ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ಗೆ ಕೆಂಟೊ ವಿದಾಯ

Published 2 ಮೇ 2024, 16:11 IST
Last Updated 2 ಮೇ 2024, 16:11 IST
ಅಕ್ಷರ ಗಾತ್ರ

ಚೆಂಗ್ಡು: ಎರಡು ಬಾರಿಯ ವಿಶ್ವ ಚಾಂಪಿಯನ್‌, ಜಪಾನ್‌ನ ಕೆಂಟೊ ಮೊಮೊಟಾ ಅವರು ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ಗೆ ಗುರುವಾರ ವಿದಾಯ ಹೇಳಿದರು.

ಅವರಿಗೆ ಥಾಮಸ್‌ ಕಪ್‌ ಕೊನೆಯ ಟೂರ್ನಿಯಾಗಿತ್ತು. ಕ್ವಾರ್ಟರ್‌ ಫೈನಲ್‌ನಲ್ಲಿ ಜಪಾನ್‌ ತಂಡವು 1–3ರಿಂದ ಮಲೇಷ್ಯಾ ವಿರುದ್ಧ ಸೋತಿತು. ಈ ಪಂದ್ಯದಲ್ಲಿ ಮೂರನೇ ಸಿಂಗಲ್ಸ್‌ ಆಟಗಾರನಾಗಿದ್ದ ಕೆಂಟಾ ಅವರಿಗೆ ಆಡುವ ಅವಕಾಶ ಸಿಗಲಿಲ್ಲ.

ಬ್ಯಾಡ್ಮಿಂಟನ್‌ ಸೂಪರ್‌ಸ್ಟಾರ್‌ ಎನಿಸಿದ್ದ 29 ವರ್ಷದ ಕೆಂಟೊ 2019ರಲ್ಲಿ 11 ಪ್ರಶಸ್ತಿಗಳನ್ನು ಗೆದ್ದಿದ್ದರು. ಆ ವರ್ಷ ಆಡಿದ 73 ಪಂದ್ಯಗಳಲ್ಲಿ ಆರರಲ್ಲಿ ಮಾತ್ರ ಸೋತಿದ್ದರು.

ನಾಲ್ಕು ವರ್ಷಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಾಳಾದ ನಂತರ ಮತ್ತೆ ಅವರು ಲಯ ಕಂಡುಕೊಳ್ಳಲು ಆಗಿರಲಿಲ್ಲ. 2024 ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಬೇಕೆಂಬ ಬಯಕೆ ಹೊಂದಿದ್ದರು. ಆದರೆ ಅವರ ಕ್ರಮಾಂಕ ಅರ್ಹತಾಮಟ್ಟಕ್ಕಿಂತ ಕೆಳಗಿದ್ದ ಕಾರಣ ಅವಕಾಶ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT