ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
19/05/2024 - 25/05/2024
ವಾರ ಭವಿಷ್ಯ: ಈ ರಾಶಿಯವರು ಪ್ರೀತಿ ಪ್ರೇಮಗಳ ವಿಷಯದಲ್ಲಿ ಯಶಸ್ಸನ್ನು ಕಾಣುವಿರಿ
Published 25 ಮೇ 2024, 23:42 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಬಹಳ ವ್ಯಾವಹಾರಿಕವಾಗಿ ನಡೆದುಕೊಳ್ಳುವಿರಿ. ಉತ್ತಮ ವಾಗ್ಮಿಗಳಿಗೆ ಹಾಗೂ ಸಂಗೀತಗಾರರಿಗೆ ಸೂಕ್ತ ಗೌರವ ದೊರೆಯುತ್ತದೆ. ಆದಾಯವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ಸರ್ಕಾರದಿಂದ ಬರಬೇಕಾಗಿದ್ದ ಹಣಕಾಸುಗಳು ಈಗ ಸರಾಗವಾಗಿ ಹರಿದುಬರುತ್ತದೆ. ಒಡಹುಟ್ಟಿದವರು ನಿಮಗೆ ಸಾಕಷ್ಟು ಸಹಕಾರ ನೀಡಲಿದ್ದಾರೆ. ಹಿರಿಯರ ಆಸ್ತಿ ಒದಗುವ ಅವಕಾಶಗಳಿವೆ. ಮಕ್ಕಳಿಗಾಗಿ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ಎದುರಾಗಲಿದೆ. ಅಜೀರ್ಣ ಸಂಬಂಧಿತ ತೊಂದರೆಗಳು ಕಾಣಿಸಿಕೊಳ್ಳಬಹುದು. ಸಂಗಾತಿಯ ಸಹಾಯದಿಂದ ಕೆಲವು ವಿಚಾರಗಳಲ್ಲಿ ಆರ್ಥಿಕ ನೆರವು ಸಿಗಲಿದೆ. ಕಬ್ಬಿಣದ ವ್ಯಾಪಾರಿಗಳಿಗೆ ಹೆಚ್ಚಿನ ವಹಿವಾಟು. ತಂದೆಯಿಂದ ಈಗ ಸಹಾಯ, ಸಲಹೆಗಳು ದೊರೆಯಲಿವೆ. ಉದ್ಯೋಗದಲ್ಲಿ ಮೇಲಧಿಕಾರಿಗಳ ಕೃಪಾಕಟಾಕ್ಷ ದೊರೆಯುತ್ತದೆ. ಅಶ್ವಿನಿ ಭರಣಿ, ಕೃತಿಕ 1
ವೃಷಭ
ಅತಿ ಗಾಂಭೀರ್ಯದಿಂದ ವರ್ತಿಸುವಿರಿ. ಆದಾಯ ಮತ್ತು ಖರ್ಚು ಎರಡೂ ಸಮನಾಗಿರುತ್ತದೆ. ನಿಮ್ಮ ಕೆಲವು ಕೆಲಸ ಕಾರ್ಯಗಳು ತಾಯಿಗೆ ಬೇಸರ ತರಿಸಬಹುದು. ಸರ್ಕಾರಿ ಸಂಸ್ಥೆಗಳ ಭೂಮಿಯ ಅಭಿವೃದ್ಧಿ ಮಾಡಿಕೊಡುವವರಿಗೆ ಹೆಚ್ಚು ಲಾಭವಿರುತ್ತದೆ. ಅಧ್ಯಯನಶೀಲರಿಗೆ ಸ್ವಲ್ಪ ಆಸಕ್ತಿ ಕಡಿಮೆಯಾಗಬಹುದು. ಕೆಲವರಿಗೆ ಮೂತ್ರ ಸಂಬಂಧಿತ ದೋಷಗಳು ಕಾಣಿಸಬಹುದು. ವಿದೇಶಗಳಲ್ಲಿ ರಿಯಲ್ ಎಸ್ಟೇಟ್ ಕೆಲಸ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ವಿದೇಶದಲ್ಲಿರುವ ಸಂಗಾತಿಯ ಸಹಾಯದಿಂದ ಸ್ವದೇಶದಲ್ಲಿ ಆಸ್ತಿ ಮಾಡಬಹುದು. ಹಿರಿಯರ ಕೃಷಿಭೂಮಿ ನಿಮಗೆ ದೊರೆಯಬಹುದು. ವೃತ್ತಿಯ ಜಾಗದಲ್ಲಿ ಹಿತಶತ್ರುಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಕಚೇರಿಯ ಪರವಾಗಿ ವಿದೇಶಿಯಾನ ಮಾಡುವ ಯೋಗವಿದೆ. ಕೃತಿಕಾ 2 3 4, ರೋಹಿಣಿ, ಮೃಗಶಿರಾ1 2
ಮಿಥುನ
ವ್ಯವಹಾರ ಚತುರರಾಗಿರುತ್ತೀರಿ. ಆದಾಯದಲ್ಲಿ ಕೊರತೆಯನ್ನು ಕಾಣಬಹುದು. ನಿಮ್ಮ ಶ್ರಮದಿಂದ ಆದಾಯ ಹೆಚ್ಚು ಮಾಡಿಕೊಳ್ಳಬಹುದು. ಆಸ್ತಿ ವ್ಯವಹಾರಗಳಲ್ಲಿ ಹೆಚ್ಚು ಆತುರತೆ ಬೇಡ. ಸಂಗಾತಿಗಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ. ಉದ್ಯೋಗದ ಸ್ಥಳದಲ್ಲಿ ಸಹೋದ್ಯೋಗಿಗಳ ಬಳಿ ಸಾಲಮಾಡುವುದು ದುಬಾರಿಯಾಗಿ ಪರಿಣಮಿಸಬಹುದು. ಪ್ರೀತಿ ಪ್ರೇಮಗಳ ವಿಷಯದಲ್ಲಿ ಯಶಸ್ಸನ್ನು ಕಾಣುವಿರಿ. ಉದ್ಯೋಗದಲ್ಲಿ ಹೆಚ್ಚಿನ ಸ್ಥಾನಮಾನ ದೊರೆಯುವ ಸಾಧ್ಯತೆಗಳಿವೆ. ಉಪಾಧ್ಯಾಯರಿಗೆ ಹೆಚ್ಚು ಗೌರವ ದೊರೆಯುತ್ತದೆ. ಮನೆಪಾಠ ಮಾಡುವವರಿಗೆ ಹೆಚ್ಚು ಆದಾಯ ದೊರೆಯುತ್ತದೆ. ತಂದೆಯ ಆರೋಗ್ಯಕ್ಕಾಗಿ ಹಣ ಖರ್ಚಾಗಬಹುದು. ಕೃಷಿಕರಿಗೆ ಹೆಚ್ಚು ಲಾಭವಾಗುವ ಸಾಧ್ಯತೆಗಳಿವೆ. ಮೃಗಶಿರಾ 3 4, ಆರಿದ್ರಾ ಪುನರ್ವಸು 1 2 3
ಕರ್ಕಾಟಕ
ನಿರ್ಧಾರಗಳಲ್ಲಿ ದ್ವಂದ್ವವಿರುತ್ತದೆ. ದೃಢ ನಿರ್ಧಾರ ಎಂದೂ ಒಳ್ಳೆಯದು. ಆದಾಯವು ನಿಮ್ಮ ಅಗತ್ಯವನ್ನು ಪೂರೈಸುವಷ್ಟಿರುತ್ತದೆ. ಅದರಲ್ಲೂ ಸರ್ಕಾರಿ ನೌಕರರಿಗೆ ಆದಾಯ ಹೆಚ್ಚುವ ಸಾಧ್ಯತೆ ಇದೆ. ನಡವಳಿಕೆಯಲ್ಲಿ ಸ್ವಲ್ಪ ಆಲಸಿತನ ಹೆಚ್ಚಿರುತ್ತದೆ. ನೀರು ಸಂಬಂಧಿತ ವ್ಯವಹಾರ ನಡೆಸುವವರಿಗೆ ಲಾಭವಿರುತ್ತದೆ. ಮಕ್ಕಳ ವಿಚಾರದಲ್ಲಿ ವಿರೋಧಾಭಾಸಗಳು ಕಂಡುಬರುತ್ತದೆ. ಶೀತ ಸಂಬಂಧಿತ ಕಾಯಿಲೆಗಳಿರುವವರು ಎಚ್ಚರ ವಹಿಸಬೇಕು. ಸಂಗಾತಿಯಿಂದ ಹೆಚ್ಚು ಪ್ರಶ್ನೆಗಳ ಸುರಿಮಳೆಯ ಎದುರಾಗಬಹುದು. ಹಳೆಯ ಕಬ್ಬಿಣ ಮಾರಾಟ ಮಾಡುವವರಿಗೆ ವ್ಯಾಪಾರ ಹೆಚ್ಚಲಿದೆ. ಹಿರಿಯರ ನಡುವೆ ವಾಗ್ವಾದಗಳಾಗಬಹುದು. ವೃತ್ತಿಯಲ್ಲಿ ಸ್ಥಿರತೆ ಇದ್ದು ವೇತನ ಏರಿಕೆಯನ್ನು ನಿರೀಕ್ಷಿಸಬಹುದು. ಹೈನುಗಾರಿಕೆ ಮಾಡುವವರಿಗೆ ನಿರೀಕ್ಷಿತ ಲಾಭ ಇರುತ್ತದೆ. ಪುನರ್ವಸು 4, ಪುಷ್ಯ, ಆಶ್ಲೇಷ
ಸಿಂಹ
ಹಿರಿಯರಿಗೆ ಹೆಚ್ಚು ಗೌರವ ದೊರೆಯುತ್ತದೆ. ಆದಾಯವು ಕಡಿಮೆ ಹಂತದಲ್ಲಿರುತ್ತದೆ. ನಿಮ್ಮ ನಡವಳಿಕೆ ಮತ್ತು ಕೆಲಸ ಕಾರ್ಯಗಳಿಂದ ಉದ್ಯೋಗ ಸ್ಥಳದಲ್ಲಿ ಎಲ್ಲರ ಗಮನ ಸೆಳೆಯುವಿರಿ. ನವೀನ ಕೃಷಿಯನ್ನು ಮಾಡುವವರಿಗೆ ಲಾಭವಿದೆ. ಮಕ್ಕಳ ಏಳಿಗೆಯ ಬಗ್ಗೆ ಪ್ರಗತಿಯನ್ನು ಕಾಣಬಹುದು. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಹಾಗೂ ಆದಾಯ ಕಡಿಮೆಯಾಗುವ ಸಾಧ್ಯತೆಗಳಿವೆ. ಕೆಲವರಿಗೆ ಅನಿರೀಕ್ಷಿತವಾಗಿ ಮೂಳೆ ಸಂಬಂಧಿತ ಸಮಸ್ಯೆ ಎದುರಾಗಬಹುದು. ವ್ಯಾಪಾರ ವ್ಯವಹಾರಗಳ ವಿಷಯದಲ್ಲಿ ವಿದೇಶಕ್ಕೆ ಹೋಗಿ ಬರಬಹುದು. ಮೊಬೈಲ್ ಬಿಡಿಭಾಗಗಳನ್ನು ತಯಾರಿಸುವವರಿಗೆ ವ್ಯವಹಾರ ಮಂದಗತಿಯಲ್ಲಿರಬಹುದು. ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1
ಕನ್ಯಾ
ಮನಸ್ಸಿನಲ್ಲಿ ಏನೋ ಪಶ್ಚಾತಾಪದ ಭಾವನೆ ಇರುತ್ತದೆ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ನಿಮ್ಮ ನಡವಳಿಕೆಯ ಬಗ್ಗೆ ಸಂಗಾತಿಗೆ ಕೋಪವಿರುತ್ತದೆ. ಕೃಷಿಭೂಮಿಯನ್ನು ಅಭಿವೃದ್ಧಿ ಮಾಡಬಹುದು. ನೀರಿನ ವ್ಯಾಪಾರ ಮಾಡುವವರು ಅಭಿವೃದ್ಧಿ ಕಾಣಲಿದ್ದಾರೆ. ಮಕ್ಕಳ ವಿಷಯದಲ್ಲಿ ಚಿಂತೆ ಕಾಡುತ್ತದೆ. ಕೆಲವರಿಗೆ ಮೈಯಲ್ಲಾ ಹಿಂಡಿದಂತಾಗುವುದು. ಸಂಗಾತಿಯೊಡನೆ ಬಿರುಸಿನ ಮಾತುಗಳಾಗುವ ಸಾಧ್ಯತೆಗಳಿವೆ. ವಿದೇಶಿ ಪ್ರಯಾಣಮಾಡುವವರಿಗೆ ದಾಖಲೆಗಳ ವ್ಯತ್ಯಾಸಗಳು ಎದುರಾಗಬಹುದು. ತಂದೆಯಿಂದ ಹೆಚ್ಚಿನ ಸಹಕಾರಗಳು ದೊರೆಯುತ್ತವೆ. ಅವರ ಪ್ರಭಾವದಿಂದ ಸರ್ಕಾರಿ ಕೆಲಸಗಳು ಸುಲಭವಾಗುತ್ತದೆ. ಈ ಹಿಂದೆ ತಂದೆ ಕೂಡಿಟ್ಟಿದ್ದ ಹಣ ನಿಮಗೆ ಒಟ್ಟಾಗಿ ದೊರೆಯುತ್ತದೆ. ವೃತ್ತಿಯಲ್ಲಿ ಅಂತಹ ಏಳಿಗೆ ಇರುವುದಿಲ್ಲ. ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1 2
ತುಲಾ
ಬಹಳ ಬುದ್ಧಿವಂತಿಕೆಯಿಂದ ಜನರನ್ನು ಮರುಳು ಮಾಡಲು ಯತ್ನಿಸುವಿರಿ. ಆದಾಯದಷ್ಟೇ ಖರ್ಚು ಎದುರಾಗುವ ಸಾಧ್ಯತೆ ಇದೆ. ಕೆಲಸ ಕಾರ್ಯಗಳಲ್ಲಿ ಚುರುಕಾಗಿ ಓಡಾಡಿ ಜನಗಳ ಗಮನ ಸೆಳೆಯಲು ಪ್ರಯತ್ನಿಸುವಿರಿ. ಕೃಷಿಯಿಂದ ಆದಾಯ ಕಡಿಮೆಯಾಗಬಹುದು. ಕೃಷಿ ಭೂಮಿಯ ದಾಖಲೆಗಳಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಮಕ್ಕಳು ನಿಮ್ಮ ಮಾತನ್ನು ಕೇಳುವ ಹಂತದಲ್ಲಿ ಇರುವುದಿಲ್ಲ. ಕೀಲುನೋವು ಮತ್ತು ಚರ್ಮ ಸಂಬಂಧಿತ ಸಮಸ್ಯೆ ಕಾಣಿಸಬಹುದು. ಸಂಗಾತಿಯು ಅತಿಯಾಗಿ ಲೆಕ್ಕಾಚಾರ ಮಾಡಿ ಹಣವಸೂಲಿ ಮಾಡುವರು. ಒಡವೆ ವಸ್ತುಗಳ ಬಗ್ಗೆ ಪ್ರಯಾಣ ಕಾಲದಲ್ಲಿ ಎಚ್ಚರವಿರಿ. ಮಹಿಳೆಯರ ಜೊತೆ ಮಾಡಿದ ಸಾಲದ ವ್ಯವಹಾರಗಳು ನಷ್ಟಕ್ಕೆ ಕಾರಣವಾಗುತ್ತದೆ. ವ್ಯವಹಾರಗಳಲ್ಲಿ ದೊಡ್ಡ ಮಟ್ಟದ ಹಣ ಹೂಡಿಕೆ ಬೇಡ. ಚಿತ್ತಾ 3 4 ಸ್ವಾತಿ ವಿಶಾಖ 1 2 3
ವೃಶ್ಚಿಕ
ಸಮಾಜದೊಂದಿಗೆ ಬಹಳ ಗೌರವಯುತವಾಗಿ ನಡೆದುಕೊಳ್ಳುವಿರಿ. ಆದಾಯವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ಕೆಲಸಗಳನ್ನು ಆರಂಭಿಸಲು ದ್ವಂದ್ವ ಮನಸ್ಸಿನಿಂದ ಒದ್ದಾಡುವಿರಿ. ಆಸ್ತಿ ಖರೀದಿಯ ವಿಷಯದಲ್ಲಿ ಆತುರತೆ ಬೇಡ. ಮಕ್ಕಳಿಂದ ನಿರೀಕ್ಷಿತ ಸಹಾಯ ದೊರೆಯುವುದಿಲ್ಲ. ಬದಲಾಗಿ ಅವರಲ್ಲಿರುವ ಭಿನ್ನಾಭಿಪ್ರಾಯ ಕಂಡು ಬೇಸರವಾಗುತ್ತದೆ. ನರ ದೌರ್ಬಲ್ಯಗಳು ಕೆಲವರನ್ನು ಕಾಡಬಹುದು. ಸಂಗಾತಿಯಿಂದ ಸಾಕಷ್ಟು ಸಹಾಯಗಳು ದೊರೆಯುತ್ತವೆ. ವ್ಯವಹಾರಗಳಲ್ಲಿ ಕಾನೂನಿನ ತೊಡಕುಗಳು ಬರಬಹುದು ಮತ್ತು ಲಾಭಾಂಶ ಕಡಿಮೆಯಾಗಬಹುದು.ಗಣಿಗಾರಿಕೆ ಮಾಡುವವರಿಗೆ ಸರ್ಕಾರದಿಂದ ಕಾನೂನು ತೊಡಕುಗಳು ಎದುರಾಗುವ ಸಾಧ್ಯತೆಗಳಿವೆ. ತಂದೆಯಿಂದ ಹೆಚ್ಚಿನ ಅನುಕೂಲತೆಗಳು ನಿಮಗೆ ದೊರೆಯುತ್ತವೆ. ವಿಶಾಖಾ 4 ಅನುರಾಧ ಜೇಷ್ಠ
ಧನು
ವಾರದ ಆರಂಭ ಬಹಳ ಆನಂದದಾಯಕವಾಗಿರುತ್ತದೆ. ಆದಾಯವು ಕಡಿಮೆ ಮಟ್ಟದಲ್ಲಿ ಇರುತ್ತದೆ. ಶ್ರಮಪಟ್ಟು ಕೆಲಸ ಮಾಡುವಿರಿ. ಆದರೂ ನಿಮ್ಮ ಬಂಧುಗಳು ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿ ಮಾಡುವರು. ಸ್ಥಿರಾಸ್ತಿಯ ವ್ಯವಹಾರಗಳಲ್ಲಿ ಹೆಚ್ಚಿನ ಬಂಡವಾಳ ಹೂಡುವುದು ಬೇಡ. ವಿದ್ಯಾರ್ಥಿಗಳಿಗೆ ಹೆಚ್ಚು ಯಶಸ್ಸು ಇರುತ್ತದೆ. ತಲೆನೋವು ಕೆಲವರನ್ನು ಕಾಡಬಹುದು. ಸಂಗಾತಿಯಿಂದ ಮಕ್ಕಳಿಗೆ ಹೆಚ್ಚು ಅನುಕೂಲವಾಗುತ್ತದೆ. ಸಂಗಾತಿಯ ಆರೋಗ್ಯದ ಬಗ್ಗೆ ಎಚ್ಚರ ವಹಿಸಿರಿ. ಒಡವೆಗಳ ತಯಾರಕರಿಗೆ ಬೇಡಿಕೆ ಹೆಚ್ಚಲಿದೆ. ಕೃಷಿಗೆ ಹೆಚ್ಚು ಹಣವನ್ನು ಖರ್ಚು ಮಾಡುವಿರಿ. ತಾಯಿಯು ನಿಮ್ಮೊಡನೆ ಸ್ವಲ್ಪ ಕೋಪಿಸಿಕೊಳ್ಳಬಹುದು. ಮೂಲ ಪೂರ್ವಾಷಾಢ ಉತ್ತರಾಷಾಢ 1
ಮಕರ
ಕೆಲಸಗಳನ್ನು ಆರಂಭಿಸಲು ಮೀನಾ–ಮೇಷ ಮಾಡುವಿರಿ. ಆದಾಯವು ಕಡಿಮೆ ಇರುತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ಬಂಧುಗಳಿಂದ ಅಡ್ಡಿ ಎದುರಾಗುವ ಸಾಧ್ಯತೆ ಇದೆ. ಭೂಮಿ ವ್ಯವಹಾರ ಮಾಡುವವರಿಗೆ ರಿಯಲ್ ಎಸ್ಟೇಟ್ ಏಜೆಂಟರಗಳಿಗೆ ಲಾಭವಿರುತ್ತದೆ. ಆಡಳಿತಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಸಾಕಷ್ಟು ಅಭಿವೃದ್ಧಿ ಇರುತ್ತದೆ. ಚರ್ಮ ಕಾಯಿಲೆಗಳಿದ್ದವರಿಗೆ ವಾಸಿಯಾಗುವ ಸಾಧ್ಯತೆಗಳಿವೆ. ಸಂಗಾತಿಯ ಖರ್ಚು ಹೆಚ್ಚಾಗಬಹುದು. ಸರ್ಕಾರಿ ಸಾಲಗಳು ದೊರೆಯುವ ಸಾಧ್ಯತೆಗಳಿವೆ. ತಂದೆಯಿಂದ ನಿರೀಕ್ಷಿತ ಸಹಾಯಗಳು ದೊರೆಯುತ್ತವೆ. ಧಾರ್ಮಿಕ ಕೆಲಸಗಳನ್ನು ಮಾಡುವವರಿಗೆ ಅಭಿವೃದ್ಧಿ ಇರುತ್ತದೆ. ವೃತ್ತಿಯಲ್ಲಿ ನಿಮ್ಮ ಸ್ಥಾನ ಮತ್ತು ಹೆಸರನ್ನು ಭದ್ರ ಮಾಡಿಕೊಳ್ಳುವಿರಿ. ಸಾಂಪ್ರದಾಯಕ ಕೃಷಿ ನಡೆಸುವವರಿಗೆ ಲಾಭವಿರುತ್ತದೆ. ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1 2
ಕುಂಭ
ಸಮಾಜವನ್ನು ಸಮಚಿತ್ತದಿಂದ ನೋಡುವವರಿಗೆ ಗೌರವ ದೊರೆಯುತ್ತದೆ. ಕಡಿಮೆ ಆದಾಯದಲ್ಲೂ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ವ್ಯವಹಾರಿಕ ಬುದ್ಧಿಯಿಂದ ಹೆಚ್ಚು ಸಂಪಾದನೆ ಮಾಡಲು ಪ್ರಯತ್ನ ಪಡುವಿರಿ. ಭೂಮಿಯ ವ್ಯವಹಾರ ಮಾಡುವವರಿಗೆ ಲಾಭವಿರುತ್ತದೆ. ಮಧ್ಯವರ್ತಿ ಏಜೆಂಟರಾಗಿ ಕೆಲಸಮಾಡುವವರಿಗೆ ಆದಾಯ ಹೆಚ್ಚುತ್ತದೆ. ಅಧ್ಯಯನ ಮಾಡುತ್ತಿರುವವರು ಹೆಚ್ಚಿನ ಶ್ರಮ ಹಾಕಬೇಕು. ಕೆಲವರಿಗೆ ಶೀತಭಾದೆ ಹೆಚ್ಚಾಗುವ ಸಾಧ್ಯತೆಗಳಿವೆ. ಸಂಗಾತಿಯಿಂದ ಆರ್ಥಿಕ ಸಹಕಾರ ದೊರೆಯಬಹುದು. ಸಾಂಪ್ರದಾಯಿಕ ಕೃಷಿ ಮಾಡುವವರಿಗೆ ಹೆಚ್ಚು ಬೆಲೆ ಸಿಗಲಿದೆ. ಪ್ರೇಮಿಗಳಿಗೆ ನಿರಾಸೆಯಾಗುವ ಸಾಧ್ಯತೆಗಳಿವೆ. ತಂದೆಯಿಂದ ಈಗ ಸಾಕಷ್ಟು ಸಹಾಯ ಇರುತ್ತದೆ. ಉದ್ಯೋಗ ಮಾಡುವ ಸ್ಥಳದಲ್ಲಿ ಸ್ವಲ್ಪ ಕಿರಿಕಿರಿಗಳು ಇರುತ್ತವೆ. ಧನಿಷ್ಠ 3 4 ಶತಭಿಷಾ ಪೂರ್ವಭಾದ್ರ 1 2 3
ಮೀನ
ಬಹಳ ಉಗ್ರತ್ವ ನಿಮ್ಮಲ್ಲಿ ಇರುತ್ತದೆ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ನಿಮ್ಮೆಲ್ಲ ಕೆಲಸ ಕಾರ್ಯಗಳಿಗೆ ಜನರ ಸಹಾಯ ಪಡೆಯುವಿರಿ. ವಿಶ್ವಾಸಕ್ಕೂ ವ್ಯವಹಾರಕ್ಕೂ ತಳುಕು ಹಾಕಬೇಡಿ. ಮಕ್ಕಳಿಗಾಗಿ ಹಣ ಖರ್ಚು ಮಾಡುವಿರಿ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ನಿಧಾನಗತಿ ಇರುತ್ತದೆ. ಸಿರಾಸ್ತಿಯನ್ನು ಖರೀದಿ ಮಾಡಬೇಕೆನ್ನುವವರು ಈಗ ಮಾಡಬಹುದು. ಹಿರಿಯರ ವ್ಯಾಪಾರಗಳಲ್ಲಿ ನಿಮಗೆ ಪಾಲು ದೊರೆಯುತ್ತದೆ. ಸರ್ಕಾರಿ ಕೆಲಸಕಾರ್ಯಗಳಲ್ಲಿ ಮಂದಗತಿ ಕಾಣಬಹುದು. ವೈಯಕ್ತಿಕ ಪರಿಹಾರಗಳಿಗಾಗಿ ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳುವಿರಿ. ತಾಯಿಯಿಂದ ನಿಷ್ಠುರದ ನುಡಿಗಳನ್ನು ಕೇಳಬೇಕಾಗಬಹುದು. ಧಾರ್ಮಿಕ ಕ್ಷೇತ್ರದಲ್ಲಿರುವವರಿಗೆ ಅನುಕೂಲ ಹೆಚ್ಚು. ಸಂಗಾತಿಗಾಗಿ ಹೆಚ್ಚು ಖರ್ಚು ಮಾಡಬೇಕಾಗಬಹುದು. ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ