ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಜತ್‌ ಶತಕ: ಲಯನ್ಸ್‌ ವಿರುದ್ಧದ ಪಂದ್ಯ ಡ್ರಾ

Published 13 ಜನವರಿ 2024, 19:42 IST
Last Updated 13 ಜನವರಿ 2024, 19:42 IST
ಅಕ್ಷರ ಗಾತ್ರ

ಅಹಮದಾಬಾದ್: ಭಾರತ ‘ಎ’ ಮತ್ತು ಇಂಗ್ಲೆಂಡ್ ಲಯನ್ಸ್‌ ನಡುವಿನ ಎರಡು ದಿನಗಳ ಅಭ್ಯಾಸ ಪಂದ್ಯವು ಡ್ರಾನಲ್ಲಿ ಮುಕ್ತಾಯವಾಗಿದೆ. ಈ ಮಧ್ಯೆ ಭಾರತದ ಆರಂಭಿಕ ಬ್ಯಾಟರ್‌ ರಜತ್‌ ಪಾಟೀದಾರ್‌ ಅಮೋಘ ಶತಕ ಗಳಿಸಿದರೆ, ಸರ್ಫರಾಜ್‌ ಖಾನ್‌ ಕೇವಲ ನಾಲ್ಕು ರನ್‌ಗಳಿಂದ ಶತಕದಿಂದ ವಂಚಿತರಾದರು.

ಮೊದಲ ದಿನ ಒಂದು ವಿಕೆಟ್‌ಗೆ 123 ರನ್‌ ಗಳಿಸಿದ್ದ ಭಾರತ ‘ಎ’ ತಂಡವು ಶನಿವಾರ ದಿನದ ಆಟ ಆರಂಭಿಸಿತು. ದಿನವಿಡೀ ಆತಿಥೇಯ ತಂಡದ ಬ್ಯಾಟರ್‌ಗಳು ಪ್ರವಾಸಿ ತಂಡದ ಬೌಲರ್‌ಗಳನ್ನು ದಂಡಿಸಿದರು. ಹೀಗಾಗಿ, ರಜತ್‌ (111; 141ಎ, 4x18, 6x1) ಮತ್ತು ಸರ್ಪರಾಜ್‌ (96; 110, 11x4, 6x1) ಅವರ ಬ್ಯಾಟಿಂಗ್‌ ಬಲದಿಂದ ದಿನದಾಟದ ಅಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 91 ಓವರ್‌ಗಳಲ್ಲಿ 8 ವಿಕೆಟ್‌ಗೆ 462 ರನ್‌ ಗಳಿಸಿ, 229 ರನ್‌ಗಳ ಬೃಹತ್‌ ಮುನ್ನಡೆ ಪಡೆಯಿತು.

ಶ್ರೀಕರ್ ಭರತ್ (64; 69ಎ), ಧ್ರುವ್ ಜುರೇಲ್‌ (50; 38ಎ) ಅರ್ಧಶತಕ ಗಳಿಸಿದರು. ಲಯನ್ಸ್‌ ಪರ ಕ್ಯಾಲಂ ಪಾರ್ಕಿನ್ಸನ್ ಮತ್ತು ಜ್ಯಾಕ್ ಕಾರ್ಸನ್ ತಲಾ ಎರಡು ವಿಕೆಟ್‌ ಪಡೆದರು. ಮೊದಲ ದಿನ ಲಯನ್ಸ್‌ ತಂಡವು ಮೊದಲ ಇನಿಂಗ್ಸ್‌ನಲ್ಲಿ 51.1 ಓವರ್‌ಗಳಲ್ಲಿ 233 ರನ್‌ಗಳಿಗೆ ಆಲೌಟ್‌ ಆಗಿತ್ತು.

ಉಭಯ ತಂಡಗಳು ಇಲ್ಲಿ ಬುಧವಾರ ಆರಂಭವಾಗುವ ನಾಲ್ಕು ದಿನಗಳ ಮೂರು ಅನೌಪಚಾರಿಕ ಟೆಸ್ಟ್‌ ಪಂದ್ಯಗಳಲ್ಲಿ ಮುಖಾಮುಖಿಯಾಗಲಿವೆ.

ಸಂಕ್ಷಿಪ್ತ ಸ್ಕೋರ್: ಮೊದಲ ಇನ್ನಿಂಗ್ಸ್‌: ಇಂಗ್ಲೆಂಡ್‌ ಲಯನ್ಸ್‌: 51.1 ಓವರ್‌ಗಳಲ್ಲಿ 233. ಭಾರತ ‘ಎ’: 91 ಓವರ್‌ಗಳಲ್ಲಿ 8 ವಿಕೆಟ್‌ಗೆ 462 (ರಜತ್‌ ಪಾಟೀದಾರ್‌ 111, ಸರ್ಫರಾಜ್‌ ಖಾನ್‌ 96, ಶ್ರೀಕರ್‌ ಭರತ್‌ 64, ಧ್ರುವ್‌ ಜುರೇಲ್‌ 50; ಕ್ಯಾಲಂ ಪಾರ್ಕಿನ್ಸನ್ 95ಕ್ಕೆ 2, ಜ್ಯಾಕ್ ಕಾರ್ಸನ್ 65ಕ್ಕೆ 2. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT