ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಬದುಕಿರುವವರೆಗೂ ಆದಿವಾಸಿಗಳ ಮೀಸಲಾತಿ ಕಸಿಯಲು ಬಿಡುವುದಿಲ್ಲ: ಮೋದಿ

Published 23 ಮೇ 2024, 12:56 IST
Last Updated 23 ಮೇ 2024, 12:56 IST
ಅಕ್ಷರ ಗಾತ್ರ

ಮಹೇಂದ್ರಗಢ(ಹರಿಯಾಣ): ನಾನು ಬದುಕಿರುವವರೆಗೂ ದಲಿತರು ಮತ್ತು ಆದಿವಾಸಿಗಳ ಮೀಸಲಾತಿಯನ್ನು ಕಸಿದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಮಹೇಂದ್ರಗಢದಲ್ಲಿ ನಡೆದ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಈ ಚುನಾವಣೆಯಲ್ಲಿ ನೀವು ದೇಶದ ಪ್ರಧಾನಿಯನ್ನು ಆಯ್ಕೆ ಮಾಡುವುದಲ್ಲದೆ, ದೇಶದ ಭವಿಷ್ಯವನ್ನು ನಿರ್ಧರಿಸುತ್ತೀರಿ’ ಎಂದರು.

‘ಇಂಡಿಯಾ ಬಣವು ಕೋಮುವಾದಿ, ಜಾತಿವಾದಿ, ಸ್ವಜನಪಕ್ಷಪಾತಿಯಾಗಿದ್ದು, ‌ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರಾಮಮಂದಿರ ನಿರ್ಮಿಸಲು ಅವಕಾಶ ನೀಡಿರಲಿಲ್ಲ’ ಎಂದು ವಿರೋಧ ಪಕ್ಷಗಳ ಒಕ್ಕೂಟದ ವಿರುದ್ಧ ವಾಗ್ದಾಳಿ ನಡೆಸಿದರು.

‘ಪ್ರಧಾನಿ ಹುದ್ದೆಗೆ ಇಂಡಿಯಾ ಬಣದಲ್ಲಿ ಮಾತುಕತೆ ನಡೆಯುತ್ತಿದ್ದು, ‘ಐದು ವರ್ಷ ಐದು ಪ್ರಧಾನಿ‘ ಬಗ್ಗೆ ಚರ್ಚಿಸುತ್ತಿದೆ. ಹಸು ಹಾಲು ಕೊಡದಿದ್ದರು, ತುಪ್ಪಕ್ಕಾಗಿ ಜಗಳ ನಡೆಯುತ್ತಿದೆ’ ಎಂದು ಮಾರ್ಮಿಕವಾಗಿ ನುಡಿದರು.

ಹರಿಯಾಣದ 10 ಲೋಕಸಭಾ ಕ್ಷೇತ್ರಗಳಿಗೆ ಮೇ 25ರಂದು ಮತದಾನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT