ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟಾರ್ಟ್‌ಅಪ್‌: ಉತ್ತೇಜನ ಅಗತ್ಯ

Last Updated 22 ಜನವರಿ 2018, 19:30 IST
ಅಕ್ಷರ ಗಾತ್ರ

ಹೈದರಾಬಾದ್‌: ‘ನಿಯಂತ್ರಣ ಕ್ರಮಗಳು ಸಡಿಲುಗೊಂಡರೆ ನವೋದ್ಯಮಗಳು ತ್ವರಿತವಾಗಿ ಏಳಿಗೆ ಹೊಂದಲಿವೆ’ ಎಂದು ಇನ್ಫೊಸಿಸ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ವಿ. ಬಾಲಕೃಷ್ಣನ್‌ ಅಭಿಪ್ರಾಯಪಟ್ಟಿದ್ದಾರೆ.

‘ಕಠಿಣ ಸ್ವರೂಪದ ನಿಯಂತ್ರಣ ಕ್ರಮಗಳು ಮತ್ತು ತೆರಿಗೆ ಪಾವತಿ ಬದ್ಧತೆಗಳೇ ಸ್ಟಾರ್ಟ್‌ಅಪ್‌ಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾಗಿವೆ. ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್‌ ಪಡೆಯುವ, ಹೂಡಿಕೆಗೆ ತೆರಿಗೆ ವಿಧಿಸುವ ಸಮಸ್ಯೆಗಳನ್ನು ಸ್ಟಾರ್ಟ್‌ಅಪ್‌ಗಳು ಎದುರಿಸುತ್ತಿವೆ. 25 ರಿಂದ 30 ವರ್ಷದ ಒಳಗಿನ ಉತ್ಸಾಹಿ ನವೋದ್ಯಮಿಗಳು 30ರಿಂದ 40 ಕಾನೂನುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ. ಸ್ಟಾರ್ಟ್‌ಅಪ್‌ ಸ್ನೇಹಿ ಆಗಿರುವ ರೀತಿಯಲ್ಲಿ ಕಾಯ್ದೆಗಳನ್ನು ಸರಳಗೊಳಿಸಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.

‘ನಿಯಂತ್ರಣ ಕ್ರಮಗಳಲ್ಲಿ ಸ್ಪಷ್ಟತೆ ಇರಬೇಕು. ಅಂತಹ ವಾತಾವರಣ ನಿರ್ಮಾಣವಾದರೆ ಮಾತ್ರ ಸ್ಟಾರ್ಟ್‌ಅಪ್‌ಗಳು ಪ್ರಗತಿಪಥದಲ್ಲಿ ಸಾಗಲಿವೆ. ಕಳೆದೆರಡು ವರ್ಷಗಳಲ್ಲಿ ಸ್ಟಾರ್ಟ್‌ಅಪ್‌ ವಲಯದಲ್ಲಿ ಅನೇಕ ಏರಿಳಿತಗಳು ಘಟಿಸಿವೆ. ಈಗ ಸ್ಥಿರತೆ ಕಂಡುಬರುತ್ತಿದೆ. ಎಲ್ಲ ನವೋದ್ಯಮಗಳು ಬಂಡವಾಳ ಆಕರ್ಷಿಸುತ್ತಿಲ್ಲ. ಹೂಡಿಕೆದಾರರು ಎಚ್ಚರಿಕೆಯಿಂದ ಹಣ ತೊಡಗಿಸುತ್ತಿದ್ದಾರೆ.

‘ಉದ್ದಿಮೆಗಳಿಂದ ಗ್ರಾಹಕರಿಗೆ (ಬಿಟುಸಿ) ಬದಲಿಗೆ, ಉದ್ದಿಮೆಗಳಿಂದ ಉದ್ದಿಮೆಗಳಿಗೆ (ಬಿಟುಬಿ) ಮಾರುಕಟ್ಟೆಗೆ ಈಗ ಹೆಚ್ಚಿನ ಮಹತ್ವ ಸಿಗುತ್ತಿದೆ. ಇಂತಹ ನವೋದ್ಯಮಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹೂಡಿಕೆಯ ಅಗತ್ಯ ಕಂಡು ಬರುವುದಿಲ್ಲ’ ಎಂದು ಅವರು ವಿಶ್ಲೇಷಿಸಿದ್ದಾರೆ.

‘ಬೇರುಬಿಟ್ಟಿರುವ ಹಳೆಯ ಕಂಪನಿಗಳಿಗೆ ಅನ್ವಯಿಸುವ ಕಾನೂನುಗಳಿಗೆ ಬದ್ಧವಾಗಿರಬೇಕು ಎಂದು ಸ್ಟಾರ್ಟ್‌ಅಪ್‌ಗಳಿಂದ ನಿರೀಕ್ಷಿಸುವಂತಿಲ್ಲ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT