ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ, ಆಂಧ್ರ ಸಿಎಂ ಜಗನ್, ಉದ್ಯಮಿ ಅದಾನಿ ವಿರುದ್ಧ ಅಮೆರಿಕದಲ್ಲಿ ಕೇಸ್

Last Updated 1 ಸೆಪ್ಟೆಂಬರ್ 2022, 13:51 IST
ಅಕ್ಷರ ಗಾತ್ರ

ವಾಷಿಂಗ್ಟನ್: ಭಾರತದ ಪ್ರಧಾನಿ ನರೇಂದ್ರ ಮೋದಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮತ್ತು ಉದ್ಯಮಿ ಗೌತಮ್ ಅದಾನಿ ವಿರುದ್ಧ ಭ್ರಷ್ಟಾಚಾರ ಮತ್ತು ಪೆಗಾಸಸ್ ಕುತಂತ್ರಾಂಶ ಹಗರಣ ಸೇರಿ ಹಲವು ವಿಷಯಗಳ ಕುರಿತು ಭಾರತೀಯ ಅಮೆರಿಕನ್ ವೈದ್ಯರೊಬ್ಬರು ಮೊಕದ್ದಮೆ ದಾಖಲಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಸೇವೆ ಸಲ್ಲಿಸಿದ್ದ ರಿಚ್ಮಂಡ್ ಮೂಲದ ಗ್ಯಾಸ್ಟ್ರೋಎಂಟರಾಲಜಿಸ್ಟ್ (ಕರಳು ಬೇನೆ ತಜ್ಞ) ಡಾ. ಲೋಕೇಶ್‌ ವುಯ್ಯೂರು ದಾಖಲಿಸಿರುವ 53 ಪುಟಗಳ ಮೊಕದ್ದಮೆ ಸಂಬಂಧಕೊಲಂಬಿಯಾ ಜಿಲ್ಲಾ ನ್ಯಾಯಾಲಯ, ಈ ಎಲ್ಲ ನಾಯಕರಿಗೆ ನೋಟಿಸ್‌ ಜಾರಿ ಮಾಡಿದೆ. ನ್ಯೂಯಾರ್ಕ್‌ನ ಭಾರತೀಯ ಅಮೆರಿಕನ್ ಅಟಾರ್ನಿ ರವಿ ಬಾತ್ರಾ ಅವರು ಈ ವಿಷಯ ಖಚಿತಪಡಿಸಿದ್ದಾರೆ.

ಡಾ.ಲೋಕೇಶ್‌ ಅವರು ದಾಖಲಿಸಿರುವ ಮೊಕದ್ದಮೆಯಲ್ಲಿವಿಶ್ವ ಆರ್ಥಿಕ ವೇದಿಕೆಯ ಸಂಸ್ಥಾಪಕ ಮತ್ತು ಅಧ್ಯಕ್ಷ ಪ್ರೊಫೆಸರ್ ಕ್ಲೌಸ್ ಶ್ವಾಬ್ ಅವರ ಹೆಸರೂ ಇದೆ.

ಮೇ 24ರಂದುಈ ಮೊಕದ್ದಮೆ ದಾಖಲಿಸಲಾಗಿದ್ದು, ಜುಲೈ 22ರಂದು ನ್ಯಾಯಾಲಯವು ಸಮನ್ಸ್ ಜಾರಿಗೊಳಿಸಿದೆ. ಭಾರತದಲ್ಲಿಆಗಸ್ಟ್ 4ರಂದು ಸಮನ್ಸ್ ನೀಡಿದ್ದು, ಸ್ವಿಟ್ಜರ್ಲೆಂಡ್‌ನಕ್ಲೌಸ್ ಶ್ವಾಬ್ ಅವರಿಗೆಆಗಸ್ಟ್ 2ರಂದು ಸಮನ್ಸ್ ಜಾರಿಗೊಳಿಸಿದೆ. ಡಾ. ಲೋಕೇಶ್‌ ಆಗಸ್ಟ್ 19ರಂದು ನ್ಯಾಯಾಲಯದ ಮುಂದೆ ಹಾಜರಾಗಿ ಸಾಕ್ಷ್ಯ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT