ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರದಲ್ಲಿ ಜಗತ್ತಿನ ಅತಿ ಎತ್ತರದ ರಸ್ತೆ

Last Updated 2 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಶ್ರೀನಗರ: ಗಡಿ ರಸ್ತೆ ಸಂಸ್ಥೆಯು (ಬಿಆರ್‌ಒ) ಜಗತ್ತಿನ ಅತ್ಯಂತ ಎತ್ತರದ ವಾಹನ ಸಂಚಾರ ಸಾಧ್ಯವಿರುವ ರಸ್ತೆ ನಿರ್ಮಿಸಿದ ಕೀರ್ತಿಗೆ ಪಾತ್ರವಾಗಿದೆ. ‘ಹಿಮಾಂಕ್‌ ಯೋಜನೆ’ ಅಡಿಯಲ್ಲಿ ಈ ರಸ್ತೆ ನಿರ್ಮಿಸಲಾಗಿದೆ.

ಇಲ್ಲಿನ ಹವಾಮಾನವು ನಿರ್ಮಾಣ ಕಾಮಗಾರಿಗೆ ಸದಾ ಪ್ರತಿಕೂಲವೇ ಆಗಿತ್ತು. ನಿತ್ಯವೂ ಜೀವಕ್ಕೆ ಸವಾಲು ಒಡ್ಡುವಂತಹ ಪರಿಸ್ಥಿತಿಯಲ್ಲಿ ಈ ರಸ್ತೆ ನಿರ್ಮಿಸಲಾಗಿದೆ ಎಂದು ಹಿಮಾಂಕ್ ಯೋಜನೆಯ ಮುಖ್ಯ ಎಂಜಿನಿಯರ್‌ ಡಿ.ಎಂ. ಪೂರ್ವಿಮಠ್‌ ಹೇಳಿದ್ದಾರೆ.

ಡೆಮ್‌ಚೊಕ್‌ನಿಂದ ಕೂಗಳತೆ ದೂರದಲ್ಲಿ ಚೀನಾ

ಹವಾಮಾನ:

ಬೇಸಗೆಯಲ್ಲಿ ಮೈನಸ್‌ 10ರಿಂದ 20 ಡಿಗ್ರಿ ಸೆಲ್ಸಿಯಸ್‌

ಚಳಿಗಾಲ: ಮೈನಸ್‌ 40 ಡಿಗ್ರಿ ಸೆಲ್ಸಿಯಸ್‌

ಆಮ್ಲಜನಕ: ಸಾಮಾನ್ಯ ಸ್ಥಳಗಳಿಗಿಂತ ಶೇ 50ರಷ್ಟು ಕಡಿಮೆ

(ಯಂತ್ರಗಳ ನಿರ್ವಾಹಕರು ಆಮ್ಲಜನಕಕ್ಕಾಗಿ ಪ್ರತಿ 10 ನಿಮಿಷಕ್ಕೊಮ್ಮೆ ಕೆಳಗೆ ಬರಬೇಕಾಗುತ್ತಿತ್ತು)

ಎದುರಿಸಿದ ಸವಾಲುಗಳು

* ಪ್ರತಿಕೂಲ ಹವಾಮಾನದಿಂದಾಗಿ ಮನುಷ್ಯರು ಮತ್ತು ಯಂತ್ರಗಳ ಕಾರ್ಯಕ್ಷಮತೆ ಶೇ 50ರಷ್ಟು ಕುಂಠಿತ

* ಯಂತ್ರಗಳು ಕೆಟ್ಟು ಹೋಗುವುದು ಸಾಮಾನ್ಯ; ಆದರೆ ಅಷ್ಟು ಎತ್ತರದಲ್ಲಿ ದುರಸ್ತಿ ಕಷ್ಟ

* ಸಿಬ್ಬಂದಿ ಎದುರಿಸಿದ ಸಮಸ್ಯೆಗಳು ಅಪಾರ: ನೆನಪು ನಷ್ಟ, ಕಣ್ಣು ಕಾಣದಂತಾಗುವುದು, ಅತಿಯಾದ ರಕ್ತದೊತ್ತಡದಂತಹ ಸಮಸ್ಯೆಗಳು ಕಾಡಿವೆ

ಹಿಮಾಂಕ್‌ ಯೋಜನೆ ಪೂರ್ಣಗೊಳಿಸಿದ ಮುಖ್ಯ ರಸ್ತೆಗಳು

* ಖರ್ದುಂಗಾ ಲಾ ರಸ್ತೆ: 17,900 ಅಡಿ ಎತ್ತರ

* ಚಾಂಗ್ಲಾ ಪಾಸ್‌: 17,695 ಅಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT