ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಗ್ರಾಮ | ಮಳಿಗೆ ಮಾಲೀಕನಿಂದ ಮಹಿಳೆಗೆ ಕಿರುಕುಳ: ಎಫ್‌ಐಆರ್‌

Published 5 ಜೂನ್ 2024, 15:17 IST
Last Updated 5 ಜೂನ್ 2024, 15:17 IST
ಅಕ್ಷರ ಗಾತ್ರ

ಗುರುಗ್ರಾಮ: ಉದ್ಯೋಗ ಕೇಳಿಕೊಂಡು ಬಂದಿದ್ದ 23 ವರ್ಷ ವಯಸ್ಸಿನ ಮಹಿಳೆಯನ್ನು ಪೀಡಿಸಿದ, ಕಿರುಕುಳ ನೀಡಿದ ಮತ್ತು ಬೆದರಿಸಿದ ಆರೋಪದ ಮೇಲೆ ಇಲ್ಲಿಯ ಪೀಠೋಪಕರಣ ಮಳಿಗೆಯೊಂದರ ಮಾಲೀಕನ ಮೇಲೆ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

‘ಅತುಲ್‌ ಕಟಾರಿಯ ಚೌಕದ ಶ್ರೀ ಕೃಷ್ಣ ಫರ್ನಿಚರ್ಸ್‌ ಮಳಿಗೆಯ ಮಾಲಿ ಕಮಹೇಶ್‌ ಗೋಯಲ್‌ನನ್ನು ಉದ್ಯೋಗ ಕೇಳಿಕೊಂಡು ಮೇ 16ರಂದು ಭೇಟಿಯಾಗಿದ್ದೆ. ಆ ವೇಳೆ ನನ್ನನ್ನು ಕಚೇರಿಗೆ ಕರೆದೊಯ್ದಿದ್ದ ಆತ ಕಿರುಕುಳ ನೀಡಿದ್ದ. ಆತನಿಂದ ತಪ್ಪಿಸಿಕೊಂಡು ಮನೆಗೆ ಮರಳಿದ್ದ. ಅದೇ ದಿನ ರಾತ್ರಿಯಿಂದ ನನಗೆ ಕರೆ ಮಾಡಿ ಮಳಿಗೆಗೆ ಬರುವಂತೆ ಬೆದರಿಕೆ ಒಡ್ಡಿದ್ದ. ಅಂದಿನಿಂದ ಆತ ನನಗೆ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಾನೆ’ ಎಂದು ಮಹಿಳೆ ಆರೋಪಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿಯು ತನ್ನ ಮೇಲೆ ಅತ್ಯಾಚಾರ ನಡೆಸಲೂ ಯತ್ನಿಸಿದ್ದಾನೆ ಮತ್ತು ಕೊಲೆ ಬೆದರಿಕೆ ಒಡ್ಡಿದ್ದಾನೆ ಎಂದು ಕೂಡಾ ಸಂತ್ರಸ್ತೆ ಆರೋಪಿಸಿದ್ದಾಳೆ. 

‘ಮೇಲೆ ಮೇ 27ರಂದು ಎಫ್‌ಐಆರ್‌ ದಾಖಲಿಸಲಾಗಿದೆ. 10 ದಿನಗಳು ಕಳೆದರೂ ಮಹೇಶ್‌ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಆತ ನನಗೆ ನಿರಂತರವಾಗಿ ಬೆದರಿಕೆಯೊಡ್ಡುತ್ತಿದ್ದಾನೆ. ನನಗೆ ನ್ಯಾಯ ಬೇಕು’ ಎಂದು ಸಂತ್ರಸ್ತೆಯು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾಳೆ. 

ಪ್ರಕರಣದ ಸತ್ಯಾಸತ್ಯತೆ ಕುರಿತು ಪೊಲೀಸರ ತಂಡವು ಪರಿಶೀಲನೆ ನಡೆಸುತ್ತಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT