ಒಂದು ತಿಂಗಳು ಗಡುವು ವಿಸ್ತರಿಸಿದ ಯುಐಡಿಎಐ

7
ಜುಲೈ1ರಿಂದ ರಾಷ್ಟ್ರವ್ಯಾಪಿ ಕಡ್ಡಾಯ

ಒಂದು ತಿಂಗಳು ಗಡುವು ವಿಸ್ತರಿಸಿದ ಯುಐಡಿಎಐ

Published:
Updated:
ಒಂದು ತಿಂಗಳು ಗಡುವು ವಿಸ್ತರಿಸಿದ ಯುಐಡಿಎಐ

ನವದೆಹಲಿ: ಆಧಾರ್‌ ಸಂಖ್ಯೆಗೆ ಪರ್ಯಾಯವಾಗಿ ಬಳಸಬಹುದಾದ ಹೊಸ ‘ಪರ್ಯಾಯ ಗುರುತಿನ ಸಂಖ್ಯೆ’ (ವರ್ಚ್ಯುವಲ್ ಐಡಿ–ವಿಐಡಿ) ವ್ಯವಸ್ಥೆ ಜಾರಿಯ ಗಡುವನ್ನು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಒಂದು ತಿಂಗಳು ವಿಸ್ತರಿಸಿದೆ.

ಈ ಮೊದಲು ಪ್ರಾಧಿಕಾರ ತಿಳಿಸಿದಂತೆ ಜೂನ್ 1ರಿಂದಲೇ ವಿಐಡಿ ವ್ಯವಸ್ಥೆ ಜಾರಿಯಾಗಬೇಕಿತ್ತು. ತಾಂತ್ರಿಕ ಕಾರಣಗಳಿಂದಾಗಿ ವ್ಯವಸ್ಥೆ ಜಾರಿಯ ಗಡುವನ್ನು ಜುಲೈ1ಕ್ಕೆ ಮುಂದೂಡಲಾಗಿದೆ.

ಮುಂದಿನ ತಿಂಗಳಿನಿಂದ ವಿಐಡಿಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವಂತೆ ಪ್ರಾಧಿಕಾರ ಗುರುವಾರ ಸೇವಾದಾತ ಕಂಪನಿಗಳು, ಟೆಲಿಕಾಂ ಸಂಸ್ಥೆ ಮತ್ತು ಬ್ಯಾಂಕ್‌ಗಳಿಗೆ ಸೂಚಿಸಿದೆ.

ಸೇವಾದಾತ ಕಂಪನಿಗಳು ಸದ್ಯ ವಿಐಡಿ ಸ್ವೀಕರಿಸುವುದು ಐಚ್ಛಿಕವಾಗಿದ್ದು ಮುಂದಿನ ತಿಂಗಳಿನಿಂದ ಕಡ್ಡಾಯವಾಗಲಿದೆ ಎಂದು ಪ್ರಾಧಿಖಾರದ ಸಿಇಓ ಅಜಯ್‌ ಭೂಷಣ್‌ ತಿಳಿಸಿದ್ದಾರೆ.

ಜೂನ್‌ನಿಂದಲೇ ವಿಐಡಿ ಜಾರಿಗೆ ಪ್ರಾಧಿಕಾರ ಸಿದ್ಧವಾಗಿತ್ತು. ಆದರೆ, ಸೇವಾದಾತ ಕಂಪೆನಿಗಳು ಕಾಲಾವಕಾಶ ಕೋರಿವೆ. ಸಂಪರ್ಕ ಜಾಲ ಜೋಡಣೆಯಲ್ಲಿ ಕಾಣಿಸಿಕೊಂಡ ತಾಂತ್ರಿಕ ಅಡಚಣೆಯಿಂದಾಗಿ ಒಂದು ತಿಂಗಳು ಅವಧಿ ವಿಸ್ತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry