ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2022ರಲ್ಲಿ ಅಮೆರಿಕದ ಪೌರತ್ವ ಪಡೆದ 66 ಸಾವಿರ ಭಾರತೀಯರು

Published 22 ಏಪ್ರಿಲ್ 2024, 3:25 IST
Last Updated 22 ಏಪ್ರಿಲ್ 2024, 3:25 IST
ಅಕ್ಷರ ಗಾತ್ರ

ವಾಷಿಂಗ್ಟನ್: 2022ರಲ್ಲಿ ಸುಮಾರು 65,960 ಭಾರತೀಯರು ಅಮೆರಿಕದ ಪೌರತ್ವ ಪಡೆದುಕೊಂಡಿದ್ದಾರೆ ಎಂದು ಅಮೆರಿಕದ ಕಾಂಗ್ರೆಷನಲ್ ರಿಸರ್ಚ್ ಸರ್ವಿಸಿ(ಸಿಆರ್‌ಎಸ್) ವರದಿ ತಿಳಿಸಿದೆ. ಈ ಮೂಲಕ ಅಮೆರಿಕದಲ್ಲಿ ಹೊಸದಾಗಿ ನಾಗರಿಕತ್ವ ಪಡೆಯುವ ನಾಗರಿಕರ ದೇಶಗಳ ಪೈಕಿ 2ನೇ ಸ್ಥಾನದಲ್ಲಿದೆ.

ಸಮೀಕ್ಷೆಯ ಮಾಹಿತಿಯ ಪ್ರಕಾರ, 2022ರಲ್ಲಿ ಅಂದಾಜು 46 ಮಿಲಿಯನ್ ವಿದೇಶಿ ಸಂಜಾತ ವ್ಯಕ್ತಿಗಳು ಅಮೆರಿಕದಲ್ಲಿ ನೆಲೆಸಿದ್ದಾರೆ. ಅಮೆರಿಕದ ಒಟ್ಟು ಜನಸಂಖ್ಯೆಯ 333 ಮಿಲಿಯನ್‌ನ ಸರಿಸುಮಾರು ಶೇಕಡ 14ರಷ್ಟು ವಿದೇಶಿಗರು.

ಇದರಲ್ಲಿ 24.5 ಮಿಲಿಯನ್ ಜನರು, ಅಂದರೆ, ಶೇಕಡ 53ರಷ್ಟು ಜನರು ಸ್ವಾಭಾವಿಕ ನಾಗರಿಕತ್ವ ಪಡೆದಿದ್ದಾರೆ.

ಏಪ್ರಿಲ್ 15ರ ಅಮೆರಿಕದ ನ್ಯಾಚುರಲೈಸೇಶನ್ ಪಾಲಿಸಿ ವರದಿಯಲ್ಲಿ, 2022ರ ಆರ್ಥಿಕ ವರ್ಷದಲ್ಲಿ ಸ್ವತಂತ್ರ ಕಾಂಗ್ರೆಷನಲ್ ರಿಸರ್ಚ್ ಸರ್ವಿಸ್ ಪ್ರಕಾರ, 9,69,380 ವ್ಯಕ್ತಿಗಳು ನೈಸರ್ಗಿಕ ನಾಗರಿಕತ್ವ ಪಡೆದಿದ್ದಾರೆ.

ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, 2022ರಲ್ಲಿ 128,878 ಮೆಕ್ಸಿಕೊ ಮೂಲದವರು ಅಮೆರಿಕದ ನಾಗರಿಕತ್ವ ಪಡೆದಿದ್ದಾರೆ. ಭಾರತೀಯರು(65,960), ಫಿಲಿಪ್ಪಿನ್ಸ್ (53,413), ಕ್ಯೂಬಾ (46,913), ಡೊಮಿನಿಕನ್ ರಿಪಬ್ಲಿಕ್ (34,525), ವಿಯಟ್ನಾಂ (33,246) ಮತ್ತು ಚೀನಾ (27.038) ನಾಗರಿಕರು ಅಮೆರಿಕ ಪೌರತ್ವ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT