ಮೂರು ವರ್ಷ ಸಾಕು

7

ಮೂರು ವರ್ಷ ಸಾಕು

Published:
Updated:

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಅಧಿಕಾರ ಅವಧಿಯನ್ನು ಐದು ವರ್ಷಕ್ಕೆ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಸಾಹಿತ್ಯ ಪರಿಷತ್ತು ರಾಜಕೀಯ ಸಂಘಟನೆಯಲ್ಲ. ಭಾಷೆ, ಸಾಹಿತ್ಯ, ಸಾಂಸ್ಕೃತಿಕ ಕಾಳಜಿ ಹೊಂದಿ ಅವುಗಳ ಅಭಿವೃದ್ಧಿಗಾಗಿ ದುಡಿಯುವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ಇಂಥ ಸಂಸ್ಥೆಯ ಅಧ್ಯಕ್ಷರಿಗೆ ಮೂರು ವರ್ಷಗಳ ಅಧಿಕಾರಾವಧಿ ಸಾಕು.

ಕ.ಸಾ.ಪ. ತಾಲ್ಲೂಕು ಘಟಕದ ಅಧ್ಯಕ್ಷನಾಗಿ, ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ನಾನು ಕೂಡ ಕಾರ್ಯನಿರ್ವಹಿಸಿದ್ದೇನೆ. ಇಂಥ ಚಟುವಟಿಕೆಗಳಿಗಾಗಿ ಓಡಾಟ ನಡೆಸುವಾಗ ಸಹಜವಾಗಿ ಖರ್ಚುವೆಚ್ಚಗಳಾಗುತ್ತವೆ. ಕ.ಸಾ.ಪ. ಪದಾಧಿಕಾರಿಗಳಿಗೆ ಯಾವುದೇ ವೇತನ– ಭತ್ಯೆ ಇಲ್ಲದ್ದರಿಂದ ಕೆಲವೊಮ್ಮೆ ಆರ್ಥಿಕ ಸಂಕಷ್ಟವೂ ಆಗುತ್ತಿತ್ತು. ಈ ದೃಷ್ಟಿಯಿಂದಲೂ ಸಹ ಕ.ಸಾ.ಪ. ಅಧ್ಯಕ್ಷರ ಅವಧಿ ಮೂರು ವರ್ಷಕ್ಕೆ ಮಿತಿಯಾಗುವುದೇ ಸೂಕ್ತವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry