ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಹ್ರೌಲಿಯ ಅಖೂಂದ್‌ಜಿ ಮಸೀದಿಯಲ್ಲಿ ಪ್ರಾರ್ಥನೆಗೆ ನಿರಾಕರಣೆ

Published 16 ಮಾರ್ಚ್ 2024, 13:42 IST
Last Updated 16 ಮಾರ್ಚ್ 2024, 13:42 IST
ಅಕ್ಷರ ಗಾತ್ರ

ನವದೆಹಲಿ: ಇತ್ತೀಚೆಗೆ ಕೆಡವಲಾಗಿದ್ದ ಮೆಹ್ರೌಲಿಯ ಅಖೂಂದ್‌ಜಿ ಮಸೀದಿಯಲ್ಲಿ ಪವಿತ್ರ ರಂಜಾನ್‌ ತಿಂಗಳ ಪ್ರಾರ್ಥನೆ ಸಲ್ಲಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ವಜಾ ಮಾಡಿದೆ.

ಮುಂತಾಜ್ಮಿಯಾ ಕಮಿಟಿ ಮದರಸಾ ಬೆಹ್ರುಲ್ ಉಲುಮ್‌ ಆ್ಯಂಡ್ ಕಬರಸ್ತಾನ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್‌ ದತ್ತಾ ಅವರು ವಜಾ ಮಾಡಿದ್ದು, ‘ಶಬ್‌–ಎ– ಬರಾತ್‌ ಸಂದರ್ಭದಲ್ಲಿಯೂ ಈ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಭಕ್ತರಿಗೆ ಕಳೆದ ತಿಂಗಳು ಈ ನ್ಯಾಯಾಲಯವು ಅವಕಾಶ ನೀಡಿರಲಿಲ್ಲ. ಅದೇ ರೀತಿ, ಈ ಮನವಿಗೆ ಸಂಬಂಧಿಸಿದಂತೆ ಬೇರೆ ದೃಷ್ಟಿಕೋನದಲ್ಲಿ ಯೋಚಿಸಿ ನಿರ್ಧರಿಸಲು ಯಾವ ಸಮರ್ಥನೆಯೂ ಕಾಣುತ್ತಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT