾಗಿ ನಿಮ್ಮ ಅಗತ್ಯವನ್ನು ಪೂರೈಸುವಷ್ಟಿರುತ್ತದೆ. ನಿಮ್ಮ ವಿರೋಧಿ ಬಂಧುಗಳು ನಿಮ್ಮ ನಡವಳಿಕೆಗಳನ್ನು ಅರ್ಥಮಾಡಿ ಕೊಳ್ಳಲಾಗದೆ ಒದ್ದಾಡುವರು.ಭೂಮಿ ವ್ಯಾಪಾರವನ್ನು ಮಾಡುವವರಿಗೆ ಸಾಕಷ್ಟು ಲಾಭವಿರುತ್ತದೆ. ಸಂಸಾರ ದಲ್ಲಿ ಸಂತೋಷವಿರುತ್ತದೆ. ಬರಲಾರದೆಂದುಕೊಂಡಿದ್ದ ಹಣ ಈಗ ವಾಪಸ್ಸು ಬಂದು ಸಂತೋಷವಾಗುತ್ತದೆ. ವಿದ್ಯಾರ್ಥಿಗಳಿಗೆ ಸಾಮಾನ್ಯವಾದ ಯಶಸ್ವಿರುತ್ತದೆ.ನರ ದೌರ್ಬಲ್ಯ ಇರುವವರು ಹಾಗೂ ಗಂಟಲಿನ ತೊಂದರೆ ಇರುವವರು ಎಚ್ಚರ ವಹಿಸಿರಿ. ಸಂಗಾತಿಯ ಹೂಡಿಕೆ ಗಳು ಲಾಭವನ್ನು ತರುತ್ತವೆ. ಸರ್ಕಾರಿ ಸಂಸ್ಥೆಗಳ ಜೊತೆಗಿನ ವ್ಯವಹಾರಗಳಲ್ಲಿ ಲಾಭ ಇರುವುದಿಲ್ಲ. ಪಾಲುದಾರಿಕೆಯ ವ್ಯವಹಾರಗಳಲ್ಲಿ ನಿಮ್ಮ ಮಾತಿಗೆ ಮಹತ್ವ ಬಂದು ನಿಮಗೆ ಉನ್ನತ ಸ್ಥಾನ ಸಿಗುತ್ತದೆ.
ಕುಂಭ
ಹಿರಿಯರು ಅವರ ಧೀಮಂತ ವ್ಯಕ್ತಿತ್ವದಿಂದ ಪ್ರಕಾಶಿಸುವರು. ಹಣದ ಒಳಹರಿವು ಮಂದಗತಿಯಲ್ಲಿ ರುತ್ತದೆ. ವಯಸ್ಕರು ಮಾತನಾಡುವಾಗ ಬಹಳಎಚ್ಚರಿ ಕೆಯಿಂದ ಮಾತನಾಡುವುದು ಒಳ್ಳೆಯದು. ಕೆಲವು ಹಿರಿಯರಿಗೆ ಉತ್ತಮ ವಿದ್ವಾಂಸರ ಸಾಂಗತ್ಯ ದೊರೆ ಯುವ ಸಾಧ್ಯತೆಗಳಿವೆ. ಭೂಮಿಯ ಮೇಲೆ ಹೂಡಿಕೆ ಮಾಡುವುದು ಸದ್ಯದ ಪರಿಸ್ಥಿತಿಯಲ್ಲಿ ಲಾಭಕರವಲ್ಲ. ವಿದ್ಯಾರ್ಥಿಗಳಿಗೆ ಮಧ್ಯಮ ದರ್ಜೆಯ ಪಲಿತಾಂಶವಿರು ತ್ತದೆ. ಕಾನೂನು ವಿದ್ಯಾರ್ಥಿಗಳಿಗೆ ಹೆಚ್ಚಿನ ಲಾಭವಿರು ತ್ತದೆ. ಉದ್ಯೋಗ ಸ್ಥಳದಲ್ಲಿ ಮಹಿಳಾ ಮೇಲಧಿಕಾರಿ ಗಳಿಂದ ತೊಂದರೆಯಾಗಬಹುದು. ಸಂಗಾತಿಗೆ ರಾಜ ಕೀಯ ಸ್ಥಾನಮಾನಸಿಗುವ ಸಾಧ್ಯತೆಗಳಿವೆ.ಉದ್ಯೋಗ ರಹಿತರಿಗೆ ತಾಯಿಯುಉದ್ಯೋಗಕೊಡಿಸಲುಸಾಕಷ್ಟು ಶ್ರಮಪಡುವರು. ಬಿತ್ತನೆಬೀಜವನ್ನು ಮಾರಾಟಮಾಡು ವವರಿಗೆ ಲಾಭವಿರುತ್ತದೆ. ಆಧುನಿಕ ಕೃಷಿ ಮಾಡುವವ ರಿಗೆ ಸಹಾಯಧನಗಳು ಸಿಗುತ್ತವೆ.
ಮೀನ
ನಿಮ್ಮ ವ್ಯಕ್ತಿತ್ವದಲ್ಲಿ ನಿಗೂಢತೆ ಅಡಗಿರುತ್ತದೆ. ಧನಾದಾಯವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ನಿಮ್ಮ ಬಂಧುಗಳಲ್ಲಿನ ಸ್ತ್ರೀಯರು ನಿಮಗೆ ತೊಂದರೆ ಕೊಡಬ ಹುದು. ಸ್ಥಿರಾಸ್ತಿಯ ಮೇಲೆ ಹೂಡಿದ ಧನ ಮೋಸವಾ ಗುವ ಸಾಧ್ಯತೆಗಳಿವೆ, ಎಚ್ಚರವಹಿಸಿರಿ.ವಿದ್ಯಾರ್ಥಿಗಳಿಗೆ ಸಾಮಾನ್ಯ ಯಶಸ್ಸು ಇರುತ್ತದೆ. ಕೃಷಿ ಅಥವಾ ಪಶು ಸಂಗೋಪನೆಯನ್ನು ಅಭ್ಯಾಸ ಮಾಡುತ್ತಿರುವವರಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ಸರ್ಕಾರಿ ಕೆಲಸಗಳಲ್ಲಿ ನಿಧಾನ ಗತಿ ಇರುತ್ತದೆ. ನಿಮ್ಮ ಮಕ್ಕಳ ಅವಶ್ಯಕತೆ ಪೂರೈಸಲು ಹಣಖರ್ಚಾಗುತ್ತದೆ. ಸಂಗಾತಿಯ ಸಾಂಪ್ರ ದಾಯಿಕತೆ ನಿಮಗೆ ಬೇಸರತರಿಸುತ್ತದೆ. ಸರ್ಕಾರಿ ಗುತ್ತಿ ಗಳನ್ನು ಮಾಡುವವರಿಗೆ ಹಾಗೂ ಸರ್ಕಾರಿ ಸಂಸ್ಥೆಗಳ ಜೊತೆ ವ್ಯವಹಾರ ಮಾಡುವವರಿಗೆ ಆದಾಯ ಹೆಚ್ಚು ತ್ತದೆ. ಕಾಲು ನೋವುಗಳು ಕೆಲವರಿಗೆ ಕಾಡಬಹುದು. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಸ್ಥಾನಮಾನ ಅರಿತು ಮಾತನಾಡುವುದು ಬಹಳ ಒಳ್ಳೆಯದು.