ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಪ್ರದೇಶ: ಅಕ್ರಮ ಗೋ ಸಾಗಾಟಗಾರನ ಎನ್‌ಕೌಂಟರ್‌, ಬಂಧನ

Published 29 ಡಿಸೆಂಬರ್ 2023, 13:22 IST
Last Updated 29 ಡಿಸೆಂಬರ್ 2023, 13:22 IST
ಅಕ್ಷರ ಗಾತ್ರ

ಇಟ್ಹಾ: ಅಕ್ರಮ ಗೋ ಸಾಗಾಟ ದಂಧೆಕೋರನೊಬ್ಬನನ್ನು ಎನ್‌ಕೌಂಟರ್‌ ಮಾಡಿ ಬಂಧಿಸಲಾಗಿದೆ ಎಂದು ಉತ್ತರಪ್ರದೇಶ ಪೊಲೀಸರು ತಿಳಿಸಿದ್ದಾರೆ.

‘ಗುರುವಾರ ರಾತ್ರಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ, ಅಮಪುರ್‌ದಿಂದ ಇಟ್ಹಾ ಕಡೆಗೆ ಬರುತ್ತಿದ್ದ ಇಬ್ಬರು ಪ್ರಯಾಣಿಕರಿದ್ದ ವಾಹನವನ್ನು ತಡೆಯಲು ಪ್ರಯತ್ನಿಸಲಾಗಿದೆ. ಆದರೆ ಈ ವೇಳೆ ಆರೋಪಿಗಳು ಪೊಲೀಸರ ಕಡೆಗೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾರೆ’ ಎಂದು ‌ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ ರಾಜೇಶ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.

‘ಪೊಲೀಸರು ಮತ್ತು ಆರೋಪಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಅಮೋರಾ ಜಿಲ್ಲೆಯ ಖಾಲಿದ್‌ ಎಂಬಾತನ ಬಲಗಾಲಿಗೆ ಗುಂಡು ತಗುಲಿದೆ. ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನೊಂದಿಗಿದ್ದ ಜಾವೇದ್‌ ಎನ್ನುವ ವ್ಯಕ್ತಿ ಪರಾರಿಯಾಗಿದ್ದಾನೆ’ ಎಂದು ತಿಳಿಸಿದ್ದಾರೆ.

ಆರೋಪಿ ಖಾಲಿದ್‌ ಮೇಲೆ ಈ ಹಿಂದೆ ದರೋಡೆ ಮತ್ತು ಅಕ್ರಮ ಗೋ ಸಾಗಾಟದ ಪ್ರಕರಣಗಳು ದಾಖಲಾಗಿದ್ದವು. ಪೊಲೀಸ್‌ ಇಲಾಖೆಯು ಆತನನ್ನು ಹುಡುಕಿಕೊಟ್ಟವರಿಗೆ ₹50 ಸಾವಿರ ಬಹುಮಾನ ಘೋಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT