ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉ.ಪ್ರದೇಶದಲ್ಲಿ ಭಾರತ ನ್ಯಾಯ ಯಾತ್ರೆ ಯಶಸ್ಸಿಗೆ ಸಂಚಾಲಕರನ್ನು ನೇಮಿಸಿದ ಕಾಂಗ್ರೆಸ್

Published 1 ಫೆಬ್ರುವರಿ 2024, 3:36 IST
Last Updated 1 ಫೆಬ್ರುವರಿ 2024, 3:36 IST
ಅಕ್ಷರ ಗಾತ್ರ

ಲಖನೌ: ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ 'ಭಾರತ ನ್ಯಾಯ ಯಾತ್ರೆ'ಯು ಉತ್ತರ ಪ್ರದೇಶದಲ್ಲಿ ಯಶಸ್ವಿಯಾಗಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್‌ ಪಕ್ಷವು ಸಂಚಾಲಕರನ್ನು ನೇಮಕ ಮಾಡಿದೆ.

ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಅಜಯ್‌ ರಾಯ್ ಅವರು ಮಾಜಿ ಸಂಸದ ಪಿ.ಎಲ್‌. ಪೂನಿಯಾ ಅವರನ್ನು ಸಂಚಾಲಕರನ್ನಾಗಿ ಮತ್ತು ಶಾಸಕಿ ಆರಾಧನಾ ಮಿಶ್ರಾ ಅವರನ್ನು ಸಹ ಸಂಚಾಲಕರನ್ನಾಗಿ ನೇಮಿಸಿದ್ದಾರೆ ಎಂದು ಪಕ್ಷದ ವಕ್ತಾರ ಮನೀಶ್‌ ಹಿಂಡ್ವಿ ತಿಳಿಸಿದ್ದಾರೆ.

ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ನ್ಯಾಯ ಯಾತ್ರೆಯು ಚಂದೌಲಿ ಜಿಲ್ಲೆಯ ಮೂಲಕ ಫೆಬ್ರುವರಿ 14ರಂದು ಉತ್ತರ ಪ್ರದೇಶವನ್ನು ಪ್ರವೇಶಿಸಲಿದೆ. ರಾಜ್ಯದಲ್ಲಿ 11 ದಿನ ಸಾಗಲಿರುವ ಈ ಯಾತ್ರೆಯು 20 ಜಿಲ್ಲೆಗಳಲ್ಲಿ ಹಾದುಹೋಗಲಿದೆ ಎಂದೂ ಮನೀಶ್‌ ಹೇಳಿದ್ದಾರೆ.

ಯಾತ್ರೆಯ ವೇಳೆ ರಾಹುಲ್‌ ಅವರು ಪಕ್ಷದ ಹಿರಿಯ ನಾಯಕರೊಂದಿಗೆ ಹಲವೆಡೆ ಸಾರ್ವಜನಿಕ ಸಭೆಗಳನ್ನು ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT