ಹ್ಯೂಸ್ಟನ್: ಅಮೆರಿಕದ ಮಾಜಿ ಪ್ರಥಮ ಮಹಿಳಾ ಪ್ರಜೆ ಮತ್ತು ಸಾಕ್ಷರತಾ ಕಾರ್ಯಕರ್ತೆ ಆಗಿದ್ದ ಬಾರ್ಬರಾ ಬುಷ್ (92) ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ ಪತಿ, ಐವರು ಮಕ್ಕಳು, ಹದಿನೇಳು ಮೊಮ್ಮಕ್ಕಳು ಮತ್ತು ಏಳು ಮರಿಮಕ್ಕಳು ಇದ್ದಾರೆ.
ಬಾರ್ಬರಾ, ಅಮೆರಿಕದ 41 ನೇ ಅಧ್ಯಕ್ಷರಾದ ಜಾರ್ಜ್ ಎಚ್. ಡಬ್ಲ್ಯೂ ಬುಷ್ ಅವರ ಪತ್ನಿ ಹಾಗೂ 43 ಅಧ್ಯಕ್ಷರಾದ ಜಾರ್ಜ್ ಡಬ್ಲ್ಯೂ ಬುಷ್ ಅವರ ತಾಯಿ. ಇವರ ಇನ್ನೊಬ್ಬ ಪುತ್ರ ಜೆಬ್ ಬುಷ್ ಫ್ಲಾರಿಡಾದ ಮಾಜಿ ಗವರ್ನರ್.
1925 ರಲ್ಲಿ ನ್ಯೂಯಾರ್ಕ್ನಲ್ಲಿ ಜನಿಸಿದ್ದ ಇವರು, 1945 ಜಾರ್ಜ್ ಬುಷ್ ಅವರನ್ನು ಮದುವೆಯಾದರು. 1989 ರಿಂದ 1993 ರ ಅವಧಿಯಲ್ಲಿ ಜಾರ್ಜ್ ಬುಷ್ ಅಮೆರಿಕ ಅಧ್ಯಕ್ಷರಾಗಿದ್ದರು.