ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎಯಿಂದ ಮತುವಾ ಸಮುದಾಯದವರಿಗೆ ರಕ್ಷಣೆ: ಕೇಂದ್ರ ಸಚಿವ ಶಂತನು ಠಾಕೂರ್

Published 6 ಏಪ್ರಿಲ್ 2024, 13:37 IST
Last Updated 6 ಏಪ್ರಿಲ್ 2024, 13:37 IST
ಅಕ್ಷರ ಗಾತ್ರ

ಕೋಲ್ಕತ್ತ: ‘ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತುವಾ ಸಮುದಾಯವರಿಗೆ ನ್ಯಾಯಯುತವಾಗಿ ಪೌರತ್ವ ಕೊಡಿಸುವ ಮೂಲಕ ಅವರ ರಕ್ಷಣೆ ಮಾಡಲಿದೆ’ ಎಂದು ಕೇಂದ್ರ ಸಚಿವ ಮತುವಾ ನಾಯಕ ಶಂತನು ಠಾಕೂರ್ ಅಭಿಪ್ರಾಯಪಟ್ಟಿದ್ದಾರೆ.

ಇದರಿಂದ ಭವಿಷ್ಯದಲ್ಲಿ ಎನ್ಆರ್‌ಸಿ ಜಾರಿ ಸಂದರ್ಭದಲ್ಲಿ ಮತುವಾ ಸಮುದಾಯವರಿಗೆ ವಿದೇಶೀಯರು ಎಂದು ಹಣೆಪಟ್ಟಿ ಕಟ್ಟುವುದು ತಪ್ಪಲಿದೆ ಎಂದೂ ಹೇಳಿದ್ದಾರೆ.

ಎನ್‌ಆರ್‌ಸಿ 100 ವರ್ಷಗಳ ನಂತರವಾದರೂ ಜಾರಿಯಾಗಬಹುದು. ಹೀಗಾಗಿ, ಸಂವಿಧಾನದತ್ತವಾಗಿ ಏಕೆ ಭದ್ರತೆ ಪಡೆಯಬಾರದು ಎಂದು ಪ್ರಶ್ನಿಸಿದರು.

ಸಿಎಎ ಅಡಿ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಬಾಂಗ್ಲಾದೇಶದಲ್ಲಿ ಹಿಂದೆ ನೆಲೆಸಿದ್ದ ವಿಳಾಸದ ದಾಖಲೆ ನೀಡುವುದು ಕಡ್ಡಾಯವಲ್ಲ. ಸಮುದಾಯ ಸಂಘಟನೆಗಳು ನೀಡುವ ಪ್ರಮಾಣಪತ್ರ ಸಾಕು. ಈ ಬಗ್ಗೆ ಗೊಂದಲ ಅನಗತ್ಯ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

ಮೂಲತಃ ಪೂರ್ವ ಪಾಕಿಸ್ತಾನದ ಮತುವಾ, ಹಿಂದೂಗಳಲ್ಲಿನ ದುರ್ಬಲ ವರ್ಗವಾಗಿದೆ. ದೇಶ ವಿಭಜನೆ ಹಾಗೂ ಬಾಂಗ್ಲಾದೇಶ ರಚನೆಯಾದ ಬಳಿಕ ಸಮುದಾಯದವರು ಭಾರತಕ್ಕೆ ವಲಸೆ ಬಂದಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT