ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಸ್ರೊ ಪ್ರಥಮ ರಾಕೆಟ್‌ ಉಡಾವಣೆಗೆ 60 ವರ್ಷ

Published 25 ನವೆಂಬರ್ 2023, 16:17 IST
Last Updated 25 ನವೆಂಬರ್ 2023, 16:17 IST
ಅಕ್ಷರ ಗಾತ್ರ

ತಿರುವನಂತಪುರ: ಇಸ್ರೊ ರಾಕೆಟ್ ಉಡಾವಣೆಯ 60ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಶನಿವಾರ ಉದ್ಘಾಟಿಸಿದರು. ಬಾಹ್ಯಾಕಾಶ ಕ್ಷೇತ್ರದಲ್ಲಿನ ಭಾರತದ ಮಹತ್ವಾಕಾಂಕ್ಷೆಗಳನ್ನು ನಿಜವಾಗಿಸುವಲ್ಲಿ ‘ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (ವಿಎಸ್‌ಎಸ್‌ಸಿ)’ ನಿರ್ವಹಿಸಿದ ಪಾತ್ರವನ್ನು ಸಿಂಗ್‌ ಈ ವೇಳೆ ಕೊಂಡಾಡಿದರು. 

ತಿರುವನಂತಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ವಿಜ್ಞಾನ, ತಂತ್ರಜ್ಞಾನ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ರಾಜ್ಯ ಸಚಿವರೂ ಆದ ಸಿಂಗ್‌, ಇಸ್ರೋದ ಚೊಚ್ಚಲ ರಾಕೆಟ್ ಉಡಾವಣೆಯ 60ನೇ ವರ್ಷದ ಜತೆಗೇ ಚಂದ್ರಯಾನ ಮಿಷನ್‌ನ ಯಶಸ್ಸು ಕೂಡ ಬಂದಿರುವುದು ಸಂತಸದ ಸಂಗತಿ ಎಂದರು. 

ಅಧಿಕೃತ ವಿದೇಶ ಭೇಟಿಯ ವೇಳೆ ಗಣ್ಯರಿಂದ ವ್ಯಕ್ತವಾದ ಪ್ರಶಂಸೆಗಳನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ವಿದೇಶಾಂಗ ವ್ಯವಹಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಖಾತೆ ಸಚಿವ ವಿ. ಮುರಳೀಧರನ್, ಇಸ್ರೋದ ಜಾಗತಿಕ ಕೊಡುಗೆಗಳನ್ನು ಶ್ಲಾಘಿಸಿದರು.

‘ಬಾಹ್ಯಾಕಾಶದಲ್ಲಿ ಮಾತ್ರವಲ್ಲದೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತ ಮಾಡಿರುವ ಸಾಧನೆಗಳು ಹೆಮ್ಮೆಯ ಸಂಗತಿ’ ಎಂದರು. 

ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಎಸ್‌ಎಸ್‌ಸಿ ನಿರ್ದೇಶಕ ಡಾ.ಎಸ್. ಉನ್ನಿಕೃಷ್ಣನ್ ನಾಯರ್, ಐಐಎಸ್‌ಟಿ ಕುಲಪತಿ ಡಾ.ಬಿ.ಎನ್. ಸುರೇಶ್, ಎಸ್‌ಪಿಎಲ್ ಮಾಜಿ ನಿರ್ದೇಶಕ ಪ್ರೊ.ಆರ್. ಶಶಿಧರನ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

1963ರ ಐತಿಹಾಸಿಕ ಘಟನೆಯನ್ನು ನೆನಪಿಸುವ ಅಣಕು ರಾಕೆಟ್ ಉಡಾವಣೆಯನ್ನು ಕಾರ್ಯಕ್ರಮದಲ್ಲಿ ಆಯೋಜಿಸಲಾಗಿತ್ತು. ಬಾಹ್ಯಾಕಾಶ ತಂತ್ರಜ್ಞಾನ ಪ್ರದರ್ಶನ, ವಿದ್ಯಾರ್ಥಿಗಳೊಂದಿಗೆ ಸಂವಾದ ಮತ್ತು ವಿಜ್ಞಾನಿಗಳ ಉಪನ್ಯಾಸವನ್ನೂ ಆಯೋಜಿಸಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT