‘ಮೋದಿ, ರಾಹುಲ್‌ ಮೀಸೆ, ಬಾಲದ ಕೂದಲಿನಷ್ಟು ಭಿನ್ನ’

7

‘ಮೋದಿ, ರಾಹುಲ್‌ ಮೀಸೆ, ಬಾಲದ ಕೂದಲಿನಷ್ಟು ಭಿನ್ನ’

Published:
Updated:
‘ಮೋದಿ, ರಾಹುಲ್‌ ಮೀಸೆ, ಬಾಲದ ಕೂದಲಿನಷ್ಟು ಭಿನ್ನ’

ಶಿವಪುರಿ(ಮಧ್ಯಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ ನಾಯಕರ ನಡುವಿನ ವ್ಯತ್ಯಾಸ ಮೀಸೆ ಮತ್ತು ಬಾಲದ ಕೂದಲಿನಷ್ಟೆಎಂದು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್‌ ನೀಡಿರುವ ಹೇಳಿಕೆಗೆ ಆಕ್ಷೇಪ ವ್ಯಕ್ತವಾಗಿದೆ.

ಎರಡು ದಿನಗಳ ಹಿಂದೆ ಅವರು ಜಿಲ್ಲೆಯ ಕೊಲರಸ್‌ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದರು. ಹಾರ್ದಿಕ್‌ ಪಟೇಲ್‌ ಮತ್ತಿತರರ ಸಹಾಯದಿಂದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನೀಡಿದ್ದ ಪೈಪೋಟಿ ಕುರಿತು ಮಾತನಾಡುವಾಗ ಈ ಹೇಳಿಕೆ ನೀಡಿದ್ದರು. ಅಲ್ಲದೆ, ಮೀಸೆ ಮತ್ತು ಬಾಲದ ಕೂದಲಿನ ಈ ವ್ಯತ್ಯಾಸವನ್ನು ಕಾಂಗ್ರೆಸ್‌ ಸರಿದೂಗಿಸಲು ಆಗದು ಎಂದಿದ್ದರು.

ಹೇಳಿಕೆ ಕುರಿತು ಸಚಿವರನ್ನು ಸಂಪರ್ಕಿಸಿದಾಗ, ‘ನಾನು ಕಾಂಗ್ರೆಸ್‌ನ ಯಾವ ನಾಯಕರ ಹೆಸರನ್ನೂ ಉಲ್ಲೇಖಿಸಿಲ್ಲ. ಮೋದಿ ಮತ್ತು ಕಾಂಗ್ರೆಸ್‌ ನಾಯಕರ ವ್ಯಕ್ತಿತ್ವಗಳ ನಡುವಿನ ವ್ಯತ್ಯಾಸವನ್ನಷ್ಟೇ ಹೇಳಿದ್ದೆ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry