ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
24/12/2023 - 30/12/2023
ವಾರ ಭವಿಷ್ಯ: ಈ ರಾಶಿಯವರ ಮಾತಿನಿಂದ ಕೆಲವು ಕೆಲಸಗಳು ನಿಲ್ಲುತ್ತವೆ
Published 30 ಡಿಸೆಂಬರ್ 2023, 23:42 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಸಾಕಷ್ಟು ಗೌರವವನ್ನು ನಿರೀಕ್ಷಿಸುತ್ತಿರಿ. ಮಾತಿನಲ್ಲಿ ಸ್ವಲ್ಪ ಕಠಿಣತೆ ಇರುತ್ತದೆ.ನಿಮ್ಮ ನಡವಳಿಕೆಯಲ್ಲಿ ಸ್ವಲ್ಪ ದ್ವಂದ್ವವಿರುತ್ತದೆ. ಕೃಷಿಕರಿಗೆ ಸಾಕಷ್ಟು ಸಹಾಯಧನ ಗಳು ದೊರೆತು ಅಭಿವೃದ್ಧಿ ಇರುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಅತಿ ಹೆಚ್ಚು ಶ್ರದ್ದೆ ಬರುತ್ತದೆ. ಉದರ ಸಂಬಂಧಿ ಕಾಯಿಲೆಗಳು ಸ್ವಲ್ಪ ಬಾಧಿಸಬಹುದು. ಸಂಗಾತಿಯು ತಮ್ಮಹಣವನ್ನು ವ್ಯವಹಾರಗಳಲ್ಲಿ ತೊಡಗಿಸುವರು. ಸಂಗಾತಿಯುಅಲಂಕಾರಿಕತೆಗೆಹೆಚ್ಚು ಪ್ರಾಮುಖ್ಯತೆ ಕೊಡುವ ಸಲುವಾಗಿ ಹಣ ಖರ್ಚು ಮಾಡುವರು. ಬಂಧುಗಳ ನಡುವೆ ವೈಮನಸ್ಯಏರ್ಪಡ ಬಹುದು. ರೈತರಿಗೆ ಕೃಷಿಯಿಂದ ಆದಾಯ ಕಡಿಮೆ ಯಾಗಬಹುದು.ತಂದೆಯ ಪ್ರಯತ್ನದಿಂದ ಸರ್ಕಾರಿ ಗುತ್ತಿಗೆಗಳು ದೊರೆಯುವ ಸಂದರ್ಭವಿದೆ. ವೃತ್ತಿಯಲ್ಲಿ ತೊಂದರೆ ಇಲ್ಲದಿದ್ದರೂ ಹಿತಶತ್ರುಗಳ ಕಾಟವಿರುತ್ತದೆ. ಕಬ್ಬಿಣದ ವ್ಯಾಪಾರಿಗಳಿಗೆ ಹೆಚ್ಚು ಲಾಭವಿರುತ್ತದೆ. ( ಅಶ್ವಿನಿ ಭರಣಿ ಕೃತಿಕ 1)
ವೃಷಭ
ಸಂಗೀತಗಾರರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ವ್ಯವಹಾರಗಳಲ್ಲಿ ನಯವಾಗಿ ಮಾತನಾಡಿ ವ್ಯವಹಾರ ಸಾಧಿಸುವಿರಿ. ನಿಮ್ಮ ಕೆಲಸ ಕಾರ್ಯಗಳಿಗೆ ಸೋದರಿಯರ ಮತ್ತು ತಾಯಿಯ ಸಹಕಾರ ದೊರೆ ಯುತ್ತದೆ. ಕೃಷಿ ಭೂಮಿಯ ವಿಸ್ತರಣೆಯನ್ನು ಮಾಡಬ ಹುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಅಂತಹ ಯಶಸ್ಸು ಇರುವುದಿಲ್ಲ. ನರ ದೌರ್ಬಲ್ಯ ಇರುವವರು ದೂರಪ್ರಯಾಣದಲ್ಲಿಎಚ್ಚರಿಕೆವಹಿಸಿರಿ. ಸಂಗಾತಿಯು ನಡೆಸುವ ವ್ಯವಹಾರಗಳಲ್ಲಿ ಹೆಚ್ಚಿನ ಲಾಭವಿರುತ್ತದೆ. ವಾಹನ ತಯಾರಿಕಾ ಘಟಕಗಳನ್ನು ನಡೆಸುತ್ತಿರುವವ ರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಧರ್ಮಕಾರ್ಯಗಳಿ ಗಾಗಿ ಹಣ ಮೀಸಲಿಡುವಿರಿ. ಕಬ್ಬಿಣದ ಮಿಶ್ರ ಲೋಹ ಗಳನ್ನು ತಯಾರಿಸಿ ಮಾಡುವವರಿಗೆ ಹೆಚ್ಚಿನಅಭಿವೃದ್ಧಿ ಇರುತ್ತದೆ.ಸರ್ಕಾರಿ ಸಂಸ್ಥೆಗಳ ಜೊತೆಗೆ ವ್ಯವಹಾರ ಮಾಡುತ್ತಿರುವವರಿಗೆ ನಿಧಾನಗತಿ ವ್ಯವಹಾರ ವಿರುತ್ತದೆ. (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಮಿಥುನ
ಒಂದು ರೀತಿಯ ನಿಧಾನ ಗತಿ ನಿಮ್ಮಲ್ಲಿ ಇರುತ್ತದೆ. ತಾಯಿಯಿಂದ ಅಥವಾ ಸೋದರಿಯರಿಂದ ಧನಸಹಾಯ ದೊರೆಯುತ್ತದೆ. ಕೃಷಿಯಲ್ಲಿ ಆಸಕ್ತಿಯು ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಮಧ್ಯಮ ರೀತಿಯ ಫಲಿ ತಾಂಶವಿರುತ್ತದೆ. ಕ್ರೀಡಾಪಟುಗಳಿಗೆ ಸರ್ಕಾರದಿಂದ ಉತ್ತಮ ಪ್ರೋತ್ಸಾಹ ದೊರೆಯುತ್ತದೆ. ಸರ್ಕಾರಿ ಕೃಷಿ ಅಧಿಕಾರಿಗಳಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ನಿರೀಕ್ಷೆ ಮಾಡದಿದ್ದ ವ್ಯಕ್ತಿಗಳು ನಿಮಗೆ ಹಿತಶತ್ರುಗಳಾಗುತ್ತಾರೆ. ಉಪಾಧ್ಯಾಯರುಗಳಿಗೆ ಹಾಗೂ ಉಪನ್ಯಾಸಕರಗಳಿಗೆ ಬಹಳಹೆಚ್ಚಿನ ಪ್ರೋತ್ಸಾಹಸಿಗುತ್ತದೆ.ಆಭರಣವ್ಯಾಪಾರಿ ಗಳಿಗೆ ಅಂತಹ ಯಶಸ್ವಿ ಇರುವುದಿಲ್ಲ.ತಾಯಿಯು ನಿಮ್ಮಮೇಲೆ ಮುನಿಸಿಕೊಳ್ಳಬಹುದು.ವ್ಯಾಪಾರವನ್ನು ಮಾಡುತ್ತಿರುವವರಿಗೆ ಆದಾಯ ತುಸು ಕಡಿಮೆಯಾಗ ಬಹುದು. ಹಿರಿಯರಿಂದ ಸಾಂಪ್ರದಾಯಕ ಕೃಷಿಯ ಬಗ್ಗೆ ಹೆಚ್ಚು ತಿಳುವಳಿಕೆ ದೊರೆಯುತ್ತದೆ. (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಕರ್ಕಾಟಕ
ಹೊಸ ರೀತಿಯ ಆನಂದ ನಿಮ್ಮಲ್ಲಿ ಮನೆ ಮಾಡಿರುತ್ತದೆ. ಧನಾದಾಯವು ನಿರೀಕ್ಷಿತ ಮಟ್ಟದಲ್ಲಿ ಇರುತ್ತದೆ. ಸರ್ಕಾರಿ ಸಹಾಯಧನಗಳು ನಿಮಗೆ ಈಗ ದೊರೆಯುತ್ತವೆ. ಭೂಮಿ ಮಧ್ಯಸ್ಥಿಕೆ ವ್ಯವಹಾರ ಮಾಡುವವರಿಗೆ ಕಮಿಷನ್ ಹೆಚ್ಚು ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ಇದ್ದೇ ಇರುತ್ತದೆ. ಸರ್ಕಾರಿ ಅಧಿಕಾರಿಗಳಿಗೆ ಸ್ವಲ್ಪ ಮುಖಭಂಗ ಆಗುವ ಸಂದರ್ಭಗಳಿವೆ. ಸಂಗಾತಿಯ ಕಠಿಣ ನಿಲುವುಗಳು ನಿಮಗೆ ಬೇಸರತರಬಹುದು. ಪಾಲುದಾರಿಕೆವ್ಯವಹಾರ ಗಳಲ್ಲಿ ನಿಮಗೆ ಹೆಚ್ಚು ಲಾಭ ವಿರುತ್ತದೆ. ರಾಜಕೀಯ ನಾಯಕರುಗಳಿಗೆ ಅನಿರೀಕ್ಷಿತ ಸ್ಥಾನಮಾನ ಸಿಗುವ ಸಾಧ್ಯತೆ ಇದೆ. ವಿದೇಶಕ್ಕೆ ಹೋಗಬೇಕೆನ್ನುವವರ ದಾಖಲೆಗಳು ಈಗಸರಿಯಾಗುತ್ತವೆ.ವೃತ್ತಿಯಲ್ಲಿ ಸಮ ತೋಲನ ವಿರುತ್ತದೆ. ಉನ್ನತ ಸ್ಥಾನಮಾನಕ್ಕಾಗಿ ಯತ್ನಿ ಸುತ್ತಿರುವವರಿಗೆ ಅವಕಾಶಗಳು ಈಗ ದೊರೆಯುವ ಸಂದರ್ಭವಿದೆ. ( ಪುನರ್ವಸು 4 ಪುಷ್ಯ ಆಶ್ಲೇಷ)
ಸಿಂಹ
ಮನಸ್ಸಿನಲ್ಲಿ ತಾಕಲಾಟಗಳಿರುತ್ತವೆ. ಹಣದ ಒಳಹರಿವು ನಂದಗತಿಯಲ್ಲಿರುತ್ತದೆ. ನಿಮ್ಮ ಸೋದರಿ ಯರಿಂದ ಆಸ್ತಿಯನ್ನು ಕೊಳ್ಳಲು ಧನಸಹಾಯ ದೊರೆ ಯುತ್ತದೆ. ಸರ್ಕಾರಿ ಅಧಿಕಾರಿಗಳಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಕೃಷಿಪಂಡಿತರಿಗೆ ಹೆಚ್ಚಿನ ಮನ್ನಣೆದೊರೆಯು ತ್ತದೆ. ಕೃಷಿವಿದ್ಯಾರ್ಥಿಗಳಿಗೆ ನಿರೀಕ್ಷೆಗೆ ಮೀರಿದಯಶಸ್ಸು ಇರುತ್ತದೆ. ಸಂಗಾತಿಯಆರೋಗ್ಯದಬಗ್ಗೆ ಹೆಚ್ಚುಕಾಳಜಿ ಇರಲಿ. ಸಂಗಾತಿಯ ನಿಷ್ಠುರ ಮಾತುಗಳು ಮನಸ್ಸಿಗೆ ನೋವುಂಟು ಮಾಡಬಹುದು. ವಾಹನ ಮಾರಾಟಗಾ ರರಿಗೆ ಸ್ವಲ್ಪ ಹಿನ್ನಡೆ ಇರುತ್ತದೆ. ವಿದೇಶದಲ್ಲಿರುವವರಿಗೆ ದೊರೆಯುವ ಸೌಲಭ್ಯಗಳಲ್ಲಿ ವ್ಯಕ್ತಿಯ ವ್ಯತ್ಯಯ ಉಂಟಾಗಬಹುದು. ವಿದೇಶಿ ವ್ಯವಹಾರ ಮಾಡುವವ ರಿಗೆ ಅನಿರೀಕ್ಷಿತ ಹೊಸ ಅವಕಾಶಗಳು ತೆರೆಯುತ್ತವೆ. ತಂದೆಯಿಂದ ಅಥವಾ ಹಿರಿಯರಿಂದ ನಿಮ್ಮವ್ಯವಹಾರ ಗಳಿಗೆ ಸಾಕಷ್ಟುಸಹಕಾರ ದೊರೆಯುತ್ತದೆ. ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಕನ್ಯಾ
ವಿಪರೀತ ಅಲಸೀತನ ನಿಮ್ಮನ್ನು ಆವರಿಸುತ್ತದೆ. ನಿಮ್ಮಮಾತು ಮತ್ತು ನಡವಳಿಕೆಯಲ್ಲಿ ತೀರ ವ್ಯಾವ ಹಾರಿಕತೆ ಇರುತ್ತದೆ. ನಿಮ್ಮ ಚಟುವಟಿಕೆಗಳಿಂದ ಹಣ ಸಂಪಾದನೆ ಮಾಡಬಹುದು. ಆಸ್ತಿ ವಿಚಾರದಲ್ಲಿ ಇದ್ದ ಸರ್ಕಾರಿ ತೊಂದರೆಗಳು ಈಗ ನಿವಾರಣೆಯಾಗುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಪಲಿತಾಂಶ ಇರುವುದಿಲ್ಲ. ಸಂಗಾತಿಯ ಮೇಲೆ ನಿಮ್ಮ ಅಭಿಪ್ರಾಯಗಳನ್ನು ಹೇರಲು ಪ್ರಯತ್ನಪಡುವಿರಿ. ಮೂಳೆಯ ತೊಂದರೆ ಗಳು ಕೆಲವರಿಗೆ ಕಾಡುತ್ತದೆ. ವಿದೇಶದಲ್ಲಿರುವಸಂಗಾತಿ ನಿಮ್ಮ ಅಭಿಪ್ರಾಯಗಳಿಗೆ ಹೆಚ್ಚು ಬೆಲೆ ಕೊಡುವರು. ವಿನಾಕಾರಣ ಸಾಲಮಾಡಿಕೊಂಡು ಸಾಲಗಾರರ ಬಲೆಗೆ ಬೀಳುವ ಸಂದರ್ಭವಿದೆ. ವಿದೇಶದಲ್ಲಿರುವ ಸಂಗಾತಿಗೆ ಆದಾಯಹೆಚ್ಚಾಗುವ ಸಾಧ್ಯತೆ ಇದೆ. ಗುರು ಹಿರಿಯ ರೊಡನೆ ಮಾಡಿಕೊಂಡ ಎಡಪಟ್ಟು ಗಳು ಪೇಚಾಡುವ ಸಂದರ್ಭವನ್ನು ಸೃಷ್ಟಿಸಬಹುದು. ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ತುಲಾ
ವ್ಯವಹಾರದಲ್ಲಿ ಚತುರತೆಯನ್ನು ಸಾಧಿಸಲು ಪ್ರಯತ್ನ ಪಡುವಿರಿ. ದನದಾಯವು ನಿರೀಕ್ಷೆಯಷ್ಟು ಇರುತ್ತದೆ. ಬಂಧುಗಳಮೇಲೆ ನೀವು ತೋರಿದ್ದ ಅಸಡ್ಡೆ ನಿಮಗೆ ವಾಪಸ್ ಬರಬಹುದು. ಆಸ್ತಿಯನ್ನು ಕೊಳ್ಳುವ ವಿಚಾರದಲ್ಲಿ ಅಂತಹ ಬೆಳವಣಿಗೆಗಳು ಆಗುವುದಿಲ್ಲ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ದೊರಕುವುದು ಕಷ್ಟ. ಕೀಲು ನೋವುಗಳು ಇರುವವರಿಗೆ ಭಾದೆ ಹೆಚ್ಚಾ ಗಬಹುದು.ಸಂಗಾತಿಯಿಂದ ಅವರ ಖರ್ಚಿಗಾಗಿ ಹೆಚ್ಚು ಹಣದ ಬೇಡಿಕೆ ಬರಬಹುದು. ಅನಿರೀಕ್ಷಿತ ಧನ ಲಾಭ ಗಳು ಆಗುವ ಸಾಧ್ಯತೆಗಳಿವೆ. ತಂದೆಯ ವ್ಯವಹಾರ ಗಳು ನಿಮಗೆ ವರ್ಗಾಯಿಸಲ್ಪಡುತ್ತದೆ. ವೃತ್ತಿಯಲ್ಲಿ ಬೆಳವಣಿಗೆಯನ್ನುಕಾಣಬಹುದು. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಸರಾಗತೆಯನ್ನು ಕಾಣಬಹುದು. ಧರ್ಮ ಕಾರ್ಯಗಳಿಗಾಗಿ ಹಣ ಖರ್ಚಾಗುವುದು. ನಿಮ್ಮ ಮಾತಿನಿಂದ ಕೆಲವು ಕೆಲಸಗಳು ನಿಲ್ಲುತ್ತದೆ. ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ವೃಶ್ಚಿಕ
ವ್ಯಾಪಾರಿ ಮನೋಭಾವ ನಿಮ್ಮಲ್ಲಿ ತುಂಬಿರುತ್ತದೆ. ದಿನಸಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಇರುತ್ತದೆ. ಮಾತಿನಲ್ಲಿ ಬಹಳ ಗತ್ತು ಇರುತ್ತದೆ. ಶತ್ರುಗ ಳನ್ನು ಮಟ್ಟಹಾಕಿ ನಿಮ್ಮಕೆಲಸ ಸಾಧಿಸುವಿರಿ. ಸಂಸಾರ ಸುಖದಲ್ಲಿ ಸ್ವಲ್ಪ ವ್ಯತ್ಯಾಸಗಳಿರುತ್ತವೆ. ಕೃಷಿಯಲ್ಲಿ ಅಭಿ ವೃದ್ಧಿ ಇರುತ್ತದೆ. ಮಕ್ಕಳಿಂದ ಗೌರವ ದೊರೆಯದಿರ ಬಹುದು. ಕೆಲವರಿಗೆ ವಿದೇಶದಲ್ಲಿರುವ ಮಕ್ಕಳಿಂದ ಧನಸಹಾಯ ಇರುತ್ತದೆ. ಪಿತ್ತ ವಿಕಾರಗಳು ಕೆಲವರಿಗೆ ಬಾಧಿಸಬಹುದು. ಅನಿರೀಕ್ಷಿತ ಖರ್ಚುಗಳು ಬರುವ ಸಾಧ್ಯತೆ ಇದೆ. ನಿಮ್ಮ ಕೆಲವು ನಿರ್ಧಾರಗಳಿಗೆ ನಿಮ್ಮ ಸಂಗಾತಿಯ ಬೆಂಬಲ ದೊರೆಯದಿರಬಹುದು. ದೇವರ ಕಾರ್ಯಗಳನ್ನು ಮಾಡುವವರಿಗೆ ಗೌರವ ಹೆಚ್ಚುತ್ತದೆ.ವಿದೇಶದಲ್ಲಿ ಓದಲು ಆಸಕ್ತಿ ಇರುವವರಿಗೆ ಸೂಕ್ತ ಅವಕಾಶಗಳು ದೊರೆಯುತ್ತವೆ.ವಿದ್ಯಾರ್ಥಿಗಳಿಗೆ ಯಶಸ್ಸು ಕಡಿಮೆ ಇರುತ್ತದೆ. ( ವಿಶಾಖಾ 4 ಅನುರಾಧ ಜೇಷ್ಠ)
ಧನು
ಅತಿಯಾದ ಆತ್ಮಗೌರವ ನಿಮ್ಮಲ್ಲಿ ಇರುತ್ತದೆ. ನಿಮ್ಮ ಚಟುವಟಿಕೆಗಳಿಂದ ಧನಸಂಪಾದನೆಯ ಕಡೆ ಹೆಚ್ಚು ಗಮನ ಕೊಡುವಿರಿ. ಆಸ್ತಿ ವಿಚಾರಗಳಲ್ಲಿ ಸ್ವಲ್ಪ ಗೊಂದಲಗಳಾಗಬಹುದು. ವಿದೇಶಿ ಭಾಷಾ ಕಲಿಕೆ ಯನ್ನು ಮಾಡುತ್ತಿರುವವರಿಗೆ ಹೆಚ್ಚಿನ ಅನುಕೂಲ ಇರುತ್ತದೆ. ಮಕ್ಕಳಿಂದ ಹೆಚ್ಚಿನ ಸೌಕರ್ಯ ಇರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಇದ್ದೇ ಇರುತ್ತದೆ. ಉನ್ನತ ವ್ಯಾಸಂಗ ಮಾಡುತ್ತಿರುವವರಿಗೆ ಹೆಚ್ಚಿನ ಅನು ಕೂಲಗಳು ದೊರೆಯುತ್ತವೆ. ಹಣದನಿರ್ವಹಣೆಯನ್ನು ಸರಿಯಾಗಿ ಮಾಡುವುದು ಬಹಳ ಉತ್ತಮ. ಸಂಗಾತಿ ಸಂತೋಷಕ್ಕಾಗಿ ಹೆಚ್ಚು ಹಣ ಖರ್ಚಾಗುವುದು. ಅನಾ ರೋಗ್ಯದಿಂದ ಇರುವವರಿಗೆ ಆರೋಗ್ಯ ಸುಧಾರಣೆ ಯಾಗುತ್ತದೆ. ಸಂಗಾತಿಯಸಲಹೆಗಳು ವ್ಯವಹಾರದಲ್ಲಿ ಲಾಭವನ್ನು ತರುತ್ತವೆ. ಕುಂಚ ಕಲೆಯನ್ನು ಮಾಡುವ ವರಿಗೆ ನಡೆಸುವವರಿಗೆ ಅಭಿವೃದ್ಧಿ ಇರುತ್ತದೆ. ( ಮೂಲ ಪೂರ್ವಾಷಾಢ ಉತ್ತರಾಷಾಢ 1 )
ಮಕರ
ಸ್ಥಿತ ಪ್ರಜ್ಞರಾಗಿ ಕೆಲಸಗಳನ್ನು ಮಾಡುವಿರಿ. ಧನಾದಾಯವು ಕಡಿಮೆ ಇರುತ್ತದೆ.ಹೊಸಹೊಸ ತಂತ್ರಗಳಿಂದ ನಿಮ್ಮಕೆಲಸಗಳನ್ನು ಸಾಧಿಸುವಿರಿ.ವಿದ್ಯಾರ್ಥಿಗಳಿಗೆ ನಿರೀಕ್ಷಿತ ಅಭಿವೃದ್ಧಿ ಇರುತ್ತದೆ. ವೃತ್ತಿಯಲ್ಲಿ ಸ್ವಲ್ಪ ಏಳಿಗೆ ಇರುತ್ತದೆ. ಲಲಿತ ಕಲೆಗಳನ್ನು ಅಭ್ಯಾಸ ಮಾಡು ತ್ತಿರುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಲಾಭಗಳು ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದೆ. ಸಂಗಾತಿಯು ಸ್ವಲ್ಪ ಮುನಿಸು ತೋರಿಸಿ ದರು ನಂತರಸರಿಯಾಗುವವರು. ಗಣಿಉದ್ಯಮಿಗಳಿಗೆ ಸರ್ಕಾರದಿಂದ ಕೆಲವು ರೀತಿಯ ಅಡ್ಡಿಗಳು ಬರುವ ಸಾಧ್ಯತೆಗಳಿವೆ. ತಂದೆಯಿಂದ ಧಾರ್ಮಿಕವಿದ್ಯೆಗಳನ್ನು ಕಲಿಯಬಹುದು. ವೃತ್ತಿಯಲ್ಲಿ ವೇತನ ಹೆಚ್ಚಳ ಆಗುವ ಬಗ್ಗೆ ವಿಚಾರಗಳು ಕೇಳಿ ಬರಬಹುದು. ಕೃಷಿ ಉತ್ಪನ್ನ ಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನಲಾಭವಿರುತ್ತದೆ. ಸರ್ಕಾರಿ ಗುತ್ತಿಗೆಗಳಲ್ಲಿ ಸ್ವಲ್ಪ ಹಿಂಜರಿಕೆ ಆಗಬಹುದು. ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಕುಂಭ
ಮೈಯೆಲ್ಲಾ ಎಚ್ಚರವಾಗಿದ್ದು ಕೆಲಸ ಮಾಡುವುದು ಒಳ್ಳೆಯದು. ಯುವಕರ ಆಡುವ ಗತ್ತಿನಮಾತುಗಳು ಅವರಿಗೆ ಮುಳುವಾಗುವ ಸಂದರ್ಭಗಳಿವೆ. ಹಿರಿಯರ ನಡವಳಿಕೆಗಳು ಇತರರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತದೆ. ಆಸ್ತಿ ವಿಚಾರಗಳಲ್ಲಿ ಮುಂದುವರಿಯು ವುದು ಅಷ್ಟುಒಳಿತಲ್ಲ. ವಿದ್ಯಾರ್ಥಿಗಳಿಗೆ ಅಧ್ಯಯನ ದಲ್ಲಿ ಯಶಸ್ಸು ಇರುತ್ತದೆ. ವಿದೇಶದಲ್ಲಿರುವವರಿಗೆ ಆದಾಯ ಹೆಚ್ಚುತ್ತದೆ.ವಿದೇಶಿವ್ಯವಹಾರಮಾಡುವವರ ಲಾಭಗಳು ಹೆಚ್ಚಾಗುತ್ತದೆ. ಸಂಗಾತಿಯಿಂದ ನಿರೀಕ್ಷಿತ ಸಹಾಯ ದೊರೆಯುತ್ತದೆ. ಹಿರಿಯ ಮಹಿಳೆಯರಿಂದ ಸೂಕ್ತ ಸಹಾಯಗಳು ದೊರೆಯುವ ಲಕ್ಷಣಗಳಿವೆ. ಎಲ್ಲೇ ಮೀರಿದ ಮಾತುಗಳಿಂದ ಕೆಲವರಿಗೆ ತೊಂದರೆ ಗಳಾಗಬಹುದು. ಸೈನಿಕರಿಗೆ ಹೆಚ್ಚಿನ ಸವಲತ್ತುಗಳು ದೊರೆಯುವ ಸಾಧ್ಯತೆ ಇದೆ. ಸರ್ಕಾರಿ ಸಂಸ್ಥೆಗಳ ಜೊತೆ ವ್ಯವಹಾರ ಮಾಡುವವರಿಗೆ ಸ್ವಲ್ಪ ಅಭಿವೃದ್ಧಿ ಇರುತ್ತದೆ. ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಮೀನ
ವಿದೇಶದಲ್ಲಿರುವವರಿಗೆ ಹೆಚ್ಚಿನ ಅನುಕೂಲಗಳು ದೊರೆಯುತ್ತವೆ. ಧಮದಾಯವು ನಿರೀಕ್ಷಿತ ಮಟ್ಟದಲ್ಲಿ ಇರುತ್ತದೆ. ಭಾಷಣಕಾರರಿಗೆ ಉಪನ್ಯಾಸಕರಿಗೆ ಹೆಚ್ಚು ಪ್ರೋತ್ಸಾಹ ದೊರೆಯುತ್ತದೆ. ನಿಮ್ಮ ನಡವಳಿಕೆಗಳಿಂದ ವೈರಿಗಳನ್ನು ಹೆಚ್ಚು ಮಾಡಿಕೊಳ್ಳುವಿರಿ. ಹಿರಿಯರ ಒಡವೆಗಳು ನಿಮಗೆ ದೊರೆಯಬಹುದು.ಸಂಸಾರದಲ್ಲಿ ಇದ್ದಸುಖವನ್ನು ನೀವೇ ಹಾಳುಮಾಡುವಿರಿ.ವಿದ್ಯಾರ್ಥಿ ಗಳಿಗೆ ಅಭಿವೃದ್ಧಿಕಡಿಮೆ ಇರುತ್ತದೆ. ತಾಯಿಯ ಕೋಪ ವನ್ನು ಎದುರಿಸಬೇಕಾಗಬಹುದು. ಅಲಂಕಾರಕ್ಕಾಗಿ ಹೆಚ್ಚುಹಣ ಖರ್ಚು ಮಾಡುವಿರಿ. ಸಂಗಾತಿಯು ನಿಮ್ಮ ಬಗ್ಗೆ ಗಮನಹರಿಸುವುದನ್ನು ಕಡಿಮೆ ಮಾಡುವರು. ಹಣ್ಣು ತರಕಾರಿಗಳ ಕಮಿಷನ್ ವ್ಯವಹಾರ ಮಾಡುವ ವರಿಗೆ ಆದಾಯ ಹೆಚ್ಚುತ್ತದೆ. ಆಭರಣ ವ್ಯಾಪಾರಗಾರ ರಿಗೆ ಹಿನ್ನಡೆ ಇರುತ್ತದೆ. ಕರಕುಶಲ ವಸ್ತುಗಳನ್ನು ತಯಾ ರಿಸಿ ಮಾರುವವರಿಗೆ ಸ್ವಲ್ಪ ಅಭಿವೃದ್ಧಿ ಇರುತ್ತದೆ. ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)