ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಕ್ರಮ ಹೋರ್ಡಿಂಗ್ಸ್: ಮಹಾರಾಷ್ಟ್ರದ ಲಾತೂರ್‌ಲ್ಲಿ 15 ಪ್ರಕರಣ ದಾಖಲು

Published 21 ಮೇ 2024, 4:17 IST
Last Updated 21 ಮೇ 2024, 4:17 IST
ಅಕ್ಷರ ಗಾತ್ರ

ಲಾತೂರ್: ಅಕ್ರಮ ಹೋರ್ಡಿಂಗ್ಸ್ ಹಾಕಿರುವ ಸಂಬಂಧ ಮಹಾರಾಷ್ಟ್ರದ ಲಾತೂರ್‌ನಲ್ಲಿ 15 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 11 ಪ್ರಕರಣಗಳು ಒಂದೇ ದಿನ ದಾಖಲಾಗಿವೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಲಾತೂರ್ ಮುನ್ಸಿಪಲ್ ಕಾರ್ಪೊರೇಶನ್ ಅಧಿಕಾರಿಗಳು ನಗರದಲ್ಲಿ ಎರಡು ಹೋರ್ಡಿಂಗ್ಸ್ ಮತ್ತು 15 ಬ್ಯಾನರ್‌ಗಳನ್ನು ತೆರವು ಮಾಡಿದ್ದಾರೆ.

ಮೇ 13ರಂದು ಅಕ್ರಮ ಹೋರ್ಡಿಂಗ್ ಮುರಿದುಬಿದ್ದು ಹಲವರು ಮೃತಪಟ್ಟ ದುರಂತ ಮುಂಬೈನಲ್ಲಿ ನಡೆದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.

ಅಕ್ರಮ ಹೋರ್ಡಿಂಗ್ಸ್‌ಗಳನ್ನು ತೆರವು ಮಾಡಲು ಭಾನುವಾರದವರೆಗೆ ಗಡುವು ನೀಡಲಾಗಿದೆ.

ಈ ಸಂಬಂಧ ಇತ್ತೀಚೆಗೆ ಸಭೆ ನಡೆಸಿದ್ದ ಪಾಲಿಕೆ ಆಯುಕ್ತರು, ಮುಂಬೈನಂತಹ ದುರಂತ ನಡೆಯದಂತೆ ಎಚ್ಚರಿಕೆ ವಹಿಸಬೇಕು ಮತ್ತು ಅಕ್ರಮ ಹೋರ್ಡಿಂಗ್ಸ್‌ಗಳನ್ನು ತೆರವು ಮಾಡುವ ಪ್ರಕ್ರಿಯೆ ತೀವ್ರಗೊಳಿಸಬೇಕು ಎಂದು ಸೂಚಿಸಿದ್ದರು.

ಭಾನುವಾರ ಡೆಡ್‌ಲೈನ್ ಇರುವ ಹಿನ್ನೆಲೆ ಕೆಲವು ಸಂಸ್ಥೆಗಳು ಈಗಾಗಲೇ ಹೋರ್ಡಿಂಗ್ಸ್‌ಗಳನ್ನು ತೆರವು ಮಾಡಿವೆ.

ಮೇ 13ರಂದು ಮುಂಬೈನ ಘಾಟ್‌ಕೋಪರ್‌ನ ಛೇಡಾ ನಗರ ಪ್ರದೇಶದಲ್ಲಿ ಬೃಹತ್‌ ಜಾಹೀರಾತು ಫಲಕ ಉರುಳಿ ಬಿದ್ದು ಅದರಡಿ ಸಿಲುಕಿ16 ಮಂದಿ ಮೃತಪಟ್ಟಿದ್ದರು.

ಮುಂಬೈನಲ್ಲಿ ಇದ್ದಕ್ಕಿದ್ದ ಹಾಗೆ ಭಾರಿ ಗಾಳಿಯೊಂದಿಗೆ ಮಳೆ ಬಂದಿದ್ದರಿಂದ ಬೃಹತ್‌ ಗಾತ್ರದ ಜಾಹೀರಾತು ಫಲಕವು ಪೆಟ್ರೋಲ್‌ ಪಂಪ್‌ ಮೇಲೆ ಉರುಳಿತ್ತು.

66 ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯವು ಕಳೆದ ಗುರುವಾರ ಮುಕ್ತಾಯವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT