ಕೋಲ್ಕತ್ತ: ರೈಲ್ವೆ ಬೋಗಿಗಳ ಮೇಲೆ ಕಾಯ್ದಿರಿಸುವಿಕೆ ಪಟ್ಟಿಯನ್ನು ಅಂಟಿಸುವ ಪರಿಪಾಠ ಇನ್ನುಮುಂದೆ ಇಲ್ಲವಾಗಲಿದೆ. ಸೋಮವಾರದಿಂದ (ಅ.16) ಈ ಪದ್ಧತಿಯನ್ನು ನಿಲ್ಲಿಸಲಾಗುತ್ತಿದೆ ಎಂದು ಆಗ್ನೇಯ ರೈಲ್ವೆಯ ವಕ್ತಾರ ಸಂಜಯ್ ಘೋಷ್ ತಿಳಿಸಿದ್ದಾರೆ. ಹೌರಾದಿಂದ ಹೊರಡುವ ರೈಲುಗಳಲ್ಲಿ ಈ ಸೌಲಭ್ಯ ಇನ್ನು ಇರುವುದಿಲ್ಲ.
ಬೋಗಿಗಳ ಹೊರಗಿನ ಭಾಗವನ್ನು ಸ್ವಚ್ಛವಾಗಿಡುವುದು, ಕಾಗದವನ್ನು ಉಳಿಸುವ ಮೂಲಕ ರೈಲ್ವೆಯನ್ನು ಪರಿಸ್ನರ ಸ್ನೇಹಿಯಾಗಿಸುವ ಉದ್ದೇಶ ಇದರ ಹಿಂದಿದೆ ಎಂದು ಅವರು ತಿಳಿಸಿದ್ದಾರೆ.