ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

₹200 ಕೋಟಿ ಬ್ಯಾಂಕ್ ಸಾಲ ವಂಚನೆ ಕೇಸ್: ಜಮ್ಮು–ಕಾಶ್ಮೀರ ಸೇರಿ ಹಲವೆಡೆ ಇ.ಡಿ ದಾಳಿ

Published 31 ಜನವರಿ 2024, 5:27 IST
Last Updated 31 ಜನವರಿ 2024, 5:27 IST
ಅಕ್ಷರ ಗಾತ್ರ

ಜಮ್ಮು: ಭಾರತ್ ಪೇಪರ್ಸ್ ಲಿಮಿಟೆಡ್‌ಗೆ(ಬಿಪಿಎಲ್‌) ಸಂಬಂಧಿಸಿದ ₹200 ಕೋಟಿ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು(ಇ.ಡಿ) ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಉತ್ತರ ಪ್ರದೇಶ ರಾಜ್ಯಗಳ ಹಲವೆಡೆ ದಾಳಿ ನಡೆಸಿದೆ.

ಮೂರೂ ರಾಜ್ಯಗಳ 9 ಸ್ಥಳಗಳಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ(ಪಿಎಂಎಲ್‌ಎ) ಇ.ಡಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಬಿಪಿಎಲ್ ಕಂಪನಿಯು ಜಮ್ಮು ಮತ್ತು ಲುಧಿಯಾನ ಮೂಲದ ಭಾರತ್ ಬಾಕ್ಸ್ ಫ್ಯಾಕ್ಟರಿ ಇಂಡಸ್ಟ್ರೀಸ್‌ನ(ಬಿಪಿಎಫ್‌ಐಎಲ್) ಅಸೋಸಿಯೇಟ್ ಸಂಸ್ಥೆಯಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಹಲವು ಬ್ಯಾಂಕ್‌ಗಳಿಗೆ ಈ ಸಂಸ್ಥೆಯ ನಿರ್ದೇಶಕರು ₹200 ಕೋಟಿ ವಂಚಿಸಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್, ಪಿಎನ್‌ಬಿ ಮತ್ತು ಕರೂರ್ ವೈಶ್ಯ ಬ್ಯಾಂಕ್‌ಗೂ ವಂಚಿಸಿರುವ ಆರೋಪವಿದೆ.

ರಾಜಿಂದರ್ ಕುಮಾರ್, ಪ್ರವೀಣ್ ಕುಮಾರ್, ಬಲ್ಜಿಂದರ್ ಸಿಂಗ್, ಅನಿಲ್ ಕುಮಾರ್ ಮತ್ತು ಅನಿಲ್ ಕಶ್ಯಪ್ ಭಾರತ್ ಪೇಪರ್ಸ್ ಲಿಮಿಟೆಡ್‌ನ ನಿರ್ದೇಶಕರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT