ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ವಾರ ಭವಿಷ್ಯ | ಈ ರಾಶಿಯವರಿಗೆ ಕೆಲಸದ ಸ್ಥಳದಲ್ಲಿ ಕಸಿವಿಸಿಗಳು ಎದುರಾಗಬಹುದು
Published 1 ಜೂನ್ 2024, 23:30 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಮುನ್ನುಗ್ಗುವ ಉತ್ಸಾಹ ಬಹಳಷ್ಟಿರುತ್ತದೆ. ನಿರೀಕ್ಷಿತದ ಪ್ರಮಾಣದ ಆದಾಯ ಇರಲಿದೆ. ನಿಮ್ಮ ನಡವಳಿಕೆಯಲ್ಲಿ ವ್ಯವಹಾರಗಳ ಬಗ್ಗೆ ಹೆಚ್ಚು ಗಮನವಿರುತ್ತದೆ. ತಾಯಿಯ ಆರೋಗ್ಯಕ್ಕಾಗಿ ಹೆಚ್ಚು ಹಣ ಖರ್ಚು ಮಾಡಬೇಕಾದ ಸಂದರ್ಭ ಎದುರಾಗಬಹುದು. ಮಕ್ಕಳಿಗಾಗಿ ಹಣ ಖರ್ಚು ಮಾಡಬೇಕಾಗುತ್ತದೆ. ಕೆಲವೊಂದು ಆರೋಗ್ಯ ಸಮಸ್ಯೆಗಳು ಬಿಟ್ಟೂ ಬಿಡದೆ ಕಾಡಬಹುದು. ನಿಮ್ಮ ಕೆಲವು ಅಭಿಪ್ರಾಯಗಳನ್ನು ಸಂಗಾತಿ ವಿರೋಧಿಸುವ ಸಾಧ್ಯತೆ ಇದೆ. ಕೆಲವರಿಗೆ ಕೀಲುನೋವು ಭಾದಿಸಬಹುದು. ಕೆಲವರಿಗೆ ವಿದೇಶ ಪ್ರವಾಸ ಯೋಗವಿದೆ. ಕೃಷಿಕರಿಗೆ ಅನಿರೀಕ್ಷಿತವಾಗಿ ಲಾಭ ಹೆಚ್ಚಾಗುವ ಸಾಧ್ಯತೆಗಳಿವೆ. ತಂದೆಯಿಂದ ಧನಸಹಾಯವನ್ನು ನಿರೀಕ್ಷೆ ಮಾಡಬಹುದು. ವೃತ್ತಿಯ ಸ್ಥಳ ದಲ್ಲಿ ಸ್ವಲ್ಪ ಕಸಿವಿಸಿಗಳು ಎದುರಾಗಬಹುದು. ಸರ್ಕಾರಿ ಕೆಲಸ ಕಾರ್ಯಗಳು ನಿಧಾನವಾಗುತ್ತವೆ.
ವೃಷಭ
ಧೀಮಂತ ವ್ಯಕ್ತಿಯಂತೆ ವರ್ತಿಸಲು ಪ್ರಯತ್ನಪಡುವಿರಿ. ಆದಾಯವು ಅವಶ್ಯಕತೆಯನ್ನು ಪೂರೈಸುವಷ್ಟಿರುತ್ತದೆ. ಕೆಲಸ ಕಾರ್ಯಗಳಿಗೆ ಸ್ತ್ರೀಯರಿಂದ ಅಡ್ಡಿ ಬರಬಹುದು. ಸರ್ಕಾರಿ ಸಂಸ್ಥೆಗಳಿಂದ ಅಥವಾ ಸಂಘ ಸಂಸ್ಥೆಗಳಿಂದ ನಿವೇಶನ ಪಡೆಯುವ ಯೋಗವಿದೆ. ಧಾರ್ಮಿಕ ವಿದ್ಯೆಯನ್ನು ಕಲಿಯುತ್ತಿರುವವರಿಗೆ ಯಶಸ್ಸು ಸಿಗಲಿದೆ. ಅಜೀರ್ಣ ನಿಮ್ಮನ್ನು ಕಾಡುವ ಸಾಧ್ಯತೆ ಇದೆ. ಸಂಗಾತಿಯ ಕಡೆಯವರಿಗಾಗಿ ಹಣ ಖರ್ಚಾಗುವುದು. ವೃತ್ತಿಯಲ್ಲಿ ಸಾಕಷ್ಟು ಗೊಂದಲಗಳಿದ್ದರೂ ನಿಮ್ಮಉದ್ಯೋಗಕ್ಕೆ ತೊಂದರೆ ಇರುವುದಿಲ್ಲ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರವಹಿಸಿರಿ. ಬೆಳ್ಳಿ ಆಭರಣ ತಯಾರಕರಿಗೆ ವ್ಯಾಪಾರದಲ್ಲಿ ಸ್ವಲ್ಪ ಹಿನ್ನಡೆ ಆಗುವ ಸಾಧ್ಯತೆ ಇದೆ. ಸಂಗಾತಿ ಖರೀದಿಸಿದ ಆಸ್ತಿಯಲ್ಲಿ ಸಮಸ್ಯೆಗಳು ಎದುರಾಗಬಹುದು. ಸರ್ಕಾರಿ ಕಚೇರಿಯ ಕೆಲಸ ಕಾರ್ಯಗಳು ಸರಾಗವಾಗಿ ಆಗಲಿದೆ.
ಮಿಥುನ
ವಾರದ ಆರಂಭದಲ್ಲಿ ನಿರ್ಧಾರಗಳು ಬಹಳಾ ಗೋಜಲಾಗಿರುತ್ತವೆ. ವಿದೇಶಿ ನೆಲಗಳಲ್ಲಿ ಭಾಷಣ ಮಾಡುವವರಿಗೆ ಸಾಕಷ್ಟು ಅವಕಾಶಗಳು ದೊರೆಯಲಿವೆ. ಆದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ಸಿಗುತ್ತಿದ್ದ ಸಾರ್ವಜನಿಕರ ನೆರವು ನಿಲ್ಲಬಹುದು. ಬಹಳ ದಿನದಿಂದ ನೀವು ಮಾರಲು ಪ್ರಯತ್ನಿಸುತ್ತಿದ್ದ ಆಸ್ತಿಯನ್ನು ಈಗ ಮಾರಲು ಅವಕಾಶ ಸಿಗಲಿದೆ. ಅಧ್ಯಯನಶೀಲರಿಗೆ ಸ್ವಲ್ಪ ಹಿನ್ನಡೆ ಇರುತ್ತದೆ. ಮೂಳೆ ತಜ್ಞರಿಗೆ ಹೆಚ್ಚು ಲಾಭವಿರುತ್ತದೆ. ಸಂಗಾತಿ ಅಲಂಕಾರಕ್ಕಾಗಿ ಹೆಚ್ಚು ಹಣ ಖರ್ಚಾಗಲಿದೆ. ನವೀನ ರೀತಿಯ ಕೃಷಿಗೆ ಉಪಯೋಗಿಸುವ ಸಲಕರಣೆಗಳನ್ನು ತಯಾರು ಮಾಡುವವರಿಗೆ ವಹಿವಾಟು ಹೆಚ್ಚಾಗಲಿದೆ. ವೃತ್ತಿಯಲ್ಲಿ ಹಿರಿಯರ ನೆರವಿನಿಂದ ನಿಮಗೆ ಉನ್ನತ ಹುದ್ದೆ ಸಿಗುವ ಸಾಧ್ಯತೆ ಇದೆ. ಪುಸ್ತಕ ವ್ಯಾಪಾರಿಗಳಿಗೆ ಹೆಚ್ಚಿನ ವ್ಯಾಪಾರವಾಗಲಿದೆ.
ಕರ್ಕಾಟಕ
ನಿಮ್ಮಲ್ಲಿ ದ್ವಿಮುಖ ವ್ಯಕ್ತಿತ್ವ ಇರುತ್ತದೆ. ಆದಾಯವು ನಿಮ್ಮ ಅವಶ್ಯಕತೆಯನ್ನು ಪೂರೈಸುತ್ತದೆ. ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಆಲಸಿತನವನ್ನು ಕಾಣಬಹುದು. ಸಂಸಾರದಲ್ಲಿ ಸ್ವಲ್ಪ ಕಾವೇರಿದ ಮಾತುಗಳು ಎದುರಾಗಬಹುದು. ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಸೌಕರ್ಯ ದೊರೆಯುತ್ತದೆ. ಮೂತ್ರ ಸಂಬಂಧಿ ದೋಷಗಳು ಅಥವಾ ರಕ್ತ ಸಂಬಂಧಿ ದೋಷಗಳು ಕಾಣಿಸಬಹುದು. ಪತಿ–ಪತ್ನಿ ನಡುವೆ ಅಭಿಪ್ರಾಯ ಬರಬಹುದು. ಆರೋಗ್ಯಕ್ಕಾಗಿ ಹೆಚ್ಚು ಹಣ ಖರ್ಚಾಗುವುದು. ರಾಜಕೀಯ ನಾಯಕರುಗಳಿಗೆ ಕಾನೂನು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಆಟೋ ವೃತ್ತಿಯಲ್ಲಿ ಮೇಲ್ದರ್ಜೆಗೆ ಏರುವ ಎಲ್ಲಾ ಅವಕಾಶಗಳಿವೆ.
ಸಿಂಹ
ಸ್ವಲ್ಪ ಆತ್ಮಾಭಿಮಾನ ಅಧಿಕವಾಗಿರಲಿದೆ. ಆದಾಯವು ಕಡಿಮೆ ಮಟ್ಟದಲ್ಲಿರುತ್ತದೆ. ದ್ವಂದ್ವ ನಡವಳಿಕೆಗಳು ನಿಮ್ಮಲ್ಲಿ ಇರುತ್ತವೆ. ಆಸ್ತಿ ಖರೀದಿ ವಿಚಾರದಲ್ಲಿ ಮುಂದುವರೆಯಬಹುದು. ಮಕ್ಕಳಿಂದ ನಿಮ್ಮ ವೃತ್ತಿಗೆ ಸಹಕಾರ ಸಿಗುತ್ತದೆ. ಆಹಾರ ವ್ಯತ್ಯಾಸದಿಂದ ಹೊಟ್ಟೆಯಲ್ಲಿ ತೊಂದರೆ ಕಾಣಿಸಬಹುದು. ಸಂಗಾತಿಯು ನಿಮ್ಮ ಕೆಲವೊಂದು ನಡವಳಿಕೆಗಳನ್ನು ವಿರೋಧಿಸುವರು. ವೃತ್ತಿಯಲ್ಲಿ ಉತ್ತಮ ಹೆಸರು ಹಾಗೂ ಗಳಿಕೆ ಇರುತ್ತದೆ. ನಿಮ್ಮ ವ್ಯವಹಾರದ ಲಾಭವನ್ನು ಸಂಗಾತಿ ಅವರ ಸ್ವಂತಕ್ಕಾಗಿ ಕೇಳಬಹುದು. ತಂದೆಯ ವ್ಯಾಪಾರ ವ್ಯವಹಾರಗಳಲ್ಲಿ ನಿಮಗೆ ಪಾಲು ದೊರೆಯುತ್ತದೆ. ಕೌಟುಂಬಿಕ ವ್ಯವಹಾರಗಳನ್ನು ಈಗ ಮುಂದುವರಿಸುವುದು ಬಹಳ ಉತ್ತಮ.
ಕನ್ಯಾ
ಒಂದು ರೀತಿಯ ಹತಾಶ ಮನೋಭಾವ ನಿಮ್ಮಲ್ಲಿ ಇರುತ್ತದೆ. ಆದಾಯವು ಕಡಿಮೆ ಇರುತ್ತದೆ. ನಿಮ್ಮ ನಡವಳಿಕೆಗಳಿಗೆ ನಿಮ್ಮ ಸಂಗಾತಿ ಕಡೆಯವರು ಆಕ್ಷೇಪ ವ್ಯಕ್ತಪಡಿಸಬಹುದು. ಸಂಗಾತಿಗೆ ಹಿರಿಯರಿಂದ ಆಸ್ತಿ ಸಿಗಬಹುದು. ಮಕ್ಕಳಿಗಾಗಿ ಹೆಚ್ಚು ಹಣ ಖರ್ಚು ಮಾಡಲೇಬೇಕಾದ ಪರಿಸ್ಥಿತಿ ಇರುತ್ತದೆ. ಕಫದ ತೊಂದರೆ ಇರುವವರು ಎಚ್ಚರ ವಹಿಸಿ. ಸಂಗಾತಿಯ ವೈರುದ್ಯ ನಡವಳಿಕೆಗಳು ಈಗ ಯೋಚಿಸುವಂತೆ ಮಾಡುತ್ತವೆ. ತಾಯಿಯಿಂದ ಹೆಚ್ಚಿನ ಸಹಾಯ ದೊರೆಯುತ್ತದೆ. ವೃತ್ತಿಯಲ್ಲಿನ ಅಭಿವೃದ್ಧಿ ಮಂದಗತಿಯಲ್ಲಿರಲಿದೆ. ಅದಿರು ಉದ್ಯಮದವರಿಗೆ ಬೇಡಿಕೆ ಹೆಚ್ಚು. ಹಿರಿಯರಿಂದ ವೃತ್ತಿಯಲ್ಲಿ ಸ್ಥಾನ ಭದ್ರತೆ ಸಿಗಲಿದೆ. ಸರ್ಕಾರಿ ಸಾಲಗಳು ಈಗ ಸರಾಗವಾಗಿ ಸಿಗುತ್ತವೆ.
ತುಲಾ
ನಿಮ್ಮ ನಡವಳಿಕೆಯಲ್ಲಿ ಬಹಳ ಮಾರ್ಮಿಕತೆ ಇರುತ್ತದೆ. ಆದಾಯ ನಿಮ್ಮ ಖರ್ಚನ್ನು ತೂಗುವಷ್ಟಿರಲಿದೆ. ನಿಮ್ಮ ಕಾರ್ಯಚಟುವಟಿಕೆಗಳಿಗೆ ಕೆಲವರು ವಿರೋಧ ವ್ಯಕ್ತಪಡಿಸುವಂತ ಪರಿಸ್ಥಿತಿ ನಿರ್ಮಾಣವಾಗಲಿದೆ. ಸಾಂಪ್ರದಾಯಿಕ ಕೃಷಿ ಮಾಡುವವರಿಗೆ ಏಳಿಗೆ ಸಿಗಲಿದೆ. ರಾಜಕಾರಣಿಗಳಿಗೆ ಏಳಿಗೆ ಇದ್ದರೂ ಜನರನ್ನು ಓಲೈಸಬೇಕಾಗಲಿದೆ. ಜಲಸಂಬಂಧಿತ ದೋಷಗಳು ಈ ರಾಶಿಯ ಕೆಲವರಲ್ಲಿ ಕಾಣಿಸಬಹುದು. ಸಂಗಾತಿಯ ಅತಿ ಅಧಿಕಾರ ನಿಮ್ಮನ್ನು ಬಹಳ ಪೇಚಿಗೆ ಸಿಲುಕಿ ಸುತ್ತದೆ. ವೃತ್ತಿಯಲ್ಲಿ ಬಹಳ ಯಶಸ್ಸು ಇರುವುದಿಲ್ಲ. ಸರ್ಕಾರಿ ಗುತ್ತಿಗೆಗಳನ್ನು ನಿರ್ವಹಿಸುವವರಿಗೆ ಹಣ ಸಿಗುವುದು ಸ್ವಲ್ಪ ನಿಧಾನವಾಗಬಹುದು. ತಾಯಿಯಿಂದ ನಿಷ್ಠುರದ ನುಡಿಗಳನ್ನು ಕೇಳಬೇಕಾಗಬಹುದು.
ವೃಶ್ಚಿಕ
ಬಹಳ ಸೌಮ್ಯ ನಡವಳಿಕೆಯನ್ನು ಪ್ರದರ್ಶಿಸುವಿರಿ. ಆದಾಯವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ಯಾವುದೇ ಕೆಲಸವನ್ನು ಶ್ರಮಪಟ್ಟು ಮಾಡುವಿರಿ. ವಿದೇಶದಲ್ಲಿರುವವರು ಸ್ವದೇಶದಲ್ಲಿ ಆಸ್ತಿ ಮಾಡುವ ಅವಕಾಶ ಸಿಗಲಿದೆ. ಸೈನಿಕರಿಗೆ ಅಭಿವೃದ್ಧಿ ಇರುತ್ತದೆ. ನೀರಿನ ವ್ಯತ್ಯಾಸ ಅಥವಾ ಆಹಾರದ ವ್ಯತ್ಯಾಸದಿಂದ ಸ್ವಲ್ಪ ಅನಾರೋಗ್ಯ ಕಾಡಬಹುದು. ವ್ಯವಹಾರದಲ್ಲಿ ಸಂಗಾತಿಯ ಸಹಾಯಗಳು ದೊರೆಯುತ್ತವೆ. ವೃತ್ತಿಯಲ್ಲಿ ಸ್ವಲ್ಪ ಕಸಿವಿಸಿಗಳು ಇರುತ್ತವೆ. ಧರ್ಮಕಾರ್ಯಗಳನ್ನು ಮಾಡುವವರಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಸಹಕಾರಗಳು ದೊರೆಯಲಿವೆ. ಉದ್ಯೋಗ ಸ್ಥಳದಲ್ಲಿ ಸ್ನೇಹಿತರಷ್ಟೇ ಶತ್ರುಗಳೂ ಇರುವರು. ಧರ್ಮ ಕಾರ್ಯಗಳನ್ನು ಕೈಗೊಳ್ಳುವವರಿಗೆ ಆದಾಯ ಹೆಚ್ಚಿರಲಿದೆ.
ಧನು
ಬಹಳ ಗಂಭೀರ ನಡವಳಿಕೆ ನಿಮ್ಮಲ್ಲಿ ಇರುತ್ತದೆ. ಆದಾಯವು ಕಡಿಮೆ ಇದ್ದರೂ ಅದರಲ್ಲೇ ಜೀವನ ಸರಿದೂಗಿಸುವಿರಿ. ಎಲ್ಲರಿಗೂ ನ್ಯಾಯಯುತವಾದ ಗೌರವವನ್ನು ಕೊಡುವಿರಿ. ಆಸ್ತಿ ವಿಚಾರದಲ್ಲಿ ಮುಂದುವರೆಯದಿರುವುದು ಒಳ್ಳೆಯದು. ಕ್ರೀಡಾಪಟುಗಳಿಗೆ ತಮ್ಮ ಸಾಧನೆ ಮಾಡುವ ಅವಕಾಶವಿರುತ್ತದೆ. ಹೆಚ್ಚು ಸಾಲ ಮಾಡಿಕೊಳ್ಳುವುದು ಬೇಡ. ಅನಿರೀಕ್ಷಿತವಾಗಿ ಗಣಿಗಾರಿಕೆಗೆ ಇಳಿಯುವ ಪ್ರಸಂಗ ಎದುರಾಗಬಹುದು. ಹಿರಿಯರ ಆಸ್ತಿಯಲ್ಲಿ ನಿಮಗೆ ಭಾಗ ಸಿಗುವ ಸಾಧ್ಯತೆಗಳಿವೆ. ವೃತ್ತಿಯಲ್ಲಿ ಹೆಚ್ಚು ಕ್ರಿಯಾಶೀಲರಾಗಿ ಗೌರವ ಪಡೆಯುವಿರಿ. ಸ್ತ್ರೀಯರು ಲಲಿತ ಕಲೆಯ ಚಟುವಟಿಕೆಗಳಿಂದ ಆದಾಯವನ್ನು ಪಡೆಯಬಹುದು. ತಾಯಿಗೆ ನಿಮ್ಮ ಮೇಲೆ ಕೋಪವಿದ್ದರೂ ಅವರು ನಿಮ್ಮ ಪರವಾಗಿ ನಿಲ್ಲುವರು.
ಮಕರ
ನ್ಯಾಯ ನೀತಿಯಿಂದ ನಡೆಯುವಿರಿ. ಆದಾಯ ಕಡಿಮೆ ಇದ್ದರೂ ಅದರಲ್ಲೇ ಸರಿಯಾಗಿ ನಿರ್ವಹಣೆಯನ್ನು ಮಾಡುವಿರಿ. ಸ್ತ್ರೀಯರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಬಹುದು. ಕೃಷಿ ಭೂಮಿ ಹೊಂದುವ ಯೋಗವಿದೆ. ಕೃಷಿ ಅಭಿವೃದ್ಧಿಗಾಗಿ ಹೆಚ್ಚು ಶ್ರಮ ಪಡುವಿರಿ. ಮಕ್ಕಳಿಂದ ನಿಮಗೆ ಧನ ಸಹಾಯ ದೊರೆಯುತ್ತದೆ. ಯಾವುದೇ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಅನುಕೂಲವಿರುತ್ತದೆ. ಕಣ್ಣಿನ ತೊಂದರೆ ಅಥವಾ ರಕ್ತದ ವ್ಯತ್ಯಾಸಗಳು ಕಾಡಬಹುದು. ಸಂಗಾತಿಯು ನಿಮ್ಮ ಮೇಲೆ ಪ್ರಭಾವ ಬೀರಲು ಯತ್ನಿಸುವರು. ಸರ್ಕಾರಿ ಕಚೇರಿಯ ಕೆಲಸಕಾರ್ಯಗಳಲ್ಲಿ ಸರಾಗತೆಯನ್ನು ಕಾಣಬಹುದು. ತಂದೆಯಿಂದ ಧನಸಹಾಯ ಮತ್ತು ಮಾರ್ಗದರ್ಶನ ದೊರೆಯುತ್ತದೆ. ಧಾರ್ಮಿಕ ವಿಧಿ ವಿಧಾನಗಳನ್ನು ಸಂಪ್ರದಾಯಗಳನ್ನು ತಿಳಿಯಬಹುದು.
ಕುಂಭ
ಹಿರಿಯರು ಸಮಾಜವನ್ನು ತಿದ್ದುವ ಪ್ರಯತ್ನ ಮಾಡಲಿದ್ದಾರೆ. ಆದಾಯದಷ್ಟೇ ಖರ್ಚು ಇರುವ ಸಾಧ್ಯತೆಗಳಿವೆ. ಬಹಳ ಚುರುಕಾಗಿ ಕೆಲಸ ಮಾಡಲಿದ್ದೀರಿ. ಸಾಹಸ ಕಲಾವಿದರಿಗೆ ಬೇಡಿಕೆ ಹೆಚ್ಚಾಗಿ ಸಂಪಾದನೆಯೂ ಹೆಚ್ಚಲಿದೆ. ರಿಯಲ್ ಎಸ್ಟೇಟ್ ಏಜೆಂಟ್‌ಗಳಿಗೆ ಭರ್ಜರಿ ವ್ಯವಹಾರ ನಡೆಯಲಿದೆ. ಮಕ್ಕಳಿಂದ ಗೌರವ ದೊರೆಯುತ್ತದೆ. ಬಾಯಿ ತೊಂದರೆ ಅಥವಾ ನಾಲಿಗೆ ಹುಣ್ಣು ಸಮಸ್ಯೆ ತಲೆದೋರಬಹುದು. ಸಂಗಾತಿಯು ನಿಮ್ಮ ಮನಸ್ಸಿಗೆ ಅನುಗುಣವಾಗಿ ಸಹಕರಿಸುವರು. ವೃತ್ತಿಯಲ್ಲಿ ಆದಾಯ ಹೆಚ್ಚುವ ಸಾಧ್ಯತೆಗಳಿವೆ. ಯುವಕರಿಗೆ ಧರ್ಮಶ್ರದ್ದೆ ಕಡಿಮೆಯಾಗಬಹುದು. ತಂದೆಯಿಂದ ಧನಸಹಾಯ ಪಡೆಯುವಿರಿ. ಕೃಷಿಯಿಂದ ಸ್ವಲ್ಪ ಆದಾಯ ಸಿಗಲಿದೆ. ಸಾಹಸ ಕಲಾವಿದರಿಗೆ ಆದಾಯ ಹೆಚ್ಚುತ್ತದೆ. ಉದ್ಯೋಗ ಸ್ಥಳದಲ್ಲಿ ಕಿರಿ ಕಿರಿಗಳಿರುತ್ತವೆ.
ಮೀನ
ನಿಮ್ಮ ನಗೆಯ ಹಿಂದೆ ವ್ಯಂಗ್ಯವಿರುವುದು ಜನರಿಗೆ ತಿಳಿಯುತ್ತದೆ. ಆದಾಯವು ಮಂದಗತಿಯಲ್ಲಿ ಇರುತ್ತದೆ. ಕೆಲಸ ಕಾರ್ಯಗಳಿಗೆ ಎಲ್ಲರಿಂದ ಸಹಕಾರ ಸಿಗುತ್ತದೆ. ಆಸ್ತಿ ಮಾಡುವ ಹಂಬಲ ಹೆಚ್ಚಾಗಿರುತ್ತದೆ. ಮಕ್ಕಳು ನಿಮ್ಮಿಂದ ಹಣವಸೂಲಿ ಮಾಡುವರು. ಕಫದ ತೊಂದರೆ ಹೆಚ್ಚು ಕಾಣಿಸಬಹುದು. ನಿಮ್ಮ ಅಭಿಪ್ರಾಯಗಳಿಗೆ ಸಂಗಾತಿಯು ಮನ್ನಣೆ ನೀಡುವುದಿಲ್ಲ. ಕೃಷಿ ಉಪಕರಣಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ನಿರೀಕ್ಷಿಸುತ್ತಿದ್ದ ಆರ್ಥಿಕ ಸಹಾಯ ದೊರೆಯುವ ಸಾಧ್ಯತೆ ಇದೆ. ಹಿರಿಯರ ಸಹಕಾರಗಳು ಸಂಗಾತಿಯ ಮೂಲಕ ದೊರೆಯುತ್ತವೆ. ವೃತ್ತಿಯಲ್ಲಿದ್ದ ತೊಂದರೆಗಳು ದೂರವಾಗಿ ಸಂತೋಷದ ವಾತಾವರಣವಿರುತ್ತದೆ. ಸರ್ಕಾರಿ ವ್ಯವಹಾರಗಳಲ್ಲಿ ಲಾಭ ಕಡಿಮೆ ಇರುತ್ತದೆ.