ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17ನೇ ಲೋಕಸಭೆ: ಬಿಜೆಪಿಯ ಇಬ್ಬರು ಸಂಸದರು ಶೇ 100ರಷ್ಟು ಹಾಜರಾತಿ

ಚರ್ಚೆಯಲ್ಲಿ ಭಾಗಿಯಾಗದ ಕರ್ನಾಟಕದ 4 ಸಂಸದರು
Published 13 ಫೆಬ್ರುವರಿ 2024, 13:39 IST
Last Updated 13 ಫೆಬ್ರುವರಿ 2024, 13:39 IST
ಅಕ್ಷರ ಗಾತ್ರ

ನವದೆಹಲಿ : ಬಿಜೆಪಿ ಸಂಸದರಾದ ಮೋಹನ್‌ ಮಾಂಡವಿ ಮತ್ತು ಭಗೀರಥ್‌ ಚೌಧರಿ ಅವರು 17ನೇ ಲೋಕಸಭೆಯ ಎಲ್ಲಾ ಕಲಾಪಗಳಲ್ಲಿ ಹಾಜರಾಗುವ ಮೂಲಕ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. 

ಪಿಆರ್‌ಎಸ್‌ ಲೆಜಿಸ್ಲೇಟಿವ್‌ ರಿಸರ್ಚ್‌ ಸಂಸ್ಥೆ ಈ ಕುರಿತು ದತ್ತಾಂಶಗಳನ್ನು ನೀಡಿದೆ. ಆ ಪ್ರಕಾರ, 17ನೇ ಲೋಕಸಭೆಯಲ್ಲಿ ಒಟ್ಟು 274 ದಿನ ಕಲಾಪ ನಡೆದಿದೆ. ರಾಜಸ್ಥಾನದ ಅಜ್ಮೇರ್‌ ಸಂಸದ ಭಗೀರಥ್‌ ಮತ್ತು ಛತ್ತೀಸಗಢದ ಕಾಂಕೇರ್ ಸಂಸದ ಮಾಂಡವಿ ಅವರು ಶೇ 100ರಷ್ಟು ಹಾಜರಾತಿ ಹೊಂದಿದ್ದಾರೆ. ಇವರಿಬ್ಬರೂ ಸದನದಲ್ಲಿ ಅಕ್ಕಪಕ್ಕ ಕುಳಿತುಕೊಳ್ಳುತ್ತಾರೆ.

ಈ ಲೋಕಸಭಾ ಅವಧಿಯಲ್ಲಿ ಸಂಸದರ ಸರಾಸರಿ ಹಾಜರಾತಿ ಶೇ 79ರಷ್ಟು ಇದೆ.

ಉತ್ತರಪ್ರದೇಶದ ಹಮೀರ್‌ಪುರದ ಸಂಸದ ಪುಷ್ಪೇಂದ್ರ ಸಿಂಗ್‌ ಚಾಂಡೇಲ್‌ ಅವರು ಪ್ರಸಕ್ತ ಲೋಕಸಭೆ ಅವಧಿಯ ಅತ್ಯಂತ ಕ್ರಿಯಾಶೀಲ ಸದಸ್ಯ. ಅವರು 1,194 ಚರ್ಚೆಗಳಲ್ಲಿ ಭಾಗಿಯಾಗಿದ್ದಾರೆ. ನಂತರದ ಸ್ಥಾನದಲ್ಲಿ ಬಿಎಸ್‌ಪಿ ಸಂಸದ ಮಾಲೂಕ್‌ ನಗರ್‌ (582 ಚರ್ಚೆಗಳು), ಡಿಎಂಕೆ ಸಂಸದ ಡಿಎನ್‌ವಿ ಸೆಂಥಿಲ್‌ ಕುಮಾರ್‌ (307) ಇದ್ದಾರೆ. 

ನಟರಾದ ಸನ್ನಿ ಡಿಯೋಲ್‌ (ಬಿಜೆಪಿ ಸಂಸದ) ಮತ್ತು ಶತ್ರುಘ್ನ ಸಿನ್ಹಾ (ಟಿಎಂಸಿ ಸಂಸದ) ಸೇರಿ ಲೋಕಸಭೆಯ ಒಂಬತ್ತು ಸಂಸದರು ಯಾವುದೇ ಚರ್ಚೆಯಲ್ಲಿ ಭಾಗಿಯಾಗಿಲ್ಲ. ಬಿಜೆಪಿ ಸಂಸದರಾದ ರಮೇಶ್‌ ಜಿಗಜಿಣಗಿ, ಬಿ.ಎನ್‌ ಬಚ್ಚೇಗೌಡ, ಅನಂತ್‌ ಕುಮಾರ್‌ ಹೆಗಡೆ, ವಿ. ಶ್ರೀನಿವಾಸ್‌ ಪ್ರಸಾದ್‌ (ಕರ್ನಾಟಕ) ಪ್ರಧಾನ್‌ ಬಾರೂ (ಅಸ್ಸಾಂ), ಟಿಎಂಸಿಯ ದಿವ್ಯೇಂದ್ರ ಅಧಿಕಾರಿ, ಬಿಎಸ್‌ಪಿಯ ಅತುಲ್‌ ಕುಮಾರ್‌ ಸಿಂಗ್‌ ಸಂಸತ್ತಿನ ಯಾವುದೇ ಚರ್ಚೆಗಳಲ್ಲಿ ಭಾಗಿಯಾಗಿಲ್ಲದ ಇತರ ಸಂಸದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT