ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನ ರಕ್ಷಿಸಿ

Last Updated 14 ಜನವರಿ 2013, 19:59 IST
ಅಕ್ಷರ ಗಾತ್ರ

ಬಿಏಚ್‌ಇಎಲ್ ಉದ್ಯಾನವನ ಬೆಂಗಳೂರು ನಗರದಲ್ಲಿ ಬಹಳ ಎತ್ತರವಾದ ಸ್ಥಳದಲ್ಲಿದೆ. ಇಲ್ಲಿನ ಸೂರ್ಯಾಸ್ತ ಆಗುಂಬೆಗಿಂತ ಉತ್ತಮವಾಗಿದೆ. ಉದ್ಯಾನವನದ ಸುತ್ತಲೂ ಪರಿಸರ ಅತ್ಯುತ್ತಮವಾಗಿದೆ. ಸೂರ್ಯಾಸ್ತ ವೀಕ್ಷಿಸಲು ದೂರದ ಹೈದರಾಬಾದ್, ಚೆನ್ನೈ ಮುಂತಾದ ಸ್ಥಳಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಬೆಂಗಳೂರಿನ ಸುತ್ತಮುತ್ತಲಿನ ಜನ ಸಹ ಈ ಉದ್ಯಾನವನಕ್ಕೆ ವಾಯುವಿಹಾರಕ್ಕೆ, ವ್ಯಾಯಾಮಕ್ಕೆ ಬರುತ್ತಲೇ ಇರುತ್ತಾರೆ.

ಬಿಬಿಎಂಪಿಯ ಬಜೆಟ್‌ನಲ್ಲಿ   ರೂ 60 ಲಕ್ಷ ವೀಕ್ಷಣಾ ಗೋಪುರ ನಿರ್ಮಾಣಕ್ಕಾಗಿ ಕಾಯ್ದಿರಿಸಿದ್ದು, ಕೂಡಲೇ ಕಾಮಗಾರಿ ಪ್ರಾರಂಭಿಸಲು ವಿನಂತಿ. ಆದರೆ ಉದ್ಯಾನವನ ಏಪ್ರಿಲ್, ಮೇ ತಿಂಗಳಲ್ಲಿ ಸಂಪೂರ್ಣ ಒಣಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಕೂಡಲೇ ಹೊಸದಾಗಿ ಕೊಳವೆ ಬಾವಿ ಕೊರೆಸಿ ಉದ್ಯಾನವನ ಉಳಿಸಬೇಕಾಗಿದೆ.

ನಂದಿನಿ ಬಡಾವಣೆಯಲ್ಲಿರುವ  ಈ ಉದ್ಯಾನವನದ ಸುತ್ತಲೂ ಸಾಕಷ್ಟು ಖಾಲಿ ನಿವೇಶನಗಳಿವೆ. ಡಾಲರ್ ಸ್ಕೀಮಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 50ಗಿ80 ನಿವೇಶನಗಳು ಸಾರ್ವಜನಿಕರಿಗೆ ಹಂಚಿದೆ. ಬಿಎಚ್‌ಇಎಲ್ ಹೌಸಿಂಗ್ ಸಂಘವು 40ಗಿ60 ನಿವೇಶನಗಳನ್ನು ಹಂಚಿದೆ. ಈ ನಿವೇಶನಗಳು ಮನೆಗಳು ನಿರ್ಮಾಣ ಮಾಡದೆ, ಸ್ವಚ್ಛ ಮಾಡದೆ ವಿಷಜಂತುಗಳ ವಾಸಸ್ಥಾನವಾಗಿದೆ, ಉದ್ಯಾನವನದಲ್ಲಿ ಓಡಾಡುವ ಸಾರ್ವಜನಿಕರಿಗೆ ಬಹಳ ತೊಂದರೆಯಾಗಿದೆ. ಈಗಾಗಲೇ ವಾಸಿಸುವ ಮನೆಗಳಿಗೆ ನಾಗರಹಾವುಗಳು ನುಗ್ಗುತ್ತಿವೆ. ನಿವೇಶನದಾರರಿಗೆ ಬಿಬಿಎಂಪಿ ಕಡೆಯಿಂದಲೇ ನಿವೇಶನವನ್ನು ಸ್ವಚ್ಛಮಾಡಲು ವ್ಯವಸ್ಥೆ ಮಾಡುವುದು. ನಿವೇಶನದಾರರು ಸ್ವಚ್ಛತೆಗೆ ಆದ್ಯತೆ ನೀಡಲು ಬಿಬಿಎಂಪಿ ಕ್ರಮ ಕೈಗೊಳ್ಳಲು ಕೋರಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT