ಕರ್ನಾಟಕ ಲೋಕಸೇವಾ ಆಯೋಗವು ಎಫ್ಡಿಎ ಹಾಗೂ ಎಸ್ಡಿಎ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದ್ದು, ಸ್ಪರ್ಧಾತ್ಮಕ ಪರೀಕ್ಷೆ ಅಕ್ಟೋಬರ್ 4ರಂದು ನಡೆಯಲಿದೆ. ಆದರೆ ಅದೇ ದಿನ ಕೇಂದ್ರೀಯ ವಿದ್ಯಾಲಯದ ಟಿಜಿಟಿ ಪರೀಕ್ಷೆಯೂ ನಿಗದಿಯಾಗಿದೆ.
ಎರಡೂ ಪರೀಕ್ಷೆಗಳನ್ನು ತೆಗೆದುಕೊಂಡ ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ಯಾವುದಾದರೊಂದು ಪರೀಕ್ಷೆಯಿಂದ ವಂಚಿತರಾಗಬೇಕಾಗುತ್ತದೆ. ಪರೀಕ್ಷಾರ್ಥಿಗಳ ಹಿತದೃಷ್ಟಿಯಿಂದ ಲೋಕಸೇವಾ ಆಯೋಗವು ಪರೀಕ್ಷಾ ದಿನಾಂಕವನ್ನು ಮುಂದೂಡಿ ಅನುಕೂಲ ಮಾಡಿಕೊಡಬೇಕು.