ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೆರಿಕ: ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ಭಾರತ ಮೂಲದ ಟೆಕಿ ವಿವೇಕ್ ತನೇಜಾ ಸಾವು

Published 10 ಫೆಬ್ರುವರಿ 2024, 6:34 IST
Last Updated 10 ಫೆಬ್ರುವರಿ 2024, 6:34 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಮಾರಾಣಾಂತಿಕ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಭಾರತ ಮೂಲದ ಟೆಕಿ ವಿವೇಕ್ ತನೇಜಾ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಷಿಂಗ್ಟನ್‌ನ ಅಲೆಕ್ಸಾಂಡ್ರಿಯಾದ ನಿವಾಸಿಯಾದ ವಿವೇಕ್ ಅವರ ಮೇಲೆ ಫೆಬ್ರುವರಿ 2ರಂದು ಹಲ್ಲೆ ನಡೆದಿತ್ತು.

ವಾಷಿಂಗ್ಟನ್‌ನ ಹೋಟೆಲ್‌ವೊಂದರ ಹೊರಗಡೆ ವಿವೇಕ್‌ ಮೇಲೆ ಹಲ್ಲೆ ನಡೆದಿದ್ದು, ತಡರಾತ್ರಿ 2 ಗಂಟೆಯ ವೇಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಹಲ್ಲೆ ವೇಳೆ ಅವರ ತಲೆಗೆ ತೀವ್ರ ಏಟು ಬಿದ್ದಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು, ಆರೋಪಿಯ ಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಆರೋಪಿಯ ಬಗ್ಗೆ ಮಾಹಿತಿ ನೀಡಿದವರಿಗೆ 25 ಸಾವಿರ ಅಮೆರಿಕನ್ ಡಾಲರ್ ಬಹುಮಾನ ಘೋಷಿಸಿದ್ದಾರೆ.

ಅಮೆರಿಕದಲ್ಲಿ ಇತ್ತೀಚೆಗೆ ಹಲ್ಲೆ, ದಾಳಿ ಕಾರಣಗಳಿಂದ ಸಾವನ್ನಪ್ಪಿದ ಭಾರತೀಯ ಮೂಲದ ವ್ಯಕ್ತಿಗಳಲ್ಲಿ ವಿವೇಕ್ ತನೇಜಾ ಏಳನೇಯವರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT