ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ವಾರ ಭವಿಷ್ಯ: ಸ್ತ್ರೀಯರು ನಡೆಸುವ ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿ ಇರುತ್ತದೆ
Published 7 ಜನವರಿ 2024, 0:46 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಗೌರವಹಿತವಾಗಿ ಇರಲು ಬಹಳ ಪ್ರಯತ್ನ ಪಡುವಿರಿ. ದನದಾಯವು ಮಧ್ಯಮಗತಿಯಲ್ಲಿರುತ್ತದೆ. ನಿಮ್ಮನಡವಳಿಕೆ ನಿಮ್ಮ ಸ್ವಂತ ಅನುಕೂಲಕ್ಕೆ ತಕ್ಕಂತೆ ಇರುತ್ತದೆ. ಸಂಸಾರದಲ್ಲಿ ಸಂತೋಷವಿರುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ದೊರೆಯುತ್ತದೆ. ಹೊಟ್ಟೆಯಲ್ಲಿ ಸ್ವಲ್ಪ ವ್ಯತ್ಯಾಸಗಳು ಅಥವಾ ಅಜೀರ್ಣ ಆಗುವ ಸಾಧ್ಯತೆ ಇದೆ. ಸಂಗಾತಿಯು ತಮ್ಮ ಕಾರ್ಯ ಸಾಧನೆಗಾಗಿ ನಿಮ್ಮನ್ನು ಓಲೈಸುವರು. ಸಂಸಾರಕ್ಕಾಗಿ ಹೆಚ್ಚು ಹಣ ಖರ್ಚಾಗುತ್ತದೆ. ಸರ್ಕಾರಿ ಕಚೇರಿಯ ಕೆಲಸಕಾರ್ಯಗಳಲ್ಲಿ ಹಿನ್ನಡೆ ಇರುತ್ತದೆ. ತಂದೆಯ ವ್ಯವಹಾರಗಳಲ್ಲಿ ನಿಮಗೆ ಪ್ರಮುಖಸ್ಥಾನ ಸಿಗಲಿದೆ. ವೃತ್ತಿಯಲ್ಲಿ ಸಹೋದ್ಯೋಗಿಗಳ ಸಹಕಾರ ಹೆಚ್ಚು ದೊರೆಯುತ್ತದೆ. ಕಬ್ಬಿಣದ ವ್ಯಾಪಾರ ಮಾಡುವವರಿಗೆ ನೆಚ್ಚಿನ ಲಾಭವಿರುತ್ತದೆ. ಕೆಲವು ರಾಜಕೀಯ ನಾಯಕ ರುಗಳಿಗೆ ಕಳೆದುಹೋಗಿದ್ದ ಜನ ಬೆಂಬಲ ದೊರೆಯು ತ್ತದೆ. ವಿದೇಶದಿಂದ ವಾಪಸ್ ಬರಬೇಕೆನ್ನುವವರಿಗೆ ಸೂಕ್ತ ಅನುಕೂಲಗಳು ದೊರೆಯುತ್ತವೆ.
ವೃಷಭ
ನಿಮ್ಮ ಬುದ್ಧಿವಂತಿಕೆಗೆ ಬೆಲೆ ದೊರೆಯುತ್ತದೆ. ಹಣದ ಒಳಹರಿವು ಮಧ್ಯಮ ಗತಿಯಲ್ಲಿರುತ್ತದೆ.ಮಾತ ನಾಡುವಾಗ ಸ್ವಲ್ಪಎಚ್ಚರವಿರಲಿ, ಅದರಲ್ಲೂ ಸಮೂಹ ದಲ್ಲಿ ಮಾತನಾಡುವಾಗ ಹೆಚ್ಚು ಎಚ್ಚರ ಇರಲಿ. ನಿಮ್ಮ ತಾಯಿಗಾಗಿ ಹೆಚ್ಚು ಹಣ ಖರ್ಚು ಮಾಡುವಿರಿ. ಸ್ವಂತ ಪ್ರತಿಷ್ಠೆಗಾಗಿ ಸಂಸಾರದಲ್ಲಿ ಗೊಂದಲಗಳು ಏಳುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿನಿರೀ ಕ್ಷಿತ ಫಲಿತಾಂಶ ಇರುವುದಿಲ್ಲ. ಸಂಗಾತಿಯು ನಡೆಸುವ ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಲಾಭವಿರುತ್ತದೆ. ಹಿರಿಯರ ಆಸ್ತಿ ಒದಗುವಸಾಧ್ಯತೆ ಇದೆ. ರಾಜಕೀಯ ನಾಯಕರುಗಳು ಹಿರಿಯರ ಹೆಸರುಗಳನ್ನು ಹೇಳಿ ಕೊಂಡು ರಾಜಕೀಯ ಮಾಡಬಹುದು. ವಿದೇಶಿ ವ್ಯವ ಹಾರಮಾಡುವವರಿಗೆ ಹೆಚ್ಚಿನ ಲಾಭವಿರುತ್ತದೆ. ಧರ್ಮ ಕಾರ್ಯಗಳಿಗೆ ಹೆಚ್ಚು ಹಣ ಖರ್ಚಾಗುತ್ತದೆ.ಸರ್ಕಾರಿ ಕೆಲಸ ಕಾರ್ಯಗಳಲ್ಲಿ ನಿಧಾನ ಗತಿಯನ್ನು ಕಾಣಬಹುದು.
ಮಿಥುನ
ವಾರದ ಆರಂಭದಲ್ಲಿ ಆಲಸ್ಯವು ನಿಮ್ಮನ್ನು ಆವರಿಸಿಕೊಳ್ಳುತ್ತದೆ. ಉಪನ್ಯಾಸಕರಿಗೆ ಸಂಗೀತಗಾರ ರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ನಿಮ್ಮ ನಡವಳಿಕೆಯಿಂದ ಜನರನ್ನುಗೆಲ್ಲುವಿರಿ.ಆರೋಗ್ಯಕ್ಕಾಗಿ ವ್ಯಾಯಾಮ ಮಾಡುವಿರಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ನರ ದೌರ್ಬಲ್ಯ ಇರುವವರು ಹೆಚ್ಚು ಎಚ್ಚರಿಕೆ ವಹಿಸಿರಿ. ಸಂಗಾತಿಗೆ ಉತ್ತಮ ಕೆಲಸ ದೊರೆಯುವ ಸಾಧ್ಯತೆ ಇದೆ. ಕೃಷಿಕರಿಗೆ ಅನಿರೀಕ್ಷಿತ ಲಾಭವಿರುತ್ತದೆ. ಹಿರಿಯರ ಕೃಷಿ ಭೂಮಿಗಳು ನಿಮಗೆ ಸಿಗುತ್ತವೆ ಅಥವಾ ನೀವು ಕೊಳ್ಳಬಹುದು.ವಿದೇಶದಲ್ಲಿ ಉದ್ಯೋಗದಲ್ಲಿರುವವರಿಗೆ ಆಸೆಪಟ್ಟಿದ್ದವಾಹನವನ್ನು ಕೊಳ್ಳುವ ಯೋಗವಿದೆ. ಅಲ್ಲಿ ಕೆಲಸಮಾಡುತ್ತಿರುವ ಆಟೊ ಮೊಬೈಲ್ ತಜ್ಞರಿಗೆ ಉನ್ನತ ಸ್ಥಾನ ಸಿಗುವ ಸಾಧ್ಯತೆ ಇದೆ.
ಕರ್ಕಾಟಕ
ಕುಟುಂಬದ ಬಗ್ಗೆ ಹೆಚ್ಚು ಕಾಳಜಿ ವಹಿಸುವಿರಿ. ಹಿರಿಯರಿಗಾಗಿ ಹೆಚ್ಚು ಹಣ ಖರ್ಚು ಮಾಡುವಿರಿ, ಇಲ್ಲವೇ ಸರ್ಕಾರಕ್ಕೆ ದಂಡದ ರೀತಿಯಲ್ಲಿ ಹಣವನ್ನು ಕಟ್ಟಬೇಕಾಗಬಹುದು. ಧನದಾಯವು ಸಾಮಾನ್ಯ ಗತಿ ಯಲ್ಲಿರುತ್ತದೆ. ಧಾರ್ಮಿಕ ಕಾರ್ಯಗಳ ಬಗ್ಗೆ ಹಾಗೂ ಧಾರ್ಮಿಕಚಿಂತನೆಗಳ ಬಗ್ಗೆಹೆಚ್ಚುಒಲವುಮೂಡುತ್ತದೆ. ಕೃಷಿಕರಿಗೆ ಮಧ್ಯಮ ಗತಿಯ ಆದಾಯವಿರುತ್ತದೆ. ಹೈನುಗಾರಿಕೆ ಮಾಡುವವರಿಗೆ ಹೆಚ್ಚಿನ ಆದಾಯವಿಲ್ಲ ದಿದ್ದರೂ ನಷ್ಟವಿರುವುದಿಲ್ಲ. ವಿದ್ಯಾರ್ಥಿಗಳಿಗೆ ಅವರು ಅಪೇಕ್ಷಿಸಿದ ಪಲಿತಾಂಶ ದೊರೆಯುವ ಸಾಧ್ಯತೆ ಇದೆ. ಸ್ತ್ರೀಯರು ನಡೆಸುವ ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಸ್ವಯಂ ಉದ್ಯೋಗ ಮಾಡು ವವರಿಗೆ ಹೆಚ್ಚಿನ ಲಾಭವಿರುತ್ತದೆ. ಸಂಗಾತಿ ಯೊಡನೆ ಕಾವೇರಿದ ವಾತಾವರಣಗಳು ಏರ್ಪಡ ಬಹುದು, ಆದರೂ ನಂತರ ಸರಿಯಾಗುತ್ತದೆ. ಕೆಲವು ರಾಜಕೀಯ ನಾಯಕರುಗಳಿಗೆ ಅನಿರೀಕ್ಷಿತ ಪ್ರಗತಿ ಇರುತ್ತದೆ.
ಸಿಂಹ
ಕ್ರೀಡಾಪಟುಗಳಿಗೆ ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗ ಅಥವಾ ಗೌರವ ದೊರೆಯುತ್ತದೆ. ನಿಮ್ಮ ಆತ್ಮ ಗೌರವೂ ಸಹ ಹೆಚ್ಚಾಗಿರುತ್ತದೆ. ಧನದಾಯವೂ ಮಂದಗತಿಯಲ್ಲಿರುತ್ತದೆ. ಅತ್ಯಂತಚುರುಕಾಗಿ ಓಡಾಡಿ ನಿಮ್ಮ ಕೆಲಸಗಳನ್ನು ಸಾಧಿಸಿಕೊಳ್ಳುವಿರಿ. ಭೂಮಿಯ ವ್ಯವಹಾರವನ್ನು ಮಾಡುವವರಿಗೆ ಹೆಚ್ಚಿನ ಆದಾಯ ವಿರುತ್ತದೆ.ವಿದ್ಯಾರ್ಥಿಗಳಿಗೆ ಯಶಸ್ಸು ಇರುತ್ತದೆ, ಅದ ರಲ್ಲೂ ಜೀವ ವಿಜ್ಞಾನ ಮತ್ತು ಕ್ರೀಡಾ ಕಲಿಕೆ ಮಾಡುವ ವರಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಸೌಲಭ್ಯ ದೊರೆಯು ತ್ತದೆ. ಹಿರಿಯರ ಮಾರ್ಗದರ್ಶನದಂತೆ ನಡೆದ ಕೃಷಿ ಕೆಲಸಗಳಲ್ಲಿ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಕೆಲವರಿಗೆ ಸಾಲಗಾರರ ಕಾಟ ಹೆಚ್ಚಾಗುವ ಸಾಧ್ಯತೆಯಿದೆ. ನಿಮ್ಮ ಸಂಗಾತಿ ಕೋಪಗೊಂಡರೂ ಸಹ ನಿಮ್ಮ ಒಳಿತಿಗಾಗಿ ದುಡಿಯುವವರು. ನಿಮ್ಮ ವ್ಯವಹಾರವನ್ನು ಸುಸ್ಥಿತಿಗೆ ತರಲು ಸಾಕಷ್ಟು ಮಾರ್ಗೋಪಾಯಗಳನ್ನುಹಿರಿಯರು ಸೂಚಿಸುವರು.
ಕನ್ಯಾ
ಸೂಕ್ತ ನಿರ್ಧಾರಗಳಿಲ್ಲದೆ ಗೊಂದಲಕ್ಕೆ ಗುರಿ ಯಾಗುವಿರಿ, ದೃಢ ನಿರ್ಧಾರಗಳು ಎಂದಿಗೂ ಒಳಿತು. ಹಣದ ಒಳಹರಿವು ನಿಮ್ಮ ಅಗತ್ಯಕ್ಕೆ ತಕ್ಕಂತೆ ಇರುತ್ತದೆ. ಬಹಳ ಬುದ್ಧಿವಂತಿಕೆಯಿಂದ ವರ್ತಿಸಿ ನಿಮ್ಮ ಕೆಲಸಗ ಳನ್ನು ಸಾಧಿಸಿಕೊಳ್ಳುವಿರಿ. ದಿನಸಿ ವ್ಯಾಪಾರಿಗಳಿಗೆ ಹೆಚ್ಚಿನ ವ್ಯಾಪಾರವಾಗುತ್ತದೆ.ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿ ಗಳಿಗೆ ಹೆಚ್ಚಿನ ಅಭಿವೃದ್ಧಿ ಇದೆ. ಸಾಮಾನ್ಯ ವಿದ್ಯಾರ್ಥಿ ಗಳಿಗೆ ಯಶಸ್ಸು ಸಹ ಇದೆ. ಸಿಗಬೇಕಾದ ಗೌರವಗಳು ಕೈತಪ್ಪಿ ಹೋಗುವ ಸಾಧ್ಯತೆಗಳಿವೆ. ಶತ್ರುಗಳನ್ನು ಜಯಿ ಸುವ ಸಾಧ್ಯತೆಗಳು ಹೆಚ್ಚಾಗಿವೆ. ರಾಜಕೀಯಕ್ಕೆ ಸೇರ ಬೇಕೆನ್ನು ವವರಿಗೆ ಮಾರ್ಗ ದೊರೆಯುತ್ತದೆ. ನಿಮ್ಮ ಸಂಗಾತಿಯ ವಿಲಾಸಿಜೀವನ ದುಂದುವೆಚ್ಚಕ್ಕೆ ಕಾರಣ ವಾಗಬಹುದು. ಹಿರಿಯ ಮಹಿಳಾಧಿಕಾರಿಗಳಿಂದ ನಿಮಗೆ ಅನುಕೂಲವಾಗಬಹುದು. ವೃತ್ತಿಯಲ್ಲಿ ನಿರೀಕ್ಷಿತ ಏಳಿಗೆ ಇರುತ್ತದೆ.
ತುಲಾ
ವಾರದ ಆರಂಭ ಆನಂದದಾಯಕವಾಗಿ ಇದ್ದರೂ ಸಹ ಮನಸ್ಸಿನ ಒಳಗಡೆ ಸಾಕಷ್ಟು ತುಮಲಗಳಿರುತ್ತವೆ. ಆಶ್ವಾಸನ ಮಾತುಗಳಿಂದ ಹಣ ಗಳಿಸುವಿರಿ. ಬಣ್ಣದ ಮಾತುಗಳಿಂದ ಜನರನ್ನು ಮರಳುಮಾಡಿ ಹಣಕ್ರೋಢಿ ಕರಿಸಲು ಪ್ರಯತ್ನ ಪಡುವಿರಿ. ವ್ಯಾಪಾರ ವ್ಯವಹಾರ ಗಳಲ್ಲಿ ನಿಮ್ಮ ಸ್ಥಾನವನ್ನು ಹೆಚ್ಚು ಮಾಡಿಕೊಳ್ಳಲು ಸಾಕಷ್ಟು ಪ್ರಯತ್ನ ಪಡುವಿರಿ. ಕೃಷಿ ಭೂಮಿಯನ್ನು ಖರೀದಿ ಮಾಡುವ ಯೋಗವಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ಸಿಗುವುದು ಕಡಿಮೆ. ಅಸಂಪ್ರದಾ ಯಕ ಆಹಾರ ಸೇವಿಸುವುದರಿಂದ ಆರೋಗ್ಯವ್ಯತ್ಯಾಸ ಆಗುವ ಸಾಧ್ಯತೆ ಇದೆ. ಕೀಲುಗಳನೋವು ಕೆಲವರಿಗೆ ಕಾಡಬಹುದು. ಸಂಗಾತಿಯಿಂದ ಧನಸಹಾಯ ಬಂದರೂ ಮೂದಲಿಕೆ ಇದ್ದೇ ಇರುತ್ತದೆ. ತಂದೆಯ ವ್ಯವಹಾರದಲ್ಲಿ ಪಾಲು ದೊರೆಯುತ್ತದೆ. ವೃತ್ತಿಯಲ್ಲಿದ್ದ ಗೊಂದಲಗಳು ದೂರವಾಗುತ್ತವೆ.
ವೃಶ್ಚಿಕ
ವ್ಯಾಪಾರ ವ್ಯವಹಾರಗಳಲ್ಲಿ ಸಾಕಷ್ಟು ಹಿಡಿತ ಸಾಧಿಸುವಿರಿ. ಅದಿರು ಉತ್ಪಾದಕರಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ದನದಾಯವು ನಿರೀಕ್ಷಿತ ಮಟ್ಟಕ್ಕೆ ಇರುತ್ತದೆ. ಕೃಷಿಯಿಂದ ಆದಾಯ ಬರುವ ಸಾಧ್ಯತೆ ಇದೆ. ಆಹಾರ ವಸ್ತುಗಳನ್ನು ತಯಾರಿಸುವವರಿಗೆ ಬೇಡಿಕೆಹೆಚ್ಚಾಗಿ ಆದಾಯವು ಹೆಚ್ಚುತ್ತದೆ. ಶತ್ರುಗಳನ್ನು ಮಣಿಸಲು ಹೊಸ ತಂತ್ರಗಳನ್ನು ಹೂಡುವಿರಿ. ಕೆಲವು ರಾಜಕಾರಣಿಗಳಿಗೆ ಮನಸ್ಸಿನಲ್ಲಿ ಇದ್ದ ಗೊಂದಲಗಳು ದೂರವಾಗುತ್ತವೆ. ವಾಯುಯಾನ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರಿಗೆ ಅಭಿವೃದ್ಧಿ ಇರುತ್ತದೆ. ವಾಹನ ತಯಾರಿಕಾ ಕ್ಷೇತ್ರದಲ್ಲಿ ಕಲಿಯುತ್ತಿರುವವರಿಗೆ ಹೆಚ್ಚಿನ ಪ್ರಾಶಸ್ತ್ಯ ಇರುತ್ತದೆ. ಹಿರಿಯರ ಕೆಂಗಣ್ಣಿಗೆ ನೀವು ಗುರಿ ಯಾಗುವ ಸಾಧ್ಯತೆಗಳಿವೆ. ಸಂಗಾತಿ ನಿಮ್ಮ ಜೊತೆ ಗೂಡಿ ವ್ಯಾಪಾರ ವ್ಯವಹಾರಗಳಲ್ಲಿ ಸಾಧನೆ ಮಾಡು ವರು. ಉಕ್ಕು ತಯಾರಿಸುವ ಉದ್ಯಮಿಗಳಿಗೆ ಹೆಚ್ಚು ಅಭಿವೃದ್ಧಿ ಇರುತ್ತದೆ.
ಧನು
ಸಮಾಜದಿಂದ ಹೆಚ್ಚು ಗೌರವ ದೊರೆಯುವ ಸಾಧ್ಯತೆಗಳಿವೆ. ಧನದಾಯವು ಕಡಿಮೆ ಇದ್ದರೂ ಸಹ ಹಣ ನಿರ್ವಹಣೆಯಲ್ಲಿ ಯಶಸ್ವಿಯಾಗುವಿರಿ. ನಿಮ್ಮ ಶತ್ರುಗಳನ್ನು ನಿಮ್ಮ ಕಾರ್ಯತಂತ್ರಗಳಿಂದ ಕಕ್ಕಾಬಿಕ್ಕಿ ಯಾಗುವಂತೆ ಮಾಡುವಿರಿ. ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಬೇಕೆನ್ನುವವರಿಗೆ ಅವಕಾಶಗಳು ದೊರೆಯುತ್ತವೆ. ವಿದ್ಯಾರ್ಥಿಗಳಿಗೆ ನಿರೀಕ್ಷೆಗೆ ಮೀರಿದ ಯಶಸ್ಸು ದೊರೆಯುತ್ತದೆ. ಮೂತ್ರ ಸಂಬಂಧಿ ಕಾಯಿಲೆ ಗಳಿರುವವರು ಹೆಚ್ಚು ಎಚ್ಚರ ವಹಿಸಿರಿ. ಸಂಗಾತಿಯು ನಡೆಸುವ ವ್ಯವಹಾರಗಳಲ್ಲಿ ಅಷ್ಟು ಅಭಿವೃದ್ಧಿ ಇರುವು ದಿಲ್ಲ. ಉದ್ದಿಮೆದಾರರಿಗೆ ಅನಿರೀಕ್ಷಿತಕಾನೂನಿನ ತೊಡ ಕುಗಳು ಎದುರಾಗಬಹುದು. ತಂದೆ ನಿಮ್ಮ ಸಹಾಯ ಕ್ಕಾಗಿ ಯಾವಾಗಲೂ ನಿಲ್ಲುತ್ತಾರೆ. ವೃತ್ತಿಯಲ್ಲಿ ಗೌರವ ಹೆಚ್ಚುತ್ತದೆ. ಮಹಿಳೆಯರ ಅಲಂಕಾರಕ ವಸ್ತುಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಲಾಭವಿರುತ್ತದೆ.
ಮಕರ
ಧರ್ಮ ಕರ್ಮ ಅರಿತು ನಡೆಯುವಿರಿ. ಧನದಾಯವು ಕಡಿಮೆಇದ್ದರೂಹಣನಿರ್ವಹಣೆಯನ್ನು ಸರಿಯಾಗಿ ಮಾಡುವಿರಿ. ಹೆಚ್ಚು ಮಾತನಾಡದೆ ಕೆಲಸ ಸಾಧಿಸುವಿರಿ. ಬಂಧುಗಳು ನಿಮ್ಮನ್ನು ನೋಡಿ ಹೊಟ್ಟೆ ಕಿಚ್ಚು ಪಡುವರು. ವಿದ್ಯಾರ್ಥಿಗಳಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಸ್ಥಿರಾಸ್ತಿಯನ್ನು ಮಾಡಬೇಕೆನ್ನುವವರಿಗೆ ಈಗ ಉತ್ತಮ ಕಾಲ. ಕೆಲವರಿಗೆ ಮೂಳೆಯ ತೊಂದರೆ ಗಳು ಅಥವಾ ಹೊಟ್ಟೆಯಲ್ಲಿನ ತೊಂದರೆಗಳು ಕಾಣಿಸ ಬಹುದು. ಸಂಗಾತಿಗೆ ಈಗ ಉತ್ತಮ, ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಸರ್ಕಾರಿ ಕಚೇರಿಯ ಕೆಲಸಕಾರ್ಯಗಳಲ್ಲಿ ನಿಧಾನಗತಿ ಇರುತ್ತದೆ. ಹಿರಿಯರ ಧರ್ಮಕಾರ್ಯಗಳನ್ನು ನೀವು ಮುಂದುವರೆಸುವಿರಿ. ವೃತ್ತಿಯಲ್ಲಿ ಮಹಿಳಾ ಮೇಲಧಿ ಕಾರಿಗಳಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ಭೂಮಿಯ ವ್ಯವಹಾರ ವನ್ನು ಮಾಡುವವರಿಗೆ ಲಾಭ ಹೆಚ್ಚುತ್ತದೆ.
ಕುಂಭ
ಹಿರಿಯರು ಅವರ ಕೆಲಸಗಳಲ್ಲಿ ಮಗ್ನರಾಗಿ ರುತ್ತಾರೆ. ಆಮದು ಮತ್ತು ರಫ್ತು ಮಾಡುವವರಿಗೆ ಹೆಚ್ಚು ಪ್ರೋತ್ಸಾಹ ದೊರೆಯುತ್ತದೆ ಹಾಗೂ ಹೆಚ್ಚಿನ ಲಾಭವಿರುತ್ತದೆ. ವಿದೇಶಿ ಭಾಷೆಗಳನ್ನು ಕಲಿಯುವವ ರಿಗೆ ಹೆಚ್ಚಿನ ಸವಲತ್ತುಗಳು ದೊರೆಯುತ್ತವೆ. ಗುರು ಸ್ಥಾನದಲ್ಲಿರುವವರಿಗೆ ಅಥವಾ ಪೀಠಾಧಿಪತಿಗಳಿಗೆ ಹೆಚ್ಚಿನ ಗೌರವ ಮನ್ನಣೆ ದೊರೆಯುತ್ತದೆ. ಆಸ್ತಿ ವ್ಯವ ಹಾರ ಮಾಡುವವರಿಗೆ ಹೆಚ್ಚಿನ ಹಣ ದೊರೆಯುತ್ತದೆ. ಧನಾದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶವಿರುತ್ತದೆ. ಯುವಕರ ಮಾತಿನಲ್ಲಿಮೂಡುವ ಅಹಂ ಅವರ ಸ್ವಂತ ಉದ್ಯೋಗಕ್ಕೆ ಸಂಚಕಾರ ತರಬಹುದು. ಶ್ವಾಸಕೋಶದ ತೊಂದರೆ ಇರುವವರು ಹೆಚ್ಚುಎಚ್ಚರ ವಹಿಸಿರಿ. ಧರ್ಮ ವಿದ್ಯೆಯನ್ನು ಹೇಳಿಕೊಡುತ್ತಿರುವವರಿಗೆ ಅನಿರೀಕ್ಷಿತ ವಾಗಿ ಗೌರವ ದೊರೆಯುತ್ತದೆ. ಸಂಗಾತಿಯು ಮಾಡಿ ಕೊಂಡ ಸರ್ಕಾರದೊಂದಿಗೆನ ಒಪ್ಪಂದಗಳು ಲಾಭ ತರುತ್ತವೆ.
ಮೀನ
ದೇಹದಾಢ್ಯತೆಯನ್ನು ಕಾಪಾಡಿಕೊಳ್ಳಲು ಸಾಕಷ್ಟು ಗಮನ ಕೊಡುವಿರಿ. ಇದಕ್ಕೆ ಬೇಕಾದ ಪೂರಕ ವ್ಯವಸ್ಥೆಗಳನ್ನು ಮಾಡಿಕೊಳ್ಳುವಿರಿ. ಹಣದಒಳಹರಿವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ಲೇವಾದೇವಿ ವ್ಯವಹಾರಗಳು ಅಷ್ಟು ಒಳಿತಲ್ಲ. ಕೆಲವು ಹಿರಿಯರನ್ನು ಓಲೈಸಿ ಹಣ ಪಡೆದುಕೊಳ್ಳಲು ಪ್ರಯತ್ನ ಮಾಡುವಿರಿ. ಆಸ್ತಿಖರೀದಿ ಮಾಡಿದರು ದಾಖಲೆಗಳ ಬಗ್ಗೆಸರಿಯಾಗಿ ಪರಿಶೀಲಿಸಿರಿ. ವಿದ್ಯಾರ್ಥಿಗಳಿಗೆ ಸಂಪೂರ್ಣ ಯಶಸ್ಸು ಇರುವುದಿಲ್ಲ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳು ನಿಮ್ಮಬಗ್ಗೆ ಕೋಪೋದ್ರಿಕ್ತ ಆಗುವವರು. ಸಂಗಾತಿಯು ನಿಮ್ಮ ಬಗ್ಗೆ ಗಮನ ಕಡಿಮೆ ಮಾಡಿದ್ದಾರೆಂದು ಕೋಪ ಗೊಳ್ಳುವಿರಿ. ಪೂರ್ವಿಕರ ಕೃಷಿ ಜಮೀನನ್ನು ಖರೀದಿಸ ಬಹುದು. ವೃತ್ತಿಯಲ್ಲಿ ಅಭಿವೃದ್ಧಿ ಇದ್ದರೂ ಹಿರಿಯ ಅಧಿಕಾರಿಗಳಜೊತೆ ಸರಿಯಾಗಿ ನಡೆದುಕೊಳ್ಳುವುದು ಉತ್ತಮ. ಹೈನುಗಾರಿಕೆ ಮಾಡುವವರಿಗೆ ಅಭಿವೃದ್ಧಿ ಇರುತ್ತದೆ.