ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಾಂತ್ ಚೋಪ್ರಾ ತ್ರಿಶತಕ

ರಣಜಿ ಟೂರ್ನಿ: ಗಂಭೀರ್‌, ರಾಣಾಗೆ ಶತಕ; ಇಶಾಂತ್‌ಗೆ 5 ವಿಕೆಟ್‌
Last Updated 7 ಅಕ್ಟೋಬರ್ 2017, 20:16 IST
ಅಕ್ಷರ ಗಾತ್ರ

ಧರ್ಮಶಾಲಾ: ಆರಂಭಿಕ ಬ್ಯಾಟ್ಸ್‌ಮನ್ ಪ್ರಶಾತ್ ಚೋಪ್ರಾ (338; 363 ಎ, 44 ಬೌಂ, 2 ಸಿ) ಬ್ಯಾಟಿಂಗ್‌ನಲ್ಲಿ ಮಿಂಚು ಹರಿಸಿದರು. ಈ ಬಾರಿಯ ರಣಜಿ ಕ್ರಿಕೆಟ್ ಟೂರ್ನಿಯ ಮೊದಲ ತ್ರಿಶಕತ ದಾಖಲಿಸಿದ ಆಟಗಾರ ಎಂಬ ಗರಿಮೆ ತಮ್ಮದಾಗಿಸಿಕೊಂಡರು. ಅವರ ಅಮೋಘ ಆಟದ ಬಲದಿಂದ ‘ಡಿ’ ಗುಂಪಿನ ಪಂಜಾಬ್‌ ಎದುರಿನ ಪಂದ್ಯದಲ್ಲಿ ಹಿಮಾಚಲ ಪ್ರದೇಶ ತಂಡ 729 ರನ್‌ ದಾಖಲಿಸಿತು.

ಗೌತಮ್ ಗಂಭೀರ್‌, ರಾಣಾಗೆ ಶತಕ

ಎಡಗೈ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ (ಔಟಾಗದೆ 136; 245 ಎ. 21 ಬೌಂ) ಮತ್ತು ನಿತೀಶ್ ರಾಣ (110; 158 ಎ, 18 ಬೌಂ) ಅವರ ಶತಕ ಮತ್ತು ಇವರಿಬ್ಬರ ನಡುವಿನ 207 ರನ್‌ಗಳ ಎರಡನೇ ವಿಕೆಟ್ ಜೊತೆಯಾಟದ ಬಲದಿಂದ ದೆಹಲಿ ತಂಡ ಉತ್ತಮ ಸ್ಥಿತಿಯಲ್ಲಿದೆ.

ಸಂಕ್ಷಿಪ್ತ ಸ್ಕೋರ್‌

ಎ ಗುಂಪು: ಅಸ್ಸಾಂ: 95 ಓವರ್‌ಗಳಲ್ಲಿ 258ಕ್ಕೆ ಆಲೌಟ್‌; ದೆಹಲಿ: 80 ಓವರ್‌ಗಳಲ್ಲಿ 4ಕ್ಕೆ 269 (ಗೌತಮ್‌ ಗಂಭೀರ್‌ 136, ನಿತೀಶ್ ರಾಣ 110); ರೈಲ್ವೇಸ್‌:76 ಓವರ್‌ಗಳಲ್ಲಿ 182ಕ್ಕೆ ಆಲೌಟ್‌; ಉತ್ತರ ಪ್ರದೇಶ: 85.5 ಓವರ್‌ಗಳಲ್ಲಿ 250ಕ್ಕೆ ಆಲೌಟ್; ರೈಲ್ವೇಸ್‌ (ಎರಡನೇ ಇನಿಂಗ್ಸ್‌): 14 ಓವರ್‌ಗಳಲ್ಲಿ 3ಕ್ಕೆ27.

ಬಿ ಗುಂಪು

ರಾಜಸ್ತಾನ: 115.2 ಓವರ್‌ಗಳಲ್ಲಿ 330ಕ್ಕೆ ಆಲೌಟ್‌; ಜಮ್ಮು ಮತ್ತು ಕಾಶ್ಮೀರ: 58 ಓವರ್‌ಗಳಲ್ಲಿ 1ಕ್ಕೆ150 (ಅಹಮ್ಮದ್ ಬಂಡಿ 73, ಶುಭಂ ಖಜೂರಿಯ 53);ಸೌರಾಷ್ಟ್ರ: 90.3 ಓವರ್‌ಗಳಲ್ಲಿ 278ಕ್ಕೆ ಆಲೌಟ್‌; ಹರಿಯಾಣ: 42.3 ಓವರ್‌ಗಳಲ್ಲಿ 107ಕ್ಕೆ ಆಲೌಟ್‌; ಸೌರಾಷ್ಟ್ರ (ಎರಡನೇ ಇನಿಂಗ್ಸ್‌): 29.4 ಓವರ್‌ಗಳಲ್ಲಿ 6ಕ್ಕೆ93; ಜಾರ್ಖಂಡ್‌: 73.2 ಓವರ್‌ಗಳಲ್ಲಿ 202ಕ್ಕೆ ಆಲೌಟ್‌; ಕೇರಳ: 86 ಓವರ್‌ಗಳಲ್ಲಿ 8ಕ್ಕೆ250.

ಸಿ ಗುಂಪು

ಮಧ್ಯಪ್ರದೇಶ: 164 ಓವರ್‌ಗಳಲ್ಲಿ 8ಕ್ಕೆ 551 ಡಿಕ್ಲೇರ್‌ (ಶುಭಂ ಶರ್ಮಾ 196, ಅಂಕಿತ್ ಶರ್ಮಾ 104); ಬರೋಡ: 13 ಓವರ್‌ಗಳಲ್ಲಿ 2ಕ್ಕೆ36; ತಮಿಳುನಾಡು: 85 ಓವರ್‌ಗಳಲ್ಲಿ 176ಕ್ಕೆ ಆಲೌಟ್‌; ಆಂಧ್ರಪ್ರದೇಶ: 93 ಓವರ್‌ಗಳಲ್ಲಿ 7ಕ್ಕೆ 231.

ಡಿ ಗುಂಪು

ಹಿಮಾಚಲ ಪ್ರದೇಶ: 148 ಓವರ್‌ಗಳಲ್ಲಿ 8ಕ್ಕೆ 729ಡಿಕ್ಲೇರ್‌ (ಪ್ರಶಾಂತ್ ಚೋಪ್ರಾ 338, ಪಾರಸ್‌ ದೋಗ್ರ 99); ಪಂಜಾಬ್‌: 30 ಓವರ್‌ಗಳಲ್ಲಿ 1ಕ್ಕೆ 110 (ಪರ್ಗತ್ ಸಿಂಗ್‌ 64); ಬಂಗಾಳ: 137 ಓವರ್‌ಗಳಲ್ಲಿ 9ಕ್ಕೆ 552ಡಿಕ್ಲೇರ್‌ (ಸುದೀಪ್ ಚಟರ್ಜಿ 115); ಸರ್ವಿಸಸ್‌: 39 ಓವರ್‌ಗಳಲ್ಲಿ 1ಕ್ಕೆ103; ಚತ್ತೀಸಗಡ: 161.3 ಓವರ್‌ಗಳಲ್ಲಿ 458ಕ್ಕೆ ಆಲೌಟ್‌ (ಮನೋಜ್‌ ಸಿಂಗ್‌ 125); ಗೋವಾ: 10 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 28.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT