ಕೇರಳ: ಶಾಲೆಯಲ್ಲಿ ಭಾಗವತ್ ಧ್ವಜಾರೋಹಣ

6

ಕೇರಳ: ಶಾಲೆಯಲ್ಲಿ ಭಾಗವತ್ ಧ್ವಜಾರೋಹಣ

Published:
Updated:
ಕೇರಳ: ಶಾಲೆಯಲ್ಲಿ ಭಾಗವತ್ ಧ್ವಜಾರೋಹಣ

ಪಾಲಕ್ಕಾಡ್‌: ಆರ್‌ಎಸ್‌ಎಸ್‌ ಕಾರ್ಯಕರ್ತರು ನಡೆಸುತ್ತಿರುವ ಇಲ್ಲಿನ ವ್ಯಾಸ ವಿದ್ಯಾಪೀಠಂ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಗಣರಾಜ್ಯೋತ್ಸವದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಧ್ವಜಾರೋಹಣ ಮಾಡಿದರು.

ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ಕರ್ನಕಿಯಮ್ಮನ್‌ನ ಸರ್ಕಾರಿ ಅನುದಾನಿತ ಶಾಲೆಯಲ್ಲಿ ಧ್ವಜಾರೋಹಣ ಮಾಡಿದ್ದರು. ಇದಕ್ಕೆ ವಿವಿಧೆಡೆಯಿಂದ ಆಕ್ಷೇಪ ವ್ಯಕ್ತವಾಗಿತ್ತು. ಇದರ ನಂತರ ಸುತ್ತೋಲೆ ಹೊರಡಿಸಿದ್ದ ಶಿಕ್ಷಣ ಇಲಾಖೆ, ಸರ್ಕಾರಿ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಅಥವಾ ವಿಭಾಗದ ಮುಖ್ಯಸ್ಥರು ಮಾತ್ರ ಧ್ವಜಾರೋಹಣ ಮಾಡಬೇಕು ಎಂದು ಸೂಚಿಸಿತ್ತು.

ಭಾಗವತ್ ಧ್ವಜಾರೋಹಣ ಮಾಡಿರುವುದಕ್ಕೆ ಆಡಳಿತಾರೂಢ ಸಿಪಿಎಂ ಮತ್ತು ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿವೆ. ಸರ್ಕಾರದ ನಿರ್ದೇಶನ ಉಲ್ಲಂಘಿಸಿ, ಧ್ವಜಾರೋಹಣ ಮಾಡಿರುವ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿವೆ. ಸರ್ಕಾರ ಈ ಕುರಿತು ವ್ಯಾಸ ವಿದ್ಯಾಪೀಠಂ ಪ್ರೌಢಶಾಲೆಯ ಆಡಳಿತ ಮಂಡಳಿಯಿಂದ ವಿವರಣೆ ಕೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry