ಸಂವಿಧಾನ ಉಳಿಸಿ ಅಭಿಯಾನಕ್ಕೆ 23ರಂದು ಕಾಂಗ್ರೆಸ್‌ ಚಾಲನೆ

7

ಸಂವಿಧಾನ ಉಳಿಸಿ ಅಭಿಯಾನಕ್ಕೆ 23ರಂದು ಕಾಂಗ್ರೆಸ್‌ ಚಾಲನೆ

Published:
Updated:

ನವದೆಹಲಿ: ದಲಿತರು ಹಾಗೂ ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್‌ ಪಕ್ಷ ಅದರ ಕುರಿತು ಜನರ ಗಮನ ಸೆಳೆಯುವ ಉದ್ದೇಶದಿಂದ ‘ಸಂವಿಧಾನ ಉಳಿಸಿ’ ಅಭಿಯಾನ ಆರಂಭಿಸಲಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಏಪ್ರಿಲ್ 23ರಂದು ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ಕಾಂಗ್ರೆಸ್‌ನ ಮಾಜಿ ಹಾಗೂ ಹಾಲಿ ದಲಿತ ಶಾಸಕರು, ಜಿಲ್ಲಾ ಪರಿಷತ್‌, ನಗರ ಪಾಲಿಕೆ ಹಾಗೂ ಪಂಚಾಯಿತಿ ಸಮಿತಿಗಳಲ್ಲಿ ಅಧಿಕಾರದಲ್ಲಿರುವವರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ.

ದಲಿತ ಸಮುದಾಯಕ್ಕೆ ಸಂಬಂಧಿಸಿ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಜಾಗೃತಿ ಮೂಡಿಸುವುದು ಇದರ ಉದ್ದೇಶ. ರಾಜ್ಯಗಳ ಮಟ್ಟದಲ್ಲಿ ಇಂತಹುದೇ ಕಾರ್ಯಕ್ರಮಗಳನ್ನು ನಡೆಸುವ ಮೂಲಕ, ದಲಿತರಿಗೆ ಈ ಅಭಿಯಾನದ ಸಂದೇಶ ರವಾನಿಸಲಾಗುತ್ತದೆ ಎಂದು ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ಮತ್ತು ಪಂಗಡ ವಿಭಾಗದ ಮುಖ್ಯಸ್ಥ ಹಾಗೂ ಕಾರ್ಯಕ್ರಮ ಸಂಘಟಕ ನಿತಿನ್ ರಾವತ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry