ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಿ: ಗುಂಡಿಚಾ ದೇವಾಲಯ ತಲುಪಿದ ಜಗನ್ನಾಥ ರಥ ಯಾತ್ರೆ

Published 21 ಜೂನ್ 2023, 17:14 IST
Last Updated 21 ಜೂನ್ 2023, 17:14 IST
ಅಕ್ಷರ ಗಾತ್ರ

ಪುರಿ (ಪಿಟಿಐ): ಇಲ್ಲಿನ ಜಗನ್ನಾಥ ದೇವರು ಮತ್ತು ದೇವಿ ಸುಭದ್ರಾರನ್ನು ಹೊತ್ತ ರಥವು ರಾತ್ರಿಯಿಡೀ ಮೆರವಣಿಗೆ ಮೂಲಕ ಸಾಗಿ ಬುಧವಾರ ಗುಂಡಿಚಾ ದೇವಾಲಯಕ್ಕೆ ತಲುಪಿತು.

ಸುಭದ್ರಾ ದೇವಿಯ ‘ದರ್ಪದಲ’ ರಥವು ಗುಂಡಿಚಾದಿಂದ 200 ಮೀಟರ್‌ ದೂರವಿರುವ ಬಂದಸಖ ಪ್ರದೇಶದಲ್ಲಿ ನಿಂತಿದ್ದು, ಜಗನ್ನಾಥ ದೇವರ  ‘ನಂದಿಗೋಶ್‌’ ರಥವು ಗಲಗಂಡಿ ಪ್ರದೇಶದಲ್ಲಿ ನಿಂತಿತು. 

ಗುಂಡಿಚಾ ದೇವಾಲಯದ ಒಳಗೆ ದೇವರ ವಿಗ್ರಹ ಕೊಂಡೊಯ್ಯಲಾಗಿದ್ದು, ಜೂನ್‌ 28ರವರೆಗೆ ಅಲ್ಲಿ ಇರಲಿದೆ.

ಮಂಗಳವಾರ ನಡೆದ ರಥಯಾತ್ರೆಯ ಮೆರವಣಿಗೆ ಯಲ್ಲಿ ಸುಮಾರು 12 ಲಕ್ಷ ಭಕ್ತಾದಿಗಳು ಪಾಲ್ಗೊಂಡಿದ್ದರು.  ರಥ ಎಳೆಯುವ ವೇಳೆ ಉಂಟಾದ ನೂಕು ನುಗ್ಗಲಿನಿಂದ 14 ಮಂದಿ ಗಾಯಗೊಂಡಿದ್ದಾರೆ ಎಂದು ಪುರಿಯ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಸಿಂಗ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT