‘ಬಿಜೆಪಿ ಡಿಎನ್‌ಎ ಸುಳ್ಳುಗಳಿಂದ ತುಂಬಿದೆ’

7

‘ಬಿಜೆಪಿ ಡಿಎನ್‌ಎ ಸುಳ್ಳುಗಳಿಂದ ತುಂಬಿದೆ’

Published:
Updated:

ನವದೆಹಲಿ: ಬಿಜೆಪಿಯ ಡಿಎನ್‌ಎಯಲ್ಲಿ ಬರೀ ಸುಳ್ಳುಗಳೇ ತುಂಬಿವೆ ಮತ್ತು ಅದರ ಹರಡುವಿಕೆಯು ಮಿತಿ ಮೀರಿದೆ ಎಂದು ಕಾಂಗ್ರೆಸ್ ವಕ್ತಾರ ಟಾಮ್ ವಡಕ್ಕನ್ ಶನಿವಾರ ವ್ಯಂಗ್ಯ ವಾಡಿದ್ದಾರೆ.

‘ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಸುಳ್ಳುಗಳನ್ನು ಹರಿಬಿಡುತ್ತಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಕ್ಕೆ ಕಾಂಗ್ರೆಸ್ ಮರುಟೀಕೆ ಮಾಡಿದೆ.

‘ನೀವು ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗಬೇಕು’ ಎಂದು ಹೇಳಿದ ವಡಕ್ಕನ್, 39 ಭಾರತೀಯರು ಇರಾಕ್‌ನಲ್ಲಿ ಕೊಲೆಯಾದ ಪ್ರಕರಣವನ್ನು ತಮ್ಮ ಮಾತಿಗೆ ಸಮರ್ಥನೆಯಾಗಿ ನೀಡಿದರು.

‘2019ರಲ್ಲಿ (ಲೋಕಸಭೆ ಚುನಾವಣೆ) ಬಿಜೆಪಿ/ಎನ್‌ಡಿಎಯ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಆಗ ಎಲ್ಲವೂ ತಿಳಿಯಲಿದೆ. ತಮ್ಮ ಅಧ್ಯಕ್ಷ ಅಮಿತ್ ಶಾ ಅವರಿಂದ ಬಿಜೆಪಿ ಸುಳ್ಳು ಹೇಳುವ ಕಲೆಯನ್ನು ಸಿದ್ಧಿಸಿಕೊಂಡಿದೆ’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry