ಮೇಘಾಲಯದಲ್ಲಿ ಎನ್‌ಪಿಪಿ ಸರ್ಕಾರ: ಕೊನ್ರಾಡ್‌ ಸಂಗ್ಮಾ ವಿಶ್ವಾಸ

ಬುಧವಾರ, ಮಾರ್ಚ್ 27, 2019
22 °C

ಮೇಘಾಲಯದಲ್ಲಿ ಎನ್‌ಪಿಪಿ ಸರ್ಕಾರ: ಕೊನ್ರಾಡ್‌ ಸಂಗ್ಮಾ ವಿಶ್ವಾಸ

Published:
Updated:
ಮೇಘಾಲಯದಲ್ಲಿ ಎನ್‌ಪಿಪಿ ಸರ್ಕಾರ: ಕೊನ್ರಾಡ್‌ ಸಂಗ್ಮಾ ವಿಶ್ವಾಸ

ಶಿಲ್ಲಾಂಗ್‌: ಮೇಘಾಲಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿರುವುದರಿಂದ ಸಮಾನ ಮನಸ್ಕ ಪಕ್ಷಗಳೊಂದಿಗೆ ಸೇರಿ ನ್ಯಾಷನಲ್‌ ಪೀಪಲ್ಸ್ ಪಾರ್ಟಿ(ಎನ್‌ಪಿಪಿ) ಸರ್ಕಾರ ರಚಿಸಲಿದೆ ಎಂದು ಪಕ್ಷದ ಅಧ್ಯಕ್ಷ ಕೊನ್ರಾಡ್‌ ಸಂಗ್ಮಾ ಹೇಳಿದ್ದಾರೆ.

‘ಸರ್ಕಾರ ರಚಿಸುವ ಕುರಿತು ಎನ್‌ಪಿಪಿಗೆ ವಿಶ್ವಾಸವಿದೆ. ಭ್ರಷ್ಟ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮೇಘಾಲಯದ ಜನ ರೋಸಿಹೋಗಿದ್ದಾರೆ. ಬದಲಾವಣೆಗೆ ಅವರು ಹಾತೊರೆಯುತ್ತಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ಮೇಘಾಲಯದ 59 ಸ್ಥಾನಗಳಲ್ಲಿ ಕಾಂಗ್ರೆಸ್‌ 21, ಎನ್‌ಪಿಪಿ 17, ಬಿಜೆಪಿ 2 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.ಇತರ ಪಕ್ಷಗಳ 19 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಮಣಿಪುರ ಹಾಗೂ ಗೋವಾದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾದಾಗ, ಅಲ್ಲಿನ ಸಣ್ಣಪುಟ್ಟ ಪಕ್ಷಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳ ನೆರವಿನಿಂದ ಸರ್ಕಾರ ರಚಿಸುವುಲ್ಲಿ ಬಿಜೆಪಿ ಸಫಲವಾಗಿತ್ತು.

ಹಾಗಾಗಿ, ಮೈತ್ರಿ ಸರ್ಕಾರ ರಚನೆ ಕುರಿತು ಮೇಘಾಲಯದ ಇತರ ಪಕ್ಷಗಳೊಂದಿಗೆ ಮಾತುಕತೆ ನಡೆಸಲು ಇಲ್ಲಿಗೆ ದೌಡಾಯಿಸುವಂತೆ ಅಸ್ಸಾಂ ಸಚಿವ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಬಿಜೆಪಿ ತಿಳಿಸಿದೆ.

ಇದೇ ಕಾರಣಕ್ಕೆ ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಅಹ್ಮದ್‌ ಪಟೇಲ್‌ ಹಾಗೂ ಕಮಲ್‌ ನಾಥ್‌ ಅವರೂ ಇಲ್ಲಿಗೆ ಆಗಮಿಸಿದ್ದಾರೆ.

ಮೇಘಾಲಯದ 59 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರುವರಿ 27ರಂದು ಚುನಾವಣೆ ನಡೆದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry