ವೆಸ್ಟ್‌ ಇಂಡೀಸ್‌ಗೆ ಅಫ್ಗಾನ್ ಆಘಾತ

7
ಬಲಿಷ್ಠ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದ ಅಸ್ಗರ್ ಬಳಗ

ವೆಸ್ಟ್‌ ಇಂಡೀಸ್‌ಗೆ ಅಫ್ಗಾನ್ ಆಘಾತ

Published:
Updated:
ವೆಸ್ಟ್‌ ಇಂಡೀಸ್‌ಗೆ ಅಫ್ಗಾನ್ ಆಘಾತ

ಹರಾರೆ, ಜಿಂಬಾಬ್ವೆ: ವೆಸ್ಟ್ ಇಂಡೀಸ್‌ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದ ಅಫ್ಗಾನಿಸ್ತಾನ ತಂಡದವರು ನಂತರ ಅಮೋಘ ಬ್ಯಾಟಿಂಗ್ ಮೂಲಕ ಮಿಂಚಿದರು. ಇದರ ಪರಿಣಾಮ ವಿಶ್ವಕಪ್‌ ಅರ್ಹತಾ ಸುತ್ತಿನ ಟೂರ್ನಿಯ ಪ್ರಶಸ್ತಿಯನ್ನು ಗೆದ್ದಿತು.

ಭಾನುವಾರ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ ನೀಡಿದ 205 ರನ್‌ಗಳ ಗುರಿ ಬೆನ್ನತ್ತಿದ ಆಫ್ತಾನಿಸ್ತಾನ 40.4 ಓವರ್‌ಗಳಲ್ಲಿ ಜಯಗಳಿಸಿತು.

ಆರಂಭಿಕ ಬ್ಯಾಟ್ಸ್‌ಮನ್ ಮಹಮ್ಮದ್‌ ಶಹಜಾದ್‌ (84; 93 ಎ, 2 ಸಿ, 11 ಬೌಂ) ಮತ್ತು ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ರಹಮತ್ ಶಾ (51; 78 ಎ, 4 ಬೌಂ) ಅವರ ಕೆಚ್ಚೆದೆಯ ಆಟ ಈ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್‌ನ ಪ್ರಮುಖ ಬ್ಯಾಟ್ಸ್‌

ಮನ್‌ಗಳು ವೈಫಲ್ಯ ಕಂಡರು. ಕ್ರಿಸ್‌ ಗೇಲ್‌ ಕೇವಲ 10 ರನ್‌ ಗಳಿಸಿ ಔಟಾದರೆ ಮಾರ್ಲನ್‌ ಸ್ಯಾಮ್ಯುಯೆಲ್ಸ್‌ 17 ರನ್ ಗಳಿಸಿದರು. ನಾಯಕ ಜೇಸನ್ ಹೋಲ್ಡರ್‌ ಶೂನ್ಯಕ್ಕೆ ಔಟಾದರು. 23 ರನ್ ಗಳಿಸಿದ ಹೋಪ್‌ ಏಕದಿನ ಕ್ರಿಕೆಟ್‌ನಲ್ಲಿ ಒಂದು ಸಾವಿರ ರನ್ ಪೂರೈಸಿದರು.

ನಾಲ್ಕು ವಿಕೆಟ್ ಗಳಿಸಿದ ಮುಜೀಬ್ ಉರ್‌ ರಹಮಾನ್ ಮತ್ತು ಎರಡು ವಿಕೆಟ್ ಕಬಳಿಸಿದ ಗುಲ್ಬದೀನ್ ನಯೀಬ್‌ ವೆಸ್ಟ್ ಇಂಡೀಸ್‌ನ ಪತನಕ್ಕೆ ಕಾರಣರಾದರು.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್ ಇಂಡೀಸ್‌,

46.5 ಓವರ್‌ಗಳಲ್ಲಿ 204ಕ್ಕೆ ಆಲೌಟ್‌ (ಲೂವಿಸ್ 27, ಹೋಪ್‌ 23, ಹೆಟ್ಮಿಯರ್‌ 38, ಪೊವೆಲ್ 44, ಆ್ಯಶ್ಲೆ ನರ್ಸೆ 26; ಮುಜೀಬ್ ಉರ್‌ ರಹಮಾನ್‌ 43ಕ್ಕೆ4, ಗುಲ್ಬದೀನ್‌ ನಯೀಬ್‌ 28ಕ್ಕೆ2);

ಅಫ್ಗಾನಿಸ್ತಾನ: 40.4 ಓವರ್‌ಗಳಲ್ಲಿ 3ಕ್ಕೆ 206 (ಮಹಮ್ಮದ್ ಶಹಜಾದ್‌ 84, ರಹಮತ್ ಶಾ 51, ಶಮಿಉಲ್ಲಾ ಶೆನ್ವಾರಿ 20, ಮಹಮ್ಮದ್ ನಬಿ 27; ಕ್ರಿಸ್ ಗೇಲ್‌ 38ಕ್ಕೆ2).

ಫಲಿತಾಂಶ: ಅಫ್ಗಾನಿಸ್ತಾನಕ್ಕೆ ಏಳು ವಿಕೆಟ್‌ಗಳ ಜಯ.

ಪಂದ್ಯಶ್ರೇಷ್ಠ: ಮಹಮ್ಮದ್ ಶಹಜಾದ್‌ (ಅಫ್ಗಾನಿಸ್ತಾನ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry