ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ರೇವಣ್ಣ ಕಿಡಿ

7

ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ರೇವಣ್ಣ ಕಿಡಿ

Published:
Updated:
ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ರೇವಣ್ಣ ಕಿಡಿ

ಹಾಸನ: ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ಜೆಡಿಎಸ್‌ನ ಹೆಚ್.ಡಿ.ರೇವಣ್ಣ ತಿರುಗೇಟು ನೀಡಿದ್ದು ಉಪಕಾರ ಮಾಡಿದವರನ್ನು ಮರೆಯುವುದೇ ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್‌ನವರು ಬೆಂಬಲ ನೀಡಿದ ಪಕ್ಷಗಳಿಗೇ ಟೋಪಿ ಹಾಕಿದ್ದಾರೆ, ಇವರಿಗೆ ನಾಚಿಕೆಯಾಗಬೇಕು, ದೇವೇಗೌಡರಿಗೆ ಹೊಂದಾಣಿಕೆ ರಾಜಕೀಯ ಗೊತ್ತಿಲ್ಲ, ಹಾಗಿದ್ದರೆ ಪ್ರಧಾನಿ ಹುದ್ದೆ ಬಿಟ್ಟು ಬರುತ್ತಿರಲಿಲ್ಲ ಎಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು. ಯುಪಿಎ ಸರಕಾರಕ್ಕೆ ಯಾರು ಸಹಾಯ ಮಾಡಿದ್ರು ಅನ್ನೋದನ್ನು ರಾಹುಲ್ ಗಾಂಧಿ ಅವರ ತಾಯಿಯನ್ನು ಕೇಳಲಿ ಎಂದು ಟಾಂಗ್ ನೀಡಿದರು.

ರಾಹುಲ್ ಗಾಂಧಿ ಸಿದ್ಧ ಭಾಷಣ ಓದುವುದನ್ನು ಮೊದಲು ನಿಲ್ಲಿಸಲಿ, ಅನುಭವದ ಕೊರತೆ ಇರುವ ಅವರಿಗೆ

ದೇವೇಗೌಡರ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ? ಮೊದಲು ಅವರ ತಾಯಿಯನ್ನು ಕೇಳಿ ನಂತರ ಮಾತನಾಡಲಿ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry